ಪ್ರಳಯ ಕಾಲ ರುದ್ರ, ತ್ರಿಕಾಲ ಮಾರ್ಗದರ್ಶಕ; ಕಣ್ಣಪ್ಪ ಚಿತ್ರದಲ್ಲಿನ ಪ್ರಭಾಸ್‌ ಪಾತ್ರದ ಫಸ್ಟ್‌ ಲುಕ್‌ ಬಿಡುಗಡೆ
ಕನ್ನಡ ಸುದ್ದಿ  /  ಮನರಂಜನೆ  /  ಪ್ರಳಯ ಕಾಲ ರುದ್ರ, ತ್ರಿಕಾಲ ಮಾರ್ಗದರ್ಶಕ; ಕಣ್ಣಪ್ಪ ಚಿತ್ರದಲ್ಲಿನ ಪ್ರಭಾಸ್‌ ಪಾತ್ರದ ಫಸ್ಟ್‌ ಲುಕ್‌ ಬಿಡುಗಡೆ

ಪ್ರಳಯ ಕಾಲ ರುದ್ರ, ತ್ರಿಕಾಲ ಮಾರ್ಗದರ್ಶಕ; ಕಣ್ಣಪ್ಪ ಚಿತ್ರದಲ್ಲಿನ ಪ್ರಭಾಸ್‌ ಪಾತ್ರದ ಫಸ್ಟ್‌ ಲುಕ್‌ ಬಿಡುಗಡೆ

ಟಾಲಿವುಡ್‌ನ ಬಹುನಿರೀಕ್ಷಿತ ಪ್ಯಾನ್‌ ಇಂಡಿಯನ್‌ ಸಿನಿಮಾ ಕಣ್ಣಪ್ಪ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ ಈ ಸಿನಿಮಾ, ಇದೀಗ ಬಿಡುಗಡೆಯ ಸನಿಹದಲ್ಲಿದೆ. ಅದಕ್ಕೂ ಮೊದಲು ಈ ಚಿತ್ರದಲ್ಲಿನ ರುದ್ರ ಪಾತ್ರಧಾರಿ ಪ್ರಭಾಸ್‌ ಅವರ ಫಸ್ಟ್‌ ಲುಕ್‌ ಅನಾವರಣವಾಗಿದೆ.

ಕಣ್ಣಪ್ಪ ಚಿತ್ರದಲ್ಲಿ ರುದ್ರನಾಗಿ ಪ್ರಭಾಸ್‌, ಫಸ್ಟ್‌ ಲುಕ್‌ ಅನಾವರಣ; ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿದೆ ಮಹಾಕಾವ್ಯ
ಕಣ್ಣಪ್ಪ ಚಿತ್ರದಲ್ಲಿ ರುದ್ರನಾಗಿ ಪ್ರಭಾಸ್‌, ಫಸ್ಟ್‌ ಲುಕ್‌ ಅನಾವರಣ; ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿದೆ ಮಹಾಕಾವ್ಯ

Kannappa Movie: ಟಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಕಣ್ಣಪ್ಪ ಸಿನಿಮಾ ಒಂದಿಲ್ಲ ಒಂದು ಕಾರಣಕ್ಕೆ ಕಳೆದೊಂದು ವರ್ಷದಿಂದ ಸುದ್ದಿಯಲ್ಲಿದೆ. ಮೇಕಿಂಗ್‌, ಬಜೆಟ್‌, ತಾರಾಗಣದ ವಿಚಾರವಾಗಿ ಸಿನಿಮಾ ಸದ್ದು ಮಾಡುತ್ತಿದೆ. ಇದೀಗ ಇದೇ ಸಿನಿಮಾದಿಂದ ಬಿಗ್‌ ಸರ್ಪ್ರೈಸ್‌ವೊಂದು ಹೊರಬಿದ್ದಿದೆ. ಈ ವರೆಗೂ ಈ ಚಿತ್ರದಲ್ಲಿ ಪ್ರಭಾಸ್‌ ನಟಿಸುತ್ತಿದ್ದಾರೆ ಎಂಬುದಷ್ಟೇ ಗೊತ್ತಿತ್ತು. ಆದರೆ, ಎಲ್ಲಿಯೂ ಅವರ ಫಸ್ಟ್‌ ಲುಕ್‌ ಹೊರಬಿದ್ದಿರಲಿಲ್ಲ. ಇದೀಗ ಇಂದು (ಫೆ. 3) ಇದೇ ಚಿತ್ರದ ರುದ್ರ ಪಾತ್ರಧಾರಿ ಪ್ರಭಾಸ್‌ ಅವರ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ.

ಕಣ್ಣಪ್ಪ ಸಿನಿಮಾ ಸದ್ಯ ಸೌತ್‌ ಮಾತ್ರವಲ್ಲದೆ, ಬಾಲಿವುಡ್‌ನಲ್ಲಿಯೂ ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ; ಈ ಸಿನಿಮಾ ಮೂಲಕ ಅಕ್ಷಯ್‌ ಕುಮಾರ್‌ ದಕ್ಷಿಣದತ್ತ ಮುಖ ಮಾಡಿದ್ದಾರೆ. ಶಿವನಾಗಿ ಅವರ ಪಾತ್ರ ಈ ಸಿನಿಮಾದಲ್ಲಿ ಇರಲಿದೆ. ಇವರ ಜತೆಗೆ ಬೇರೆ ಬೇರೆ ಇಂಡಸ್ಟ್ರಿಯ ಘಟಾನುಘಟಿ ಕಲಾವಿದರೂ ಈ ಮಹಾಕಥೆಯ ಭಾಗವಾಗಿದ್ದಾರೆ. ಮೇಕಿಂಗ್‌ ಮೂಲಕವೇ ನೋಡುಗರ ಕಣ್ಣರಳಿಸುವಂತೆ ಮಾಡಿರುವ ಈ ಸಿನಿಮಾ ಇನ್ನೇನು ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿದೆ.

ಅದರಂತೆ, ಇದೀಗ ಬಿಡುಗಡೆ ಸನಿಹ ಬರುತ್ತಿದ್ದಂತೆ, ನಿರ್ಮಾಪಕರು ಪ್ರಚಾರದ ಕಾರ್ಯಕ್ಕೆ ಧುಮುಕಿದ್ದಾರೆ. ಮೊದಲಿಗೆ ಕಣ್ಣಪ್ಪ ಚಿತ್ರದಲ್ಲಿನ ರುದ್ರನ ಪಾತ್ರ ಮಾಡಿರುವ ಪ್ರಭಾಸ್‌ ಅವರ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದಾರೆ.

ಪ್ರಳಯ ಕಾಲ ರುದ್ರನು, ಶಿವಾಜ್ಞೆ ಪರಿಪಾಲಕನು

ಹರಡಿದ ತಲೆಗೂದಲು, ಹಣೆಗೆ ವಿಭೂತಿ, ಕೈಯಲ್ಲಿ ಅರ್ಧ ಚಂದ್ರಾಕೃತಿ ಕೋಲು, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹೆಗಲಿಗೆ ಕೇಸರಿ ವಸ್ತ್ರ ಧರಿಸಿ ಮಂದಹಾಸದ ನಗುವಿನಲ್ಲಿಯೇ ರುದ್ರನ ಪಾತ್ರ ಮೂಡಿ ಬಂದಿದೆ. ಈ ಲುಕ್‌ಗೆ ಪ್ರಳಯ ಕಾಲ ರುದ್ರನು, ತ್ರಿಕಾಲ ಮಾರ್ಗದರ್ಶಕನು, ಶಿವಾಜ್ಞೆ ಪರಿಪಾಲಕನು ಎಂದು ರುದ್ರನ ಪಾತ್ರವನ್ನು ಬಣ್ಣಿಸಲಾಗಿದೆ.

ಸ್ಟಾರ್‌ ತಾರಾಗಣ

ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ವಿಷ್ಣು ಮಂಚು ಅವರ ತಂದೆ ಎಂ. ಮೋಹನ್ ಬಾಬು, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗಷ್ಟೇ ಕಾನ್‌ ಸಿನಿಮೋತ್ಸದಲ್ಲಿ ವಿಷ್ಣು ಮಂಚು, ಮೋಹನ್ ಬಾಬು ಚಿತ್ರದ ಟೀಸರ್ ಪ್ರದರ್ಶನ ಕಂಡಿತ್ತು. ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿತ್ತು. ಅದ್ಭುತ ದೃಶ್ಯಗಳು, ಮೈನವಿರೇಳಿಸುವ ಸೆಟ್‌ ಮಹಾಕಾವ್ಯದ ಬಗ್ಗೆ ಕೌತುಕ ಹೆಚ್ಚಿಸಿತ್ತು.

ಚಿತ್ರವು 2025ರ ಏಪ್ರಿಲ್ 25ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಕಣ್ಣಪ್ಪ ಪಾತ್ರದಲ್ಲಿ ವಿಷ್ಣು ಮಂಚು ನಟಿಸಿದರೆ, ಮೋಹನ್ ಲಾಲ್, ಅಕ್ಷಯ್ ಕುಮಾರ್, ಪ್ರಭಾಸ್, ಕಾಜಲ್ ಅಗರ್ವಾಲ್, ಸೇರಿ ಇನ್ನೂ ಹತ್ತಾರು ಕಲಾವಿದರು ಪಾತ್ರವರ್ಗದಲ್ಲಿದ್ದಾರೆ.

Whats_app_banner