ಕನ್ನಡ ಸುದ್ದಿ  /  Entertainment  /  Tollywood News Your Lips Are Distracting Me, Says Vijay Deverakonda To Anchor Akshatha Das Family Star Promotion Mnk

‘ನಿಮ್ಮ ತುಟಿಗಳು ನನ್ನನ್ನು ತಬ್ಬಿಬ್ಬು ಮಾಡ್ತಿದೆ’ ಸಂದರ್ಶನದಲ್ಲಿ ನಿರೂಪಕಿಯ ‘ಅಧರ’ಗಳ ಬಗ್ಗೆ ವಿಜಯ್ ದೇವರಕೊಂಡ ಕಾಮೆಂಟ್‌ VIDEO

ಫ್ಯಾಮಿಲಿ ಸ್ಟಾರ್‌ ಪ್ರಚಾರದ ನಿಮಿತ್ತ ಯೂಟ್ಯೂಬ್‌ ಸಂದರ್ಶನದ ವೇಳೆ ನಿರೂಪಕಿಯ ತುಟಿ ಕಂಡು ವಿಜಯ್‌ ದೇವರಕೊಂಡ ತಬ್ಬಿಬ್ಬಾಗಿದ್ದಾರೆ. ಹೀಗೆ ಹೇಳಿಕೆ ನೀಡಿದ್ದೇ ತಡ, ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬಗೆಬಗೆ ಪ್ರತಿಕ್ರಿಯೆಗಳೂ ಸಂದಾಯವಾಗುತ್ತಿವೆ.

‘ನಿಮ್ಮ ತುಟಿಗಳು ನನ್ನನ್ನು ತಬ್ಬಿಬ್ಬು ಮಾಡ್ತಿದೆ!’ ಸಂದರ್ಶನದಲ್ಲಿ ನಿರೂಪಕಿಯ ‘ಅಧರ’ಗಳ ಬಗ್ಗೆ ವಿಜಯ ದೇವರಕೊಂಡ ಕಾಮೆಂಟ್‌
‘ನಿಮ್ಮ ತುಟಿಗಳು ನನ್ನನ್ನು ತಬ್ಬಿಬ್ಬು ಮಾಡ್ತಿದೆ!’ ಸಂದರ್ಶನದಲ್ಲಿ ನಿರೂಪಕಿಯ ‘ಅಧರ’ಗಳ ಬಗ್ಗೆ ವಿಜಯ ದೇವರಕೊಂಡ ಕಾಮೆಂಟ್‌

Vijay Deverakonda: ಜಾಲತಾಣದಲ್ಲಿ ತೆಲುಗು ನಟ ವಿಜಯ್‌ ದೇವರಕೊಂಡ ಒಂದಲ್ಲ‌ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದು ಸಿನಿಮಾನೇ ಆಗಿರಲಿ ಅಥವಾ ಅವರ ವೈಯಕ್ತಿಯ ಜೀವನವೇ ಆಗಿರಲಿ. ಅದರಲ್ಲೂ ರಶ್ಮಿಕಾ ಮಂದಣ್ಣ ಹೆಸರು ಕೇಳಿಬಂದರೆ ಅಲ್ಲಿ ವಿಜಯ್‌ ದೇವರಕೊಂಡ ಹೆಸರು ಮೊದಲ ಪಂಕ್ತಿಯಲ್ಲಿಯೇ ಮುನ್ನೆಲೆ ಬಂದಿರುತ್ತದೆ. ಹೀಗೆ ಸದಾ ಸದ್ದು ಸುದ್ದಿಯಲ್ಲಿರುವ ನಟ ವಿಜಯ್‌, ಈಗ ಫ್ಯಾಮಿಲಿ ಸ್ಟಾರ್‌ ಸಿನಿಮಾವನ್ನು ಪ್ರೇಕ್ಷಕನ ಮಡಿಲಿಗೆ ಹಾಕುವ ಭರದಲ್ಲಿದ್ದಾರೆ. ಇನ್ನೇನು ಇದೇ ವಾರ ಆ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಪ್ರಚಾರಕ್ಕೆ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದಾರೆ ಫ್ಯಾಮಿಲಿ ಸ್ಟಾರ್‌ ನಟ.

ನಿರ್ದೇಶಕ ಪರಶುರಾಮ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಫ್ಯಾಮಿಲಿ ಸ್ಟಾರ್‌ ಸಿನಿಮಾದಲ್ಲಿ ವಿಜಯ್‌ ದೇವರಕೊಂಡಗೆ ಜೋಡಿಯಾಗಿ ಬಾಲಿವುಡ್‌ ನಟಿ, ಇತ್ತೀಚೆಗೆ ಹಾಯ್‌ ನಾನ್ನ ಸಿನಿಮಾ ಮೂಲಕ ಗಮನ ಸೆಳೆದ ಮೃಣಾಲ್‌ ಠಾಕೂರ್‌ ಜತೆಯಾಗಿದ್ದಾರೆ. ಈಗಾಗಲೇ ಟ್ರೇಲರ್‌ ಮೂಲಕ ಎಲ್ಲರ ಅಟೇನ್ಷನ್‌ ಪಡೆದುಕೊಂಡಿರುವ ಈ ಸಿನಿಮಾ ಮೇಲೆ ಅಭಿಮಾನಿಗಳೂ ಅಷ್ಟೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಹುತಾರಾಗಣದ ಈ ಸಿನಿಮಾದಲ್ಲಿ ಕನ್ನಡದ ನಟ ಅಚ್ಯುತ್‌ ಕುಮಾರ್‌ ಸಹ ನಟಿಸಿದ್ದಾರೆ. ಈಗ ಇದೇ ಚಿತ್ರದ ಪ್ರಮೋಷನ್‌ನಲ್ಲಿ ದೇವರಕೊಂಡು ಬಿಜಿಯಾಗಿದ್ದಾರೆ.

ಫ್ಯಾಮಿಲಿ ಸ್ಟಾರ್‌ ಪ್ರಮೋಷನ್‌

ಹತ್ತಾರು ಯೂಟ್ಯೂಬ್‌ಗಳಿಗೆ ಸಂದರ್ಶನಗಳನ್ನು ನೀಡುತ್ತಿರುವ ವಿಜಯ್‌, ಇತ್ತೀಚೆಗೆ ಯೂಟ್ಯೂಬ್‌ಗೆ ಫ್ಯಾಮಿಲಿ ಸ್ಟಾರ್‌ ಸಿನಿಮಾ ಬಗ್ಗೆ ಇಂಟರ್‌ವ್ಯೂವ್‌ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಿನಿಮಾ ಹೇಗಿದೆ, ಪಾತ್ರಧಾರಿಗಳ ಬಗ್ಗೆ, ತಮ್ಮ ಸಿನಿಮಾ ಕೆರಿಯರ್‌, ಮದುವೆ, ಗಾಸಿಪ್.. ಇತ್ಯಾದಿ ವಿಚಾರಗಳ ಬಗ್ಗೆ ವಿಜಯ ಮಾತನಾಡಿದ್ದಾರೆ. ಇದೆಲ್ಲ ಮುಗಿದ ಬಳಿಕ ಒಂದಷ್ಟು ಫನ್‌ ಟಾಸ್ಕ್‌ಗಳನ್ನೂ ವಿಜಯ್‌ಗೆ ನೀಡಿದ್ದಾರೆ ನಿರೂಪಕಿ ಅಕ್ಷತಾ ದಾಸ್.‌ ಲಿಪ್‌ ಸಿಂಕ್‌ ನೋಡಿ ನಾನು ಏನು ಹೇಳಿದೆ ಎಂಬುದನ್ನು ನೀವು ಹೇಳಬೇಕು ಎಂದಿದ್ದಾಳೆ.

ಈ ಟಾಸ್ಕ್‌ಗಾಗಿ ವಿಜಯ್‌ ದೇವರಕೊಂಡ ಕಿವಿಗೆ ಹೆಡ್‌ಫೋನ್‌ ಹಾಕಿಕೊಂಡಿದ್ದಾರೆ. ಇತ್ತ ಅಕ್ಷತಾ ದಾಸ್‌ ಒಂದಷ್ಟು ಪದಗಳನ್ನು ಹೇಳಿದ್ದಾರೆ. ಹಾಗೆ ಅಕ್ಷತಾ ದಾಸ್‌ ಬಾಯಿಂದ ಬಂದ ಮಾತೇನು ಎಂಬುದನ್ನು ವಿಜಯ್‌ ದೇವರಕೊಂಡ ಹೇಳಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇನ್ನೊಮ್ಮೆ ಪ್ರಯತ್ನ ಮಾಡೋಣ ಎಂದು ಮತ್ತೆ ಹಾಗೇ ಮಾಡಿ ಎನ್ನುತ್ತಾರೆ. ಅಕ್ಷತಾ ದಾಸ್‌ ಮತ್ತೊಮ್ಮೆ ಹೇಳುತ್ತಾರೆ. ಆಗಲೂ ವಿಜಯ್‌ಗೆ ಅದು ಅರ್ಥವಾಗಲ್ಲ.

ವಿಜಯ್‌ ದೇವರಕೊಂಡ ತಬ್ಬಿಬ್ಬು

ಹೀಗೆ ಕೊಂಚ ಗಲಿಬಿಲಿಯಾದ ವಿಜಯ್‌ ದೇವರಕೊಂಡ ತನ್ನ ಸುತ್ತಲಿದ್ದವರತ್ತ ತಿರುಗಿ ನೋಡುತ್ತಾರೆ, ನಿಮಗೇನಾದ್ರೂ ಗೊತ್ತಾಯ್ತಾ ಅಂತ ಕೇಳುತ್ತಾರೆ. ಆಚೀಚೆ ನೋಡಬಾರದು ಎಂದು ಅಕ್ಷತಾ ದಾಸ್‌ ಹೇಳ್ತಾರೆ. ಇಲ್ಲ ಇಲ್ಲ, ನನಗೆ ನಿಮ್ಮ ತುಟಿಗಳು Distract ಮಾಡುತ್ತಿವೆ. ಎಂದು ಹೇಳಿದ್ದಾರೆ. ವಿಜಯ್‌ ದೇವರಕೊಂಡ ನಿರೂಪಕಿಯ ತುಟಿಗಳನ್ನು ನೋಡಿ ತಬ್ಬಿಬ್ಬಾಗಿದ್ದಾರೆ. ನಿಖರವಾಗಿ ಅದೇ ಕ್ಲಿಪ್‌ಅನ್ನು ಸೋಷಿಯಲ್‌ ಮೀಡಿಯಾದಲ್ಲೂ ಹಂಚಿಕೊಂಡ ಕೆಲವರು, ನಿಜಕ್ಕೂ ಆಕೆಯ ತುಟಿಗಳು Distract ಮಾಡುವಂತಿವೆ ಎಂದಿದ್ದಾರೆ.

ನಿರೂಪಕಿ ಬಾಯಿಂದ ಬಂದ ಪದ ಇದೇ..

ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇನ್ನೂ ಹಲವರು ಬಗೆಬಗೆ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಕೆಲವರು ರಶ್ಕಿಕಾ ಮಂದಣ್ಣ ಅವರ ರಿಯಾಕ್ಷನ್‌ ಹೇಗಿರಬಹುದು ಎಂದು ರಶ್ಮಿಕಾ ಅವರ ಸಿಟ್ಟಿನ ಫೋಟೋ ಹಾಕಿ ಕಾಮೆಂಟ್‌ ಮಾಡಿದ್ದಾರೆ. ಹಾಗಾದರೆ, ನಿರೂಪಕಿ ಬಾಯಿಂದ ಆ ಹೆಸರೇನಿರಬಹುದು? ಅದಕ್ಕೂ ಉತ್ತರ ಸಿಕ್ಕಿದ್ದು, ಸಿನಿಮಾ ನಾಯಕಿಯಾದ ಮೃಣಾಲ್‌ ಠಾಕೂರ್‌ ಎಂದಿದ್ದಾರೆ ಅಕ್ಷತಾ ದಾಸ್.

IPL_Entry_Point