ಮೊದಲ ದಿನಕ್ಕೆ ಹೋಲಿಸಿದರೆ 2ನೇ ದಿನ ಪೂರ್ತಿ ಡಲ್‌ ಆದ ರಾಮ್‌ಚರಣ್‌ ಗೇಮ್‌ ಚೇಂಜರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌
ಕನ್ನಡ ಸುದ್ದಿ  /  ಮನರಂಜನೆ  /  ಮೊದಲ ದಿನಕ್ಕೆ ಹೋಲಿಸಿದರೆ 2ನೇ ದಿನ ಪೂರ್ತಿ ಡಲ್‌ ಆದ ರಾಮ್‌ಚರಣ್‌ ಗೇಮ್‌ ಚೇಂಜರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಮೊದಲ ದಿನಕ್ಕೆ ಹೋಲಿಸಿದರೆ 2ನೇ ದಿನ ಪೂರ್ತಿ ಡಲ್‌ ಆದ ರಾಮ್‌ಚರಣ್‌ ಗೇಮ್‌ ಚೇಂಜರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

Game Changer Day 2 Box office Collection: ಎಸ್‌. ಶಂಕರ್‌ ನಿರ್ದೇಶನದಲ್ಲಿ ರಾಮ್‌ ಚರಣ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಗೇಮ್‌ ಚೇಂಜರ್‌ ಸಿನಿಮಾ ಜನವರಿ 10 ರಂದು ಬಿಡುಗಡೆ ಆಗಿದ್ದು ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಕಲೆಕ್ಷನ್‌ ಡಲ್‌ ಆಗಿದೆ.

‌ರಾಮ್‌ ಚರಣ್‌, ಕಿಯಾರ ಅಡ್ವಾಣಿ ಅಭಿನಯದ ಗೇಮ್‌ ಚೇಂಜರ್‌ 2ನೇ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್
‌ರಾಮ್‌ ಚರಣ್‌, ಕಿಯಾರ ಅಡ್ವಾಣಿ ಅಭಿನಯದ ಗೇಮ್‌ ಚೇಂಜರ್‌ 2ನೇ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್ (PC: @SVC_official)

ರಾಮ್‌ಚರಣ್‌ ಹಾಗೂ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಗೇಮ್‌ ಚೇಂಜರ್‌ ಸಿನಿಮಾ ಜನವರಿ 10 ರಂದು ಬಿಡುಗಡೆ ಆಗಿದೆ. ಆರ್‌ಆರ್‌ಆರ್ ಸಿನಿಮಾ ನಂತರ ಗ್ಲೋಬಲ್ ಸ್ಟಾರ್ ರಾಮ್ ಚರಣ್, ಮತ್ತು ಭಾರತೀಯಡು 2 ನಂತರ ಕಾಲಿವುಡ್ ಸ್ಟಾರ್ ಡೈರೆಕ್ಟರ್ ಶಂಕರ್ ಕಾಂಬಿನೇಷನ್‌ನಲ್ಲಿ ಬಂದಿರುವ ಸಿನಿಮಾ ಇದು. ಚಿತ್ರ ನೋಡಿರುವವರು ಉತ್ತಮ ವಿಮರ್ಶೆ ನೀಡುತ್ತಿದ್ದಾರೆ.

ದಿಲ್‌ ರಾಜು ನಿರ್ಮಾಣದ ಸಿನಿಮಾ

ಚಿತ್ರದಲ್ಲಿ ರಾಮ್ ಚರಣ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಅಂಜಲಿ, ಎಸ್‌ಜೆ ಸೂರ್ಯ, ಶ್ರೀಕಾಂತ್, ಸುನಿಲ್ ಹಾಗೂ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಮಾರು 450 ಕೋಟಿ ರೂಪಾಯಿ  ಬಜೆಟ್‌ನಲ್ಲಿ ದಿಲ್‌ರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಹಾಡುಗಳು, ಟೀಸರ್‌ಗಳು ಮತ್ತು ಟ್ರೇಲರ್‌ಗಳಿಂದ ನಿರೀಕ್ಷೆ ಹೆಚ್ಚಿಸಿತ್ತು. ಅಂತದ್ದರಲ್ಲಿ ಸಿನಿಮಾ ಇದುವರೆಗೂ ಎಷ್ಟು ಕಲೆಕ್ಷನ್‌ ಮಾಡಿದೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಬಹಳ ಕುತೂಹಲ ವ್ಯಕ್ತಪಡಿಸಿದ್ದಾರೆ. 

ಮೊದಲ ದಿನ ಸಿನಿಮಾ ಎಲ್ಲಾ ಭಾಷೆಗಳಿಂದ ಸೇರಿ ಭಾರತಾದ್ಯಂತ 51 ಕೋಟಿ ರೂ ಕಲೆಕ್ಷನ್‌ ಮಾಡಿತ್ತು. ಓವರ್‌ಸೀಸ್‌ ಕಲೆಕ್ಷನ್‌ 19 ಕೋಟಿ ರೂ. ಆಗಿತ್ತು. ಈ ಮೂಲಕ ಮೊದಲ ದಿನ ಒಟ್ಟು 70 ಕೋಟಿ ರೂ ಸಂಗ್ರಹಿಸಿತ್ತು. ತೆಲುಗು ಭಾಷೆಯಿಂದ 41 ಕೋಟಿ ರೂ, ತಮಿಳಿನಿಂದ 2.12 ಕೋಟಿ ರೂ. ಹಿಂದಿಯಲ್ಲಿ 7.5 ಕೋಟಿ ರೂ, ಕರ್ನಾಟಕದಲ್ಲಿ 50 ಲಕ್ಷ ಹಾಗೂ ಮಲಯಾಳಂನಲ್ಲಿ 3 ಲಕ್ಷ ರೂ ಸಂಗ್ರಹಿಸಿತ್ತು. ಗೇಮ್‌ ಚೇಂಚರ್‌ ಚಿತ್ರದ 2ನೇ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿವರ ಈ ರೀತಿ ಇದೆ.

ಡಲ್‌ ಆಯ್ತು 2ನೇ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್

ಎರಡನೇ ದಿನ ದೇಶಾದ್ಯಂತ 21 ಕೋಟಿ ರೂ ಕಲೆಕ್ಷನ್‌ ಮಾಡಿದೆ, ಅದರಲ್ಲಿ ತೆಲುಗು ಭಾಷೆಯಿಂದ 12.7 ಕೋಟಿ ರೂ. ತಮಿಳಿನಿಂದ 1.7 ಕೋಟಿ ರೂ. ಹಿಂದಿಯಿಂದ 7 ಕೋಟಿ ರೂ. ಕರ್ನಾಟಕದಲ್ಲಿ 1 ಲಕ್ಷ ರೂ. ಕಲೆಕ್ಷನ್‌ ಆಗಿದೆ. ಮೊದಲ ದಿನಕ್ಕೆ ಹೋಲಿಸಿದರೆ ಅರ್ಧಕ್ಕೆ ಅರ್ಧ ಕಲೆಕ್ಷನ್‌ ಇಳಿದಿದೆ. ಜನವರಿ 12ಕ್ಕೆ ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್ ಬಿಡುಗಡೆಯಾಗಿದೆ. ಸಂಕ್ರಾಂತಿ ನಂತರ ಗೇಮ್‌ ಚೇಂಜರ್‌ ಫಲಿತಾಂಶ ಏನೆಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ.

ಗೇಮ್‌ ಚೇಂಜರ್‌ ಚಿತ್ರಕ್ಕೆ ತಮನ್‌ ಎಸ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್‌ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಕಾಂತ್‌, ಸುನಿಲ್‌, ಜಯರಾಮ್‌, ಸಮುದ್ರಕನಿ, ಬ್ರಹ್ಮಾನಂದಂ, ನರೇಶ್, ನವೀನ್‌ ಚಂದ್ರ, ವೆನ್ನಿಲ ಕಿಶೋರ್‌, ಅಚ್ಯುತ್‌ ಕುಮಾರ್‌ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

Whats_app_banner