ಕನ್ನಡ ಸುದ್ದಿ  /  ಮನರಂಜನೆ  /  ‌Tiger Nageswara Rao: ರಾಜಮಂಡ್ರಿ ಸೇತುವೆ ಮೇಲೆ ಕುಖ್ಯಾತ ಕಳ್ಳನ ಫಸ್ಟ್‌ ಲುಕ್ ರಿಲೀಸ್;‌ ರವಿತೇಜ ಚಿತ್ರಕ್ಕೆ ಸಾಥ್‌ ನೀಡಿದ ಶಿವಣ್ಣ

‌Tiger Nageswara Rao: ರಾಜಮಂಡ್ರಿ ಸೇತುವೆ ಮೇಲೆ ಕುಖ್ಯಾತ ಕಳ್ಳನ ಫಸ್ಟ್‌ ಲುಕ್ ರಿಲೀಸ್;‌ ರವಿತೇಜ ಚಿತ್ರಕ್ಕೆ ಸಾಥ್‌ ನೀಡಿದ ಶಿವಣ್ಣ

ಕುಖ್ಯಾತ ಕಳ್ಳನೊಬ್ಬನ ರಿಯಲ್‌ ಕಥೆಯೊಂದಿಗೆ ಬರುತ್ತಿದ್ದಾರೆ ನಟ ರವಿತೇಜ. ಕುತೂಹಲ ಮೂಡಿಸಿದ್ದ ಆ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು, ಕನ್ನಡದಲ್ಲಿ ನಟ ಶಿವರಾಜ್‌ಕುಮಾರ್‌ ಆ ಕಿರು ಟೀಸರ್‌ಗೆ ಧ್ವನಿ ನೀಡಿದ್ದಾರೆ.

ರಾಜಮಂಡ್ರಿ ಸೇತುವೆ ಮೇಲೆ ಕುಖ್ಯಾತ ಕಳ್ಳನ ಫಸ್ಟ್‌ ಲುಕ್ ರಿಲೀಸ್;‌ ರವಿತೇಜ ಚಿತ್ರಕ್ಕೆ ಸಾಥ್‌ ನೀಡಿದ ಶಿವಣ್ಣ
ರಾಜಮಂಡ್ರಿ ಸೇತುವೆ ಮೇಲೆ ಕುಖ್ಯಾತ ಕಳ್ಳನ ಫಸ್ಟ್‌ ಲುಕ್ ರಿಲೀಸ್;‌ ರವಿತೇಜ ಚಿತ್ರಕ್ಕೆ ಸಾಥ್‌ ನೀಡಿದ ಶಿವಣ್ಣ

Tiger Nageswara Rao: ಟಾಲಿವುಡ್‌ ನಟ ರವಿತೇಜ (Raviteja) ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಟೈಗರ್ ನಾಗೇಶ್ವರ್ ರಾವ್ (Tiger Nageswara Rao) ಇದೀಗ ಸುದ್ದಿಯಲ್ಲಿದೆ. ವಂಶಿ ನಿರ್ದೇಶನದಲ್ಲಿ ಅದ್ಧೂರಿಯಾಗಿ ತಯಾರಾಗಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಭಾರತದ ಮೂರನೇ ಅತಿ ಉದ್ದದ ರಸ್ತೆ ಹಾಗೂ ರೈಲ್ವೆ ಸೇತುವೆ ಎನಿಸಿಕೊಂಡಿರುವ ರಾಜಮುಂಡ್ರಿಯಲ್ಲಿರುವ ಗೋದಾವರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹ್ಯಾವ್ಲಾಕ್ ಸೇತುವೆ ಮೇಲೆ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಟೈಗರ್ ನಾಗೇಶ್ವರ್ ರಾವ್ ಫಸ್ಟ್ ಲುಕ್ ನಲ್ಲಿ ರವಿತೇಜ, ಉಗ್ರವಾದ ರೂಪದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಬಿಯರ್ಡ್ ಲುಕ್, ಗಾಯವಾದ ಮುಖ, ಮಾಸ್ ಅವತಾರದಲ್ಲಿ ಮಾಸ್ ಮಹಾರಾಜ ಧಗಧಗಿಸಿದ್ದಾರೆ. ಪಂಚ ಭಾಷೆಯಲ್ಲಿ ರಿಲೀಸ್ ಆಗಿರುವ ಕನ್ನಡದ ಫಸ್ಟ್ ಲುಕ್‌ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಧ್ವನಿಯಾಗಿದ್ದಾರೆ. ಭಾರತದ ಕುಖ್ಯಾತ ಕಳ್ಳ ಎನಿಸಿಕೊಂಡಿರುವ ಟೈಗರ್ ನಾಗೇಶ್ವರ್ ರಾವ್ ಪ್ರಪಂಚವನ್ನು ಕನ್ನಡಿಗರಿಗೆ ಶಿವಣ್ಣ ಪರಿಚಯಿಸಿದ್ದಾರೆ.

ಕನ್ನಡದಲ್ಲಿ ಶಿವಣ್ಣನ ಧ್ವನಿ

ಕನ್ನಡದಲ್ಲಿ ಶಿವಣ್ಣ, ತೆಲುಗಿನಲ್ಲಿ ವೆಂಕಟೇಶ್ ದಗ್ಗುಬಾಟಿ, ಬಾಲಿವುಡ್ ನಲ್ಲಿ ಜಾನ್ ಅಬ್ರಾಹಂ, ತಮಿಳಿನಲ್ಲಿ ಕಾರ್ತಿ ಹಾಗೂ ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಟೈಗರ್ ನಾಗೇಶ್ವರ್ ರಾವ್ ಫಸ್ಟ್ ಲುಕ್‌ಗೆ ಧ್ವನಿಯಾಗಿದ್ದಾರೆ. ಜಿಂಕೆಯನ್ನು ಬೇಟೆಯಾಡುವ ಹುಲಿ ನೋಡಿರ್ತಿಯಾ.. ಹುಲಿಗಳನ್ನು ಬೇಟೆಯಾಡುವ ಹುಲಿ ನೋಡಿರ್ತಿಯಾ ಎಂಬ ಪವರ್ ಫುಲ್ ಡೈಲಾಗ್ ಮೂಲಕ ರವಿತೇಜ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

70ರ ಕಾಲಘಟ್ಟದ ಹೈದ್ರಾಬಾದ್‌ದ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕಾಗಿ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ.

ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ. ದಸರಾ ಹಬ್ಬಕ್ಕೆ ಟೈಗರ್ ನಾಗೇಶ್ವರ್ ರಾವ್ ಬಾಕ್ಸಾಫೀಸ್ ಬೇಟೆಗಿಳಿಯಲಿದ್ದು, ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ರಿಲೀಸ್‌ ಆಗಲಿದೆ.

IPL_Entry_Point