Ram Gopal Varma: ಹೆಣ್ಣಿನ ಎದೆ, ನಿತಂಬ ಇಷ್ಟವೆಂದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ; ನಟಿ ಪ್ರತ್ಯುಷಾ ಪ್ರಶ್ನೆಗೆ ಅಪ್ಪುಗೆಯ ಉತ್ತರ
ಕನ್ನಡ ಸುದ್ದಿ  /  ಮನರಂಜನೆ  /  Ram Gopal Varma: ಹೆಣ್ಣಿನ ಎದೆ, ನಿತಂಬ ಇಷ್ಟವೆಂದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ; ನಟಿ ಪ್ರತ್ಯುಷಾ ಪ್ರಶ್ನೆಗೆ ಅಪ್ಪುಗೆಯ ಉತ್ತರ

Ram Gopal Varma: ಹೆಣ್ಣಿನ ಎದೆ, ನಿತಂಬ ಇಷ್ಟವೆಂದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ; ನಟಿ ಪ್ರತ್ಯುಷಾ ಪ್ರಶ್ನೆಗೆ ಅಪ್ಪುಗೆಯ ಉತ್ತರ

Ram Gopal Varma Pratyusha viral video: ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ನಟಿ ಪ್ರತ್ಯುಷಾ ಪ್ರಶ್ನೆಗೆ "ನನಗೆ ಹೆಣ್ಣಿನ ಎದೆ ಭಾಗ ಮತ್ತು ಹಿಂಭಾಗ ತುಂಬಾ ಇಷ್ಟವೆಂದು ಹೇಳಿದ್ದಾರೆ. ಇದು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

Ram Gopal Varma: ಹೆಣ್ಣಿನ ಎದೆ ನಿತಂಬ ಇಷ್ಟವೆಂದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
Ram Gopal Varma: ಹೆಣ್ಣಿನ ಎದೆ ನಿತಂಬ ಇಷ್ಟವೆಂದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

Ram Gopal Varma Pratyusha viral video: ತೆಲುಗು ಸಿನಿಮಾ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ವಿವಾದಗಳಿಗೆ ಸಿಲುಕಿಕೊಳ್ಳುವುದು ಮೊದಲಲ್ಲ. ತನ್ನ ಹೇಳಿಕೆಗಳ ಮೂಲಕ ಆಗಾಗ ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಇದೀಗ ನಟಿ ಪ್ರತ್ಯುಷಾ ಪ್ರಶ್ನೆಗೆ "ನನಗೆ ಹೆಣ್ಣಿನ ಎದೆ ಭಾಗ ಮತ್ತು ಹಿಂಭಾಗ ತುಂಬಾ ಇಷ್ಟವೆಂದು ಹೇಳಿದ್ದಾರೆ. ಇದು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು ಪ್ರತ್ಯುಷಾ ಆನ್‌ ಸ್ಕ್ರೀನ್‌ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ಪ್ರತ್ಯುಷಾ ಹಂಚಿಕೊಂಡಿದ್ದಾರೆ.

ಜನಪ್ರಿಯ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರನ್ನು ನಟಿ ಪ್ರತ್ಯುಷಾ ಭೇಟಿಯಾಗುವ ಸಂದರ್ಭದ ವಿಡಿಯೋ ಇದಾಗಿದೆ. ಈ ಸಂದರ್ಭದಲ್ಲಿ ಆರ್‌ಜಿವಿ ಬಳಿ ನಟಿ ಪ್ರಶ್ನೆ ಕೇಳುತ್ತಾರೆ. ಈಕೆಯ ಪ್ರಶ್ನೆಯೂ ಅದೇ ರೀತಿ ಇತ್ತು. ಅದಕ್ಕೆ ಆರ್‌ಜಿವಿಯ ಉತ್ತರವೂ ಅದೇ ರೀತಿ ಇತ್ತು. ನಟಿ ಪ್ರತ್ಯುಷಾ ಅವರು "ನೀವು ಹುಡುಗಿಯರನ್ನು ನೋಡಿದ್ದೀರಿ. ನಿಮಗೆ ಹುಡುಗಿಯರ ಯಾವ ಪಾರ್ಟ್‌ ಇಷ್ಟ" ಎಂದು ಕೇಳಿದ್ದಾರೆ.

ಇದಕ್ಕೆ ನಿರ್ದೇಶಕ ಆರ್‌ಜಿವಿ ಅವರು "ನಿಜ ಹೇಳಬೇಕಾ? ಸುಳ್ಳು ಹೇಳಬೇಕಾ?" ಎಂದು ಕೇಳಿದ್ದಾರೆ. "ನಿಜವನ್ನೇ ಹೇಳಿ" ಎಂದು ಪ್ರತ್ಯುಷಾ ಪ್ರೋತ್ಸಾಹ ನೀಡಿದ್ದಾಳೆ. ಈ ಸಂದರ್ಭದಲ್ಲಿ ವರ್ಮಾ ಅವರು, "ನಿಜ ಹೇಳಬೇಕೆಂದರೆ ನನಗೆ ಹೆಣ್ಣಿನ ಎದೆ ಭಾಗ ಮತ್ತು ಹಿಂಭಾಗ (ಬೂಬ್ಸ್‌ ಆಂಡ್‌ ಆಸ್‌) ಇಷ್ಟವೆಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಇನ್ನೊಬ್ಬ ವ್ಯಕ್ತಿಯೂ "ನನಗೂ ಕೂಡ" ಎನ್ನುವುದೂ ಕೇಳಿಸುತ್ತದೆ. ಇದಾದ ಬಳಿಕ ನಟಿ ಪ್ರತ್ಯುಷಾ ಅವರನ್ನು ವರ್ಮಾ ಸನಿಹಕ್ಕೆ ಸೆಳೆದುಕೊಂಡು ಅಪ್ಪುಗ ನೀಡಿ ತಲೆಗೆ ಒಂದು ಮುತ್ತಿಕ್ಕಿದ್ದಾರೆ.

ಈ ವಿಡಿಯೋಗೆ ಇನ್‌ಸ್ಟಾಗ್ರಾಂನಲ್ಲಿ ಜನರು ನಾನಾ ಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅವಕಾಶ ಬಯಸುವ ಯುವ ನಟಿಯರನ್ನು ದಾರಿ ತಪ್ಪಿಸುತ್ತಿದ್ದಾರೆ. ನಟಿಯರನ್ನು ಈ ರೀತಿ ಕೆಟ್ಟದಾಗಿ ಪ್ರೋತ್ಸಾಹಿಸಲಾಗುತ್ತದೆ. ಸಣ್ಣ ವಯಸ್ಸಿನ ಯುವತಿಯರಿಗೆ ಬುದ್ಧಿ ಹೇಳುವ ವಯಸ್ಸಿನಲ್ಲಿ ಇವರು ಚಪಲ ಚೆನ್ನಿಗರಾಯರಂತೆ ವರ್ತಿಸುತ್ತಾರೆ ಎಂಬರ್ಥದ ನಾನಾ ಬಗೆಯ ಕಾಮೆಂಟ್‌ಗಳನ್ನು ನೆಟ್ಟಿಗರು ಮಾಡಿದ್ದಾರೆ.

ನಟಿ ಪ್ರತ್ಯುಷಾಗೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇಂತಹ ಪ್ರಶ್ನೆ ಕೇಳಿದ ನಿನ್ನ ಕುರಿತು ನಿನ್ನ ಅಪ್ಪ ಅಮ್ಮ ಹೆಮ್ಮೆ ಪಡಬಹುದು" "ನೀನು ಏನು ಕೇಳಿದೆಯೋ ಅದಕ್ಕೆ ತಕ್ಕಂತೆ ಉತ್ತರ ದೊರಕಿದೆ" "ಬಿಗ್‌ಬಾಸ್‌ ತೆಲುಗು ಮುಂದಿನ ಆವೃತ್ತಿಗೆ ಸ್ಪರ್ಧಿ ಸಿಕ್ಕಿದ್ದಾರೆ" ಎಂದು ನಟಿ ಪ್ರತ್ಯುಷಾಗೆ ಸಾಕಷ್ಟು ಜನರು ಕಾಮೆಂಟ್‌ ಮೂಲಕ ಚುಚ್ಚಿದ್ದಾರೆ.

ಈ ಹಿಂದೆಯೂ ಯುವ ನಟಿಯರ ವಿಷಯದಲ್ಲಿ ರಾಮ್‌ ಗೋಪಾಲ್‌ ವರ್ಮಾ ವಿವಾದಕ್ಕೆ ಕಾರಣವಾಗಿದ್ದರು. ಈ ಹಿಂದೆ ಇಂಟರ್‌ವ್ಯೂ ಸಮಯದಲ್ಲಿ ನಟಿ ಅಶು ರೆಡ್ಡಿಯ ಕಾಲುಗಳನ್ನು ನೆಕ್ಕಿದ್ದರು. ಒಂದು ಕಾಲದಲ್ಲಿ ಇವರು ಸತ್ಯ, ಸರ್ಕಾರ್‌, ರಕ್ತ ಚರಿತ್ರದಂತಹ ಜನಪ್ರಿಯ ಸಿನಿಮಾಗಳನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ್ದಾರೆ. ವರ್ಷಗಳು ಉಳಿದಂತೆ ಎ ರೇಟಿಂಗ್‌ ಚಿತ್ರಗಳನ್ನು ನೀಡಲು ಆರಂಭಿಸಿದ್ದರು. ಸದ್ಯ ಇವರ ಮೇಲೆ ಚೆಕ್‌ ಬೌನ್ಸ್‌ ಕೇಸ್‌ ಇದ್ದು, ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner