ಕೋಟಿ ಕೊಟ್ಟು ಮಹಾದಾನಿಯಾದೆ, ನಿನ್ನಿಂದ 8 ಕೋಟಿ ಲಾಸ್‌ ಆಗಿದೆ; ದೇವರಕೊಂಡ ವಿರುದ್ಧ ನಿರ್ಮಾಪಕ ಗರಂ
ಕನ್ನಡ ಸುದ್ದಿ  /  ಮನರಂಜನೆ  /  ಕೋಟಿ ಕೊಟ್ಟು ಮಹಾದಾನಿಯಾದೆ, ನಿನ್ನಿಂದ 8 ಕೋಟಿ ಲಾಸ್‌ ಆಗಿದೆ; ದೇವರಕೊಂಡ ವಿರುದ್ಧ ನಿರ್ಮಾಪಕ ಗರಂ

ಕೋಟಿ ಕೊಟ್ಟು ಮಹಾದಾನಿಯಾದೆ, ನಿನ್ನಿಂದ 8 ಕೋಟಿ ಲಾಸ್‌ ಆಗಿದೆ; ದೇವರಕೊಂಡ ವಿರುದ್ಧ ನಿರ್ಮಾಪಕ ಗರಂ

ನಟ ವಿಜಯ್‌ ದೇವರಕೊಂಡ ವಿರುದ್ಧ ನಿರ್ಮಾಪಕ, ವಿತರಕ ಅಭಿಷೇಕ್‌ ಕೊಂಚ ಗರಂ ಆಗಿದ್ದಾರೆ. ಖುಷಿ ಸಿನಿಮಾ ಗೆದ್ದ ಖುಷಿಯಲ್ಲಿ 1 ಕೋಟಿ ದಾನ ಮಾಡಿರುವ ವಿಜಯ್‌ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ನಮ್ಮನ್ನು ಬದುಕಿಸಿ ಎಂದು ಪರೋಕ್ಷ ಟಾಂಗ್‌ ಕೊಟ್ಟಿದ್ದಾರೆ.

ಕೋಟಿ ಕೊಟ್ಟು ಮಹಾದಾನಿ ಎನಿಸಿಕೊಂಡೆ, ನಿನ್ನಿಂದ 8 ಕೋಟಿ ಲಾಸ್‌ ಆಗಿದೆ;  ದೇವರಕೊಂಡ ವಿರುದ್ಧ ನಿರ್ಮಾಪಕ ಗರಂ
ಕೋಟಿ ಕೊಟ್ಟು ಮಹಾದಾನಿ ಎನಿಸಿಕೊಂಡೆ, ನಿನ್ನಿಂದ 8 ಕೋಟಿ ಲಾಸ್‌ ಆಗಿದೆ; ದೇವರಕೊಂಡ ವಿರುದ್ಧ ನಿರ್ಮಾಪಕ ಗರಂ

Vijay Deverakonda: ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಖುಷಿ ಸಿನಿಮಾ ಗೆದ್ದು ಬೀಗಿದ ಅಲೆಯಲ್ಲಿದ್ದಾರೆ. ಸೋಲಿನ ಸುಳಿಗೆ ಸಿಲುಕಿದ್ದ ವಿಜಯ್‌ಗೆ ಖುಷಿ ಸಿನಿಮಾ ಗೆಲುವು ನೀಡಿದೆ. ಆ ಹಿನ್ನೆಲೆಯಲ್ಲಿ ಗುಡಿ ಗುಂಡಾರಗಳಿಗೂ ಸುತ್ತಾಡುತ್ತಿದ್ದಾರೆ. ಇದಷ್ಟೇ ಅಲ್ಲ ನಿರ್ಗತಿಕ 100 ಕುಟುಂಬಗಳಿಗೂ ತಲಾ ಒಂದೊಂದು ಕುಟುಂಬಕ್ಕೆ 1 ಲಕ್ಷ ನೀಡುವುದಾಗಿ ವಿಜಯ್‌ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಟ್ವಿಟ್‌ ಮಾಡಿ, ಈ ಗೆಲುವು ಮತ್ತು ಗಳಿಕೆಯ ಖುಷಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದರೆ ಅದು ಅರ್ಥಹೀನ ಎಂದೂ ಟ್ವಿಟ್‌ ಮಾಡಿದ್ದರು. ನಟನ ಈ ಕೆಲಸ ಅವರ ಅಭಿಮಾನಿ ವಲಯದಲ್ಲೂ ಪುಳಕ ತಂದಿತ್ತು.

ಇದೀಗ ಇದೇ ವಿಜಯ್‌ ವಿರುದ್ಧ ತೆಲುಗು ನಿರ್ಮಾಪಕರು ಗರಂ ಆಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ತಮಗಾದ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಕೋಟಿ ದಾನ ಮಾಡಿ ದಾನಿ ಎನಿಸಿಕೊಳ್ಳುವುದಕ್ಕೂ ಮೊದಲು ನಮ್ಮನ್ನೂ ನೋಡಿ ಎಂದು ಟಾಂಗ್‌ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ ಅವರ ವರ್ಲ್ಡ್ ಫೇಮಸ್ ಲವರ್ ಚಿತ್ರದ ವಿತರಣೆ ಪಡೆದುಕೊಂಡು ಸೋತಿರುವ ನಿರ್ಮಾಪಕ ಅಭಿಷೇಕ್ ನಾಮಾ, ನಿಮ್ಮಿಂದ ಆದ ನಷ್ಟ ತುಂಬಿಕೊಡಿ. ನಿಮ್ಮಿಂದ ನಾನು ಕಳೆದುಕೊಂಡ 8 ಕೋಟಿ ಮರಳಿಸಿ ಎಂದಿದ್ದಾರೆ.

2020 ರಲ್ಲಿ ಬಿಡುಗಡೆಯಾದ ವರ್ಲ್ಡ್ ಫೇಮಸ್ ಲವರ್ ಸಿನಿಮಾ ಹೀನಾಯ ಸೋಲುಂಡಿತ್ತು. ಈ ಸಿನಿಮಾಕ್ಕೆ ವಿತರಣೆ ಮಾಡಿದ್ದ ನಿರ್ಮಾಪಕ ಅಭಿಷೇಕ್‌ ನಾಮಾ, ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ. "ಡಿಯರ್‌ ವಿಜಯ್‌ ದೇವರಕೊಂಡ, ನಿಮ್ಮ ವರ್ಲ್ಡ್ ಫೇಮಸ್ ಲವರ್ ಸಿನಿಮಾದಿಂದ 8 ಕೋಟಿ ಕಳೆದುಕೊಂಡಿದ್ದೇನೆ. ಆಗ ಯಾರೂ ಪ್ರತಿಕ್ರಿಯೆ ನೀಡಲಿಲ್ಲ. ಇದೀಗ ಒಂದು ಕೋಟಿ ಹಣವನ್ನು ನಿರ್ಗತಿಕರಿಗೆ ತುಂಬು ಹೃದಯಿಂದ 1ಕೋಟಿ ದೇಣಿಗೆ ರೂಪದಲ್ಲಿ ನೀಡುತ್ತಿರುವುದು ಒಳ್ಳೆಯ ವಿಚಾರ. ಅದೇ ರೀತಿ ಪ್ರದರ್ಶಕರು ಮತ್ತು ವಿತರಕರ ಕುಟುಂಬವನ್ನು ನೀವು ಉಳಿಸಿ. ಧನ್ಯವಾದ" ಎಂದಿದ್ದಾರೆ ಅಭಿಷೇಕ್‌ ನಾಮಾ.

ಇದೀಗ ನಿರ್ಮಾಪಕರ ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಒಂದಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವು ನೆಟ್ಟಿಗರು ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ವಿಜಯ್ ದೊಡ್ಡ ಮನಸ್ಸಿನಿಂದ ತಮ್ಮ ಅಭಿಮಾನಿಗಳ ಕುಟುಂಬಕ್ಕೆ ಆಸರೆಯಾಗಲು ಮುಂದಾಗಿರುವ ಈ ಸಮಯದಲ್ಲಿ ಈ ರೀತಿ ಪರಿಹಾರ ಕೇಳುವುದು ಸರಿಯಲ್ಲ ಎಂದಿದ್ದಾರೆ. ಸಿನಿಮಾ ಬಂದು ಮೂರು ವರ್ಷ ಕಳೆದಿದೆ. ಇದೀಗ ಕೇಳುವುದರಲ್ಲಿ ಅರ್ಥವಿಲ್ಲ ಎಂದೂ ಹೇಳಿದ್ದಾರೆ. ಆದರೆ, ನಿರ್ಮಾಪಕ ಬೇಡಿಕೆಗೆ ದೇವರಕೊಂಡ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner