Pushpa 2 Collection: 1500 ಕೋಟಿ ರೂ ಕ್ಲಬ್‌ಗೆ ಸೇರುವುದೇ ಪುಷ್ಪ 2? ಅಲ್ಲು ಅರ್ಜುನ್ ಸಿನಿಮಾದ ಬಾಕ್ಸ್ ಆಫೀಸ್ ವರದಿ
Pushpa 2 Box Office Day 8: ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ಕಳೆದ 8 ದಿನದ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆಯು 1,067 ಕೋಟಿ ರೂಗೆ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ 1500 ಕೋಟಿ ರೂಪಾಯಿ ಕ್ಲಬ್‌ಗೆ ಸೇರುವ ಸಾಧ್ಯತೆಯಿದೆ. ಭಾರತದಲ್ಲಿ ದಂಗಲ್ ಸಿನಿಮಾವು 2,070.3 ಕೋಟಿ ರೂಪಾಯಿ ಗಳಿಸಿತ್ತು.
Pushpa 2 Box Office Day 8: ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ವೇಳೆ ಮಹಿಳೆಯೊಬ್ಬರು ನಿಧನರಾದ ಘಟನೆಗೆ ಸಂಬಂಧಪಟ್ಟಂತೆ ಪುಷ್ಪ 2 ನಟ ಅಲ್ಲು ಅರ್ಜುನ್ ಬಂಧನವಾಗಿದೆ. ಇದೇ ಸಮಯದಲ್ಲಿ ಇನ್ನೊಂದೆಡೆ ಪುಷ್ಪ 2 ಸಿನಿಮಾದ ಬಾಕ್ಸ್ ಆಫೀಸ್ ನಾಗಾಲೋಟ ಮುಂದುವರೆದಿದೆ. ವಿಶೇಷವಾಗಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ 1500 ಕೋಟಿ ರೂ ಕ್ಲಬ್ ಸೇರುವತ್ತ ದಾಪುಗಾಲಿಡುತ್ತಿದೆ. ಈ ಮೂಲಕ ಭಾರತದ ಸಿನಿಮಾವೊಂದು 2024ರಲ್ಲಿ ದೊಡ್ಡಮಟ್ಟದ ವಾಣಿಜ್ಯ ಯಶಸ್ಸು ಪಡೆಯುವ ಸೂಚನೆ ದೊರಕಿದೆ.
ಪುಷ್ಪ 2: ದಿ ರೂಲ್ ಸಿನಿಮಾವು 224ರ ಅತ್ಯಧಿಕ ಗ್ರಾಸಿಂಗ್ ಫಿಲ್ಮ ಎಂಬ ಖ್ಯಾತಿ ಪಡೆಯುತ್ತಿದೆ. ಸುಕುಮಾರ್ ನಿರ್ದೇಶನದ ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆಯಾಗಿತ್ತು. ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ವಾಣಿಜ್ಯೀಕವಾಗಿ ಯಶಸ್ಸು ಪಡೆಯುತ್ತಿದೆ. ಸ್ಯಾಕ್ನಿಲ್ಕ್.ಕಾಂ ಪ್ರಕಟಿಸಿದ ಆರಂಭಿಕ ಅಂದಾಜು ಪ್ರಕಾರ ಪುಷ್ಪ 2 ಇನ್ನೊಂದು ಗಮನಾರ್ಹ ಮೈಲಿಗಲ್ಲು ಸಾಧಿಸಲಿದೆ. 2024ರಲ್ಲಿ ಭಾರತದ ಅತ್ಯಧಿಕ ಗ್ರೋಸಿಂಗ್ ಸಿನಿಮಾ ಎಂಬ ಹಿರಿಮೆಗೆ ಪಾತ್ರವಾಗುವ ಸೂಚನೆಯಿದೆ. ಏಕೆಂದರೆ, ಪುಷ್ಪ 2 ಸಿನಿಮಾದ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆ 1500 ಕೋಟಿ ರೂಪಾಯಿ ಸನಿಹದಲ್ಲಿದೆ.
ಪುಷ್ಪ 2 ಸಿನಿಮಾದ 8ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್
ಸ್ಯಾಕ್ನಿಲ್ಕ್.ಕಾಂ ವರದಿ ಪ್ರಕಾರ ಎಂಟನೇ ದಿನ ಪುಷ್ಪ 2 ಸಿನಿಮಾ 37.9 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 726.25 ಕೋಟಿ ರೂಪಾಯಿ ಗಳಿಸಿದೆ. ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆಯು 1,067 ಕೋಟಿ ರೂಪಾಯಿಗೆ ತಲುಪಿದೆ. ಈ ಸಿನಿಮಾದ ಗಳಿಕೆ ಇದೇ ರೀತಿ ಮುಂದುವರೆದರೆ ಕೆಲವೇ ದಿನಗಳಲ್ಲಿ 1500 ಕೋಟಿ ಕ್ಲಬ್‌ಗೆ ಸೇರಲಿದೆ ಎಂದು ಸಿನಿಮಾ ಮಾರುಕಟ್ಟೆ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಕಲ್ಕಿ 2898 ಸಿನಿಮಾವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 1,042.25 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ದಾಖಲೆಯನ್ನು ಪುಷ್ಪ 2 ಸಿನಿಮಾ ಉಡೀಸ್ ಮಾಡುವ ಸೂಚನೆ ಇದೆ.
ಪುಷ್ಪ 2 ಸಿನಿಮಾದ ಗಳಿಕೆಯು ಈ ಹಿಂದಿನ ಹಲವು ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಬಹುದೇ ಎಂದು ಕಾದುನಡಬೇಕಿದೆ. 'ಬಾಹುಬಲಿ 2: ದಿ ಕನ್‌ಕ್ಲೂಷನ್' (1,788.06 ಕೋಟಿ), 'ಆರ್‌ಆರ್‌ಆರ್' (ರೂ. 1,230 ಕೋಟಿ), 'ಕೆಜಿಎಫ್: ಅಧ್ಯಾಯ 2' (1,215 ಕೋಟಿ ರೂಪಾಯಿ) ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಪಡೆದಿತ್ತು. ಇದೀಗ ಪುಷ್ಪ 2 ಕೂಡ ಇದೇ ಹಾದಿಯಲ್ಲಿದೆ. ಜವಾನ್ ಸಿನಿಮಾ ಒಟ್ಟು 1,160 ಕೋಟಿ ರೂಪಾಯಿ ಗಳಿಸಿತ್ತು. ದಂಗಲ್ ಸಿನಿಮಾವು 2,070.3 ಕೋಟಿ ರೂಪಾಯಿ ಗಳಿಸಿತ್ತು. ದಂಗಲ್ ಭಾರತದ ಸಾರ್ವಕಾಲಿಕ ಅತ್ಯಧಿಕ ಗಳಿಕೆಯ ಸಿನಿಮಾವಾಗಿದೆ.
ಪುಷ್ಪ 2ಗಿಂತ ಮೊದಲು 2021ರಲ್ಲಿ ಪುಷ್ಪ ಸಿನಿಮಾದ ಮೊದಲ ಭಾಗ ಬಿಡುಗಡೆ ಆಗಿತ್ತು. ಆ ಸಿನಿಮಾ ಸಾರ್ವಕಾಲಿಕ 350 ಕೋಟಿ ಗಳಿಸಿತ್ತು. ಆದರೆ, ಈ ಬಾರಿ ಪುಷ್ಪ 2 ಸಿನಿಮಾವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ದಾಖಲೆಯನ್ನು ಮುರಿದು ಮುನ್ನುಗ್ಗಿದೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1 ಸಾವಿರ ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಸುಕುಮಾರ್ ನಿರ್ದೇಶನದ ಪುಷ್ಪ 2 ದಿ ರೂಲ್ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ರಾವ್ ರಮೇಶ್, ಜಗಪತಿ ಬಾಬು, ಸುನಿಲ್ ಮತ್ತು ಅನಸೂಯಾ ಸೇರಿದಂತೆ ಕಲಾವಿದರ ದೊಡ್ಡ ಬಳಗವೇ ಈ ಚಿತ್ರದಲ್ಲಿದೆ.