Kannada News  /  Entertainment  /  Tollywood Star Akhil Akkineni S Agent Movie Release Date Locked
ಅಖಿಲ್ ಅಕ್ಕಿನೇನಿ ‘ಏಜೆಂಟ್’ ಬಿಡುಗಡೆಗೆ ಡೇಟ್ ಫಿಕ್ಸ್; ಏಪ್ರಿಲ್‌ನಲ್ಲಿ ಕನ್ನಡದಲ್ಲೂ ರಿಲೀಸ್..
ಅಖಿಲ್ ಅಕ್ಕಿನೇನಿ ‘ಏಜೆಂಟ್’ ಬಿಡುಗಡೆಗೆ ಡೇಟ್ ಫಿಕ್ಸ್; ಏಪ್ರಿಲ್‌ನಲ್ಲಿ ಕನ್ನಡದಲ್ಲೂ ರಿಲೀಸ್..

Akhil Akkineni Agent: ಅಖಿಲ್ ಅಕ್ಕಿನೇನಿ ‘ಏಜೆಂಟ್’ ಬಿಡುಗಡೆಗೆ ಡೇಟ್ ಫಿಕ್ಸ್; ಏಪ್ರಿಲ್‌ನಲ್ಲಿ ಕನ್ನಡದಲ್ಲೂ ರಿಲೀಸ್..‌

05 February 2023, 9:43 ISTHT Kannada Desk
05 February 2023, 9:43 IST

ಟಾಲಿವುಡ್‌ ನಟ ಅಖಿಲ್‌ ಅಕ್ಕಿನೇನಿ ನಟನೆಯ ‘ಏಜೆಂಟ್’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. 

Akhil Akkineni Agent: ತೆಲುಗಿನ ಸ್ಟಾರ್‌ ನಟ ನಾಗಾರ್ಜುನ್‌ ಅವರ ಕಿರಿ ಮಗ ಅಖಿಲ್‌ಗೆ ಟಾಲಿವುಡ್‌ ಇಂಡಸ್ಟ್ರಿ ಇನ್ನೂ ಕೈ ಹಿಡಿದಿಲ್ಲ. ಅವರ ಬತ್ತಳಿಕೆಯಿಂದ ಹಿಟ್‌ ಪ್ರಾಡಕ್ಟ್‌ ಹೊರಬಂದಿಲ್ಲ. ಇದೀಗ ಶತಾಯಗತಾಯ ಗೆಲ್ಲಲೇಬೇಕು ಎಂದು ನಿರ್ಧರಿಸಿದ್ದಾರೆ. ಹಾಗಾಗಿಯೇ ಲೇಟ್‌ ಆದರೂ ಲೇಟೆಸ್ಟ್‌ ಆಗಿಯೇ ಏಜೆಂಟ್‌ ಮೂಲಕ ಬರುತ್ತಿದ್ದಾರೆ. ಈ ಚಿತ್ರಕ್ಕಾಗಿ ಮೈ ಹುರಿಗೊಳಿಸಿರುವ ಅಖಿಲ್‌, ಸಿಕ್ಸ್‌ ಪ್ಯಾಕ್‌ನಲ್ಲಿ ರಗಡ್‌ ಅವತಾರ ಎತ್ತಿದ್ದಾರೆ. ಈಗ ಹೊಸ ಅಪ್‌ಡೇಟ್‌ ಏನೆಂದರೆ ಈ ಚಿತ್ರದ ಬಿಡುಗಡೆ ದಿನಾಂ ಘೋಷಣೆ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಟಾಲಿವುಡ್‌ ಹೀರೋ ಅಖಿಲ್ ಅಕ್ಕಿನೇನಿ, ಸ್ಟೈಲಿಶ್ ಮೇಕರ್ ಸುರೇಂದರ್ ರೆಡ್ಡಿ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ಹೈ ವೋಲ್ಟೇಜ್ ಸಿನಿಮಾ ‘ಏಜೆಂಟ್’. ಟಾಲಿವುಡ್ ಅಂಗಳದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದಾದ ‘ಏಜೆಂಟ್’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 28ಕ್ಕೆ ಸಿನಿಮಾ ತೆರೆ ಮೇಲೆ ಬರುತ್ತಿದೆ. ಹೊಸ ವರ್ಷದ ಆರಂಭದಲ್ಲಿ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಿ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಎಂದು ತಿಳಿಸಿದ್ದ ಚಿತ್ರತಂಡ ಇದೀಗ ಬಿಡುಗಡೆಯ ದಿನಾಂಕವನ್ನು ರಿವೀಲ್ ಮಾಡಿದೆ.

ವೈಲ್ಡ್ ಆಕ್ಷನ್ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ‘ಏಜೆಂಟ್’ ಚಿತ್ರದ ರಿಲೀಸ್ ಡೇಟ್ ರಿವೀಲ್ ಮಾಡಿದೆ ಚಿತ್ರತಂಡ. ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸಿಕ್ಸ್ ಪ್ಯಾಕ್ ನಲ್ಲಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ನಿರ್ದೇಶಕ ಸುರೇಂದರ್ ರೆಡ್ಡಿ ಈ ಚಿತ್ರವನ್ನು ಇತರೆ ಸ್ಪೈ ಥ್ರಿಲ್ಲರ್ ಸಿನಿಮಾಗಳಿಗಿಂತಲೂ ಡಿಫ್ರೆಂಟ್ ಆಗಿ ತೆರೆ ಮೇಲೆ ತರುತ್ತಿದ್ದು ಇಬ್ಬರ ಕಾಂಬಿನೇಶನ್ ಮೇಲೆ ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಸಾಕ್ಷಿ ವೈದ್ಯ ಅಖಿಲ್ ಅಕ್ಕಿನೇನಿಗೆ ನಾಯಕಿಯಾಗಿ ನಟಿಸಿದ್ದು, ಮಮ್ಮುಟ್ಟಿ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ರಾಮಬ್ರಹ್ಮಂ ಸುಂಕರ AK ಎಂಟರ್ಟೈನ್ಮೆಂಟ್ಸ್ ಹಾಗೂ ಸುರೇಂದ್ರ 2 ಸಿನಿಮಾ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ ಕೊಲ್ಲ ಕಲಾ ನಿರ್ದೇಶನ, ಅಜೇಯ್ ಸುಂಕರ, ಪಾತಿ ದೀಪ ರೆಡ್ಡಿ ಸಹ ನಿರ್ಮಾಣ ಚಿತ್ರಕ್ಕಿದೆ. ಹಿಪ್ ಹಾಪ್ ಥಮೀಜಾ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಏಜೆಂಟ್ ಚಿತ್ರ ರಸೂಲ್ ಎಲ್ಲೋರೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಏಜೆಂಟ್ ಸಿನಿಮಾ ಏಪ್ರಿಲ್ 28ಕ್ಕೆ ಬಿಡುಗಡೆಯಾಗುತ್ತಿದೆ.

ಇತರೆ ಸಿನಿಮಾ ಸುದ್ದಿಗಳನ್ನೂ ಓದಿ..

Dhananjaya Hoysala Glimpse: ಧನಂಜಯ್‌ ‘ಹೊಯ್ಸಳ’ನಿಗಾಗಿ ಕೈ ಜೋಡಿಸಿದ ನಾಲ್ಕು ಸ್ಟೇಟ್‌ನ ಸೆಲೆಬ್ರಿಟಿ ಪೊಲೀಸ್‌ ಆಫೀಸರ್ಸ್‌...

ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ‘ಹೊಯ್ಸಳ’ ಚಿತ್ರದ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಇನ್ನೇನು ಚಿತ್ರದ ಕಿರು ವಿಡಿಯೋ ತುಣುಕು ಹೊರಬೀಳಲಿದೆ. ವಿಶೇಷ ಏನೆಂದರೆ ಆ ಕಿರು ವಿಡಿಯೋವನ್ನು ಘಟಾನುಘಟಿಗಳೇ ಬಿಡುಗಡೆ ಮಾಡುತ್ತಿದ್ದಾರೆ. ‘ಹೊಯ್ಸಳ’ನಿಗಾಗಿ ದಕ್ಷಿಣದ ನಾಲ್ಕು ಸ್ಟೇಟ್‌ನ ಸೆಲೆಬ್ರಿಟಿ ಪೊಲೀಸ್‌ ಆಫೀಸರ್ಸ್‌ ಕೈ ಜೋಡಿಸಿದ್ದಾರೆ! ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ