ಅಯ್ಯಪ್ಪ ಮಾಲೆ ಧರಿಸಿ ಮುಂಬೈ ಸಿದ್ದಿ ವಿನಾಯಕನ ದರ್ಶನ ಪಡೆದ ತೆಲುಗು ನಟ ರಾಮ್ ಚರಣ್
'ಆರ್‌ಆರ್‌ಆರ್' ಸಿನಿಮಾ ಹಿಟ್ ಆದ ನಂತರ ಕೂಡಾ ರಾಮ್ ಚರಣ್ 41 ದಿನಗಳ ಕಾಲ ಮಾಲೆ ಧರಿಸಿದ್ದರು. ಆಗಲೂ ಕೂಡಾ ಅವರು ಅಮೆರಿಕ ಕಾರ್ಯಕ್ರಮದಲ್ಲಿ ಆಸ್ಕರ್ ಸ್ವೀಕರಿಸಲು ಬರಿಗಾಲಿನಲ್ಲಿ ಏರ್‌ಪೋರ್ಟ್‌ಗೆ ಬಂದಿದ್ದರು.
ಟಾಲಿವುಡ್ ನಟ ರಾಮ್ ಚರಣ್ ಈಗಷ್ಟೇ ತಂದೆ ಆಗಿದ್ದಾರೆ. ತಮ್ಮ ರಾಜಕುಮಾರಿಗೆ ಕ್ಲಿನ್ ಕಾರಾ ಕೊನಿಡೇಲ ಎಂದು ನಾಮಕರಣ ಮಾಡಿದ್ದಾರೆ. 'ಆರ್‌ಆರ್‌ಆರ್' ಸಿನಿಮಾಗೆ ಆಸ್ಕರ್ ಬಂದಿದ್ಧೇ ಬಂದಿದ್ದು ರಾಮ್‌ಚರಣ್ ಗ್ಲೋಬಲ್ ಸ್ಟಾರ್ ಆಗಿ ಬದಲಾಗಿದ್ದಾರೆ. ಹೊಸ ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇರುವ ರಾಮ್ ಚರಣ್ ಶೂಟಿಂಗ್ ಬಿಡುವು ಮಾಡಿಕೊಂಡು ವಿನಾಯಕನ ದರ್ಶನ ಪಡೆದಿದ್ದಾರೆ.
ಅಯ್ಯಪ್ಪ ಮಾಲೆ ಧರಿಸಿದ ರಾಮ್ ಚರಣ್
ರಾಮ್ ಚರಣ್ ಮುಂಬೈನ ಖ್ಯಾತ ಸಿದ್ದಿ ವಿನಾಯಕನ ದೇವಸ್ಥಾನಕ್ಕೆ ತೆರಳಿ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿ ಬಂದಿದ್ದಾರೆ. ಎಂದಿನಂತೆ ದುಬಾರಿ ಬಣ್ಣದ ಬಟ್ಟೆ, ಸನ್ ಗ್ಲಾಸ್, ಬೂಟು ಧರಿಸದೆ ಕಪ್ಪು ಬಣ್ಣದ ಸಾಧಾರಣ ಕುರ್ತಾ ಶರ್ಟ್ ಧರಿಸಿ ಬರಿಗಾಲಲ್ಲಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ತೇಜ, ಶಬರಿಮಲೆ ಅಯ್ಯಪ್ಪ ಮಾಲೆ ಧರಿಸಿದ್ದು ಅದೇ ಕಾರಣಕ್ಕೆ ಕಪ್ಪು ಬಣ್ಣದ ಸರಳ ಉಡುಗೆ ಧರಿಸಿ, ನಿಯಮದಂತೆ ಚಪ್ಪಲಿ ತ್ಯಜಿಸಿ ಬರಿಗಾಲಿನಲ್ಲಿ ನಡೆದು ದೇವಾಲಯಕ್ಕೆ ತೆರಳಿದ್ದಾರೆ. ಮಂಗಳವಾರ ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಯ್ಯಪ್ಪ ದೀಕ್ಷೆಯನ್ನು ಮುಗಿಸಿದ್ದಾರೆ.
ಆಸ್ಕರ್ ಸಮಯದಲ್ಲೂ ಮಾಲೆ ಧರಿಸಿದ್ದ ಚೆರ್ರಿ
'ಆರ್‌ಆರ್‌ಆರ್' ಸಿನಿಮಾ ಹಿಟ್ ಆದ ನಂತರ ಕೂಡಾ ರಾಮ್ ಚರಣ್ 41 ದಿನಗಳ ಕಾಲ ಮಾಲೆ ಧರಿಸಿದ್ದರು. ಆಗಲೂ ಕೂಡಾ ಅವರು ಅಮೆರಿಕ ಕಾರ್ಯಕ್ರಮದಲ್ಲಿ ಆಸ್ಕರ್ ಸ್ವೀಕರಿಸಲು ಬರಿಗಾಲಿನಲ್ಲಿ ಏರ್‌ಪೋರ್ಟ್‌ಗೆ ಬಂದಿದ್ದರು. ಆ ವಿಡಿಯೋ ಕೂಡಾ ವೈರಲ್ ಆಗಿತ್ತು. ಇಲ್ಲಿಂದ ಅಮೆರಿಕ ತೆರಳಿ ರಾಮ್ ಚರಣ್ ವ್ರತ ಮುಗಿಸಿದ್ದರು. ಆಗ ಕೂಡಾ ವಿಡಿಯೋ ವೈರಲ್ ಆಗಿತ್ತು. ಇದೀಗ ಮಗಳು ಜನಿಸಿದ ಬಳಿಕ ಕೂಡಾ ಮತ್ತೆ ರಾಮ್‌ಚರಣ್ ಮಾಲೆ ಧರಿಸಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಅಯ್ಯಪ್ಪ ದೀಕ್ಷೆಯನ್ನು ಮುಗಿಸಿದ್ದಾರೆ.
ಗೇಮ್ ಚೇಂಜರ್ ಚಿತ್ರದಲ್ಲಿ ಬ್ಯುಸಿ
ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ರಾಮ್ ಚರಣ್ ಸದ್ಯಕ್ಕೆ 'ಗೇಮ್ ಚೇಂಜರ್' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿ ದಿಲ್ ರಾಜು ನಿರ್ಮಿಸುತ್ತಿದ್ದು ಎಸ್ ಶಂಕರ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ತಮನ್ ಎಸ್ ಸಂಗೀತ ನೀಡಿದ್ದು ರಾಮ್ ಚರಣ್, ಕಿಯಾರಾ ಅಡ್ವಾಣಿ, ಅಂಜಲಿ, ಎಸ್‌ಜೆ ಸೂರ್ಯ, ಜಯರಾಮ್, ಸುನಿಲ್, ಶ್ರೀಕಾಂತ್, ನಾಸರ್, ನವಿನ್ ಚಂದ್ರ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ 2024 ಬೇಸಿಗೆಯಲ್ಲಿ ರಿಲೀಸ್ ಆಗಲಿದೆ.