ಫೈಟ್‌ ಮಾಡಿದ್ರೆ ಈ ಹುಡುಗಿಯಂತೆ ಮಾಡಬೇಕು; ನಾಗಚೈತನ್ಯ ಶೋಭಿತಾ ಧುಲಿಪಾಲ ಮದುವೆ ನಂತರ ಸಮಂತಾ ರುತ್‌ ಪ್ರಭು ಮೊದಲ ಪೋಸ್ಟ್‌
ಕನ್ನಡ ಸುದ್ದಿ  /  ಮನರಂಜನೆ  /  ಫೈಟ್‌ ಮಾಡಿದ್ರೆ ಈ ಹುಡುಗಿಯಂತೆ ಮಾಡಬೇಕು; ನಾಗಚೈತನ್ಯ ಶೋಭಿತಾ ಧುಲಿಪಾಲ ಮದುವೆ ನಂತರ ಸಮಂತಾ ರುತ್‌ ಪ್ರಭು ಮೊದಲ ಪೋಸ್ಟ್‌

ಫೈಟ್‌ ಮಾಡಿದ್ರೆ ಈ ಹುಡುಗಿಯಂತೆ ಮಾಡಬೇಕು; ನಾಗಚೈತನ್ಯ ಶೋಭಿತಾ ಧುಲಿಪಾಲ ಮದುವೆ ನಂತರ ಸಮಂತಾ ರುತ್‌ ಪ್ರಭು ಮೊದಲ ಪೋಸ್ಟ್‌

Samantha Ruth Prabhu: ಡಿವೋರ್ಸ್‌ ಆದಾಗಿನಿಂದ ಸಮಂತಾ, ನಾಗಚೈತನ್ಯ ಬಗ್ಗೆಯಾಗಲೀ , ಅವರ ಕುಟುಂಬದವರ ಬಗ್ಗೆಯಾಗಲೀ ತುಟಿ ಬಿಚ್ಚಿಲ್ಲಿ, ಡಿಸೆಂಬರ್‌ 4 ರಂದು ನಾಗಚೈತನ್ಯ ಶೋಭಿತಾ ಧುಲಿಪಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ಧಾರೆ. ಮದುವೆ ನಂತರ ಸಮಂತಾ ರುತ್‌ ಪ್ರಭು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಸಮಂತಾ ರುತ್‌ ಪ್ರಭು, ಬಲಚಿತ್ರದಲ್ಲಿ ನವ ದಂಪತಿ ನಾಗ ಚೈತನ್ಯ ಶೋಭಿತಾ ಧುಲಿಪಾಲ ಜೊತೆ ಅಕ್ಕಿನೇನಿ ನಾಗಾರ್ಜುನ
ಸಮಂತಾ ರುತ್‌ ಪ್ರಭು, ಬಲಚಿತ್ರದಲ್ಲಿ ನವ ದಂಪತಿ ನಾಗ ಚೈತನ್ಯ ಶೋಭಿತಾ ಧುಲಿಪಾಲ ಜೊತೆ ಅಕ್ಕಿನೇನಿ ನಾಗಾರ್ಜುನ

ಟಾಲಿವುಡ್‌ ನಟ ನಾಗಚೈತನ್ಯ ಮತ್ತೊಂದು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್‌ 4, ಬುಧವಾರ ರಾತ್ರಿ ಹೈದಾರಾಬಾದ್‌ ಅನ್ನಪೂರ್ಣ ಸ್ಟುಡಿಯೋದಲ್ಲಿ ಶೋಭಿತಾ ಧುಲಿಪಾಲ ಅವರನ್ನು ನಾಗಚೈತನ್ಯ ವರಿಸಿದ್ದಾರೆ. ನವದಂಪತಿಗೆ ಟಾಲಿವುಡ್‌ ಗಣ್ಯರು, ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ. ನಾಗಚೈತನ್ಯ ಎರಡನೇ ಮದುವೆ ಬಗ್ಗೆ ಸಮಂತಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ. ಆದರೆ ನಾಗಚೈತನ್ಯ ಮದುವೆ ನಂತರ ಸಮಂತಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಾಗಚೈತನ್ಯ ಹಳದಿ ಶಾಸ್ತ್ರದ ದಿನವೇ ತಂದೆಯನ್ನು ಕಳೆದುಕೊಂಡಿದ್ದ ಸಮಂತಾ

ನಾಗಚೈತನ್ಯ ಹಾಗೂ ಶೋಭಿತಾ ಹಳದಿ ಶಾಸ್ತ್ರದ ದಿನವೇ ಸಮಂತಾ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಒಂದು ಕಡೆ ನಾಗಚೈತನ್ಯ ಮದುವೆ ಸಂಭ್ರಮದಲ್ಲಿ ಖುಷಿಯಾಗಿದ್ದರೆ, ಇತ್ತ ಸಮಂತಾ ತಂದೆ ಕಳೆದುಕೊಂಡ ದುಃಖದಲ್ಲಿದ್ದರು. ಸಮಂತಾ ತಂದೆ ಅಂತ್ಯಕ್ರಿಯೆಗೆ ಅಕ್ಕಿನೇನಿ ಕುಟುಂಬದವರು ಭಾಗಿಯಾಗಿರಲಿಲ್ಲ. ತಂದೆ ಅಗಲಿಕೆ ನೋವನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಇದೀಗ ಅವರು ಮತ್ತೊಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಆದರೆ ಅದು ನಾಗಚೈತನ್ಯ ಹಾಗೂ ಶೋಭಿತಾ ಮದುವೆಗೆ ಸಂಬಂಧಿಸಿದ್ದಲ್ಲ. ತಮ್ಮ ಸಿಟಾಡೆಲ್‌ ಹನಿ ಬನ್ನಿ ವೆಬ್‌ ಸಿರೀಸ್‌ ಕುರಿತು.

ಈ ಹುಡುಗಿಯಂತೆ ಫೈಟ್‌ ಮಾಡಬೇಕು

ರೂಸೋ ಬ್ರದರ್ಸ್‌ ಹಂಚಿಕೊಂಡಿದ್ದ ಸಿಟಾಡೆಲ್‌ ಹನಿ ಬನ್ನಿ ಸರಣಿಯ ಸ್ಕ್ರಿನ್‌ ಶಾಟನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿರುವ ಸಮಂತಾ ಅದ್ಭುತವಾದ ಪ್ರಯಾಣ, ಅದ್ಭುತ ನಿರ್ದೇಶಕರಾದ ರಾಜ್‌ ಹಾಗೂ ಡಿಕೆ ಅವರೊಂದಿಗೆ ಸಿಟಾಡೆಲ್‌ ಹನಿ ಬನ್ನಿ ವೆಬ್‌ ಸರಣಿಯಲ್ಲಿ ಕೆಲಸ ಮಾಡಿದ್ದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ ಎಂದು ಕ್ಯಾಪ್ಸನ್‌ ನೀಡಿದ್ದಾರೆ. ಅದಕ್ಕೂ ಮುನ್ನ ಒಂದು ಪುಟ್ಟ ಹುಡುಗಿ ಹಾಗೂ ಹುಡುಗ ರೆಜ್ಲಿಂಗ್‌ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡು ಫೈಟ್‌ ಮಾಡಿದರೆ ಈ ಹುಡುಗಿಯಂತೆ ಮಾಡಬೇಕು ಎಂದು ಸಮಂತಾ ಪೋಸ್ಟ್‌ ಹಂಚಿಕೊಂಡಿದ್ದರು. ಆದರೆ ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಬಗ್ಗೆ ಸಮಂತಾ ಯಾವ ಪೋಸ್ಟ್‌ ಕೂಡಾ ಹಂಚಿಕೊಂಡಿಲ್ಲ.

ನಾಗಚೈತನ್ಯ-ಶೋಭಿತಾ ಮದುವೆಗೆ ಹಾಜರಾಗಿದ್ದ ವಿವಿಧ ಗಣ್ಯರು

ಬುಧವಾರ ರಾತ್ರಿ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಶೋಭಿತಾ-ನಾಗಚೈತನ್ಯ ಮದುವೆಗೆ ಟಾಲಿವುಡ್‌ನ ಅನೇಕ ಗಣ್ಯರು ಹಾಜರಾಗಿದ್ದರು. ಮೆಗಾಸ್ಟಾರ್‌ ಚಿರಂಜೀವಿ, ರಾಮ್‌ ಚರಣ್‌ ತೇಜ, ಮಾಜಿ ಎಂಪಿ ಸುಬ್ಬಿರಾಮಿ ರೆಡ್ಡಿ, ತಂಡೇಲ್‌ ಸಿನಿಮಾ ನಿರ್ದೇಶಕ ಚಂದು ಮುಂಡೇಟಿ, ಸುಹಾಸಿನಿ, ಅಡಿವಿಶೇಷ್‌, ನಿರ್ದೇಶಕ ಕಲ್ಯಾಣ್‌ ಕೃಷ್ಣ, ಅಲ್ಲು ಅರವಿಂದ ದಂಪತಿ, ಖ್ಯಾತ ಸಂಗೀತ ನಿರ್ದೇಶಕ ಕೀರವಾಣಿ ಹಾಗೂ ಇನ್ನಿತರರು ಮದುವೆಗೆ ಆಗಮಿಸಿ ಹೊಸ ದಂಪತಿಗೆ ಶುಭ ಹಾರೈಸಿದ್ದಾರೆ.

ಶೀಘ್ರದಲ್ಲೇ ಅಖಿಲ್‌ ಅಕ್ಕಿನೇನಿ ಮದುವೆ

ಮದುವೆಗೆ ಸಂಬಂಧಿಸಿದ ಫೋಟೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಶೋಭಿತಾ-ನಾಗಚೈತನ್ಯ ಇದೇ ವರ್ಷ ಆಗಸ್ಟ್‌ ತಿಂಗಳಲಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2022 ರಿಂದ ಶೋಭಿತಾ ಹಾಗೂ ನಾಗಚೈತನ್ಯ ಡೇಟಿಂಗ್‌ ಮಾಡುತ್ತಿದ್ದರು. ಅಕ್ಕಿನೇನಿ ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ಮದುವೆ ನೆರವೇರಲಿದೆ. ಅಕ್ಕಿನೇನಿ ನಾಗಾರ್ಜುನ ಹಾಗೂ ಅಮಲಾ ಪುತ್ರ ಅಖಿಲ್‌ ಅಕ್ಕಿನೇನಿ ಕೂಡಾ ಎರಡನೇ ಬಾರಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಅಖಿಲ್‌ ಝೈನಾಬ್ ರಾಬ್ದಿ ಮದುವೆ ಕೂಡಾ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಯಲಿದೆ ಎಂಬ ಮಾತು ಕೇಳಿಬರುತ್ತಿದೆ.

ಸಮಂತಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌
ಸಮಂತಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌
Whats_app_banner