ಕನ್ನಡ ಸುದ್ದಿ  /  Entertainment  /  Tollywood News Rrr Movie Star Ram Charan Reunites With Pushpa Director Sukumar After Rangasthalam Pcp

RC17: ರಂಗಸ್ಥಳಂ ಬಳಿಕ ಮತ್ತೆ ರಾಮ್ ಚರಣ್ ಜೊತೆ ಕೈ ಜೋಡಿಸಿದ ಸುಕುಮಾರ್; ಹೋಳಿ ಹಬ್ಬದ ಸಮಯದಲ್ಲಿ ಗುಡ್‌ನ್ಯೂಸ್‌ ನೀಡಿದ ಮಗಧೀರ

Ram Charan Movies: ರಾಮ್‌ ಚರಣ್‌ 17ನೇ ಸಿನಿಮಾದ ಕುರಿತು ಹೋಳಿ ಹಬ್ಬದಂದು ಮಾಹಿತಿ ಹೊರಬಿದ್ದಿದೆ. ಮೈತ್ರಿ ಮೂವೀ ಮೇಕರ್ಸ್, ರಾಮ್ ಚರಣ್ ಹಾಗೂ ಪುಷ್ಪ ಡೈರೆಕ್ಟರ್ ಸುಕುಮಾರ್ ಆರ್‌ಸಿ 17 ಸಿನಿಮಾ ಮಾಡಲಿದ್ದಾರೆ. ರಂಗಸ್ಥಳಂ ಸಿನಿಮಾದ ಬಳಿಕ ರಾಮ್‌ಚರಣ್‌ ಮತ್ತು ಸುಕುಮಾರ್‌ ಮತ್ತೆ ಒಂದಾಗುತ್ತಿದ್ದಾರೆ.

RC17: ರಂಗಸ್ಥಳಂ ಬಳಿಕ ಮತ್ತೆ ರಾಮ್ ಚರಣ್ ಜೊತೆ ಕೈ ಜೋಡಿಸಿದ ಸುಕುಮಾರ್
RC17: ರಂಗಸ್ಥಳಂ ಬಳಿಕ ಮತ್ತೆ ರಾಮ್ ಚರಣ್ ಜೊತೆ ಕೈ ಜೋಡಿಸಿದ ಸುಕುಮಾರ್

ಬೆಂಗಳೂರು: ಸದ್ಯ ರಾಮ್‌ಚರಣ್‌ ಮುಂದಿನ ಸಿನಿಮಾ ಆರ್‌ಸಿ16 ಕುರಿತು ಎಲ್ಲೆಡೆ ನಿರೀಕ್ಷೆಯಿದೆ. ಹೋಳಿ ಹಬ್ಬದಂದು RC17 ಸಿನಿಮಾದ ಕುರಿತು ಮಗಧೀರ ನಟ ರಾಮ್‌ಚರಣ್‌ ಗುಡ್‌ನ್ಯೂಸ್‌ ನೀಡಿದ್ದಾರೆ. ಗೇಮ್ ಚೇಂಜರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಮೆಗಾ ಪ್ರಿನ್ಸ್ ರಾಮ್, ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ. ಆರ್ಸಿ 16 ಸಿನಿಮಾಗೆ ಬುಚ್ಚಿ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸಮಯದಲ್ಲಿ ರಾಮ್‌ ಚರಣ್‌ 17ನೇ ಸಿನಿಮಾದ ಕುರಿತು ಅಪ್‌ಡೇಟ್‌ ಬಂದಿದೆ.

ಮೈತ್ರಿ ಮೂವೀ ಮೇಕರ್ಸ್, ರಾಮ್ ಚರಣ್ ಹಾಗೂ ಪುಷ್ಪ ಡೈರೆಕ್ಟರ್ ಸುಕುಮಾರ್ ಮತ್ತೆ ಒಂದಾಗಿದ್ದಾರೆ. ರಂಗಸ್ಥಳಂ ಮೂಲಕ ಧಮಾಕ ಎಬ್ಬಿಸಿದ್ದ ಈ ತ್ರಿವಳಿ ಕಾಂಬೋದಲ್ಲಿ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ. ಬಣ್ಣದ ಹಬ್ಬದ ಸಂದರ್ಭದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ತ್ರಿಬಲ್ ಆರ್ ಸಿನಿಮಾ ಬಳಿಕ ಶಂಕರ್ ಸಾರಥ್ಯದ ಗೇಮ್ ಚೇಂಜರ್ ಚಿತ್ರದಲ್ಲಿ ರಾಮ್ ನಟಿಸ್ತಿದ್ದಾರೆ. ಜೊತೆಗೆ ಉಪ್ಪೇನಾ ಡೈರೆಕ್ಟರ್ ಬುಚ್ಚಿ ಬಾಬುಗೂ ಕಾಲ್ ಶೀಟ್ ಕೊಟ್ಟಿರುವ ಮೆಗಾ ಪ್ರಿನ್ಸ್ ಈಗ ಸುಕುಮಾರ್ ಹೊಸ ಕಥೆಯಲ್ಲಿ ಮಿಂಚುವುದಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ ಹಣ ಹಾಕುತ್ತಿರುವ ಈ ಸಿನಿಮಾಗೆ ರಾಕ್ ಸ್ಟಾರ್ ದೇವಿ ಪ್ರಸಾದ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಸೂಪರ್ ಹಿಟ್ ಆದ ರಂಗಸ್ಥಳಂ ಚಿತ್ರಕ್ಕೂ ಮ್ಯೂಸಿಕ್ ನೀಡಿದ್ದ ಡಿಎಸ್ ಪಿ ಮತ್ತೆ ಸುಕುಮಾರ್ ಹಾಗೂ ರಾಮ್ ಸಿನಿಮಾ ಮೂಲಕ ಧಮಾಕ ಎಬ್ಬಿಸಲಿದ್ದಾರೆ. ಅಂದಹಾಗೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಮೂಡಿಬರಲಿದೆ.

ಮಗಧೀರ ನಟ ರಾಮ್‌ ಚರಣ್‌ ಸಈಗ ಗೇಮ್‌ ಚೇಂಜರ್‌ ಸಿನಿಮಾದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಗೇಮ್‌ಚೇಂಜರ್‌ ಎಸ್‌. ಶಂಕರ್‌ ನಿರ್ದೇಶನದ ಸಿನಿಮಾ. ಈ ಮೂಲಕ ಶಂಕರ್‌ ಮೊದಲ ತೆಲುಗು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಗೇಮ್‌ ಚೇಂಜರ್‌ ಸಂಪೂರ್ಣಗೊಂಡು ಬಿಡುಗಡೆಯಾದ ಬಳಿಕ ಆರ್‌ಆರ್‌ಆರ್‌ ನಟ ರಾಮ್‌ ಚರಣ್‌ ಅವರು ಬುಚ್ಚಿ ಬಾಬು ಸನಾ ಡೈರೆಕ್ಷನ್‌ನ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಆರ್‌ಸಿ16 ಸಿನಿಮಾ ಬಿಡುಗಡೆಯಾದ ಬಳಿಕ ಆರ್‌ಸಿ17 ಸಿನಿಮಾ ಆರಂಭವಾಗಲಿದೆ.

ರಾಮ್‌ ಚರಣ್‌ ಹದಿನಾರನೇ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣ ನಟಿಸುವ ಕುರಿತೂ ವದಂತಿಗಳಿವೆ. ರಾಮ್‌ಚರಣ್‌ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌ಗೆ ಪ್ರಮುಖ ಪಾತ್ರವೊಂದು ನಿಗದಿಯಾಗಿದೆಯಂತೆ. ಈ ಕುರಿತು ನಿರ್ದೇಶಕರು ಶಿವಣ್ಣನ ಜತೆ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಶೂಟಿಂಗ್‌ ಆರಂಭವಾಗಲು ಇನ್ನೂ ಸಾಕಷ್ಟು ಸಮಯವಿದೆ. ಹೀಗಾಗಿ ಚಿತ್ರತಂಡವೇ ಮಾಹಿತಿ ನೀಡಲಿ ಎಂದು ಕಾಯಲಾಗುತ್ತಿದೆ.

ಧನುಷ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ "ಕ್ಯಾಪ್ಟನ್‌ ಮಿಲ್ಲರ್‌"ನಲ್ಲಿ ಶಿವರಾಜ್‌ಕುಮಾರ್‌ ನಟಿಸಿದ್ದಾರೆ. ಜೈಲರ್‌ ಚಿತ್ರದಲ್ಲಿ ಶಿವಣ್ಣನ ಪಾತ್ರಕ್ಕೆ ದೇಶಾದ್ಯಂತ ಅಭಿಮಾನಿಗಳು ಸೃಷ್ಟಿಯಾಗಿದ್ದರು. ರಾಮ್‌ ಚರಣ್‌ ಮುಂದಿನ ಸಿನಿಮಾ ಆರ್‌ಸಿ 16ನಲ್ಲಿ ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಮಾತ್ರವಲ್ಲದೆ ಸಾಯಿ ಪಲ್ಲವಿ ಮತ್ತು ವಿಜಯ್‌ ಸೇತುಪತಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಿನ ವಿವರ ಸದ್ಯ ಲಭ್ಯವಿಲ್ಲ.

IPL_Entry_Point