ಕನ್ನಡ ಸುದ್ದಿ  /  Entertainment  /  Tollywood News Tamannaah Bhatia Vasishta N Simha Starrer Odela 2 Movie Launched With Grand Pooja At Varanasi Mnk

ವಾರಾಣಸಿಯಲ್ಲಿ ಸೆಟ್ಟೇರಿತು ವಸಿಷ್ಠ ಸಿಂಹ ಹೊಸ ಸಿನಿಮಾ; ನಾಯಕಿಯಾಗಿ ನಟಿಸಲಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ

ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ ಇದೀಗ ಮತ್ತೆ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. 2022ರಲ್ಲಿ ತೆರೆಕಂಡಿದ್ದ ಓದೆಲಾ ರೈಲ್ವೆ ಸ್ಟೇಷನ್‌ ಸನಿಮಾದ ಸೀಕ್ವೆಲ್‌ ವಾರಾಣಸಿಯಲ್ಲಿ ಸೆಟ್ಟೇರಿದೆ. ಈ ಚಿತ್ರದಲ್ಲಿ ವಸಿಷ್ಠಗೆ ತಮನ್ನಾ ಭಾಟಿಯಾ ನಾಯಕಿಯಾಗಿದ್ದಾರೆ.

Odela 2: ವಾರಣಾಸಿಯಲ್ಲಿ ಸೆಟ್ಟೇರಿತು ವಸಿಷ್ಠ ಸಿಂಹ ಸಿನಿಮಾ; ನಾಯಕಿಯಾಗಿ ನಟಿಸಲಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ
Odela 2: ವಾರಣಾಸಿಯಲ್ಲಿ ಸೆಟ್ಟೇರಿತು ವಸಿಷ್ಠ ಸಿಂಹ ಸಿನಿಮಾ; ನಾಯಕಿಯಾಗಿ ನಟಿಸಲಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ

Vasishta Simha: ಸ್ಯಾಂಡಲ್‌ವುಡ್‌ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ. ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ 2022ರಲ್ಲಿ ಓದೆಲಾ ರೈಲ್ವೆ ಸ್ಟೇಷನ್ ಸಿನಿಮಾ ಮೂಲಕ ನಾಯಕನಾಗಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದಾರೆ. ಈ ಮೂಲಕ ತೆಲುಗು ನೆಲದಲ್ಲಿ ಗಾಯನದ ಜೊತೆಗೆ ಕಲಾ ಸೇವೆಯನ್ನೂ ಮುಂದುವರಿಸುತ್ತಿದ್ದಾರೆ.

2022ರಲ್ಲಿ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಓದೆಲಾ ರೈಲ್ವೆ ಸ್ಟೇಷನ್ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಈ ಚಿತ್ರದಲ್ಲಿ ವಸಿಷ್ಠ ಸಿಂಹ ವಿಭಿನ್ನ ಪಾತ್ರದಲ್ಲಿ ಅಭಿನಯ ಮಾಡಿದ್ದರು. ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯಾಗಿ ಮಿಂಚಿದ್ದಾರೆ. ಇದೂವರೆಗೂ ಮಾಡಿರದಂತಹ ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಈಗ ಅದೇ ಚಿತ್ರದ ಮುಂದುವರಿದ ಭಾಗವೀಗ ತಯಾರಾಗುತ್ತಿದೆ. ಅಂದರೆ, ಸೀಕ್ವೆಲ್‌ಗೆ ಮುಹೂರ್ತ ಮುಗಿದಿದೆ.

ಈಗಾಗಲೇ ಪ್ರೀ ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸಿಕೊಂಡಿರುವ ಓದೆಲಾ ರೈಲ್ವೆ ಸ್ಟೇಷನ್‌ ಪಾರ್ಟ್ 2 ಸಿನಿಮಾ, ದೂರದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಪತ್ನಿ ಹರಿಪ್ರಿಯಾ ಜತೆಗೆ ವಿಮಾನ ಏರಿದ್ದ ವಸಿಷ್ಠ ಸಿಂಹ, ಮುಹೂರ್ತದಲ್ಲೂ ಪಾಲ್ಗೊಂಡಿದ್ದಾರೆ. ವಿಶೇಷ ಏನೆಂದರೆ, ಸೀಕ್ವೆಲ್‌ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಜತೆಗೆ ತೆರೆಹಂಚಿಕೊಳ್ಳಲಿದ್ದಾರೆ ವಸಿಷ್ಠ ಸಿಂಹ. ಮುಹೂರ್ತದ ಜತೆಗೆ ಶನಿವಾರದಿಂದಲೇ ಶೂಟಿಂಗ್‌ ಸಹ ಶುರುವಾಗಿದೆ.

ಓದೆಲಾ ರೈಲ್ವೆ ಸ್ಟೇಷನ್ ಮೊದಲ ಭಾಗದಲ್ಲಿ ನಟಿ ಹೆಬಾ ಪಟೇಲ್ ಜೊತೆ ವಸಿಷ್ಠ ಸಿಂಹ ಅಭಿನಯಿಸಿದ್ದರು. ಆದರೆ ಎರಡನೇ ಭಾಗದಲ್ಲಿ ಮಿಲ್ಕ್​​ ಬ್ಯೂಟಿ ತಮನ್ನಾ ಭಾಟಿಯಾ ಜೊತೆ ವಸಿಷ್ಠ ಸಿಂಹ ಹೆಜ್ಜೆ ಹಾಕಲಿದ್ದಾರೆ. ಹಾಗಂತ ಹೆಬಾ ಪಟೇಲ್ ಇಲ್ಲ ಅಂತಲ್ಲ. ಅವರು ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಮಧು ಕ್ರಿಯೇಷನ್ಸ್ ಮತ್ತು ಸಂಪತ್ ನಂದಿ ಟೀಂ ವರ್ಕ್ ಬ್ಯಾನರ್ ನಡಿ ಡಿ. ಮಧು ಚಿತ್ರ ನಿರ್ಮಾಣ ಮಾಡುತ್ತಿದ್ದು, ಅಶೋಕ ತೇಜ ಓದೆಲಾ ರೈಲ್ವೆ ಸ್ಟೇಷನ್ ಸೀಕ್ವೆಲ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೌಂದರ್ ರಾಜನ್ ಎಸ್ ಛಾಯಾಗ್ರಹಣ, ಕಾಂತಾರ ಮ್ಯೂಸಿಕ್ ಮಾಂತ್ರಿಕ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಅಜನೀಶ್‌ ಸಹ ವಾರಣಾಸಿಯಲ್ಲಿ ನಡೆದ ಮುಹೂರ್ತದಲ್ಲಿ ಭಾಗವಹಿಸಿದ್ದರು.