ಥ್ರಿಲ್ಲರ್‌ ಸಿನಿಮಾ ಪ್ರಿಯರಿಗಾಗಿ ಒಟಿಟಿಯಲ್ಲಿ ಹೊಸ ಸೇರ್ಪಡೆ; 2 ಕಡೆ ಸ್ಟ್ರೀಮ್‌ ಆಗಲಿದೆ ತೆಲುಗಿನ ಶಿವಂ ಭಜೇ
ಕನ್ನಡ ಸುದ್ದಿ  /  ಮನರಂಜನೆ  /  ಥ್ರಿಲ್ಲರ್‌ ಸಿನಿಮಾ ಪ್ರಿಯರಿಗಾಗಿ ಒಟಿಟಿಯಲ್ಲಿ ಹೊಸ ಸೇರ್ಪಡೆ; 2 ಕಡೆ ಸ್ಟ್ರೀಮ್‌ ಆಗಲಿದೆ ತೆಲುಗಿನ ಶಿವಂ ಭಜೇ

ಥ್ರಿಲ್ಲರ್‌ ಸಿನಿಮಾ ಪ್ರಿಯರಿಗಾಗಿ ಒಟಿಟಿಯಲ್ಲಿ ಹೊಸ ಸೇರ್ಪಡೆ; 2 ಕಡೆ ಸ್ಟ್ರೀಮ್‌ ಆಗಲಿದೆ ತೆಲುಗಿನ ಶಿವಂ ಭಜೇ

ಆಗಸ್ಟ್‌ 1 ರಂದು ತೆರೆ ಕಂಡು ಗಲ್ಲಾ ಪೆಟ್ಟಿಗೆಯಲ್ಲಿ ಸೋಲುಂಡ ಭಕ್ತಿ ಪ್ರಧಾನ-ಥ್ರಿಲ್ಲರ್‌ ಸಿನಿಮಾ ಶಿವಂ ಭಜೇ ಈಗ ಒಟಿಟಿಗೆ ಕಾಲಿಟ್ಟಿದೆ. ಆಗಸ್ಟ್‌ 30 ರಿಂದ ಈ ಚಿತ್ರ ಅಮೆಜಾನ್‌ ಪ್ರೈಂ ವಿಡಿಯೋ ಹಾಗೂ ಆಹಾ ಎರಡೂ ವೇದಿಕೆಗಳಲ್ಲಿ ಪ್ರಸಾರವಾಗುತ್ತಿದೆ. ಚಿತ್ರದಲ್ಲಿ ಅಶ್ವಿನ್‌ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಥ್ರಿಲ್ಲರ್‌ ಸಿನಿಮಾ ಪ್ರಿಯರಿಗಾಗಿ ಒಟಿಟಿಯಲ್ಲಿ ಹೊಸ ಸೇರ್ಪಡೆ; 2 ಕಡೆ ಸ್ಟ್ರೀಮ್‌ ಆಗಲಿದೆ ತೆಲುಗಿನ ಶಿವಂ ಭಜೇ
ಥ್ರಿಲ್ಲರ್‌ ಸಿನಿಮಾ ಪ್ರಿಯರಿಗಾಗಿ ಒಟಿಟಿಯಲ್ಲಿ ಹೊಸ ಸೇರ್ಪಡೆ; 2 ಕಡೆ ಸ್ಟ್ರೀಮ್‌ ಆಗಲಿದೆ ತೆಲುಗಿನ ಶಿವಂ ಭಜೇ

ಥಿಯೇಟರ್‌ಗಳಲ್ಲಿ ತೆರೆ ಕಂಡು ಅಷ್ಟೇನೂ ಪ್ರತಿಕ್ರಿಯೆ ಕಾಣದ ಸಿನಿಮಾಗಳು ಒಟಿಟಿಗೆ ಲಗ್ಗೆ ಇಟ್ಟಿವೆ. ಇತ್ತೀಚೆಗೆ ತೆರೆ ಕಂಡ ತೆಲುಗಿನ ಶಿವಂ ಭಜೇ ಸಿನಿಮಾ ಕೂಡಾ ಈಗ ಒಟಿಟಿ ಅಂಗಳಕ್ಕೆ ಬರುತ್ತಿದೆ. ಈ ಸಿನಿಮಾ ಆಗಸ್ಟ್‌ 1 ರಂದು ಚಿತ್ರಮಂದಿರದಲ್ಲಿ ತೆರೆ ಕಂಡಿತ್ತು. ಒಂದು ತಿಂಗಳಾಗುತ್ತಿದ್ದಂತೆ ಈ ಸಿನಿಮಾ ಈಗ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.

ಅಶ್ವಿನ್‌ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ

ಶಿವಂ ಭಜೇ ಎರಡು ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್‌ ಆಗುತ್ತಿದೆ. ಅಶ್ವಿನ್‌ ಅಭಿನಯದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಕಂಡಿರಲಿಲ್ಲ. ಅಶ್ವಿನ್‌ ಬಾಬು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಶ್ವಿನ್‌ ಅಭಿನಯದ ಹಿಡಂಬ ಚಿತ್ರ ಕಳೆದ ವರ್ಷ ದೊಡ್ಡ ಯಶಸ್ಸು ಪಡೆದಿತ್ತು. ಆದರೆ ಶಿವಂ ಭಜೇ, ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡದೆ ತೆಲುಗು ಸಿನಿಪ್ರಿಯರಿಗೆ ನಿರಾಶೆ ಮೂಡಿಸಿದೆ. ಇದೀಗ ಈ ಸಿನಿಮಾ ಉತ್ತಮ ಮೊತ್ತಕ್ಕೆ ಒಟಿಟಿಗೆ ಮಾರಾಟಗೊಂಡಿದೆ. ಸದ್ಯಕ್ಕೆ ಶಿವಂ ಭಜೇ 2 ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ. ಆಗಸ್ಟ್‌ 30, ಶುಕ್ರವಾರದಿಂದ ಆಹಾ ವಿಡಿಯೋ ಹಾಗೂ ಅಮೆಜಾನ್‌ ಪ್ರೈಂ ವಿಡಿಯೋ ಎರಡರಲ್ಲೂ ಸಿನಿಮಾ ಸ್ಟ್ರೀಮ್‌ ಆಗುತ್ತಿದೆ.

ಶಿವಂ ಭಜೇ ಚಿತ್ರದಲ್ಲಿ ಅಶ್ವಿನ್‌ ಬಾಬು ಜೊತೆಗೆ ಅರ್ಬಾಜ್ ಖಾನ್, ಹೈಪರ್ ಆದಿ, ಬ್ರಹ್ಮಾಜಿ ಮತ್ತು ತಣಿಕೆಲ್ಲ ಭರಣಿ‌ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರವನ್ನು ಅಪ್ಸರ್‌ ಹುಸೇನ್‌ ನಿರ್ದೇಶನ ಮಾಡಿದ್ದಾರೆ. ಧೈರ್ಯ, ಭಕ್ತಿ ಎರಡರ ಮಿಶ್ರಣ ಅದ್ಭುತವಾದ ಕಥೆಯನ್ನು ನೋಡಿ. ಶಿವಂ ಭಜೇ ಆಹಾ ವೇದಿಕೆಯಲ್ಲಿ ಸ್ಟ್ರೀಮ್‌ ಆಗುತ್ತಿದೆ ಎಂದು ಆಹಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಶಿವಂ ಭಜೆ ಭಕ್ತಿ ಪ್ರಧಾನ ಥ್ರಿಲ್ಲರ್ ಸಿನಿಮಾ. ಕ್ರೈಮ್ ಥ್ರಿಲ್ಲರ್ ಮತ್ತು ಭಕ್ತಿ ವಿಷಯಕ್ಕೆ ದೇಶಭಕ್ತಿಯ ಅಂಶವನ್ನು ಸೇರಿಸಿ ನಿರ್ದೇಶಕ ಅಫ್ಸರ್, ಶಿವಂ ಭಜೆ ಕಥೆ ಬರೆದಿದ್ದಾರೆ . ದೇಶ ಎದುರಿಸಿದ ಅನಾಹುತವನ್ನು ಯುವಕನೊಬ್ಬ ದೇವರ ಆಶೀರ್ವಾದದಿಂದ ಹೇಗೆ ಎದುರಿಸಿದ ಎಂಬುದೇ ಶಿವಂ ಭಜೆ ಸಿನಿಮಾದ ಕಥೆ.

ವಿಭಿನ್ನ ಪ್ರಯೋಗ ಹೊತ್ತು ತಂದ ನಿರ್ದೇಶಕ ಅಫ್ಸರ್

ತೆಲುಗು ಚಿತ್ರರಂಗದಲ್ಲಿ ಇಲ್ಲಿಯವರೆಗೂ ಯಾರೂ ಮಾಡದ ವಿಭಿನ್ನ ಕಥೆಯನ್ನು ಅಫ್ಸರ್‌ ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿ ಚಂದು ಪಾತ್ರದಲ್ಲಿ ಅಶ್ವಿನ್ ಬಾಬು ನಟಿಸಿದ್ದಾರೆ. ಸಾಹಸ ಮತ್ತು ಭಾವನಾತ್ಮಕ ದೃಶ್ಯಗಳಲ್ಲಿ ನಟಿಸಿ ನೋಡುಗರನ್ನು ಇಂಪ್ರೆಸ್ ಮಾಡಿದ್ದಾರೆ. ಅಶ್ವಿನ್‌ ಬಾಬು, ಥ್ರಿಲ್ಲರ್ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿದ್ದರು. ಸಲ್ಮಾನ್ ಖಾನ್ ಸಹೋದರ ಅರ್ಭಾಜ್ ಖಾನ್ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ಜಬರ್ದಸ್ತ್‌ ಖ್ಯಾತಿಯ ಹೈಪರ್‌ ಆದಿ ನಕ್ಕೂ ನಲಿಸಿದ್ದಾರೆ. ವಿಕಾಸ್ ಬಡಿಸ ತಮ್ಮ ಸಂಗೀತದಿಂದ ನೋಡುಗರನ್ನು ಭಕ್ತಿಯಲ್ಲಿ ಮುಳುಗಿಸಿದ್ದಾರೆ. ಶಿವಂ ಭಜೆ ವಿಭಿನ್ನ ಪರಿಕಲ್ಪನೆಯ ಥ್ರಿಲ್ಲರ್ ಸಿನಿಮಾ. ಹೊಸ ಪ್ರಯೋಗಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಈ ಚಿತ್ರ ಸ್ವಲ್ಪ ಮಟ್ಟಿಗೆ ಇಷ್ಟವಾಗುತ್ತದೆ. ಒಟಿಟಿಯಲ್ಲಿ ಮಿಸ್‌ ಮಾಡದೆ ನೋಡಿ.