ಗುಡ್‌ ಸೆಕ್ಸ್‌ ಒಂದು ರೀತಿ ಒಳ್ಳೇ ಊಟ ಇದ್ದಂತೆ; ಬೋಲ್ಡ್‌ ಮಾತಲ್ಲೇ ಮುತ್ತು ಉದುರಿಸಿದ ಅನುಪಮಾ ಪರಮೇಶ್ವರನ್‌ -ಟಿಲ್ಲು ಸ್ಕ್ವೇರ್ ಟ್ರೇಲರ್
ಕನ್ನಡ ಸುದ್ದಿ  /  ಮನರಂಜನೆ  /  ಗುಡ್‌ ಸೆಕ್ಸ್‌ ಒಂದು ರೀತಿ ಒಳ್ಳೇ ಊಟ ಇದ್ದಂತೆ; ಬೋಲ್ಡ್‌ ಮಾತಲ್ಲೇ ಮುತ್ತು ಉದುರಿಸಿದ ಅನುಪಮಾ ಪರಮೇಶ್ವರನ್‌ -ಟಿಲ್ಲು ಸ್ಕ್ವೇರ್ ಟ್ರೇಲರ್

ಗುಡ್‌ ಸೆಕ್ಸ್‌ ಒಂದು ರೀತಿ ಒಳ್ಳೇ ಊಟ ಇದ್ದಂತೆ; ಬೋಲ್ಡ್‌ ಮಾತಲ್ಲೇ ಮುತ್ತು ಉದುರಿಸಿದ ಅನುಪಮಾ ಪರಮೇಶ್ವರನ್‌ -ಟಿಲ್ಲು ಸ್ಕ್ವೇರ್ ಟ್ರೇಲರ್

Tillu Square Trailer: ಮೈಮಾಟ ಪ್ರದರ್ಶನದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ನಟಿ ಅನುಪಮಾ ಪರಮೇಶ್ವರನ್‌, ಇದೀಗ ಮೈಚಳಿ ಬಿಟ್ಟು ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಟಿಲ್ಲು ಸ್ಕ್ವೇರ್‌ ಚಿತ್ರದ ಟ್ರೇಲರ್‌ನಲ್ಲಿ ಚುಂಬನದ ದೃಶ್ಯಗಳ ಜತೆಗೆ ಬೋಲ್ಡ್‌ ಮಾತುಗಳ ಮುತ್ತು ಉದುರಿಸಿದ್ದಾರೆ.

ಗುಡ್‌ ಸೆಕ್ಸ್‌ ಒಂದು ರೀತಿ ಒಳ್ಳೇ ಊಟ ಇದ್ದಂತೆ; ಬೋಲ್ಡ್‌ ಮಾತಲ್ಲೇ ಮುತ್ತು ಉದುರಿಸಿದ ಅನುಪಮಾ ಪರಮೇಶ್ವರನ್‌ -ಟಿಲ್ಲು ಸ್ಕ್ವೇರ್ ಟ್ರೇಲರ್
ಗುಡ್‌ ಸೆಕ್ಸ್‌ ಒಂದು ರೀತಿ ಒಳ್ಳೇ ಊಟ ಇದ್ದಂತೆ; ಬೋಲ್ಡ್‌ ಮಾತಲ್ಲೇ ಮುತ್ತು ಉದುರಿಸಿದ ಅನುಪಮಾ ಪರಮೇಶ್ವರನ್‌ -ಟಿಲ್ಲು ಸ್ಕ್ವೇರ್ ಟ್ರೇಲರ್

Anupama Parameswaran: ಸೌತ್‌ನ ಸುಂದರ ನಟಿ ಅನುಪಮಾ ಪರಮೇಶ್ವರನ್.‌ ಬೆರಳೆಣಿಕೆ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ ಈ ನಟಿ. ಗುಂಗುರು ಕೂದಲಲ್ಲಿ ಎದುರಾಗಿ ಅಲ್ಲಿಂದ ಸೌತ್‌ ಸಿನಿಮಾ ದುನಿಯಾದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಈ ನಟಿ. ಸಿನಿಮಾಗಳಲ್ಲಿ ಈ ನಾಜೂಕು ನಲ್ಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ಡೀಸೆಂಟ್‌ ಪಾತ್ರಗಳಲ್ಲಿ. ಬೋಲ್ಡ್‌ ದೃಶ್ಯಗಳಿಂದ ಕೊಂಚ ಅಂತರ ಕಾಯ್ದುಕೊಳ್ಳುವ ಇದೇ ನಟಿ ಇದೀಗ ಎಲ್ಲದಕ್ಕೂ ಸೈ ಅನ್ನೋ ಸೂಚನೆ ನೀಡಿದ್ದಾರೆ.

ಹೌದು ತೆಲುಗಿನಲ್ಲಿ ಡಿಜೆ ಟಿಲ್ಲು ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಅದೇ ಚಿತ್ರದ ಸೀಕ್ವೆಲ್‌ ಟಿಲ್ಲು ಸ್ಕ್ವೇರ್‌ ಚಿತ್ರದ ಟ್ರೇಲರ್‌ ಇದೀಗ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ಹಿಂದೆಂದೂ ಕಾಣಿಸದ ರೀತಿಯಲ್ಲಿ ಅನುಪಮಾ ಪರಮೇಶ್ವರನ್‌ ಎದುರಾಗಿ, ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದಾರೆ. ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಂಡು, ನೋಡುಗರ ಹುಬ್ಬೇರಿಸಿದ್ದಾರೆ. ಈ ಮೂಲಕ ನಾನು ಈ ರೀತಿಯ ಪಾತ್ರಗಳನ್ನೂ ನಿಭಾಯಿಸಬಲ್ಲೇ ಎಂದಿದ್ದಾರೆ ಅನುಪಮಾ.

2015ರಲ್ಲಿ ಮಾಲಿವುಡ್‌ನ ಪ್ರೇಮಮ್‌ ಸಿನಿಮಾ ಮೂಲಕ ಬಣ್ಣದ ಲೋಕದ ಜತೆಗೆ ಬೆಸೆದುಕೊಂಡ ಅನುಪಮಾ ಪರಮೇಶ್ವರನ್‌ಗೆ, ಮೊದಲ ಚಿತ್ರವೇ ಸೂಪರ್‌ ಸಕ್ಸಸ್‌ ತಂದುಕೊಟ್ಟಿತು. ಮೇರಿ ಜಾರ್ಜ್‌ ಪಾತ್ರದಲ್ಲಿ ಗುಂಗುರು ಕೂದಲಲ್ಲಿ ಕಂಗೊಳಿಸಿ ಯುವಕರ ಹೃದಯ ಕದ್ದಿದ್ದರು ಈ ಚೆಲುವೆ. ಆ ಸಿನಿಮಾದ ಯಶಸ್ಸಿನ ಎಳೆಯನ್ನೇ ಹಿಡಿದು, ಸರಣಿ ಸಿನಿಮಾ ಅವಕಾಶಗಳು ಅವರನ್ನು ಅರಸಿ ಬಂದವು. ಆದರೆ, ಹೇಳಿಕೊಳ್ಳುವಂಥ ಯಶಸ್ಸು ಅವರಿಗೆ ಅದಾದ ಬಳಿಕ ಸಿಗದಿರುವುದು ವಿಪರ್ಯಾಸ!

ಮಲಯಾಳಂ ಬಳಿಕ ತೆಲುಗಿನಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದರು. ಸಿನಿಮಾ ಹಿಟ್‌ ಆಗದಿದ್ದರೂ, ಅನುಪಮಾ ಅವರಿಗೆ ಟಾಲಿವುಡ್‌ನಲ್ಲಿ ಕೆಂಪು ಹಾಸಿನ ಸ್ವಾಗತ ಸಿಕ್ಕಿತು. ಅದರ ಪರಿಣಾಮ ಹಲವು ಸಿನಿಮಾ ಅವಕಾಶಗಳು ಅವರಿಗೆ ಸಿಕ್ಕವು. ಅಲ್ಲಿಂದ ಕಾಲಿವುಡ್‌ ಕಡೆಗೂ ಪ್ರಯಾಣ ಬೆಳೆಸಿದರು. ಕನ್ನಡದಲ್ಲಿ ನಟಸಾರ್ವಭೌಮ ಸಿನಿಮಾದಲ್ಲಿ ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಜತೆಗೂ ನಟಿಸಿ ಸ್ಯಾಂಡಲ್‌ವುಡ್‌ಗೂ ಆಗಮಿಸಿ ಗಮನಸೆಳೆದರು. ಅಲ್ಲಿಂದ ಸೌತ್‌ ಚಿತ್ರೋದ್ಯಮದಲ್ಲಿಯೇ ರೌಂಡ್‌ ಹೊಡೆಯುತ್ತಿರುವ ಇದೇ ನಟಿಗೆ ಇದೀಗ ಬಿಗ್‌ ಬ್ರೇಕ್‌ ಬೇಕಿದೆ.

ಟಿಲ್ಲು ಸಲುವಾಗಿ ಬೋಲ್ಡ್‌ ಆದ ಅನುಪಮಾ

ಈವರೆಗೂ ನಟಿಸಿದ ಸಿನಿಮಾಗಳಲ್ಲಿ ಅನುಪಮಾ ಪರಮೇಶ್ವರನ್‌ ಡೀಸೆಂಟ್‌ ಆಗಿಯೇ ಕಾಣಿಸಿದ್ದು ಹೆಚ್ಚು. ಇದೀಗ ಟಿಲ್ಲು ಸ್ಕ್ವೇರ್‌ ಸಲುವಾಗಿ ಬೋಲ್ಡ್‌ ಆಗಿಯೇ ಎದುರಾಗಿದ್ದಾರೆ. ಸಿಧು ನಾಯಕನಾಗಿ ನಟಿಸಿದರೆ, ಅವರಿಗೆ ಜೋಡಿಯಾಗು ಅನುಪಮಾ ನಟಿಸಿದ್ದಾರೆ. ಮಲ್ಲಿಕ್‌ ರಾಮ್‌ ನಿರ್ದೇಶನದ ಈ ಚಿತ್ರಕ್ಕೆ ಸಿತಾರಾ ಎಂಟರ್‌ಟೈನ್‌ಮೆಂಟ್‌ ಬಂಡವಾಳ ಹೂಡಿದೆ. ಸದ್ಯ ಬಿಡುಗಡೆ ಆಗಿರುವ ಈ ಚಿತ್ರದ ಟ್ರೇಲರ್‌ನಲ್ಲಿ ಲಿಪ್‌ಲಾಪ್‌ ದೃಶ್ಯಗಳಲ್ಲಿ ಅನುಪಮಾ ಮಿಂಚು ಹರಿಸಿದ್ದಾರೆ. ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

‘ಗುಡ್‌ ಸೆಕ್ಸ್‌ ಒಂದು ರೀತಿ ಒಳ್ಳೇ ಊಟ ಇದ್ದಂತೆ!’

ಮಾರ್ಚ್‌ 29ರಂದು ಬಿಡುಗಡೆ ಆಗಲಿರುವ ಟಿಲ್ಲು ಸ್ಕ್ವೇರ್‌ ಚಿತ್ರದ ಟ್ರೇಲರ್‌ನಲ್ಲಿ ಬರೀ ಬೋಲ್ಡ್‌ ಅವತಾರ, ಲಿಪ್‌ಲಾಪ್‌ ಅಷ್ಟೇ ಅಲ್ಲದೇ ಬೋಲ್ಡ್‌ ಡೈಲಾಗ್‌ ಮೂಲಕವೂ ಅನುಪಮಾ ಪರಮೇಶ್ವರನ್‌ ಸುದ್ದಿಯಲ್ಲಿದ್ದಾರೆ. ನಟಿಯ ಬಾಯಿಂದ ಸೆಕ್ಸ್‌ ಬಗ್ಗೆಯೂ ಸಂಭಾಷಣೆ ಹೊರತೆಗೆಸಿದ್ದಾರೆ ನಿರ್ದೇಶಕ ಮಲ್ಲಿಕ್‌ ರಾಮ್.‌ ಚಿತ್ರದ ಸನ್ನಿವೇಶವೊಂದರಲ್ಲಿ ನಾಯಕನ ಜತೆ ನಿಂತಾಗ, "ಗುಡ್‌ ಸೆಕ್ಸ್‌ ಒಂದು ರೀತಿಯಲ್ಲಿ ಗುಡ್‌ ಫುಡ್‌ ಇದ್ದಂತೆ" ಎಂದೂ ಹೇಳಿದ್ದಾರೆ. ‌

ಇನ್ನು ಈ ಟ್ರೇಲರ್‌ ನೋಡಿದ ನೆಟ್ಟಿಗರು ಅನುಪಮಾ ಅವರ ಧೈರ್ಯ ಮೆಚ್ಚಿದ್ದಾರೆ. ಈವರೆಗೂ ಬೋಲ್ಡ್‌ ಸೀನ್‌ಗಳಲ್ಲಿ ತುಂಡುಡುಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಅನುಪಮಾ ಅವರ ಮತ್ತೊಂದು ಅವತಾರ ಕಂಡೊಡನೆ, ಅನುಪಮಾ ಲಿಮೀಟ್‌ ಮೀರಿದ್ದಾರೆ. ಫ್ರೆಂಚ್‌ ಕಿಸ್‌ ಮಾಡ್ತಾರೆ ಅಂತ ನಾನು ಕನಸಲ್ಲೂ ಊಹಿಸಿರಲಿಲ್ಲ ಎಂದಿದ್ದಾರೆ.

(You are reading this copy on "Hindustan Times Kannada". For latest updates on entertainment, OTT, Web series, Kannada film industry, Kannada serials, Reality shows visit kannada.hindustantimes.com)

Whats_app_banner