Operation Raavan: ಕ್ರೈಮ್ ಥ್ರಿಲ್ಲರ್ ಸಿನಿಮಾ ನೋಡುವ ಆಸೆಯಿದ್ದರೆ ‘ಆಪರೇಷನ್ ರಾವಣ’ ನೋಡಿ; ಈಗ ಓಟಿಟಿಯಲ್ಲೂ ಲಭ್ಯವಿದೆ ಈ ಮೂವಿ
ತೆಲುಗು ಸೈಕೋ ಥ್ರಿಲ್ಲರ್ ಮೂವಿ ಆಪರೇಷನ್ ರಾವನ್ ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ OTT ಗೆ ಬಂದಿದೆ. ರಕ್ಷಿತ್ ಅಟ್ಲೂರಿ ಅಭಿನಯದ ಈ ಚಿತ್ರದಲ್ಲಿ ರಾಧಿಕಾ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 2 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಆಪರೇಷನ್ ರಾವಣ ಮೂರು ತಿಂಗಳ ನಂತರ ಓಟಿಟಿಗೆ ಬರ್ತಿದೆ.
OTT ಪ್ಲಾಟ್‌ಫಾರ್ಮ್ ಬಂದ ನಂತರ ಸಾಮಾನ್ಯವಾಗಿ ಎಲ್ಲ ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಯಾದ ಕೆಲವು ದಿನಕ್ಕೆ ಓಟಿಟಿಗೆ ಕಾಲಿಡುತ್ತಿದೆ. ಚಲನಚಿತ್ರ ಪ್ರೇಕ್ಷಕರು ವಿಭಿನ್ನ ಕಂಟೆಂಟ್ ಚಲನಚಿತ್ರಗಳತ್ತ ಮುಖ ಮಾಡುತ್ತಿದ್ದಾರೆ. ಬಹುತೇಕರು ಹಾರರ್, ಕ್ರೈಮ್ ಥ್ರಿಲ್ಲರ್, ಸೈಕಲಾಜಿಕಲ್ ಕಥೆಗಳನ್ನು ಇಷ್ಟಪಡುತ್ತಿದ್ದಾರೆ. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರ ನಿರ್ಮಾಪಕರು ಇಂತಹ ಜಾನರ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಜನರ ಆಸಕ್ತಿ ಬದಲಾದಂತೆ ಕಥೆಗಳೂ ಬದಲಾಗುತ್ತಾ ಹೋಗುತ್ತಿದೆ. ಜನ ಎಷ್ಟು ಕಥೆಗಳನ್ನು ನೋಡಿದರೂ ಇಷ್ಟಪಡುವ ಕಥೆಗಳನ್ನು ಸಿನಿಮಾ ಮಾಡುವುದು ಒಂದು ಸವಾಲಾಗಿದೆ.
ಆಪರೇಷನ್ ರಾವಣ್ ತೆಲುಗಿನ ಸೈಕೋ ಥ್ರಿಲ್ಲರ್ ಸಿನಿಮಾ ಇದೀಗ ಹೆಚ್ಚಿನ ಪ್ರಚಾರ ಪಡೆಯುತ್ತಿದೆ. ಸೈಕೋ ಸ್ಟೋರಿಯಾಗಿ ತೆರೆಕಂಡ ಆಪರೇಷನ್ ರಾವಣ ಚಿತ್ರದಲ್ಲಿ ರಕ್ಷಿತ್ ಅಟ್ಲೂರಿ ನಾಯಕನಾಗಿ ನಟಿಸಿದ್ದಾರೆ. ಸಂಗೀತಾ ವಿಪಿನ್ ಅವರನ್ನು ನಾಯಕಿಯನ್ನಾಗಿ ಮಾಡಲಾಗಿದೆ ಮತ್ತು ಹಿರಿಯ ನಾಯಕಿ ರಾಧಿಕಾ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿಮ್ಮ ಆಲೋಚನೆಗಳೇ ನಿಮ್ಮ ಶತ್ರುಗಳು ಎಂಬ ಥೀಮ್ ಇದರಲ್ಲಿದೆ.
‘ಆಪರೇಷನ್ ರಾವಣ’ ಚಿತ್ರದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗು ಕ್ರೈಮ್ ಥ್ರಿಲ್ಲರ್ ಆಪರೇಷನ್ ರಾವನ್ ಆಗಸ್ಟ್ 2 ರಂದು ವಿಶ್ವದಾದ್ಯಂತ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ಧ್ಯಾನ್ ಅಟ್ಲೂರಿ ನಿರ್ಮಿಸಿದ್ದಾರೆ. ಆಪರೇಷನ್ ರಾವಣ ಹೊಸ ಯುಗದ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ನಿರ್ದೇಶಕ ವೆಂಕಟ ಸತ್ಯ ನಿರ್ದೇಶಿಸಿದ್ದಾರೆ.
ಆಪರೇಷನ್ ರಾವನ್ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಆಗಸ್ಟ್ 2 ರಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಹಾಗೇ ಒಳ್ಳೆಯ ಗಳಿಕೆಯನ್ನೂ ಮಾಡಿದೆ. ಆಪರೇಷನ್ ರಾವಣ IMDb ಯಿಂದ 9.7 ರೇಟಿಂಗ್ ಅನ್ನು ಹೊಂದಿದೆ. ಆಪರೇಷನ್ ರಾವಣ ಸಿನಿಮಾ ಕೊನೆಗೂ ಒಟಿಟಿಗೆ ಬಂದಿದೆ.
ವೀಕ್ಷಣೆ ಎಲ್ಲಿ?
ಆಹಾ OTTಯಲ್ಲಿ ನೀವು ಈ ಸಿನಿಮಾ ನೋಡಬಹುದು. ಆಪರೇಷನ್ ರಾವಣ OTT ನವೆಂಬರ್ 2 ರಿಂದ ಆಹಾ ಬಿಡುಗಡೆಯಾಗಿದೆ. ಅಂದರೆ ಆಗಸ್ಟ್ 2 ರಂದು ಥಿಯೇಟ್ರಿಕಲ್ ಬಿಡುಗಡೆ ಹೊಂದಿದ್ದ ಆಪರೇಷನ್ ರಾವಣ ಸರಿಯಾಗಿ ಮೂರು ತಿಂಗಳ ನಂತರ ನವೆಂಬರ್ 2 ರಂದು OTT ಸ್ಟ್ರೀಮಿಂಗ್‌ಗೆ ಬಂದಿದೆ. ಈಗ ನೀವೂ ಮನೆಯಲ್ಲೇ ಕೂತು ಈ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ಸಸ್ಪೆನ್ಸ್ ಥ್ರಿಲ್ಲರ್‌ಗಳನ್ನು ಇಷ್ಟಪಡುವ ಪ್ರೇಕ್ಷಕರು ಆಪರೇಷನ್ ರಾವಣ ಚಿತ್ರವನ್ನು ಆನಂದಿಸಬಹುದು .
ಕ್ರೈಮ್ ಥ್ರಿಲ್ಲರ್‌ಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಆಪರೇಷನ್ ರಾವಣ ಇಷ್ಟವಾಗುತ್ತದೆ. ಅಲ್ಲದೆ, OTT ಯಲ್ಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ.
ತಾರಾಗಣ
ರಕ್ಷಿತ್ ಅಟ್ಲೂರಿ, ಸಂಗೀತಾ ವಿಪಿನ್, ರಾಧಿಕಾ ಶರತ್‌ಕುಮಾರ್ ಜೊತೆಗೆ ಚರಣ್ ರಾಜ್, ಕಂಚಿ, ರಾಕೆಟ್ ರಾಘವ, ರಘು ಕುಂಚೆ, ಕೆಎ ಪೌಲ್ ರಾಮು, ವಿದ್ಯಾ ಸಾಗರ್, ಟಿವಿ5 ಮೂರ್ತಿ, ಕಾರ್ತಿಕ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ವೇಳೆ ಆಪರೇಷನ್ ರಾವಣ ಚಿತ್ರದ ಕಥೆಯ ವಿಚಾರಕ್ಕೆ ಬಂದರೆ, ಮದುವೆಯಾಗುವಾಗ ಪ್ರೀತಿಯ ಹೆಸರಲ್ಲಿ ಮೋಸ ಮಾಡುವ ಯುವತಿಯರನ್ನು ಒಬ್ಬ ಅಪಹರಣ ಮಾಡುತ್ತಾನೆ. ಅಪಹರಿಸಿ ಬರ್ಬರವಾಗಿ ಸಾಯಿಸುತ್ತಾನೆ. ಆ ಮುಸುಕುಧಾರಿ ಯಾರು?, ಮದುವೆಯ ದಿನ ಹುಡುಗಿಯರನ್ನು ಏಕೆ ಕೊಲ್ಲುತ್ತಿದ್ದಾನೆ? ಅವನಿಗೆ ಯಾರು ಸಹಾಯ ಮಾಡುತ್ತಾರೆ? ಇದೆಲ್ಲವನ್ನು ನೀವು ಕಂಡುಕೊಳ್ಳುತ್ತಾ ಹೋಗಬಹುದು.