ಕನ್ನಡ ಸುದ್ದಿ  /  ಮನರಂಜನೆ  /  Tillu Square: 100 ಕೋಟಿ ರೂ ಕ್ಲಬ್‌ಗೆ ಸೇರಿದ ಟಿಲ್ಲು ಸ್ಕ್ವೇರ್‌; ಬಾಕ್ಸ್‌ ಆಫೀಸ್‌ನಲ್ಲಿ ಸಿದ್ದು ಜೊನ್ನಲಗಡ್ಡ ಸಿನಿಮಾದ್ದೇ ದರ್ಬಾರ್‌

Tillu Square: 100 ಕೋಟಿ ರೂ ಕ್ಲಬ್‌ಗೆ ಸೇರಿದ ಟಿಲ್ಲು ಸ್ಕ್ವೇರ್‌; ಬಾಕ್ಸ್‌ ಆಫೀಸ್‌ನಲ್ಲಿ ಸಿದ್ದು ಜೊನ್ನಲಗಡ್ಡ ಸಿನಿಮಾದ್ದೇ ದರ್ಬಾರ್‌

Tillu Square Collections: ಟಾಲಿವುಡ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಟಿಲ್ಲಿ ಸ್ಕ್ವೇರ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುತ್ತಿದೆ. ಸಿದ್ದು ಜೊನ್ನಲಗಡ್ಡ, ಅನುಪಮಾ ಪರಮೇಶ್ವರನ್ ನಟಿಸಿದ ಈ ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ 100 ಕೋಟಿ ರೂಪಾಯಿ ದಾಟಿದೆ.

Tillu Square: 100 ಕೋಟಿ ರೂ ಕ್ಲಬ್‌ಗೆ ಸೇರಿದ ಟಿಲ್ಲು ಸ್ಕ್ವೇರ್‌ ಸಿನಿಮಾ
Tillu Square: 100 ಕೋಟಿ ರೂ ಕ್ಲಬ್‌ಗೆ ಸೇರಿದ ಟಿಲ್ಲು ಸ್ಕ್ವೇರ್‌ ಸಿನಿಮಾ

Tillu Square Day Collections: ತೆಲುಗಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಟಿಲ್ಲು ಸ್ಕ್ವೇರ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಭರಪೂರ ಫಸಲು ತೆಗೆಯುತ್ತಿದೆ. ಸಿದ್ದು ಜೊನ್ನಲಗಡ್ಡ ಹಾಗೂ ಅನುಪಮಾ ಪರಮೇಶ್ವರನ್ ಅಭಿನಯದ ಟಿಲ್ಲು ಸ್ಕ್ವೇರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವತ್ತ ಮುನ್ನಡೆಯುತ್ತಿದೆ. ನಿರೀಕ್ಷೆಗೂ ಮೀರಿ ಈ ಸಿನಿಮಾದ ಕಲೆಕ್ಷನ್‌ ಆಗುತ್ತಿದೆ. ಮಾರ್ಚ್ 29 ರಂದು ಬಿಡುಗಡೆಯಾದ ಈ ಕಾಮಿಡಿ ಥ್ರಿಲ್ಲರ್ ಸಿನಿಮಾ ಆರಂಭದ ದಿನದಿಂದಲೂ ಉತ್ತಮ ಗಳಿಕೆ ಮಾಡುತ್ತಿತ್ತು. ಇದೀಗ ಈ ಸಿನಿಮಾ 100 ಕೋಟಿ ರೂ. ಕ್ಲಬ್‌ಗೆ ಸೇರಿದ ಸುದ್ದಿ ಬಂದಿದೆ.

ಟ್ರೆಂಡಿಂಗ್​ ಸುದ್ದಿ

100 ಕೋಟಿ ಕ್ಲಬ್‌ಗೆ ಸೇರಿದ ಸಿದ್ದು ಸಿನಿಮಾ

ಟಿಲ್ಲು ಸ್ಕ್ವೇರ್ ಚಿತ್ರದಿಂದ 100 ಕೋಟಿ ಕಲೆಕ್ಷನ್ ಮಾಡುವ ಗುರಿ ಹಾಕಿಕೊಂಡಿರುವುದಾಗಿ ನಿರ್ಮಾಪಕ ನಾಗವಂಶಿ ಈ ಹಿಂದೆ ಹೇಳಿದ್ದರು. ಅದೇ ನಿಜವಾಗಿದ್ದು, ಇದೀಗ ಈ ಚಿತ್ರ 100 ಕೋಟಿ ರೂಪಾಯಿ ಕ್ಲಬ್‌ಗೆ ಸೇರಿದೆ. 9 ದಿನಗಳಲ್ಲೇ ಅಚ್ಚರಿಯ ರೀತಿಯಲ್ಲಿ ಈ ಮೈಲಿಗಲ್ಲು ತಲುಪಿದ್ದು ವಿಶೇಷ. ಟಿಲ್ಲು ಸ್ಕ್ವೇರ್ ಚಿತ್ರ 9 ದಿನಗಳಲ್ಲಿ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 101.4 ಕೋಟಿ ರೂ. ಗಳಿಸಿದೆ ಎಂದು ಚಿತ್ರತಂಡ ಅಧಿಕೃತವಾಗಿ ಬಹಿರಂಗಪಡಿಸಿದೆ.

2 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ಸಿದ್ದು

ಇದೀಗ ಚಿತ್ರತಂಡವು 100 ಕೋಟಿ ರೂಪಾಯಿಗಳ ಬ್ಲಾಕ್ ಬಸ್ಟರ್ ಕಲೆಕ್ಷನ್‌ ಪೋಸ್ಟರ್ ಅನ್ನು ಟ್ವೀಟ್‌ ಮಾಡಿದೆ. ಆದರೆ, ಸಿದ್ದು ಜೊನ್ನಲಗಡ್ಡ ಅವರು 2022 ರಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂಪಾಯಿಗಳ ಚಲನಚಿತ್ರ ತಾರೆಯಾಗುವ ಗುರಿಯನ್ನು ಹೊಂದಿರುವುದಾಗಿ ಹೇಳಿದ್ದರು. ಇದೀಗ ಈ ಕನಸು ನನಸಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. “ಯಾವಾಗಲೂ ದೊಡ್ಡ ಕನಸು ಕಾಣಿ. ಅದನ್ನು ನನಸಾಗಿಸಲು ಶ್ರಮಿಸಿ. ನಮ್ಮ ಸ್ಟಾರ್ ಹುಡುಗ ಸಿದ್ದು ತನ್ನ ಗುರಿಯನ್ನು ಡಬಲ್ ಸ್ಪೀಡ್‌ನಲ್ಲಿ ಸಾಕಾರಗೊಳಿಸಿದ್ದಾರೆ. ಡಬಲ್ ಬ್ಲಾಕ್‌ಬಸ್ಟರ್ ಟಿಲ್ಲು ಸ್ಕ್ವೇರ್ ಗಳಿಕೆ 9 ದಿನಗಳಲ್ಲಿ 100 ಕೋಟಿ ರೂಪಾಯಿ ದಾಟಿದೆ” ಎಂದು ಸಿತಾರಾ ಎಂಟರ್‌ಟೈನ್‌ಮೆಂಟ್ ಟ್ವೀಟ್‌ ಮಾಡಿದೆ.

ಟಿಲ್ಲು ಸ್ಕ್ವೇರ್‌ ಮೂಲಕ ಮಿಂಚಿದ ಸಿದ್ದು

ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ಸಿದ್ದು ಜೊನ್ನಲಗಡ್ಡ ಒನ್ ಮ್ಯಾನ್ ಶೋ ಎನ್ನಬಹುದು. ತಮ್ಮ ಟ್ರೇಡ್ ಮಾರ್ಕ್ ಡೈಲಾಗ್ ಡೆಲಿವರಿ, ಮ್ಯಾನರಿಸಂ ಮತ್ತು ನಟನೆಯಿಂದ ಧೂಳೆಬ್ಬಿಸಿದ್ದಾರೆ. ಈ ಚಿತ್ರಕ್ಕೆ ಸಿದ್ದು ಬರೆದಿರುವ ಸಂಭಾಷಣೆಗಳೂ ಆಕರ್ಷಕವಾಗಿವೆ. ಡಿಜೆ ತಿಲ್ಲು ಚಿತ್ರದ ಮುಂದುವರಿದ ಭಾಗವಾಗಿ ಭಾರೀ ನಿರೀಕ್ಷೆಯೊಂದಿಗೆ ಬಂದಿರುವ ಟಿಲ್ಲು ಸ್ಕ್ವೇರ್ ಅದನ್ನೂ ಮೀರಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಮಲ್ಲಿಕ್ ರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಸಿದ್ದು ಜೊನ್ನಲಗಡ್ಡ ನಾಯಕನಾಗಿ ನಟಿಸಿದರೆ, ಅನುಪಮಾ ಪರಮೇಶ್ವರನ್‌ ನಾಯಕಿಯಾಗಿ ನಟಿಸಿದ್ದಾರೆ. 10 ಕೋಟಿ ರೂ.ಗಳ ಬಜೆಟ್ ನಲ್ಲಿ ನಿರ್ಮಿಸಲಾದ ಟಿಲ್ಲು ಸ್ಕ್ವೇರ್ ಸಿನಿಮಾ ಇದೀಗ ಶತಕೋಟಿ ಕ್ಲಬ್‌ ಸೇರಿದೆ. ಈ ಮೂಲಕ ಬಜೆಟ್‌ನ 10 ಪಟ್ಟು ಕಲೆಕ್ಷನ್‌ ಮಾಡಿದೆ.

IPL_Entry_Point