4 ವರ್ಷ ಪೂರೈಸಿದ ರಾಷ್ಟ್ರಪ್ರಶಸ್ತಿ ಪಡೆದ ಕಲರ್‌ ಫೋಟೋ ಸಿನಿಮಾ, ಒಟಿಟಿಯಲ್ಲೂಈ ಸಿನಿಮಾ ನೋಡಬಹುದು: ಸ್ಟ್ರೀಮಿಂಗ್‌ ಆಗ್ತಿರೋದು ಎಲ್ಲಿ?
ಕನ್ನಡ ಸುದ್ದಿ  /  ಮನರಂಜನೆ  /  4 ವರ್ಷ ಪೂರೈಸಿದ ರಾಷ್ಟ್ರಪ್ರಶಸ್ತಿ ಪಡೆದ ಕಲರ್‌ ಫೋಟೋ ಸಿನಿಮಾ, ಒಟಿಟಿಯಲ್ಲೂಈ ಸಿನಿಮಾ ನೋಡಬಹುದು: ಸ್ಟ್ರೀಮಿಂಗ್‌ ಆಗ್ತಿರೋದು ಎಲ್ಲಿ?

4 ವರ್ಷ ಪೂರೈಸಿದ ರಾಷ್ಟ್ರಪ್ರಶಸ್ತಿ ಪಡೆದ ಕಲರ್‌ ಫೋಟೋ ಸಿನಿಮಾ, ಒಟಿಟಿಯಲ್ಲೂಈ ಸಿನಿಮಾ ನೋಡಬಹುದು: ಸ್ಟ್ರೀಮಿಂಗ್‌ ಆಗ್ತಿರೋದು ಎಲ್ಲಿ?

2020 ರಲ್ಲಿ ತೆರೆ ಕಂಡ ಕಲರ್‌ ಫೋಟೋ ಸಿನಿಮಾ 4 ವರ್ಷಗಳನ್ನು ಪೂರೈಸಿದೆ. ಸಂದೀಪ್‌ ರಾಜ್‌ ನಿರ್ದೇಶನದ ಈ ಚಿತ್ರದಲ್ಲಿ ಸುಹಾಸ್‌ ನಾಯಕನಾಗಿ, ಚಾಂದಿನಿ ಚೌಧರಿ ನಾಯಕಿಯಾಗಿ ನಟಿಸಿದ್ದಾರೆ. ನೇರವಾಗಿ ಒಟಿಟಿಯಲ್ಲಿ ರಿಲೀಸ್‌ ಆದ ಈ ಸಿನಿಮಾಗೆ 2 ರಾಷ್ಟ್ರಪ್ರಶಸ್ತಿ ಕೂಡಾ ಒಲಿದಿದೆ.

ಆಹಾ ತೆಲುಗು ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿರುವ ಸುಹಾಸ್‌, ಚಾಂದಿನಿ ಚೌಧರಿ ಅಭಿನಯದ ಕಲರ್‌ ಫೋಟೋ ತೆಲುಗು ಸಿನಿಮಾ. ಈ ಸಿನಿಮಾಗೆ 2 ರಾಷ್ಟ್ರಪ್ರಶಸ್ತಿ ದೊರೆತಿದೆ.
ಆಹಾ ತೆಲುಗು ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿರುವ ಸುಹಾಸ್‌, ಚಾಂದಿನಿ ಚೌಧರಿ ಅಭಿನಯದ ಕಲರ್‌ ಫೋಟೋ ತೆಲುಗು ಸಿನಿಮಾ. ಈ ಸಿನಿಮಾಗೆ 2 ರಾಷ್ಟ್ರಪ್ರಶಸ್ತಿ ದೊರೆತಿದೆ.

ಚಿತ್ರಕಥೆ, ಮೇಕಿಂಗ್‌ ಚೆನ್ನಾಗಿದ್ದರೆ ಜನರು ಸ್ಟಾರ್‌ ನಟ/ನಟಿಯರು ಎನ್ನದೆ ಹೊಸಬರ ಚಿತ್ರವನ್ನೂ ಪ್ರೋತ್ಸಾಹಿಸುತ್ತಾರೆ. ಈ ರೀತಿ ಪ್ರಯೋಗ ಮಾಡಿದ ಬಹಳಷ್ಟು ಸಿನಿಮಾಗಳು ಸೂಪರ್‌ ಡೂಪರ್‌ ಹಿಟ್‌ ಆಗಿವೆ. ಅದರಲ್ಲಿ ತೆಲುಗಿನ ಕಲರ್‌ ಫೋಟೋ ಸಿನಿಮಾ ಕೂಡಾ ಒಂದು. ಈ ಸಿನಿಮಾ ಸಂಪೂರ್ಣ ಹೊಸಬರ ಚಿತ್ರ. ಸಿನಿಮಾ ರಾಷ್ಟ್ರಪ್ರಶಸ್ತಿ ಕೂಡಾ ಪಡೆದಿದೆ.

23 ಅಕ್ಟೋಬರ್‌ 2020ರಂದು ರಿಲೀಸ್‌ ಆಗಿದ್ದ ಸಿನಿಮಾ

ಕಲರ್‌ ಫೋಟೋ ಸಿನಿಮಾಗೆ ಈಗ 4 ವರ್ಷ ತುಂಬಿದೆ. 23 ಅಕ್ಟೋಬರ್‌ 2020ರಂದು ಸಿನಿಮಾ ತೆರೆ ಕಂಡಿತ್ತು. ಸಿನಿಮಾವನ್ನು ಜನರು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯ ಚಿತ್ರತಂಡಕ್ಕೆ ಇತ್ತು. ಆದರೆ ಮುಂದೆ ಯಾರೂ ಊಹಿಸದ ಮಟ್ಟಿಗೆ ಸಿನಿಮಾ ಯಶಸ್ಸು ಪಡೆಯಿತು. ಮೊದಲ ಸಿನಿಮಾದಲ್ಲೇ ನಿರ್ದೇಶಕ, ನಾಯಕ ಸಕ್ಸಸ್‌ ಆದರು. 2 ವರ್ಷಗಳ ನಂತರ, ಅಂದರೆ 2022 ರಲ್ಲಿ ಈ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಕೂಡಾ ಒಲಿದು ಬಂತು. ತೆಲುಗು ಭಾಷೆಯ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಚೊಚ್ಚಲ ನಿರ್ಮಾಪಕ ವಿಭಾಗದಲ್ಲಿ ಈ ಸಿನಿಮಾಗೆ 2 ರಾಷ್ಟ್ರಪ್ರಶಸ್ತಿ ಒಲಿತು ಬಂತು. ಚಿತ್ರತಂಡ, ಬುಧವಾರ ಹೈದಾರಾಬಾದ್‌ನಲ್ಲಿ ಕಾರ್ಯಕ್ರಮ ಆಯೋಜಿಸಿ ಸಿನಿಮಾದ 4ನೇ ವರ್ಷದ ಹುಟ್ಟುಹಬ್ಬ ಆಚರಿಸಿದೆ. ಚಿತ್ರವನ್ನು ಗೆಲ್ಲಿಸಿ ತಮಗೆ ಹೆಸರು ತಂದುಕೊಟ್ಟ ಸಿನಿಪ್ರಿಯರಿಗೆ ಚಿತ್ರತಂಡ ಧನ್ಯವಾದವನ್ನೂ ಅರ್ಪಿಸಿದೆ.

ನೇರವಾಗಿ ಒಟಿಟಿಯಲ್ಲಿ ತೆರೆ ಕಂಡಿದ್ದ ಕಲರ್‌ ಫೋಟೋ

ಅಂದಹಾಗೆ ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್‌ ಆಯ್ತು. ಈ ಚಿತ್ರವನ್ನು ಥಿಯೇಟರ್‌ನಲ್ಲೇ ರಿಲೀಸ್‌ ಮಾಡಬೇಕಿತ್ತು. ಅದರೆ ಆ ಸಮಯದಲ್ಲಿ ಕೋವಿಡ್‌ ಸಮಸ್ಯೆ ಇದ್ದಿದ್ದರಿಂದ ಜನರು ಚಿತ್ರಮಂದಿರಕ್ಕೆ ಬರಲು ಹೆದರುತ್ತಿದ್ದರು. ಇದೇ ಕಾರಣಕ್ಕೆ ಈ ಸಿನಿಮಾ ಅಲ್ಲ ಅರವಿಂದ್‌ ಒಡೆತನದ ಆಹಾ ಒಟಿಟಿಯಲ್ಲಿ ರಿಲೀಸ್‌ ಆಯ್ತು. ಲಾಕ್‌ಡೌನ್‌ ತೆರವಾದ ನಂತರ ಸಿನಿಮಾ ಮತ್ತೆ ಥಿಯೇಟರ್‌ನಲ್ಲಿ ರಿಲೀಸ್‌ ಆಗಿತ್ತು. ಈಗ ಈ ಸಿನಿಮಾ ನೋಡಬಯಸುವವರು ಆಹಾ ಒಟಿಟಿ ಚಂದಾದಾರಿಕೆ ಪಡೆದು ಸಿನಿಮಾ ನೋಡಬಹುದು. ಕಲರ್‌ ಫೋಟೋ ಚಿತ್ರವನ್ನು ಅಮೃತಾ ಪ್ರೊಡಕ್ಷನ್ಸ್‌ ಹಾಗೂ ಲೌಖ್ಯ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿ ಸಾಯಿ ರಾಜೇಶ್‌ , ರವೀಂದ್ರ ಬ್ಯಾನರ್ಜಿ ಜೊತೆ ಸೇರಿ ನಿರ್ಮಿಸಿದ್ದಾರೆ. ಸಂದೀಪ್‌ ರಾಜ್‌ ಚಿತ್ರಕಥೆ ಬರೆದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಎಂಎಂ ಕೀರವಾಣಿ ಪುತ್ರ ಕಾಲ ಭೈರವ ಸಂಗೀತ ನೀಡಿದ್ದಾರೆ.

ಭರವಸೆಯ ನಾಯ ಸುಹಾಸ್‌ ಅಭಿನಯದ ಚಿತ್ರ

ಚಿತ್ರದಲ್ಲಿ ಸುಹಾಸ್‌, ಚಾಂದಿನಿ ಚೌಧರಿ, ಸುನಿಲ್‌, ದಿವ್ಯ ಶ್ರೀಪಾದ, ಆದರ್ಶ್‌ ಬಾಲಕೃಷ್ಣ ಹಾಗೂ ಇನ್ನಿತರರು ನಟಿಸಿದ್ದಾರೆ. ಈ ಸಿನಿಮಾ ನಾಯಕ ಸುಹಾಸ್‌ ಇದಕ್ಕೂ ಮುನ್ನ ಅನೇಕ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾ ಸುಹಾಸ್‌ಗೆ ದೊಡ್ಡ ಬ್ರೇಕ್‌ ನೀಡಿತು. ಈಗ ಸುಹಾಸ್‌, ತೆಲುಗು ಚಿತ್ರರಂಗದ ಬೇಡಿಕೆಯ ನಟನಾಗಿ ಬೆಳೆದಿದ್ದಾರೆ, ಸದ್ಯಕ್ಕೆ ಸುಹಾಸ್‌ ಕೈಯಲ್ಲಿ ಮೂರು ಸಿನಿಮಾಗಳಿವೆ. ಕೇಬಲ್‌ ರೆಡ್ಡಿ, ಆನಂದ್‌ರಾವ್‌ ಅಡ್ವೆಂಚರ್ಸ್‌, ಉಪ್ಪು ಕಪ್ಪೂರಂಬು ಸಿನಿಮಾಗಳಲ್ಲಿ ಸುಹಾಸ್‌ ನಟಿಸುತ್ತಿದ್ದಾರೆ.

Whats_app_banner