ಕನ್ನಡ ಸುದ್ದಿ  /  Entertainment  /  Tollywood News Ss Rajamouli And Son Karthikeya Experience Earthquake In Japan While On The 28th Floor Pcp

SS Rajamouli: ಜಪಾನ್‌ನಲ್ಲಿ ಭೂಕಂಪದ ಭೀಕರ ಅನುಭವಕ್ಕೆ ತುತ್ತಾದ ಎಸ್‌ಎಸ್‌ ರಾಜಮೌಳಿ; ಮಗ ಕಾರ್ತಿಕೇಯ ಹಂಚಿಕೊಂಡ್ರು ಆ ಅನುಭವ

ಬಾಹುಬಲಿ ನಿರ್ಮಾಪಕ ಎಸ್‌ಎಸ್‌ ರಾಜಮೌಳಿ ಮತ್ತು ಅವರ ಮಗ ಕಾರ್ತಿಕೇಯ ಜಪಾನ್‌ನಲ್ಲಿದ್ದಾರೆ. ಅಲ್ಲಿ ಅವರಿಗೆ ಭೂಕಂಪದ ಅನುಭವವಾಗಿದೆ. ಈ ಅನುಭವ ಭಯಾನಕವಾಗಿತ್ತು ಎಂದು ಕಾರ್ತಿಕೇಯ ಟ್ವೀಟ್‌ ಮಾಡಿದ್ದಾರೆ.

SS Rajamouli: ಜಪಾನ್‌ನಲ್ಲಿ ಭೂಕಂಪದ ಭೀಕರ ಅನುಭವಕ್ಕೆ ತುತ್ತಾದ ಎಸ್‌ಎಸ್‌ ರಾಜಮೌಳಿ
SS Rajamouli: ಜಪಾನ್‌ನಲ್ಲಿ ಭೂಕಂಪದ ಭೀಕರ ಅನುಭವಕ್ಕೆ ತುತ್ತಾದ ಎಸ್‌ಎಸ್‌ ರಾಜಮೌಳಿ

ಜನಪ್ರಿಯ ಸಿನಿಮಾ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಮತ್ತು ಅವರ ಪುತ್ರ ಕಾರ್ತಿಕೇಯ ಹಾಗೂ ನಿರ್ಮಾಪಕ ಶೋಬು ಯರ್ಲಗಡ್ಡ ಜಪಾನ್‌ನಲ್ಲಿದ್ದಾರೆ. ಆರ್‌ಆರ್‌ಆರ್‌ ಸಿನಿಮಾದ ವಿಶೇಷ ಪ್ರದರ್ಶನಕ್ಕಾಗಿ ಇವರು ಜಪಾನ್‌ಗೆ ಹೋಗಿದ್ದಾರೆ. ಅಲ್ಲಿನ ಸಾಕಷ್ಟು ಅಭಿಮಾನಿಗಳನ್ನೂ ಭೇಟಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಈ ಮೂವರಿಗೆ ಅಲ್ಲೊಂದು ಭಯಾನಕ ಅನುಭವವಾಗಿದೆ. 28ನೇ ಮಹಡಿಯಲ್ಲಿರುವಾಗ ಇವರಿಗೆ ಭೂಕಂಪನದ ಅನುಭವವಾಗಿದೆ. ಜಪಾನ್‌ನಲ್ಲಿ ಆಗಾಗ ಭೂಕಂಪನ ಆಗುತ್ತಿರುವುದು ಸಾಮಾನ್ಯ. ಆದರೆ, ಕಟ್ಟಡದೊಳಗೆ ಇರುವಾಗ ಆದ ಈ ಅನುಭವದ ಕುರಿತು ರಾಜಮೌಳಿ ಮಗ ಕಾರ್ತಿಕೇಯ ಮಾಹಿತಿ ನೀಡಿದ್ದಾರೆ.

"ಜಪಾನ್‌ನಲ್ಲಿ ಇದೀಗ ಭೂಕಂಪದ ಭೀಕರ ಅನುಭವವಾಯಿತು. ನಾವು 28ನೇ ಮಹಡಿಯಲ್ಲಿ ಇದ್ದಾಗ ನಿಧಾನವಾಗಿ ನೆಲವು ಚಲಿಸಲು ಆರಂಭವಾಯಿತು. ಇದು ಭೂಕಂಪ ಎಂದು ತಿಳಿಯಲು ನಮಗೆ ಸ್ವಲ್ಪ ಹೊತ್ತು ಬೇಕಾಯಿತು. ನಾವು ಭಯದಿಂದ ಅಲ್ಲಿಂದ ಓಡಬೇಕೆಂದುಕೊಂಡೆವು. ಆದರೆ, ಅಲ್ಲಿದ್ದ ಜಪಾನಿಯರು ಕದಲದೇ ನಿಂತುಕೊಂಡರು. " ಎಂದು ಕಾರ್ತಿಕೇಯ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ನೋಡಿ ಅಭಿಮಾನಿಗಳಿಗೆ ದಿಗಿಲಾಗಿದೆ. ಕೆಲವರು ಧೈರ್ಯ ತುಂಬುವ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.

ಈ ಪೋಸ್ಟ್‌ ನೋಡಿ ಅಭಿಮಾನಿಗಳು ಆರಂಭದಲ್ಲಿ ಭಯಗೊಂಡರು. ಬಳಿಕ ಈ ಮೂವರು ಸುರಕ್ಷಿತವಾಗಿದ್ದಾರೆ ಎಂಬ ಸುದ್ದಿ ಕೇಳು ಖುಷಿಪಟ್ಟಿದ್ದಾರೆ. "ನೀವು ಸುರಕ್ಷಿತವಾಗಿರುವುದು ತಿಳಿದು ಸಂತೋಷವಾಯಿತು. ಭೂಕಂಪ ಮುಂದುವರೆಯಬಹುದು. ದಯವಿಟ್ಟು ಎಚ್ಚರಿಕೆಯಿಂದ ಇರಿ" ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. "ಇದು ತುಸು ದೊಡ್ಡ ಭೂಕಂಪ. ನಿಮಗೆಲ್ಲರಿಗೆ ಭಯವಾಯಿತು ಎಂಬ ಸಂಗತಿ ತಿಳಿದು ಬೇಸರವಾಯಿತು" ಎಂದು ಮತ್ತೊಬ್ಬರು ಬರೆದಿದ್ದಾರೆ. "ಜಪಾನ್‌ನಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಮೇಲ್ಬಾಗದ ಮಹಡಿಗಳನ್ನು ಭೂಕಂಪನವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿರುತ್ತದೆ. ಕೆಳಮಹಡಿಗೆ ಹೋಲಿಸಿದರೆ ಮೇಲ್ಬಾಗದ ಮಹಡಿಗಳು ಹೆಚ್ಚು ತೂಗುತ್ತವೆ. ಇದು ಮೇಲಿನ ಮಹಡಿಯಲ್ಲಿದ್ದವರಿಗೆ ಜೋಕಾಲಿಯಲ್ಲಿದ್ದಂತಹ ಅನುಭವ ನೀಡಬಹುದು. ಇದು ಅಪಾಯಕಾರಿ ಭೂಕಂಪನದಂತೆ ಕಾಣಿಸುತ್ತಿಲ್ಲ. ಸುರಕ್ಷಿತವಾಗಿರಿ, ನಿಮ್ಮ ಪ್ರಯಾಣವನ್ನು ಆನಂದಿಸಿ" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಅಭಿಮಾನಿಗಳನ್ನು ಭೇಟಿಯಾದ ರಾಜಮೌಳಿ

ಜಪಾನ್‌ನಲ್ಲಿ ಆರ್‌ಆರ್‌ಆರ್‌ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ತನ್ನ ಅಭಿಮಾನಿಗಳನ್ನು ರಾಜಮೌಳಿ ಭೇಟಿಯಾಗಿದ್ದಾರೆ. ರಾಜಮೌಳಿ ಹಂಚಿಕೊಂಡಿರುವ ಫೋಟೋದಲ್ಲಿ ರಾಜಮೌಳಿ, ಅವರ ಪತ್ನಿ ಮತ್ತು 83 ವರ್ಷದ ಫ್ಯಾನ್‌ ಜತೆ ನಿಂತಿದ್ದರು. "ಜಪಾನ್‌ನಲ್ಲಿ ತಮ್ಮ ಪ್ರೀತಿಪಾತ್ರರರಿಗೆ ಉತ್ತಮ ಆರೋಗ್ಯ ಮತ್ತು ಅದೃಷ್ಟಕೋರಿ ಒರಿಗಾಮಿ ಉಡುಗೊರೆಗಳನ್ನು ನೀಡುತ್ತಾರೆ. ಆರ್‌ಆರ್‌ಆರ್‌ ಸಿನಿಮಾ ನೋಡಿ ಖುಷಿಗೊಂಡಿರುವ ಈ ಹಿರಿಯ ಮಹಿಳೆ 1000 ಇಂತಹ ಒರಿಗಾಮಿ ಕ್ರೇನ್ಸ್‌ ಮಾಡಿದ್ದಾರೆ. ಕೆಲವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ" ಎಂದು ರಾಜಮೌಳಿ ಟ್ವೀಟ್‌ ಮಾಡಿದ್ದರು.

ಮುಂಬರುವ ಸಿನಿಮಾಗಳು

ರಾಜಮೌಳಿ ಅವರು ಶೀಘ್ರದಲ್ಲಿ ಮಹೇಶ್‌ ಬಾಬು ಜತೆ ಅಡ್ವೆಂಚರ್‌ ಸಿನಿಮಾವೊಂದನ್ನು ಮಾಡಲಿದ್ದಾರೆ. ಇದೀಗ ನಿರ್ಮಾಣ ಪೂರ್ವ ಹಂತದಲ್ಲಿದೆ. ಸಿನಿಮಾದ ಹೆಸರು, ತಾರಾಗಣದ ವಿವರ ಇನ್ನಷ್ಟೇ ಬಹಿರಂಗವಾಗಬೇಕಿದೆ.

IPL_Entry_Point