ನಾಗ ಚೈತನ್ಯನಿಂದ ಬೇರ್ಪಟ್ಟ ವರ್ಷ ಅತ್ಯಂತ ಕಷ್ಟಕರವಾಗಿತ್ತು; ತನ್ನ ಮೈಯೋಸಿಟಿಸ್ ಕಾಯಿಲೆ ಬಗ್ಗೆಯೂ ಮಾಹಿತಿ ನೀಡಿದ್ರು ಸಮಂತಾ ಋತು ಪ್ರಭು
ಕನ್ನಡ ಸುದ್ದಿ  /  ಮನರಂಜನೆ  /  ನಾಗ ಚೈತನ್ಯನಿಂದ ಬೇರ್ಪಟ್ಟ ವರ್ಷ ಅತ್ಯಂತ ಕಷ್ಟಕರವಾಗಿತ್ತು; ತನ್ನ ಮೈಯೋಸಿಟಿಸ್ ಕಾಯಿಲೆ ಬಗ್ಗೆಯೂ ಮಾಹಿತಿ ನೀಡಿದ್ರು ಸಮಂತಾ ಋತು ಪ್ರಭು

ನಾಗ ಚೈತನ್ಯನಿಂದ ಬೇರ್ಪಟ್ಟ ವರ್ಷ ಅತ್ಯಂತ ಕಷ್ಟಕರವಾಗಿತ್ತು; ತನ್ನ ಮೈಯೋಸಿಟಿಸ್ ಕಾಯಿಲೆ ಬಗ್ಗೆಯೂ ಮಾಹಿತಿ ನೀಡಿದ್ರು ಸಮಂತಾ ಋತು ಪ್ರಭು

Samantha Ruth Prabhu: ಟಾಲಿವುಡ್‌ ನಟಿ ಸಮಂತಾ ಋತು ಪ್ರಭು ತನ್ನ ಆರೋಗ್ಯ ಮತ್ತು ತನ್ನ ಜೀವನದ ಕಠಿಣ ವರ್ಷದ ಕುರಿತು ಮಾತನಾಡಿದ್ದಾರೆ. ನಾಗ ಚೈತನ್ಯರಿಂದ ದೂರವಾದ ವರ್ಷ ಜೀವನದ ಅತ್ಯಂತ ಕಷ್ಟದ ವರ್ಷವಾಗಿತ್ತು ಎಂದಿದ್ದಾರೆ.

ಸಮಂತಾ ಋತು ಪ್ರಭು
ಸಮಂತಾ ಋತು ಪ್ರಭು

ಬೆಂಗಳೂರು: ಟಾಲಿವುಡ್‌ ನಟಿ ಸಮಂತಾ ಋತು ಪ್ರಭು ಅವರು ಯೂಟ್ಯೂಬ್‌ ಪಾಡ್‌ಕಾಸ್ಟ್‌ ಸರಣಿಯಲ್ಲಿ ತನ್ನ ಜೀವನದ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ವಿಶೇಷವಾಗಿ ಮೈಯೋಸಿಟಿಸ್ ಎಂದು ಕರೆಯಲ್ಪಡುವ ಆಟೋ ಇಮ್ಯೂನ್‌ ಕಾಯಿಲೆ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಸದ್ಯ ನಾನು ಕಾಯಿಲೆಯಿಂದ ಶೀಘ್ರದಲ್ಲಿ ಗುಣಮುಖರಾಗುವುದಾಗಿ ಹೇಳಿದ್ದಾರೆ. ಈ ಪಾಡ್‌ಕಾಸ್ಟ್‌ ಸರಣಿಯಲ್ಲಿ ತನ್ನ ಮಾಜಿ ಪತಿ ನಾಗ ಚೈತನ್ಯರ ಕುರಿತೂ ಮಾತನಾಡಿದ್ದಾರೆ. ನಾಗಚೈತನ್ಯರಿಂದ ದೂರವಾದ ವರ್ಷ ನನ್ನ ಜೀವನದ ಅತ್ಯಂತ ಕಠಿಣ ವರ್ಷ ಎಂದಿದ್ದಾರೆ.

ಯೂಟ್ಯೂಬ್‌ ಚಾನೆಲ್‌ನಲ್ಲಿ ಆಲ್ಕೇಸ್‌ ಜತೆಗಿನ ಸಂದರ್ಶನದಲ್ಲಿ ಸಮಂತಾ ಋತು ಪ್ರಭು ಕೆಲಸಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರು ಮೈಯೋಸಿಟಿಸ್, ಆಟೋ ಇಮ್ಯುನ್‌ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ. ಸಮಂತಾ ಋತು ಪ್ರಭು ಅವರು ತನ್ನ ಪತಿ-ನಟ ನಾಗ ಚೈತನ್ಯರಿಂದ 2021ರಲ್ಲಿ ಪ್ರತ್ಯೇಕವಾಗಿದ್ದರು. "ಆಟೋ ಇಮ್ಯುನ್‌ ಪರಿಸ್ಥಿತಿಯಲ್ಲಿ ನಾನು ಅನುಭವಿಸಿದ ಘೋರ ಅನುಭವದ ಕುರಿತು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ನಾನು ಈ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದೇನೆ. ಆಟೋ ಇಮ್ಯುನ್‌ ಪರಿಸ್ಥಿತಿಯು ಜೀವನಪೂರ್ತಿ ಇರುತ್ತದೆ, ನಾನು ಈಗ ಇದರ ಜತೆಗೆ ಬದುಕುತ್ತಿದ್ದೇನೆ. ಜನರು ಸುರಕ್ಷಿತವಾಗಿರಲು ನಾನು ಬಯಸುತ್ತೇನೆ" ಎಂದು ಅವರು ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಮೈಯೋಸಿಟಿಸ್ ಕುರಿತು ಮಾಹಿತಿ

ತನ್ನ ಆರೋಗ್ಯ ಸ್ಥಿತಿಯಿಂದಾಗಿ ಕೆಲಸದಿಂದ ಬ್ರೇಕ್‌ ತೆಗೆದುಕೊಂಡಿರುವುದಾಗಿ ಸಮಂತಾ ಋತು ಪ್ರಭು ಕಳೆದ ವರ್ಷ ಘೋಷಿಸಿದ್ದರು. 2022ರಲ್ಲಿ ಇವರು ಮೈಯೋಸಿಟಿಸ್‌ ಕಾಯಿಲೆಗೆ ಡಯಾಗ್ನಸಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಯಶೋಧಾ ಸಿನಿಮಾ ಬಿಡುಗಡೆ ಸಮಯದಲ್ಲಿ ಈ ಘೋಷಣೆ ಮಾಡಿದ್ದರು. "ಕೆಲವು ತಿಂಗಳ ಹಿಂದೆ ಮೈಯೋಸಿಟಿಸ್‌ ಎಂಬ ಆಟೋಇಮ್ಯುನ್‌ ತೊಂದರೆ ಕಾಣಿಸಿಕೊಂಡಿದೆ. ಈ ಕಾಯಿಲೆ ಗುಣವಾದ ಬಳಿಕ ತಿಳಿಸಬೇಕೆಂದುಕೊಂಡಿದ್ದೆ. ಆದರೆ, ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಕಾಲ ಈ ತೊಂದರೆ ಜತೆಗಿದೆ. ಈ ದೌರ್ಬಲ್ಯವನ್ನು ಒಪ್ಪಿಕೊಂಡು ಹೋರಾಡುತ್ತಿದ್ದೇನೆ. ಶೀಘ್ರದಲ್ಲಿ ಈ ಕಾಯಿಲೆಯಿಂದ ಗುಣವಾಗುವೆ ಎಂದು ಹೇಳಿದ್ದರು.

ಇತ್ತೀಚೆಗೆ ಮತ್ತೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಾನು ಸಿನಿಮಾ ಕರಿಯರ್‌ಗೆ ವಾಪಸ್‌ ಬರುತ್ತಿರುವ ಕುರಿತು ಘೋಷಣೆ ಮಾಡಿದ್ದರು. "ನಾನು ಕೆಲಸಕ್ಕೆ ಮತ್ತೆ ಮರಳುವೆ. ಆದರೆ, ಸದ್ಯ ನಾನು ನಿರುದ್ಯೋಗಿ. ಸದ್ಯ ನನ್ನ ಸ್ನೇಹಿತನ ಜತೆ ಫನ್‌ ಮಾಡುತ್ತಿದ್ದೇನೆ. ಇದು ನನ್ನ ಆರೋಗ್ಯ ಪಾಡ್‌ಕಾಸ್ಟ್‌" ಎಂದು ಅವರು ವಿವರಣೆ ನೀಡಿದ್ದರು.