Dil Raju: ಆದಿಪುರುಷ್ ಭವಿಷ್ಯ ನಿರ್ಮಾಪಕ ದಿಲ್ ರಾಜುಗೆ ಮೊದಲೇ ತಿಳಿದಿತ್ತಾ;ಚಿತ್ರದ ಹಕ್ಕು ನಿರಾಕರಿಸಿದ್ದ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್
ಮೊದಲ ಬಾರಿಗೆ ಬಿಡುಗಡೆ ಆದ ಟೀಸರ್, ಸಿನಿಮಾ ಬಹಿಷ್ಕಾರ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಎಲ್ಲವನ್ನೂ ನೋಡಿ ದಿಲ್ ರಾಜು, ಚಿತ್ರದ ಹಕ್ಕು ಪಡೆಯಲು ನಿರಾಕರಿಸಿದ್ದಾರೆ.
ಓಂ ರಾವತ್ ನಿರ್ದೇಶನದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಆದಿಪುರುಷ್' ಸಿನಿಮಾ ಜೂನ್ 16ರಂದು ತೆರೆ ಕಂಡಿದೆ. ಮೊದಲ ಬಾರಿಗೆ ಟೀಸರ್ ಬಿಡುಗಡೆ ಆದಾಗಿನಿಂದ ಇಲ್ಲಿವರೆಗೂ ಸಿನಿಮಾ ಟೀಕೆಗಳನ್ನು ಎದುರಿಸುತ್ತಾ ಬಂದಿದೆ. ಚಿತ್ರಕ್ಕೆ ಸುಮಾರು 600 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
ರಿಲೀಸ್ ಆಗಿ 4 ದಿನಗಳವರೆಗೂ ಸಿನಿಮಾ ಸಾಕಷ್ಟು ಕಲೆಕ್ಷನ್ ಮಾಡಿದ್ದರೂ ಇಂದಿನಿಂದ ಅದು ಡಲ್ ಆಗಬಹುದು ಎಂದು ಸಿನಿ ವಿಮರ್ಶಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾದ ಈ ಸಿನಿಮಾ ತಮಿಳು, ಕನ್ನಡ, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿದೆ. ಸಿನಿಮಾದಲ್ಲಿ ಅದ್ಧೂರಿ ಗ್ರಾಫಿಕ್ಸ್ ಸಿನಿ ಪ್ರಿಯರಿಗೆ ಇಷ್ಟವಾದರೂ ಪಾತ್ರಗಳನ್ನು ತೋರಿಸಿರುವ ರೀತಿಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಮೊದಲ ದಿನವೇ ಚಿತ್ರದ ಕೆಲವೊಂದು ದೃಶ್ಯಗಳ ವಿಡಿಯೋ, ಫೋಟೋಗಳು ಲೀಕ್ ಆಗಿದ್ದರಿಂದ ಕೆಲವರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡದಿರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ನಗೆಪಾಟಲಿಗೀಡಾದ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ; ಮೀಮ್ಸ್ ಮೂಲಕ ನಿರ್ದೇಶಕ ಓಂ ರಾವತ್ ಕಾಲೆಳೆದ ನೆಟಿಜನ್ಸ್
ಸಿನಿಮಾ ಕಲೆಕ್ಷನ್ ಡಲ್ ಆಗಿರುವ ಕಾರಣ ಹಂಚಿಕೆದಾರರಿಗೆ ನಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಅವರಿಗೆ ಚಿತ್ರದ ಭವಿಷ್ಯ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆ ಎದುರಾಗಿದೆ. ಪ್ರಭಾಸ್‌ನಂತ ಸ್ಟಾರ್ ನಟನ ಸಿನಿಮಾಗಳ ಹಕ್ಕು ಪಡೆಯಲು ಹಂಚಿಕೆದಾರರು ತಾ ಮುಂದು ನಾ ಮುಂದು ಎಂದು ಪೈಪೋಟಿಗೆ ನಿಲ್ಲುತ್ತಾರೆ. ಆದರೆ, ದಿಲ್ ರಾಜು ಮಾತ್ರ ತಮಗೆ ಬಂದ ಆಫರ್ ನಿರಾಕರಿಸಿದ್ದಾರೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ 185 ಕೋಟಿ ರೂಪಾಯಿ ನೀಡಿ ತೆಲುಗಿನಲ್ಲಿ ರೈಟ್ಸ್ ಪಡೆದಿತ್ತು. ಅದರೆ ಅದಕ್ಕೂ ಮುನ್ನ ದಿಲ್ ರಾಜು ಬಳಿ ನಿರ್ಮಾಪಕರು ಸಿನಿಮಾ ಹಂಚಿಕೆ ರೈಟ್ಸ್‌ಗೆ ಅಪ್ರೋಚ್ ಮಾಡಿದ್ದರಂತೆ.
ಆದರೆ ಮೊದಲ ಬಾರಿಗೆ ಬಿಡುಗಡೆ ಆದ ಟೀಸರ್, ಸಿನಿಮಾ ಬಹಿಷ್ಕಾರ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಎಲ್ಲವನ್ನೂ ನೋಡಿ ದಿಲ್ ರಾಜು, ಚಿತ್ರದ ಹಕ್ಕು ಪಡೆಯಲು ನಿರಾಕರಿಸಿದ್ದಾರೆ. ಏನೇ ಆಗಲಿ ದಿಲ್ ರಾಜು ಸಿನಿಮಾ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆಯದೆ ಬಚಾವ್ ಆಗಿದ್ದಾರೆ. ಅವರಿಗೆ ಈ ಚಿತ್ರದ ಕಲೆಕ್ಷನ್ ಹೇಗಿರಬಹುದು ಎಂದು ಮೊದಲೇ ಗೊತ್ತಿತ್ತು ಎಂದು ಸಿನಿಮಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ವಿಶ್ವ ಅಪ್ಪಂದಿರ ದಿನ 2023; ಕನ್ನಡ ಚಿತ್ರರಂಗದ ತಂದೆ ಮಕ್ಕಳ ಸುಂದರ ಫೋಟೋಗಳು, ಇವರಲ್ಲಿ ನಿಮಗೆ ಯಾರು ಇಷ್ಟ
ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ ಬಗ್ಗೆ ಬಗೆಯ ಮೀಮ್ಸ್
'ಆದಿಪುರುಷ್' ಸಿನಿಮಾ ರಿಲೀಸ್ ಆದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಮೀಮ್ಸ್ ಹರಿದಾಡುತ್ತಲೇ ಇವೆ. ದಶರಥನನ್ನು ಯೇಸುಕ್ರಿಸ್ತನಂತೆ ಚಿತ್ರಿಸಿರುವುದು, ಸೀತಾಮಾತೆಗೆ ಆಫ್ ಬ್ಲೌಸ್ ತೊಡಿಸಿರುವುದು, ರಾವಣನ ಸುತ್ತಲೂ ಹಾವುಗಳು ಸುತ್ತಿಕೊಂಡಿರುವುದು, ಇಂದ್ರಜಿತುವಿನ ಮೈಮೇಲೆಲ್ಲಾ ಟ್ಯಾಟೂ ಹಾಕಿರುವುದು ಜನರಿಗೆ ಫನ್ನಿ ಎನಿಸುತ್ತಿದೆ.
ಟಿ ಸೀರೀಸ್ ಫಿಲ್ಮ್ಸ್ ನಿರ್ಮಾಣದ 'ಆದಿಪುರುಷ್' ಚಿತ್ರವನ್ನು ಭೂಷಣ್ ಕುಮಾರ್, ಕೃಷ್ಣ ಕುಮಾರ್ ನಿರ್ಮಿಸಿದ್ದು ಓಂ ರಾವತ್ ನಿರ್ದೇಶಿಸಿದ್ದಾರೆ. ವಾಲ್ಮೀಕಿ ವಿರಚಿತ ರಾಮಾಯಣ ಕಥೆ ಆಧರಿಸಿದ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕೃತಿ ಸನನ್ ಸೀತಾಮಾತೆ ಹಾಗೂ ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿದ್ದಾರೆ.