SS Rajamouli: ರಾಜಮೌಳಿಗೆ ಈ 2 ಹಾಡುಗಳು ಇಷ್ಟವಂತೆ, ಅದಕ್ಕೆ ಕಾರಣ ಈ ನಟಿಯ ಡ್ಯಾನ್ಸ್! ಮಹೇಶ್ ಬಾಬು, ಅಲ್ಲು ಅರ್ಜುನ್ ನಟಿಸಿದ ಚಿತ್ರವಿದು
Director SS Rajamouli Favorite 2 Songs And Heroine: ನಿರ್ದೇಶಕ ಎಸ್.ಎಸ್. ರಾಜಮೌಳಿ ಈಗ ಮಹೇಶ್ ಬಾಬು ನಟನೆಯ ಎಸ್‌ಎಸ್‌ಎಂಬಿ 29 ಸಿನಿಮಾದ ನಿರ್ದೇಶನದಲ್ಲಿ ಬಿಝಿಯಾಗಿದ್ದಾರೆ. ರಾಜಮೌಳಿಗೆ ಎರಡು ಹಾಡುಗಳು ತುಂಬಾ ಇಷ್ಟವಂತೆ. ಆ ಹಾಡಿನಲ್ಲಿ ನಾಯಕಿಯ ಡ್ಯಾನ್ಸ್ ಕಾರಣದಿಂದ ಇಷ್ಟವೆಂದು ಬಾಹುಬಲಿ ನಿರ್ದಶಕ ಹೇಳಿದ್ದಾರೆ.

Director SS Rajamouli Favorite 2 Songs And Heroine: ನಿರ್ದೇಶಕ ರಾಜಮೌಳಿ ಸಿನಿಮಾಗಳೆಂದರೆ ಎಲ್ಲರಿಗೂ ಕಾತರ. ಬಾಹುಬಲಿ, ಮಗಧೀರ, ಆರ್‌ಆರ್‌ಆರ್ ಸೇರಿದಂತೆ ಎಸ್‌ಎಸ್ ರಾಜಮೌಳಿ ಸಿನಿಮಾಗಳೆಂದರೆ ಅದು ಸೂಪರ್‌ಹಿಟ್ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಚಿತ್ರವಾಗುತ್ತದೆ. ನಿರ್ದೇಶಕ ರಾಜಮೌಳಿ ಅವರ ಚಿತ್ರಕ್ಕಾಗಿ ಅನೇಕ ಪ್ರೇಕ್ಷಕರು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಲ್ಲದೆ ಅನೇಕ ನಾಯಕರು ಮತ್ತು ನಾಯಕಿಯರು ರಾಜಮೌಳಿ ಅವರ ಚಿತ್ರಗಳಲ್ಲಿ ನಟಿಸಲು ಉತ್ಸುಕರಾಗಿದ್ದಾರೆ.
ರಾಜಮೌಳಿಯ ನೆಚ್ಚಿನ ನಟಿ ಯಾರು?
ರಾಜಮೌಳಿ ಅವರ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಲು ಸ್ಟಾರ್ ಸೆಲೆಬ್ರಿಟಿಗಳು ಕೂಡ ಉತ್ಸುಕರಾಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಹಲವಾರು ಸಂದರ್ಶನಗಳಲ್ಲಿ ಸ್ವತಃ ಈ ಕುರಿತು ಹೇಳಿದ್ದಾರೆ. ಹೀಗೆ ಎಲ್ಲಾ ನಟನಟಿಯರ ನೆಚ್ಚಿನ ನಿರ್ದೇಶಕರಾದ ರಾಜಮೌಳಿಗೆ ಇಷ್ಟವಾದ ನಾಯಕ, ನಾಯಕಿ ಮತ್ತು ಕಲಾವಿದರು ಯಾರು? ಹಲವು ಸಂದರ್ಭಗಳಲ್ಲಿ ರಾಜಮೌಳಿ ಈ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಆಕೆಯ ನೃತ್ಯ ಸಖತ್
ರಾಜಮೌಳಿ ಅವರ ಎರಡು ನೆಚ್ಚಿನ ಹಾಡುಗಳ ಮಾಹಿತಿ ಇರುವ ರೀಲ್ಸ್ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನನಗೆ ಈ ಎರಡು ಹಾಡುಗಳು ಇಷ್ಟ. ಆ ಹಾಡುಗಳಲ್ಲಿ ನಾಯಕಿಯ ಡ್ಯಾನ್ಸ್ ಕಾರಣದಿಂದ ಇಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. ನಾಯಕಿಯ ನೃತ್ಯವನ್ನು ನೋಡುವ ಸಲುವಾಗಿ ಈ ಹಾಡುಗಳನ್ನು ಹಲವು ಬಾರಿ ವೀಕ್ಷಿಸಿದ್ದೇನೆ ಎಂದು ಆ ವಿಡಿಯೋದಲ್ಲಿ ಹೇಳಿದ್ದಾರೆ.
ಸಲಾರ್ ಬಿಡುಗಡೆ ಸಮಯ
ಸದ್ಯ ವೈರಲ್ ಆಗಿರುವ ಈ ವಿಡಿಯೋ ಪ್ರಭಾಸ್ ಅವರ ಸಲಾರ್ ಸಿನಿಮಾದ ಕಾಲದ್ದು. ಸಲಾರ್ ಸಿನಿಮಾ ಬಿಡುಗಡೆ ಪ್ರಚಾರದ ಭಾಗವಾಗಿ ರಾಜಮೌಳಿ ಅವರು ನಿರ್ದೇಶಕ ಪ್ರಶಾಂತ್ ನೀಲ್, ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರನ್ನು ಇಂಟರ್‌ವ್ಯೂ ಮಾಡಿದ್ದರು. ಆ ಸಮಯದಲ್ಲಿ ಜಕ್ಕಣ್ಣ ತಮಗೆ ತುಂಬಾ ಇಷ್ಟವಾದ ಎರಡು ಹಾಡುಗಳ ಬಗ್ಗೆ ಆಸಕ್ತಿದಾಯಕ ಮಾಹಿತಿ ಹಂಚಿಕೊಂಡಿದ್ದರು.
ಆ ನಟಿಯ ಹೆಸರು ಶ್ರುತಿ ಹಾಸನ್
"ನಾನು ಹೆಚ್ಚು ವೀಕ್ಷಿಸಿದ ಎರಡು ಹಾಡುಗಳು ಇವು. ಫೋನ್‌ನಲ್ಲಿ ಅಥವಾ ಟಿವಿಯಲ್ಲಿ ಈ ಎರಡು ಹಾಡುಗಳ ವಿಡಿಯೋ ಆಗಾಗ ನೋಡುವೆ. ಅವು ಶ್ರುತಿ ಹಾಸನ್ ಅವರ ಡ್ಯಾನ್ಸ್ ವಿಡಿಯೋಗಳು. ಒಂದು "ರೇಸ್ ಗುರ್ರಂ" ಚಿತ್ರದ ಪಾರ್ಟಿ ಹಾಡು (ಡೌನ್ ಡೌನ್ ಡಪ್ಪಾ), ಮತ್ತು ಇನ್ನೊಂದು "ಶ್ರೀಮಂತುಡು" ಚಿತ್ರದ ಚಾರುಶೀಲಾ. ನನಗೆ ಅವಳ ಡ್ಯಾನ್ಸ್ ತುಂಬಾ ಇಷ್ಟವಾಗಿದೆ. ಆ ಎರಡು ಹಾಡುಗಳನ್ನು ನಾನು ಮತ್ತೆ ಮತ್ತೆ ನೋಡಿದ್ದೇನೆ" ಎಂದು ರಾಜಮೌಳಿ ಹೇಳಿದ್ದರು.
"ನೀವು (ಪ್ರಶಾಂತ್ ನೀಲ್) ಹೊರಗೆ ಕಾರಿಡಾರ್‌ನಲ್ಲಿ ಮಾತನಾಡುತ್ತ ಹೇಳಿದ್ದೀರಿ. ನೀವು ಚಿತ್ರದಲ್ಲಿ ಇಂತಹ ರೋಮಾನ್ಸ್ ಹಾಡುಗಳು ಇಲ್ಲ ಎಂದು. ಅದು ನನಗೆ ತುಂಬಾ ನಿರಾಶೆಯನ್ನುಂಟುಮಾಡಿತು" ಎಂದು ನಿರ್ದೇಶಕ ರಾಜಮೌಳಿ ನಗುತ್ತಾ ಹೇಳಿದ್ದರು.
ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು
ರಾಜಮೌಳಿಯವರ ಮಾತುಗಳಿಗೆ ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಕ್ಷಮೆಯಾಚಿಸಿದರು, "ಓಹ್, ಕ್ಷಮಿಸಿ. ನಾನು ಆ ರೀತಿಯ ಹಾಡುಗಳನ್ನು ಈ ಸಿನಿಮಾದಲ್ಲಿ ಮಾಡಿಲ್ಲ" ಎಂದು ಹೇಳಿದ್ದಾರೆ. ರಾಜಮೌಳಿ ಅವರ ನೆಚ್ಚಿನ ಹಾಡುಗಳಲ್ಲಿ ಒಂದು ಅಲ್ಲು ಅರ್ಜುನ್ ಅಭಿನಯದ ರೇಸ್ ಗುರ್ರಂ ಚಿತ್ರ 'ಡೌನ್ ಡೌನ್ ಡಪ್ಪಾ' ಚಿತ್ರದ ಹಾಡಾಗಿದ್ದರೆ, ಇನ್ನೊಂದು ಮಹೇಶ್ ಬಾಬು-ಕೊರಟಾಲ ಶಿವ ಕಾಂಬಿನೇಷನ್‌ನ 'ಶ್ರೀಮಂತುಡು' ಚಿತ್ರದ ಹಾಡಾಗಿದೆ.
ಎಸ್‌ಎಸ್‌ಎಂಬಿ 29 ಚಿತ್ರದ ನಾಯಕಿ ಯಾರು?
ಜಕ್ಕಣ್ಣ ರಾಜಮೌಳಿ ಮತ್ತು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಸಂಯೋಜನೆಯಲ್ಲಿ ತಯಾರಾಗುತ್ತಿರುವ ಎಸ್‌ಎಸ್‌ಎಂಬಿ 29 ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದಲ್ಲಿ ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ವದಂತಿಗಳು ಇವೆ. ಈ ಕುರಿತು ಚಿತ್ರತಂಡ ಪ್ರತಿಕ್ರಿಯೆ ನೀಡಿಲ್ಲ. ಈ ಚಿತ್ರಕ್ಕಾಗಿಯೇ ಪ್ರಿಯಾಂಕಾ ಚೋಪ್ರಾ ಅಮೆರಿಕದಿಂದ ಹೈದರಾಬಾದ್‌ಗೆ ಬಂದಿದ್ದಾರೆ ಎಂದು ಹಲವಾರು ವರದಿಗಳು ಹರಿದಾಡುತ್ತಿವೆ.
