Tillu Square Collection: ಯುವ, ಹನುಮಾನ್ ಹಿಂದಿಕ್ಕಿತ್ತ ಟಿಲ್ಲು ಸ್ಕ್ವೇರ್? ಇಲ್ಲಿದೆ ಬಾಕ್ಸ್ ಆಫೀಸ್ ಗಳಿಕೆಯ ಲೆಕ್ಕಾಚಾರ
Tillu Square Box Office Collection: ಈ ಶುಕ್ರವಾರ ಬಿಡುಗಡೆಗೊಂಡು ತೆಲುಗು ಸಿನಿಮಾ ಟಿಲ್ಲು ಸ್ಕ್ವೇರ್ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಕನ್ನಡದ ಯುವರಾಜ್ ಕುಮಾರ್ ನಟನೆಯ ಯುವ ಸಿನಿಮಾ, ಈ ಹಿಂದಿನ ಹನುಮಾನ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಮೊದಲ ದಿನ ಹಿಂದಿಕ್ಕಿದೆಯೇ? ಈ ಬಾಕ್ಸ್ ಆಫೀಸ್ ರಿಪೋರ್ಟ್ ಕಾರ್ಡ್ ನೋಡಿ.
Tillu Square Box Office Report: ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ತೆಲುಗು ಸಿನಿಮಾ ಟಿಲ್ಲು ಸ್ಕ್ವೇರ್ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಟಿಲ್ಲು ಸ್ಕ್ವೇರ್ ಸಿನಿಮಾವು ಮಾರ್ಚ್ 29ರಂದು ರಿಲೀಸ್ ಆಗಿತ್ತು. ಅದೇ ದಿನ ಸ್ಯಾಂಡಲ್‌ವುಡ್‌ನಲ್ಲಿ ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಯುವ ರಾಜ್‌ಕುಮಾರ್ ನಟನೆಯ ಯುವ ಸಿನಿಮಾವೂ ರಿಲೀಸ್ ಆಗಿದೆ. ಜತೆಗೆ, ಮಲಯಾಳಂನಲ್ಲಿ ಆಡುಜೀವಿತಂ- ದಿ ಗೋಟ್ ಲೈಫ್ ಸಿನಿಮಾವೂ ಬಿಡುಗಡೆಯಾಗಿದೆ.
ಟಿಲ್ಲು ಸ್ಕ್ವೇರ್ ಬಾಕ್ಸ್ ಆಫೀಸ್ ಕಲೆಕ್ಷನ್
ಮುಂಗಡ ಬುಕ್ಕಿಂಗ್ ಮತ್ತು ಪ್ರೀಮಿಯರ್ ಶೋಗಳ ಮೂಲಕ ಟಿಲ್ಲು ಸ್ಕ್ವೇರ್ ಚಿತ್ರ ಭಾರೀ ಕಲೆಕ್ಷನ್ ಪಡೆದಿದೆ ಎನ್ನಲಾಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಸುನಾಮಿಯನ್ನೇ ಸೃಷ್ಟಿಸಿದೆ ಎಂದು ವರದಿಗಳು ತಿಳಿಸಿವೆ.
ಆರಂಭಿಕ ಅಂದಾಜು ಲೆಕ್ಕಾಚಾರದ ಪ್ರಕಾರ ಟಿಲ್ಲು ಸ್ಕ್ವೇರ್ ಚಿತ್ರ ಮೊದಲ ದಿನ ಜಗತ್ತಿನಾದ್ಯಂತ 23.7 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಗಳು ತಿಳಿಸಿವೆ. ಆಂಧ್ರಪ್ರದೇಶ ತೆಲಂಗಾಣ ರಾಜ್ಯಗಳಲ್ಲಿ 11.5 ಕೋಟಿ, ಕರ್ನಾಟಕದಲ್ಲಿ1 ಕೋಟಿ, ತಮಿಳುನಾಡಿನಲ್ಲಿ 2 ಲಕ್ಷ ರೂಪಾಯಿ ಮತ್ತು ಭಾರತದ ಇತರೆ ಕಡೆಗಳಲ್ಲಿ 15 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 10 ಕೋಟಿ ಕಲೆಕ್ಷನ್ ಮಾಡಿದೆ. ಉತ್ತರ ಅಮೆರಿಕದ ಸುಮಾರು ಒಂದು ದಶಲಕ್ಷ ಡಾಲರ್ ಗಳಿಸಿದೆ.
ಯುವ ಸಿನಿಮಾದ ಬಾಕ್ಸ್ ಆಫೀಸ್ ವರದಿಯನ್ನು ಹೊಂಬಾಳೆ ಫಿಲ್ಮ್ಸ್ ಇನ್ನೂ ಬಿಡುಗಡೆ ಮಾಡಿಲ್ಲ. ಸಚ್‌ನಿಲ್ಕ್.ಕಾಂನಲ್ಲೂ ಈ ಕುರಿತು ಅಪ್‌ಡೇಟ್ ಮಾಡಿಲ್ಲ. ಮೂಲಗಳ ಪ್ರಕಾರ ಮೊದಲ ದಿನ ಯುವ ಸಿನಿಮಾ ಸುಮಾರು 8 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಮೊದಲ ದಿನವೇ ಸಿದ್ದು ಜೊನ್ನಲಗಡ್ಡ ಅಭಿನಯದ ಟಿಲ್ಲು ಸ್ಕ್ವೇರ್ ಸಿನಿಮಾವು ಮಧ್ಯಮ ರೇಂಜ್ನ ಹೀರೋಗಳ ಮಟ್ಟದಲ್ಲಿ ಕಲೆಕ್ಷನ್ ಮಾಡಿದಂತಿದೆ. ಅದರಲ್ಲೂ ನಿಜಾಮ್ ಏರಿಯಾದಲ್ಲಿ ಹೆಚ್ಚು ಗಳಿಕೆ ಮಾಡಿದೆ. ನಿಜಾಮ್ ಏರಿಯಾದಲ್ಲಿ ನಾನಿ ನಟನೆಯ ದಸರಾ ಸಿನಿಮಾ ಮೊದಲ ದಿನ 6.78 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ವಿಜಯ್ ದೇವರಕೊಂಡ ಅವರ ಖುಷಿ ಚಿತ್ರ 5.15 ಕೋಟಿ ಗಳಿಸಿತ್ತು. ಇದೀಗ ಈ ಏರಿಯಾದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಮೂರನೇ ಸಿನಿಮಾವೆಂಬ ಹೆಗ್ಗಳಿಕೆಗೆ ಟಿಲ್ಲು ಸ್ಕ್ವೇರ್ ಪಾತ್ರವಾಗಿದೆ.
ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರ ಪತ್ರಿಕೆ ಎಚ್‌ಟಿ ತೆಲುಗು ವರದಿ ಪ್ರಕಾರ, ನಿಜಾಮ್ ಪ್ರದೇಶದಲ್ಲಿ ಟಿಲ್ಲು ಸ್ಕ್ವೇರ್ ಸಿನಿಮಾವು 4.35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ನಂತರದ ಸ್ಥಾನವನ್ನು ಲಿಗರ್ ಪಡೆದಿದೆ. ಲಿಗರ್ ಸಿನಿಮಾ 4.26 ಕೋಟಿ ರೂಪಾಯಿ ಗಳಿಸಿತ್ತು. ಐದನೇ ಸ್ಥಾನವನ್ನು ಹನುಮಾನ್ ಪಡೆದಿದೆ. ಮೊದಲ ದಿನ ಹನುಮಾನ್ 3.66 ಕೋಟಿ ಗಳಿಕೆ ಮಾಡಿತ್ತು. ಹನುಮಾನ್ ಸಿನಿಮಾವು ನಂತರ ಸಖತ್ ಹಿಟ್ ಆಗಿ ಭರ್ಜರಿ ಗಳಿಕೆ ಮಾಡಿತ್ತು.
ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ಟಿಲ್ಲು ಸ್ಕ್ವೇರ್ 20022ರಲ್ಲಿ ಬಿಡುಗಡೆಯಾದ ಡಿಜೆ ಟಿಲ್ಲು ಸಿನಿಮಾದ ಮುಂದುವರೆದ ಭಾಗವಾಗಿದೆ. ಇದು ಮಲ್ಲಿಕ್ ರಾಮ್ ನಿರ್ದೇಶನದ ಸಿನಿಮಾ. ಈ ಸಿನಿಮಾದ ಟ್ರೇಲರ್, ಟೀಸರ್, ಪೋಸ್ಟರ್, ಹಾಡುಗಳು ಸಿನಿಮಾ ಪ್ರೇಮಿಗಳಿಗೆ ಕ್ರೇಜ್ ಹುಟ್ಟುಹಾಕಿತ್ತು. ಮಾರ್ಚ್ 29ರಂದು ಬಿಡುಗಡೆಯಾದ ಟಿಲ್ಲು ಸ್ಕ್ವೇರ್ ಸಿನಿಮಾವು ಇದೀಗ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸುವ ಸಾಧ್ಯತೆ ಇದೆ.
ಇದೇ ಸಮಯದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಯುವ ಸಿನಿಮಾದ ಕುರಿತು ಸಕಾರಾತ್ಮಕ ಅಭಿಪ್ರಾಯಗಳು ಸಿನಿಮಾ ಪ್ರೇಮಿಗಳಲ್ಲಿ ಕೇಳಿಬರುತ್ತಿದೆ. ಈ ವೀಕೆಂಡ್‌ಗೆ ಯುವ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆಯೂ ಏರಿಕೆ ಕಾಣುವ ಸೂಚನೆ ಇದೆ.