ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ನಾಗಚೈತನ್ಯ–ಶೋಭಿತಾ ಧುಲಿಪಾಲ? ವೈರಲ್ ಆಗ್ತಿದೆ ಹೀಗೊಂದು ಸುದ್ದಿ
ಟಾಲಿವುಡ್ ನಟ ನಾಗಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಮದುವೆಯಾಗಿ 5 ತಿಂಗಳು ಕಳೆದಿದೆ. ಇದೀಗ ಶೋಭಿತಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಗಾಸಿಪ್ ಹರಡಲು ಕಾರಣವಾಗಿದ್ದು ಮುಂಬೈನಲ್ಲಿ ಆಕೆ ಧರಿಸಿದ್ದ ಸೀರೆ.

ನಟಿ ಸಮಂತಾರಿಂದ ವಿಚ್ಛೇದನ ಪಡೆದು ಕಳೆದ ಡಿಸೆಂಬರ್ನಲ್ಲಿ ಶೋಭಿತಾ ಧುಲಿಪಾಲರನ್ನು ವಿವಾಹವಾಗಿದ್ದರು ಟಾಲಿವುಡ್ ನಟ ನಾಗಚೈತನ್ಯ. ಇದೀಗ ನಾಗಚೈತನ್ಯ ಹಾಗೂ ಶೋಭಿತಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಹಾಗಾದರೆ ಈ ಸುದ್ದಿ ಹರಡಲು ಕಾರಣವೇನು ನೋಡಿ.
WAVES 2025 ಎಂಬ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಶೋಭಿತಾ ತಮ್ಮ ಹೊಟ್ಟೆ ಕಾಣದಂತೆ ಸೀರೆಯನ್ನು ಮುಚ್ಚಿಕೊಂಡಿದ್ದರು, ಆದರೆ ಹೊಟ್ಟೆಯ ಭಾಗ ಉಬ್ಬಾಗಿ ಕಾಣುತ್ತಿತ್ತು. ಇದರೊಂದಿಗೆ ಇತ್ತೀಚೆಗೆ ಶೋಭಿತಾ ಸಡಿಲವಾದ ಬಟ್ಟೆ ಧರಿಸುತ್ತಿರುವುದು ಈ ಚರ್ಚೆಗೆ ಇನ್ನಷ್ಟು ಪುಷ್ಠಿ ಸಿಗುವಂತೆ ಮಾಡಿದೆ.
ಆದರೆ ಶೋಭಿತಾ ಗರ್ಭಿಣಿ ಎಂಬ ವಿಚಾರವನ್ನು ತಳ್ಳಿ ಹಾಕಿರುವ ನಾಗಚೈತನ್ಯ ಕುಟುಂಬದ ಆಪ್ತಮೂಲಗಳು, ಶೋಭಿತಾ ಗರ್ಭಿಣಿಯಲ್ಲ. ಆಕೆ ಆ್ಯಂಟಿ ಫಿಟ್ ಉಡುಪು ಧರಿಸಿದ್ದಳು. ಅದರಲ್ಲಿ ಹೊಟ್ಟೆಯ ಭಾಗ ಉಬ್ಬಿದಂತೆ ಕಂಡಿದೆ, ಅದು ಆಕೆ ಗರ್ಭಿಣಿ ಎಂಬಂತೆ ಪ್ರತಿಬಿಂಬಿಸಲು ಕಾರಣವಾಗಿದೆ‘ ಎಂದಿದೆ.
ನಾಗಚೈತನ್ಯ ಹಾಗೂ ಶೋಭಿತಾ ಸಂಬಂಧದ ಬಗ್ಗೆ, ತಮ್ಮ ಖಾಸಗಿ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲೂ ಹೇಳಿಕೊಂಡಿಲ್ಲ. ಈ ಜೋಡಿ 2024 ಆಗಸ್ಟ್ 8 ರಂದು ಹೈದರಾಬಾದ್ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿತ್ತು. ಇವರು 2024ರ ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಿದ್ದರು.
ಸುಮಂತಾ ಹಾಗೂ ನಾಗಚೈತನ್ಯ 2017ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. 2021ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು. ಇದಾಗಿ 3 ವರ್ಷಗಳ ಬಳಿಕ ನಾಗಚೈತನ್ಯ–ಶೋಭಿತಾ ಧುಲಿಪಾಲ ಮದುವೆಯಾಗಿದ್ದರು. ಈವರೆಗೂ ಒಂಟಿಯಾಗಿದ್ದ ಸಮಂತಾ ನಿರ್ದೇಶಕರೊಬ್ಬರ ಜೊತೆ ಸದ್ಯದಲ್ಲೇ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.