ಕನ್ನಡ ಸುದ್ದಿ  /  ಮನರಂಜನೆ  /  ರಾಜಮೌಳಿ ಜತೆ ಪ್ರಭಾಸ್‌ ಮನದ ಮಾತು: ಬಾಹುಬಲಿಯಿಂದ ನನ್ನ ಖಾಸಗಿತನ ಕಳೆದುಕೊಂಡೆ, ಆ ವಿಚಾರ ಗೊತ್ತಾದ್ರೆ ಅಭಿಮಾನಿಗಳು ನನ್ನ ಕೊಂದು ಬಿಡ್ತಾರೆ

ರಾಜಮೌಳಿ ಜತೆ ಪ್ರಭಾಸ್‌ ಮನದ ಮಾತು: ಬಾಹುಬಲಿಯಿಂದ ನನ್ನ ಖಾಸಗಿತನ ಕಳೆದುಕೊಂಡೆ, ಆ ವಿಚಾರ ಗೊತ್ತಾದ್ರೆ ಅಭಿಮಾನಿಗಳು ನನ್ನ ಕೊಂದು ಬಿಡ್ತಾರೆ

ಸಲಾರ್‌ ಸಿನಿಮಾ ಬಿಡುಗಡೆ ಪೂರ್ವದಲ್ಲಿ ಎಸ್‌ಎಸ್‌ ರಾಜಮೌಳಿ ಜತೆ ಸಲಾರ್‌ ಸಿನಿಮಾದ ನಾಯಕ ಪ್ರಭಾಸ್‌ ಅವರು ಚಿಟ್‌ಚಾಟ್‌ ನಡೆಸಿದ್ದಾರೆ. ಬಾಹುಬಲಿ ಸಿನಿಮಾದಿಂದ ದೊರಕಿದ ಜನಪ್ರಿಯತೆ ಮತ್ತು ಮುಂದಿನ ಪ್ರಾಜೆಕ್ಟ್‌ಗಳ ಕುರಿತು ಅವರು ಮಾತನಾಡಿದ್ದಾರೆ.

ರಾಜಮೌಳಿ ಜತೆ ಪ್ರಭಾಸ್‌ ಮನದ ಮಾತು
ರಾಜಮೌಳಿ ಜತೆ ಪ್ರಭಾಸ್‌ ಮನದ ಮಾತು

ಸಲಾರ್‌ ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಬಾಹುಬಲಿ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಜತೆಗೆ ಸಿನಿಮಾ ತಂಡ ನಡೆಸಿದ ಚಿಟ್‌ಚಾಟ್‌ ಸಂವಾದ ಆಕರ್ಷಕವಾಗಿತ್ತು. ರಾಜಮೌಳಿ ಜತೆಗೆ ಪ್ರಭಾಸ್‌, ಪೃಥ್ವಿರಾಜ್‌ ಸುಕುಮಾರನ್‌, ಪ್ರಶಾಂತ್‌ ನೀಲ್‌ ಭಾಗಿಯಾಗಿದ್ದಾರೆ. ಸಾಮಾನ್ಯವಾಗಿ ಕೆಲವೊಂದು ವಿಷಯಗಳನ್ನು ಹೇಳಲು ನಾಚಿಕೆಪಡುವ ಪ್ರಭಾಸ್‌ ಈ ಸಂವಾದಲ್ಲಿ ಹಲವು ವಿಚಾರಗಳನ್ನು ಮುಕ್ತವಾಗಿ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಾಹುಬಲಿ ಬಳಿಕ ನನಗೆ ಕಷ್ಟದ ದಿನಗಳು

ಬಾಹುಬಲಿ ಸಿನಿಮಾ ಬಿಡುಗಡೆಯಾದ ಬಳಿಕ ಪ್ರಭಾಸ್‌ಗೆ ಕಷ್ಟದ ದಿನಗಳು ಆರಂಭವಾಯಿತಂತೆ. ಈ ಸಿನಿಮಾದ ಮೂಲಕ ತೆಲುಗು ಸಿನಿಮಾ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದಿದ್ದ ಪ್ರಭಾಸ್‌ ಭಾರತಾದ್ಯಂತ, ಜಗತ್ತಿನಾದ್ಯಂತ ಖ್ಯಾತಿ ಪಡೆದರು. ಈ ಜನಪ್ರಿಯತೆಯನ್ನು ಎದುರಿಸುವುದು ನಿಜಕ್ಕೂ ಕಷ್ಟವಾಯಿತು ಎಂದು ಅವರು ಹೇಳಿದ್ದಾರೆ. "ಬಾಹುಬಲಿ ಬಳಿಕ ತುಂಬಾ ಕಷ್ಟವಾಯಿತು. ಏನು ಮಾಡಬೇಕು ಎಂದೇ ನನಗೆ ಗೊತ್ತಾಗುತ್ತಿರಲಿಲ್ಲ. ನಾನು ತೆಲುಗು ಸಿನಿಮಾ ಕ್ಷೇತ್ರದಿಂದ ಸಡನ್‌ ಆಗಿ ಪ್ಯಾನ್‌ ಇಂಡಿಯಾ, ವಿಶ್ವಕ್ಕೆ ಪರಿಚಿತನಾದೆ" ಎಂದು ಅವರು ಹೇಳಿದ್ದಾರೆ.

ವಿದೇಶಕ್ಕೆ ಪ್ರವಾಸ ಹೋಗುವ ಸಂದರ್ಭದಲ್ಲಿ ಇವರಿಗೆ ಖಾಸಗಿತನ ಕಾಪಾಡಿಕೊಳ್ಳುವುದು ಎಷ್ಟು ಕಷ್ಟವಾಯಿತು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. "ನಾನು ಅಂದು ಇಟಲಿಯಲ್ಲಿದ್ದೆ. ಕೆಲವರು ನನ್ನ ಬಳಿ ಬಂದರು. ಅವರು ನನ್ನನ್ನು ಹೆಸರು ಹಿಡಿದು ಕರೆದರು. ಅವರಿಗೆ ಇಂಗ್ಲಿಷ್‌ ಬರುತ್ತಿರಲಿಲ್ಲ" ಎಂದು ಪ್ರಭಾಸ್‌ ಹೇಳಿದರು. ಆಗ ನನಗೆ ಕೆಲವರು ವಿವರಿಸಿದರು, ಅವರೆಲ್ಲ ಬಾಹುಬಲಿ ನೋಡಿದ್ದಾರೆ, ಹೀಗಾಗಿ ನಿನ್ನನ್ನು ಮಾತನಾಡಿಸಿದ್ದಾರೆ ಎಂದು ನನಗೆ ಹೇಳಿದರು. ಇದು ಉದಾಹರಣೆಯಷ್ಟೇ, ಇಂತಹ ಎಷ್ಟು ಸಂದರ್ಭಗಳು ನನಗೆ ಎದುರಾದವು ಎಂದು ತಿಳಿದಿಲ್ಲ. "ಇದೇ ಕಾರಣಕ್ಕೆ ನನ್ನ ಪ್ರೈವೇಸಿ ಹೋಯ್ತೆಂದು ಆಗ ನಾನು ರಾಜಮೌಳಿಯನ್ನು ಬೈಕೊಳ್ಳುತ್ತಿದ್ದೆ" ಎಂದು ಅವರು ಮುಕ್ತವಾಗಿ ಸಂವಾದದಲ್ಲಿ ಹೇಳಿದ್ದಾರೆ.

ನನ್ನನ್ನು ಅಭಿಮಾನಿಗಳು ಕೊಲ್ಲಬಹುದು

ಬಾಹುಬಾಲಿ ಬಿಡುಗಡೆಯಾದ ಬಳಿಕ ನನ್ನ ಕುರಿತು ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಇತ್ತು. ಕೆಜಿಎಫ್‌ ಚಾಪ್ಟರ್‌ ಒನ್‌ ಬಿಡುಗಡೆಯಾದ ಬಳಿಕ ನಾನು ಇಂತಹ ಸಿನಿಮಾಗಳಲ್ಲಿ ನಟಿಸಬೇಕೆಂದು ಸಾಕಷ್ಟು ಜನರು ಹೇಳಿದರು. "ಎಲ್ಲಿ ಹೋದರೂ ಜನರು ಕೆಜಿಎಫ್‌ ಕುರಿತು ಮಾತನಾಡುತ್ತಿದ್ದರು. ಆಗ ನಾನು ಇನ್ನೂ ಕೆಜಿಎಫ್‌ ನೋಡಿರಲಿಲ್ಲ" ಎಂದು ಪ್ರಭಾಸ್‌ ಹೇಳಿದ್ದಾರೆ. "ಬಳಿಕ ನನ್ನನ್ನು ಪ್ರಶಾಂತ್‌ ನೀಲ್‌ಗೆ ಪರಿಚಯಿಸಲಾಯಿತು. ನಾವಿಬ್ಬರು ಮಾತನಾಡುವ ವಿಷಯದಲ್ಲಿ ನಾಚಿಕೆ ಸ್ವಭಾವದವರು. ಇವರು ಬಳಿಕ ನನ್ನನ್ನು ಸಲಾರ್‌ ಸಿನಿಮಾಕ್ಕಾಗಿ ಸಂಪರ್ಕಿಸಿದರು" ಎಂದು ಪ್ರಭಾಸ್‌ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪ್ರಭಾಸ್‌ ಅವರು ಇತರೆ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದರು. "ಪ್ರಶಾಂತ್‌ ನೀಲ್‌ ನನ್ನನ್ನು ಸಂಪರ್ಕಿಸಿದಾಗ ಆಗೋದಿಲ್ಲ ಎಂದು ಹೇಳಬೇಕೆಂದುಕೊಂಡೆ. ಆದರೆ, ಮತ್ತೆ ಆಲೋಚಿಸಿದೆ. ಎಲ್ಲಾದರೂ ಪ್ರಶಾಂತ್‌ ನೀಲ್‌ಗೆ ನಾನು ನೋ ಎಂದು ಹೇಳಿದೆ ಎಂದು ಗೊತ್ತಾದರೆ ಅಭಿಮಾನಿಗಳು ನನ್ನನ್ನು ಕೊಲ್ಲಬಹುದು. ಆಗ ಕಲ್ಕಿ 2898 ಎಡಿ ಸಿನಿಮಾದಲ್ಲಿ ಬ್ಯುಸಿ ಇದ್ದರೂ ಸಲಾರ್‌ ಚಿತ್ರದಲ್ಲಿ ನಟಿಸಲು ಒಪ್ಪಿದೆ" ಎಂದು ಪ್ರಭಾಸ್‌ ಹೇಳಿದ್ದಾರೆ.

IPL_Entry_Point