ತೆಲುಗು ನಟ ನಂದಮೂರಿ ಬಾಲಕೃಷ್ಣ , ಸಂಗಡಿಗರನ್ನು ರೌಡಿಗಳು ಎಂದ ನಟಿ ಮಾಧವಿ
ಕನ್ನಡ ಸುದ್ದಿ  /  ಮನರಂಜನೆ  /  ತೆಲುಗು ನಟ ನಂದಮೂರಿ ಬಾಲಕೃಷ್ಣ , ಸಂಗಡಿಗರನ್ನು ರೌಡಿಗಳು ಎಂದ ನಟಿ ಮಾಧವಿ

ತೆಲುಗು ನಟ ನಂದಮೂರಿ ಬಾಲಕೃಷ್ಣ , ಸಂಗಡಿಗರನ್ನು ರೌಡಿಗಳು ಎಂದ ನಟಿ ಮಾಧವಿ

ಅಧಿವೇಶನ ನಡೆಯುವಾಗ ಬಾಲಕೃಷ್ಣ ಮೀಸೆ ತಿರುಗಿಸಿ, ಸೀಟಿ ಊದಿ ಗದ್ದಲ ಎಬಿಸಿದ್ದರು. ಬಾಲಯ್ಯ ಅವರ ನಡೆಯನ್ನು ಶಾಸಕರು ಖಂಡಿಸಿದ್ದರು. ಸಿನಿಮಾ ನಟನಾಗಿ, ಜವಾಬ್ದಾರಿಯುತ ಶಾಸಕರಾಗಿ ವಿಧಾನಸಭೆಯಂತ ಸ್ಥಳದಲ್ಲಿ ಈ ರೀತಿ ನಡೆದುಕೊಳ್ಳುವುದು ತಪ್ಪು ಎಂದಿದ್ದರು.

ನಟ ಬಾಲಕೃಷ್ಣ ಹಾಗೂ ಸಂಗಡಿಗರನ್ನು ರೌಡಿಗಳು ಎಂದ ತೆಲುಗು ನಟಿ ಮಾಧವಿ
ನಟ ಬಾಲಕೃಷ್ಣ ಹಾಗೂ ಸಂಗಡಿಗರನ್ನು ರೌಡಿಗಳು ಎಂದ ತೆಲುಗು ನಟಿ ಮಾಧವಿ

ಟಾಲಿವುಡ್‌ನಲ್ಲಿ ಕಳೆದ 4 ದಶಕಗಳಿಂದಲೂ ನಂದಮೂರಿ ಬಾಲಕೃಷ್ಣ ಅನೇಕ ಹಿಟ್‌ ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಬಾಲಯ್ಯ, ಸಿನಿಮಾ ಇಲ್ಲಿ ಮಾತ್ರವಲ್ಲ ವಿದೇಶದಲ್ಲಿ ಕೂಡಾ ಬಿಡುಗಡೆಯಾಗುತ್ತದೆ. ಪ್ರತಿ ಸಿನಿಮಾ ರಿಲೀಸ್‌ ಆದಾಗ ಅಲ್ಲಿನ ತೆಲುಗು ಜನರು ತಮ್ಮ ಮೆಚ್ಚಿನ ನಟನ ಸಿನಿಮಾ ನೋಡಿ ಸಂಭ್ರಮಿಸುತ್ತಾರೆ.

ಹಿಂದೂಪುರದ ಶಾಸಕರಾಗಿರುವ ನಂದಮೂರಿ ಬಾಲಕೃಷ್ಣ

ಸಿನಿಮಾ ಮಾತ್ರವಲ್ಲದೆ ನಂದಮೂರಿ ಬಾಲಕೃಷ್ಣ ರಾಜಕೀಯದಲ್ಲಿ ಕೂಡಾ ಸಕ್ರಿಯರಾಗಿದ್ದಾರೆ. ಹಿಂದೂಪುರದ ಶಾಸಕರಾಗಿ ಆ ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಬಾಲಕೃಷ್ಣ ತೆಲುಗು ದೇಶಂ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್‌ ಆದಾಗ ಕೂಡಾ ಬಾಲಯ್ಯ ಅದನ್ನು ಖಂಡಿಸಿದ್ದರು. ವಿಧಾನಸಭೆಯಲ್ಲಿ ಗಲಾಟೆ ಮಾಡಿದ್ದರು, ವೈಎಸ್‌ಆರ್‌ ಶಾಸಕರೊಂದಿಗೆ ಮಾತಿನ ಚಕಮಕಿ ಕೂಡಾ ನಡೆದಿತ್ತು.

ಅಧಿವೇಶನ ನಡೆಯುವಾಗ ಬಾಲಕೃಷ್ಣ ಮೀಸೆ ತಿರುಗಿಸಿ, ಸೀಟಿ ಊದಿ ಗದ್ದಲ ಎಬಿಸಿದ್ದರು. ಬಾಲಯ್ಯ ಅವರ ನಡೆಯನ್ನು ಶಾಸಕರು ಖಂಡಿಸಿದ್ದರು. ಸಿನಿಮಾ ನಟನಾಗಿ, ಜವಾಬ್ದಾರಿಯುತ ಶಾಸಕರಾಗಿ ವಿಧಾನಸಭೆಯಂತ ಸ್ಥಳದಲ್ಲಿ ಈ ರೀತಿ ನಡೆದುಕೊಳ್ಳುವುದು ತಪ್ಪು ಎಂದಿದ್ದರು. ಈ ವಿಡಿಯೋ ವೈರಲ್‌ ಕೂಡಾ ಆಗಿತ್ತು. ಇದೀಗ ತೆಲುಗು ನಟಿ ಮಾಧವಿ ಲತಾ ಬಾಲಕೃಷ್ಣ ಬಗ್ಗೆ ಕಾಮೆಂಟ್‌ ಮಾಡಿದ್ದು ಹಿರಿಯ ನಟನನ್ನು ರೌಡಿ ಎಂದಿದ್ದಾರೆ.

ಆಂಧ್ರ ಜನರು ಆಯ್ಕೆ ಮಾಡಿರುವ ರೌಡಿಗಳು ಎಂದು ಮಾಧವಿ ಕಾಮೆಂಟ್

ಬಾಲಕೃಷ್ಣ ತಮ್ಮ ಸಂಗಡಿಗರೊಂದಿಗೆ ಅಸೆಂಬ್ಲಿಯಿಂದ ಹೊರ ಬರುವ ಫೋಟೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿರುವ ಮಾಧವಿ ಲತಾ, ''ಆಂಧ್ರ ಜನರು ಆಯ್ಕೆ ಮಾಡಿರುವ ರೌಡಿಗಳು ಇವರು'' ಎಂದು ಬರೆದುಕೊಂಡಿದ್ದರು. ಮಾಧವಿ ಕಾಮೆಂಟ್ಸ್‌ ನೋಡಿ ಬಾಲಯ್ಯ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಮತ್ತೊಂದು ಪೋಸ್ಟ್‌ ಹಂಚಿಕೊಂಡಿದ್ದ ಮಾಧವಿ ಲತಾ, ''ನನ್ನ ಸೋಷಿಯಲ್‌ ಮೀಡಿಯಾದಲ್ಲಿ ನನಗೆ ಇಷ್ಟ ಬಂದಿದ್ದನ್ನು ಬರೆಯುತ್ತೇನೆ'' ಎಂದಿದ್ದಾರೆ. ಮಾಧವಿ ಅವರ ಈ ವರ್ತನೆಗೆ ಬಾಲಯ್ಯ ಫ್ಯಾನ್ಸ್‌ ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ. ಕೂಡಲೇ ಬಾಲಯ್ಯ ಅವರನ್ನು ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ 109ನೇ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಸಿನಿಮಾಗೆ ಇನ್ನೂ ಟೈಟಲ್‌ ಫಿಕ್ಸ್‌ ಮಾಡಿಲ್ಲ. ಸಿನಿಮಾವನ್ನು ಬಾಬ್ಬಿ ಕೊಲ್ಲಿ ( ರವೀಂದ್ರ) ನಿರ್ದೇಶಿಸುತ್ತಿದ್ದಾರೆ.

 

Whats_app_banner