Game Changer Trailer: ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಸಿನಿಮಾ ಟ್ರೇಲರ್ ರಿಲೀಸ್-ಕಿಯಾರಾ ಅಡ್ವಾಣಿ ಜೊತೆ ಮಿಂಚಿದ ಗ್ಲೋಬಲ್ ಸ್ಟಾರ್
ಗೇಮ್ ಚೇಂಜರ್ ಟ್ರೈಲರ್: ಗೇಮ್ ಚೇಂಜರ್ ಟ್ರೈಲರ್ ಬಿಡುಗಡೆಯಾಗಿದೆ. ರಾಮ್ ಚರಣ್ ಅಭಿನಯದ ಈ ಚಿತ್ರ ಜನವರಿ 10ರಂದು ಬಿಡುಗಡೆಯಾಗಲಿದೆ. ಇಂದು ಡಿಸೆಂಬರ್ 2ರಂದು ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಗೇಮ್ ಚೇಂಜರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರ್ದೇಶಕ ಎಸ್.ಎಸ್.ರಾಜಮೌಳಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2 ನಿಮಿಷ 4 ಸೆಕೆಂಡುಗಳ ಈ ಟ್ರೈಲರ್ ನಲ್ಲಿ ರಾಮ್ ಚರಣ್ ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೇಮ್ ಚೇಂಜರ್ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಾಮ್ ಚರಣ್, ಶಂಕರ್, ಎಸ್.ಎಸ್.ರಾಜಮೌಳಿ, ಶ್ರೀಕಾಂತ್, ಅಂಜಲಿ, ಎಸ್.ಜೆ.ಸೂರ್ಯ, ಸಮುದ್ರಕಣಿ, ಸಂಗೀತ ನಿರ್ದೇಶಕ ತಮನ್ ಮತ್ತು ನಿರ್ಮಾಪಕ ದಿಲ್ ರಾಜು ಭಾಗವಹಿಸಿದ್ದರು.
ಗೇಮ್ ಚೇಂಜರ್ ಸಿನಿಮಾ ಬಗ್ಗೆ
ಈ ಚಿತ್ರದ ಕಥೆ ರಾಜಕಾರಣಿ ಮತ್ತು ಅಧಿಕಾರಿಯ ಕುರಿತಾಗಿದೆ ಎಂದು ನಿರ್ದೇಶಕ ಶಂಕರ್ ಹೇಳಿದ್ದಾರೆ. ರಾಮ್ ಚರಣ್ ಚಿತ್ರದಲ್ಲಿ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ನಿರ್ದೇಶಕ ಶಂಕರ್ ಹೇಳಿದ್ದಾರೆ.
'ಗೇಮ್ ಚೇಂಜರ್' ಚಿತ್ರವನ್ನು ತಮಿಳು ನಿರ್ದೇಶಕ ಶಂಕರ್ ಷಣ್ಮುಗಂ ನಿರ್ದೇಶಿಸಿದ್ದಾರೆ. ಚಿತ್ರೀಕರಣದಲ್ಲಿ ಸಾಕಷ್ಟು ವಿಳಂಬವಾದ ಕಾರಣ ಬಿಡುಗಡೆಯನ್ನು ಮುಂದೂಡಲಾಗಿತ್ತು. ಒಟ್ಟಾರೆಯಾಗಿ, ಇದು ಜನವರಿ 10ರಂದು ಬಿಡುಗಡೆಯಾಗಲಿದೆ. ಚರಣ್ ಈ ಬಿಗ್ ಬಜೆಟ್ ಚಿತ್ರದಲ್ಲಿ ಐಎಎಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಕಿಯಾರಾ ಅಡ್ವಾಣಿ ಅವರ ಜತೆ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಮತ್ತು ಟೀಸರ್ ಗಳು ಬಿಡುಗಡೆಯಾಗಿವೆ.
ಇತ್ತೀಚೆಗೆ ವಿಜಯವಾಡದಲ್ಲಿ ಅತಿದೊಡ್ಡ ರಾಮ್ ಚರಣ್ ಕಟೌಟ್ ಅನ್ನು ಸಹ ಬಿಡುಗಡೆ ಮಾಡಲಾಗಿತ್ತು. ಇದು ಅತಿದೊಡ್ಡ ಕಟೌಟ್ ಆಗಿದೆ. ಹೈದರಾಬಾದ್ ನಲ್ಲಿ ಟ್ರೈಲರ್ ಬಿಡುಗಡೆಯಾಗಿದೆ. ಬಿಡುಗಡೆ ಪೂರ್ವ ಕಾರ್ಯಕ್ರಮ ರಾಜಮಂಡ್ರಿಯಲ್ಲಿ ನಡೆದಿತ್ತು. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಈ ಕಾರ್ಯಕ್ರಮಕ್ಕೆ ಬರುತ್ತಿರುವುದರಿಂದ ಹೆಚ್ಚಿನ ಆಸಕ್ತಿ ಮೂಡಿತ್ತು.
ಚಿತ್ರತಂಡ
'ಆರ್‌ಆರ್‌ಆರ್' ಬಳಿಕ ರಾಮ್‌ಚರಣ್ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಮೆಗಾ ಫ್ಯಾನ್ಸ್ 'ಗೇಮ್ ಚೇಂಜರ್' ದರ್ಶನಕ್ಕೆ ಕಾಯುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗೇಮ್ ಚೇಂಜರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ದಿಲ್ ರಾಜು ಮತ್ತು ಸಿರಿಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ನಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಿಯಾರಾ ಅಡ್ವಾಣಿ, ಅಂಜಲಿ, ಎಸ್ ಜೆ ಸೂರ್ಯ, ಶ್ರೀಕಾಂತ್, ಸುನಿಲ್, ಸಮುದ್ರಕನಿ ಮತ್ತು ಜಯರಾಮ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.
ಟ್ರೇಲರ್‌ನಲ್ಲಿ ರಾಮ್ ಚರಣ್ ಪೊಲೀಸ್, ರೈತ, ರಾಜಕಾರಣಿ ಹೀಗೆ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಾವ ಪಾತ್ರದಲ್ಲಿ ಇವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಸುಳಿವು ಅಷ್ಟಾಗಿ ಸಿಗುವುದಿಲ್ಲ. ಆದರೆ ಸಿನಿಮಾ ಹೀಗೇ ಇರಬಹುದು ಎಂಬ ಒಂದು ಅಂದಾಜು ಟ್ರೇಲರ್ ನೋಡಿದ ಬಳಿಕ ತಿಳಿಯುತ್ತದೆ.