Shakeela: ಮಂಚಕ್ಕೆ ಕರೆದ ಸ್ಟಾರ್‌ ನಟನ ತಂದೆಯ ಮುಖವಾಡ ಬಯಲು ಮಾಡಿದ ಶಕೀಲಾ!-tollywood news shakeela talks about casting couch experience says director evv satyanarayana asked me to adjust mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Shakeela: ಮಂಚಕ್ಕೆ ಕರೆದ ಸ್ಟಾರ್‌ ನಟನ ತಂದೆಯ ಮುಖವಾಡ ಬಯಲು ಮಾಡಿದ ಶಕೀಲಾ!

Shakeela: ಮಂಚಕ್ಕೆ ಕರೆದ ಸ್ಟಾರ್‌ ನಟನ ತಂದೆಯ ಮುಖವಾಡ ಬಯಲು ಮಾಡಿದ ಶಕೀಲಾ!

ವಯಸ್ಕ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡ ನಟಿ ಶಕೀಲಾ, ಇಂದಿಗೂ ಬಣ್ಣದ ಲೋಕದಲ್ಲಿ ಸಕ್ರಿಯರಿದ್ದಾರೆ. ನಟನೆ ಜತೆಗೆ ಕಿರುತೆರೆ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಅನುಭವದ ಮಾತುಗಳಿಂದಲೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ.

Shakeela: ಮಂಚಕ್ಕೆ ಕರೆದ ಸ್ಟಾರ್‌ ನಟನ ತಂದೆಯ ಮುಖವಾಡ ಬಯಲು ಮಾಡಿದ ಶಕೀಲಾ!
Shakeela: ಮಂಚಕ್ಕೆ ಕರೆದ ಸ್ಟಾರ್‌ ನಟನ ತಂದೆಯ ಮುಖವಾಡ ಬಯಲು ಮಾಡಿದ ಶಕೀಲಾ!

Shakeela: ಒಂದು ಕಾಲದಲ್ಲಿ ಸೌತ್‌ ಸಿನಿ ದುನಿಯಾವನ್ನು ಆಳಿದ ಮಾಜಿ ವಯಸ್ಕ ಸಿನಿಮಾಗಳ ನಟಿ ಶಕೀಲಾ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ. ಬದಲಿಗೆ ಅದು ಮುಳ್ಳಿನ ಹಾಸಿಗೆಯಾಗಿತ್ತು! ಮೇಲ್ನೋಟಕ್ಕೆ ಸ್ಟಾರ್‌ ನಟಿಯೆನಿಸಿದರೂ, ಮಾನಸಿಕವಾಗಿ ನೆಮ್ಮದಿ ಇರಲಿಲ್ಲ. ಹಣ ಗಳಿಸಬೇಕು ಎಂಬ ಒಂದೇ ಕಾರಣಕ್ಕೆ, ವಯಸ್ಕ ಸಿನಿಮಾಗಳಲ್ಲಿ ಮುಂದುವರಿದರು. ಅಷ್ಟೇ ಚೆನ್ನಾಗಿ ಹಣವನ್ನೂ ಗಳಿಸಿದರು. ಆದರೆ, ಅದು ನಟಿಯ ಕೈ ಸೇರಲಿಲ್ಲ. ಈ ವಿಚಾರಗಳನ್ನು ಈ ಹಿಂದೆ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ ಶಕೀಲಾ. ಇದೀಗ ಇನ್ನೊಂದು ಹೇಳಿಕೆಯ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ನಟಿ ಶಕೀಲಾ ಇಂದಿಗೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ತಮಿಳು, ತೆಲುಗು, ಕನ್ನಡದ ಸಿನಿಮಾಗಳಲ್ಲಿ ಆಗಾಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕಿರುತೆರೆಯ ಶೋಗಳಲ್ಲಿಯೂ ಭಾಗವಹಿಸುತ್ತಿರುತ್ತಾರೆ. ಈ ನಡುವೆ ತೆಲುಗಿನ ಬಿಗ್‌ಬಾಸ್‌ಗೂ ಹೋಗಿ ಬಂದಿದ್ದರು ಈ ನಟಿ. ಹೋದ ಎರಡನೇ ವಾರಕ್ಕೇ ಎಲಿಮಿನೇಟ್‌ ಆಗಿ ಹೊರಬಂದಿದ್ದಾರೆ ಶಕೀಲಾ. ಹೀಗೆ ಮನೆಯಿಂದ ಹೊರ ಬಂದ ಬಳಿಕ ಒಂದಷ್ಟು ಅಚ್ಚರಿಯ ವಿಚಾರಗಳನ್ನು ರಿವೀಲ್‌ ಮಾಡಿದ್ದಾರೆ.

ಟಾಲಿವುಡ್‌ ನಟಿ ವಿಚಿತ್ರ ಚಿತ್ರರಂಗದಲ್ಲಾದ ಘಟನೆಯೊಂದನ್ನು ಮೆಲುಕು ಹಾಕಿದ್ದರು. ಸ್ಟಾರ್‌ ನಟನೊಬ್ಬ ರಾತ್ರಿ ವೇಳೆ ತನ್ನ ಕೋಣೆಗೆ ಬರುವಂತೆ ಹೇಳಿದ್ದ. ಅಷ್ಟೇ ಅಲ್ಲದೆ, ಕಿರುಕುಳವನ್ನೂ ನೀಡಿದ್ದ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಇದೀಗ ಅದರ ಬೆನ್ನಲ್ಲೇ ನಟಿ ಶಕೀಲಾ ಸಹ ಅಂಥದ್ದೇ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಜೀವನದಲ್ಲಿನ ಕಹಿ ಘಟನೆಗಳ ಬಗ್ಗೆ ನಟಿ ಶಕೀಲಾ ಈ ಹಿಂದೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಇದೀಗ ಟಾಲಿವುಡ್‌ನ ಸ್ಟಾರ್‌ ನಟ ತಂದೆಯ ನಿಜಬಣ್ಣವನ್ನು ಬಯಲು ಮಾಡಿದ್ದಾರೆ.

ನಟಿ ಶಕೀಲಾ ತಮ್ಮ ಕೆರಿಯರ್‌ನ ಉತ್ತುಂಗದಲ್ಲಿದ್ದಾಗ, ತೆಲುಗಿನ ಸ್ಟಾರ್‌ ನಿರ್ದೇಶಕರೊಬ್ಬರು ಶಕೀಲಾರನ್ನು ಮಂಚಕ್ಕೆ ಕರೆದಿದ್ದರು. ಆ ಘಟನೆ ಬಗ್ಗೆ ಮಾತನಾಡಿರುವ ಶಕೀಲಾ, ಆ ಸ್ಟಾರ್‌ ಹೀರೋನ ತಂದೆಯ ಹೆಸರನ್ನು ಯಾವುದೇ ಅಳುಕಿಲ್ಲದೆ ಹೇಳಿಕೊಂಡಿದ್ದಾರೆ. ಟಾಲಿವುಡ್‌ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿರುವ ಅಲ್ಲರಿ ನರೇಶ್‌ ಅವರ ತಂದೆ ಇವಿವಿ ಸತ್ಯನಾರಾಯಣ್‌ ಬಗ್ಗೆ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದಾರೆ.

ನಾನು ಇವಿವಿ ಸತ್ಯನಾರಾಯಣ್‌ ಅವರ ನಿರ್ದೇಶನದ ಸಿನಿಮಾಗಳಲ್ಲಿ ನಟಿಸಿದ್ದೇನೆ. ಹೀಗಿರುವಾಗಲೇ ಒಂದು ದಿನ ತನ್ನ ಕೋಣೆಗೆ ಬರುವಂತೆ ನಿರ್ದೇಶಕರು ತಿಳಿಸಿದ್ದರು. ಅಡ್ಜೆಸ್ಟ್‌ ಮಾಡಿಕೊಳ್ಳುವಂತೆಯೂ ಹೇಳಿದ್ದರು. ನಿನಗೆ ನನ್ನ ಮುಂದಿನ ಸಿನಿಮಾದಲ್ಲಿ ಅವಕಾಶ ಬೇಕೆಂದರೆ, ನೀನು ಅಡ್ಜೆಸ್ಟ್‌ ಮಾಡಿಕೊಳ್ಳಲೇಬೇಕು ಎಂದಿದ್ದರು. ಆದರೆ, ನಾನು ನಿಮ್ಮ ಸಿನಿಮಾನೇ ಬೇಡ ಎಂದು ಹೊರಬಂದಿದ್ದೆ" ಎಂದು ಈ ಹಿಂದಿನ ಘಟನೆಯನ್ನು ಹೇಳಿಕೊಂಡಿದ್ದಾರೆ.