ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad ಚಿತ್ರದ ಭೈರವನ ಆಪ್ತ ಗೆಳೆಯ ಬುಜ್ಜಿ ಹೀಗಿದ್ದಾನೆ ನೋಡಿ; ವಿಡಿಯೋ ಟೀಸರ್‌ ಬಿಡುಗಡೆ ಮಾಡಿದ ಚಿತ್ರತಂಡ

Kalki 2898 AD ಚಿತ್ರದ ಭೈರವನ ಆಪ್ತ ಗೆಳೆಯ ಬುಜ್ಜಿ ಹೀಗಿದ್ದಾನೆ ನೋಡಿ; ವಿಡಿಯೋ ಟೀಸರ್‌ ಬಿಡುಗಡೆ ಮಾಡಿದ ಚಿತ್ರತಂಡ

ಪ್ರಭಾಸ್‌ ನಟನೆಯ ಬಹು ನಿರೀಕ್ಷಿತ ಕಲ್ಕಿ ಸಿನಿಮಾದಿಂದ ಹೊಸ ವಿಡಿಯೋ ಹೊರಬಂದಿದೆ. ಭೈರವನ ಆಪ್ತ ಬುಜ್ಜಿಯ ಪರಿಚಯ ಮಾಡಿಕೊಟ್ಟಿದೆ ಸಿನಿಮಾತಂಡ.

Kalki 2898 AD ಚಿತ್ರದ ಭೈರವನ ಆಪ್ತ ಗೆಳೆಯ ಬುಜ್ಜಿ ಹೀಗಿದ್ದಾನೆ ನೋಡಿ; ವಿಡಿಯೋ ಟೀಸರ್‌ ಬಿಡುಗಡೆ ಮಾಡಿದ ಚಿತ್ರತಂಡ
Kalki 2898 AD ಚಿತ್ರದ ಭೈರವನ ಆಪ್ತ ಗೆಳೆಯ ಬುಜ್ಜಿ ಹೀಗಿದ್ದಾನೆ ನೋಡಿ; ವಿಡಿಯೋ ಟೀಸರ್‌ ಬಿಡುಗಡೆ ಮಾಡಿದ ಚಿತ್ರತಂಡ

Kalki 2898 AD: ಟಾಲಿವುಡ್‌ ಮಾತ್ರವಲ್ಲದೆ, ಇಡೀ ಭಾರತ ಪ್ರಭಾಸ್‌ ನಟನೆಯ ಕಲ್ಕಿ 2898 AD ಸಿನಿಮಾಕ್ಕಾಗಿ ಕಾಯುತ್ತಿದೆ. ಒಂದಾದ ನಂತರ ಬಂದು ವಿಶೇಷತೆಗಳನ್ನು ಈ ಸಿನಿಮಾ ಪ್ರೇಕ್ಷಕರ ಮಡಿಲಿಗೆ ಕಾಯುತ್ತಲೇ ಬರುತ್ತಿದೆ. ಈಗ ಇದೇ ಸಿನಿಮಾದಿಂದ ಮತ್ತೊಂದು ವಿಶೇಷವನ್ನು ಅನಾವರಣಗೊಳಿಸಿದೆ ಚಿತ್ರತಂಡ. ಹೌದು, ಪ್ಯಾನ್‍ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್‍ ಅಭಿನಯದ ಕಲ್ಕಿ 2898 AD ಬಿಡುಗಡೆಗೆ ಹೆಚ್ಚು ದಿನಗಳು ಉಳಿದಿಲ್ಲ. ಹೀಗಿರುವಾಗಲೇ ಇದೇ ಕಲ್ಕಿ ಚಿತ್ರದ ಐದನೇ ಸೂಪರ್ ಸ್ಟಾರ್ ಯಾರು ಎಂಬುದನ್ನು ಕಿರು ವಿಡಿಯೋ ಮೂಲಕ ಅನಾವರಣ ಮಾಡಿದೆ ಚಿತ್ರತಂಡ.

ಟ್ರೆಂಡಿಂಗ್​ ಸುದ್ದಿ

‘From Skratch: Building A Superstar’ ಹೆಸರಿನ ಈ ವೀಡಿಯೋದಲ್ಲಿ ಬುಜ್ಜಿಯ ಕುರಿತು ಪರಿಚಯ ಮಾಡಿಕೊಡಲಾಗಿದೆ. 2020ರ ಜೂನ್‍ನಲ್ಲಿ ಅಂಥದ್ದೊಂದು ಪಾತ್ರದ ಸೃಷ್ಠಿ ಹೇಗಾಯಿತು ಎಂದು ಪ್ರಾರಂಭವಾಗುವುದರಿಂದ, ಅಂತಿಮವಾಗಿ ಅದು ಹೇಗೆ ರೂಪುಗೊಂಡಿತು ಎಂಬುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ. ಭೈರವನ ಅಚ್ಚುಮೆಚ್ಚಿನ ಗೆಳೆಯನ ಕುರಿತು ಸಾಕಷ್ಟು ಬಿಲ್ಡಪ್‍ ನೀಡಲಾಗಿದ್ದು, ಈ ಐದನೇ ಸೂಪರ್ ಸ್ಟಾರ್ ಯಾರಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿತ್ತು. ಬುಜ್ಜಿ ಯಾರು ಎಂಬ ಪ್ರಶ್ನೆಗೆ, ಎರಡು ನಿಮಿಷ 22 ಸೆಕೆಂಡ್‍ನ ಈ ವೀಡಿಯೋದಲ್ಲಿ ಚಿತ್ರಕ್ಕೆ ದುಡಿದ ಹಲವು ತಂತ್ರಜ್ಞರು ಉತ್ತರ ನೀಡುವ ಪ್ರಯತ್ನ ಮಾಡಿತ್ತು. ಇದೀಗ ಆ ಕುತೂಹಲ ತಣಿಸಿದೆ.

ಹೈದರಾಬಾದ್‌ನಲ್ಲಿ ಅದ್ಧೂರಿ ಕಾರ್ಯಕ್ರಮ

ಆ ಐದನೇ ಸೂಪರ್‌ಸ್ಟಾರ್‌ ಬೇರಾರು ಅಲ್ಲ, ಬುಜ್ಜಿ ಹೆಸರಿನ ಆಪ್ತ ಸ್ನೇಹಿತ. ಅಂದರೆ, ಬುಜ್ಜಿಯನ್ನು ಭವಿಷ್ಯದ ವಾಹನ ಎಂದೇ ಚಿತ್ರತಂಡ ಹೇಳಿಕೊಂಡು, ಅದರ ಕಿರು ಝಲಕ್‌ಅನ್ನು ಮೇ 22ರಂದು ಅನಾವರಣ ಮಾಡಿದೆ. ನಿರ್ದೇಶಕ ನಾಗ್ ಅಶ್ವಿನ್, ನಿರ್ಮಾಪಕರಾದ ಸಿ. ಅಶ್ವಿನಿ ದತ್, ಸ್ವಪ್ನಾ ದತ್ ಚಲಸಾನಿ, ಪ್ರಿಯಾಂಕಾ ದತ್ ಚಲಸಾನಿ ಸೇರಿ ಸುಮಾರು ಇಪ್ಪತ್ತು ಸಾವಿರ ಪ್ರೇಕ್ಷಕರು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬುಜ್ಜಿಯನ್ನು ಪರಿಚಯಿಸಿದ್ದಾರೆ.

ಭವಿಷ್ಯದ ಆಪ್ತ ಸ್ನೇಹಿತ ಈ ಬುಜ್ಜಿ

ಬುಜ್ಜಿ ಹೆಸರಿನ ಈ ಆಪ್ತ ಗೆಳೆಯ ಚಿತ್ರದ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯ. ಈ ಗೆಳೆಯನ ಕುರಿತು ವೈಜಯಂತಿ ನೆಟ್‍ವರ್ಕ್ ಯೂಟ್ಯೂಬ್‌ ಚಾನಲ್‍ನಲ್ಲಿ ಹೊಸ ವೀಡಿಯೋ ರಿಲೀಸ್‌ ಮಾಡಿದೆ. ವಿಡಿಯೋದಲ್ಲಿ ಬುಜ್ಜಿ ಹೇಗೆಲ್ಲ ಕೆಲಸ ಮಾಡುತ್ತೆ, ಭವಿಷ್ಯದ ಆಪ್ತ ಸ್ನೇಹಿತ ಎಂದು ಏಕೆ ಕರೆಯಲಾಗುತ್ತದೆ ಎಂಬುದು ಗೋಚರವಾಗುತ್ತದೆ.

ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‍ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್‍ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್‍ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲೀಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಜೂನ್‌ 27ಕ್ಕೆ ಸಿನಿಮಾ ಬಿಡುಗಡೆ

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

ಟಿ20 ವರ್ಲ್ಡ್‌ಕಪ್ 2024