Pushpa 2 Leaked: ಅಲ್ಲು ಅರ್ಜುನ್, ಶ್ರೀಲೀಲಾ ಮಸ್ತ್ ಸ್ಟೆಪ್, ಪುಷ್ಪ 2 ಸೆಟ್‌ನಿಂದ ಐಟಂ ಸಾಂಗ್ ಫೋಟೋ ಲೀಕ್
Pushpa 2 Leaked Photo: ಪುಷ್ಪ-2 ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ಸೆಟ್‌ನಲ್ಲಿರುವ ಫೋಟೋವೊಂದು ಲೀಕ್ ಆಗಿದೆ. ಈ ಸಿನಿಮಾದಲ್ಲಿ ಶ್ರೀಲೀಲಾ ಐಟಂ ಸಾಂಗ್ ಡ್ಯಾನ್ಸ್‌ನ ದೃಶ್ಯದ ಫೋಟೋ ಇದಾಗಿದೆ. ಅಲ್ಲು ಅರ್ಜುನ್ ಜೊತೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿರುವ ಫೋಟೋ ಇದಾಗಿದೆ.
Pushpa 2 Leaked Photo: ಸುಕುಮಾರ್ ನಿರ್ದೇಶನದ ಪುಷ್ಪ-2ಸಿನಿಮಾವು ಡಿಸೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಶೂಟಿಂಗ್ ಸೆಟ್‌ನಿಂದ ಫೋಟೋವೊಂದು ಸೋರಿಕೆಯಾಗಿದೆ. ಪುಷ್ಪ: ದಿ ರೈಸ್ ಚಿತ್ರದಲ್ಲಿ ಸಮಂತಾ ಐಟಂ ಸಾಂಗ್ ಹಾಡಿದ್ದರೆ, ಪುಷ್ಪ: ದಿ ರೂಲ್ ನಲ್ಲಿ ಶ್ರೀಲೀಲಾ ಸಖತ್ ಸ್ಟೆಪ್ ಹಾಕುತ್ತಿರುವ ಸೂಚನೆಯನ್ನು ಈ ಫೋಟೋ ನೀಡಿದೆ. ಇದೀಗ ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಸೆಟ್‌ನಲ್ಲಿ ಡ್ಯಾನ್ಸ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸ್ಟಿಲ್ ಫೋಟೋದಲ್ಲಿ ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಅವರು ಡ್ಯಾನ್ಸ್ ಮಾಡುತ್ತಿರುವುದು ಕಾಣಿಸಿದೆ. ಉಳಿದ ಡ್ಯಾನ್ಸರ್‌ಗಳು ಅವರ ಹಿಂದೆ ಮಾತುಕತೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಇದು ಡ್ಯಾನ್ಸ್ ಪ್ರಾಕ್ಟೀಸ್ ಫೋಟೋ ಎನ್ನಲಾಗಿದೆ. ಸೆಟ್‌ನ ನಡುವೆ ಯಾರೋ ಈ ಫೋಟೋ ಕ್ಲಿಕ್ಕಿಸಿದ್ದಾರೆ. ವಾಸ್ತವವಾಗಿ ಸುಕುಮಾರ್ ಸೆಟ್‌ಗಳಲ್ಲಿ ಇಂತಹ ವಿಷಯಗಳ ಬಗ್ಗೆ ತುಂಬಾ ಕಟ್ಟುನಿಟ್ಟಾಗಿ ಇರುತ್ತಾರೆ. ಈ ಫೋಟೋದ ಗುಣಮಟ್ಟ ತುಂಬಾ ಚೆನ್ನಾಗಿದೆ. ಎಲ್ಲಾದರೂ ಚಿತ್ರತಂಡವೇ ಈ ಫೋಟೋವನ್ನು ತೆಗೆದು ಲೀಕ್ ಮಾಡಿದೆಯೇ? ತಿಳಿದುಬಂದಿಲ್ಲ.
ಪುಷ್ಪ-2 ಐಟಂ ಸಾಂಗ್ ಶೂಟಿಂಗ್ ನಡೆಯುತ್ತಿದೆ ಎಂದು ಮೈತ್ರಿ ಮೂವಿ ಮೇಕರ್ಸ್ ಖಚಿತಪಡಿಸಿದೆ. ಈಗಾಗಲೇ ಎಕ್ಸ್‌ನಲ್ಲಿ '#Kissik song of the year #Pushpa2TheRule' ಎಂದು ಪೋಸ್ಟ್ ಮಾಡಲಾಗಿದೆ. ಪುಷ್ಪ-2 ಚಿತ್ರದಲ್ಲಿ ಸಮಂತಾ ಅವರ ಐಟಂ ಸಾಂಗ್ ಸಿನಿಮಾ ಪ್ರೇಕ್ಷಕರಿಗೆ ಸಖತ್ ಕಿಕ್ ನೀಡಿತ್ತು. ಶ್ರೀಲೀಲಾ ಉತ್ತಮ ಡ್ಯಾನ್ಸರ್ ಕೂಡ ಹೌದು. ಇತ್ತೀಚೆಗಷ್ಟೇ ಗುಂಟೂರು ಕಾರಂ ಸಿನಿಮಾದಲ್ಲಿ ಇವರ ಡ್ಯಾನ್ಸ್ ಪ್ರೇಕ್ಷಕರನ್ನು ಮೆಚ್ಚಿಸಿತ್ತು. ಪುಷ್ಪ-2ನಲ್ಲಿ ಅಲ್ಲು ಅರ್ಜುನ್ ಜತೆ ಹೇಗೆ ಡ್ಯಾನ್ಸ್ ಮಾಡಿದ್ದಾರೆ ಎಂದು ತಿಳಿಯಲು ಅಭಿಮಾನಿಗಳು ಡಿಸೆಂಬರ್ 5ರವರೆಗೆ ಕಾಯಬೇಕಿದೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾವು 2021ರಲ್ಲಿ ಬಿಡುಗಡೆಯಾಗಿತ್ತು. ಅಕ್ರಮ ಕೆಂಪು ಚಂದನದ ಸಾಗಾಟದ ಹಿನ್ನೆಲೆಯೂ ಈ ಚಿತ್ರಕ್ಕಿದೆ. ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟನೆ ಮತ್ತು ಮ್ಯಾನರಿಸಂ ಎಲ್ಲರ ಗಮನ ಸೆಳೆದಿತ್ತು. ಅಲ್ಲು ಅರ್ಜುನ್ ಅಭಿಮಾನಿಗಳು ಈ ಸೀಕ್ವೆಲ್ ಬಿಡುಗಡೆಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು. ಪುಷ್ಪಾ 2 ಸಿನಿಮಾ ಡಿಸೆಂಬರ್ 05ರಂದು ಬಿಡುಗಡೆಯಾಗಲಿದೆ. ಪುಷ್ಪ ಸಿನಿಮಾ ಬಿಡುಗಡೆ ಆಗುವ ಮುನ್ನವೇ 1,065 ಕೋಟಿ ರೂ. ಬಿಸ್ನೆಸ್ ಮಾಡಿದೆ ಎಂಬ ಮಾತು ಕೇಳಿ ಬರುತ್ತಿದೆ. ಥಿಯಟ್ರಿಕಲ್, ಒಟಿಟಿ ಡಿಜಿಟಲ್ ಸ್ಟ್ರೀಮಿಂಗ್, ಆಡಿಯೋ, ಸಾಟಲೈಟ್ ಎಲ್ಲಾ ಸೇರಿ ಸಿನಿಮಾ ಭಾರೀ ಲಾಭ ಮಾಡಿದೆ ಎನ್ನಲಾಗುತ್ತಿದೆ.