The Raja Saab: ಪ್ರಭಾಸ್‌ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಅಚ್ಚರಿ, ಸಿಂಹಾಸನದ ಮೇಲೆ ಕೂತ ರಾಜಾ ಸಾಬ್‌ನ ನೋಡಿದ ಫ್ಯಾನ್ಸ್‌ ಫುಲ್ ಖುಷ್‌
ಕನ್ನಡ ಸುದ್ದಿ  /  ಮನರಂಜನೆ  /  The Raja Saab: ಪ್ರಭಾಸ್‌ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಅಚ್ಚರಿ, ಸಿಂಹಾಸನದ ಮೇಲೆ ಕೂತ ರಾಜಾ ಸಾಬ್‌ನ ನೋಡಿದ ಫ್ಯಾನ್ಸ್‌ ಫುಲ್ ಖುಷ್‌

The Raja Saab: ಪ್ರಭಾಸ್‌ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಅಚ್ಚರಿ, ಸಿಂಹಾಸನದ ಮೇಲೆ ಕೂತ ರಾಜಾ ಸಾಬ್‌ನ ನೋಡಿದ ಫ್ಯಾನ್ಸ್‌ ಫುಲ್ ಖುಷ್‌

ನಟ ಪ್ರಭಾಸ್‌ ಅಭಿನಯದ ರಾಜಾ ಸಾಬ್ ಏಪ್ರಿಲ್ 10, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ. ಪ್ರಭಾಸ್‌ ಹುಟ್ಟುಹಬ್ಬದಂದೇ ಮೋಷನ್ ಪೋಸ್ಟರ್ ರಿಲೀಸ್‌ ಮಾಡಲಾಗಿದೆ.

ಸಿಂಹಾಸನದ ಮೇಲೆ ಕೂತ ರಾಜಾ ಸಾಬ್‌
ಸಿಂಹಾಸನದ ಮೇಲೆ ಕೂತ ರಾಜಾ ಸಾಬ್‌

ನಟ ಪ್ರಭಾಸ್‌ ಅಭಿನಯದ ದಿ ರಾಜಾ ಸಾಬ್ ಏಪ್ರಿಲ್ 10, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸ್ವತಃ ಪ್ರಭಾಸ್‌ ತಿಳಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅವರು ಪೋಸ್ಟರ್‌ ಹಂಚಿಕೊಂಡಿದ್ದಾರೆ. "ಇಟ್ಸ್‌ ಟೈಮ್‌ ಫಾರ್‌ ಸಮ್ ಚಿಲ್ಸ್‌, ಥ್ರಿಲ್ಸ್‌" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಏಪ್ರಿಲ್ 10, 2025ರಲ್ಲಿ ಹೊಸ ಸಿನಿಮಾ ಬಗ್ಗೆ ಅವರೇ ಮಾಹಿತಿ ನೀಡಿದ್ದು, ಪ್ರಭಾಸ್ ಹುಟ್ಟುಹಬ್ಬದಂದು ನಿರ್ಮಾಪಕರು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ವಿಷಯ ತಿಳಿದು ಪ್ರಭಾಸ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಹುಟ್ಟು ಹಬ್ಬದ ಖುಷಿಯೊಂದಿಗೆ ಎಲ್ಲರೂ ಈ ಸಿನಿಮಾಗಾಗಿ ಶುಭಾಶಯ ಕೋರಿದ್ದಾರೆ.

ಪ್ರಭಾಸ್ ಅವರ 45 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಇದು ಒಂದು ಸರ್ಫ್ರೈಸ್‌ ರೀತಿಯಲ್ಲಿ ಸಿಕ್ಕಿದೆ. ಫ್ರಭಾಸ್‌ ಈ ಪೋಸ್ಟರ್‌ನಲ್ಲಿ ಬಾಯಲ್ಲಿ ಸಿಗಾರ್‌ ಇಟ್ಟುಕೊಂಡು ಬಿಳಿ ಕೂದಲನ್ನು ಹೊಂದಿದ್ದು ವಯಸ್ಸಾದ ರಾಜನಂತೆ ಕಾಣುತ್ತಿದ್ದಾರೆ. ಸಿಂಹಾಸನ ಒಳ್ಳೆಯ ಲುಕ್ ನೀಡಿದೆ. ದಿ ರಾಜಾ ಸಾಬ್ ತಂಡವು ದಿನಾಂಕವನ್ನೂ ಘೋಷಿಸಿದೆ. ಪ್ರಭಾಸ್‌ ಅವರ ಅಭಿನಯವನ್ನು ನೋಡಲು ಜನರು ಯಾವಾಗಲೂ ಕಾಯುತ್ತಿರುತ್ತಾರೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಗ್ರಾಫಿಕ್ಸ್‌ ಈ ಮೋಷನ್ ಪೋಸ್ಟರ್‌ನಲ್ಲಿ ಕಾಣಿಸುತ್ತದೆ. ಹಾರರ್ ಫೀಲ್ ಕೊಡುವ ಒಂದು ಬಂಗಲೆ ಆ ಬಂಗಲೆಯಲ್ಲಿ ಒಬ್ಬ ವಯಸ್ಸಾದ ರಾಜ. ರಾಜಾ ಸಾಬ್ ಅನ್ನು ಮಾರುತಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಹೊರತಾಗಿ, ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ರಿದ್ಧಿ ಕುಮಾರ್ , ಸಂಜಯ್ ದತ್, ಅನುಪಮ್ ಖೇರ್, ಮುರಳಿ ಶರ್ಮಾ, ವರಲಕ್ಷ್ಮಿ ಶರತ್‌ಕುಮಾರ್, ಜಿಶು ಸೇನ್‌ಗುಪ್ತ, ಬ್ರಹ್ಮಾನಂದಂ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಸದ್ಯ ‘ದಿ ರಾಜಾ ಸಾಬ್’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯಿಂದ ಬ್ಯಾಂಕ್‌ರೋಲ್ ಆಗಿರುವ ಈ ಚಿತ್ರದ ಬಜೆಟ್ 400 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ಒಂದು ದಟ್ಟ ಕಾಡು ಆ ಕಾಡಿನಲ್ಲಿ ಒಂದು ಪಿಯಾನೋ ನುಡಿಸುವವರಯ ಯಾರೂ ಇಲ್ಲದೆಯೂ ಅದು ಶಬ್ಧ ಮಾಡುತ್ತಿರುತ್ತದೆ. ಅದರ ಮೇಲೆ ಎಲೆಗಳು ಅಲುಗಾಡುತ್ತಾ ಇರುತ್ತದೆ. ಯಾರೋ ಒಬ್ಬ ಮಸುಕಿನಲ್ಲಿ ಕಾಣದ ಜಾಗದಲ್ಲಿ ಆ ದಟ್ಟಾರಣ್ಯದಲ್ಲಿ ನಡೆದುಕೊಂಡು ಸಾಗುತ್ತಾನೆ. ಈ ರೀತಿಯಾಗಿ ಆ ದೃಷ್ಯ ಕಾಣುತ್ತದೆ. ಅದಕ್ಕೆ ತಕ್ಕಂತೆ ಬ್ಯಾಗ್ರೌಂಡ್‌ ಮ್ಯೂಸಿಕ್ ಪ್ಲೇ ಆಗುತ್ತದೆ.

ಇಲ್ಲಿದೆ ನೋಡಿ ಪೋಸ್ಟರ್

Whats_app_banner