Top 10 OTT movies: ಈ ವಾರ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸಿನಿಮಾಗಳು, ನಿಮ್ಮ ನೆಚ್ಚಿನ ಚಿತ್ರ ನೋಡಿ
Top 10 OTT movies in India: ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ವಾರ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸಿನಿಮಾಗಳು ಯಾವುದು ಎಂದು ತಿಳಿಯಿರಿ. ಗೇಮ್ ಚೇಂಜರ್, ದಿ ಮೆಹ್ತಾ ಬಾಯ್ಸ್ , ಮೈ ಫಾಲ್ಟ್: ಲಂಡನ್ ಸೇರಿದಂತೆ ವಿವಿಧ ಸಿನಿಮಾಗಳನ್ನು ಹೆಚ್ಚು ಜನರು ನೋಡುತ್ತಿದ್ದಾರೆ. ಹೆಚ್ಚು ಜನರಿಗೆ ಇಷ್ಟವಾದ ಈ ಸಿನಿಮಾಗಳ ಪಟ್ಟಿ ಇಲ್ಲಿದೆ.

Top 10 OTT movies in India: ಭಾರತದ ಒಟಿಟಿ ಸಿನಿಮಾ ಪ್ರಿಯರಿಗೆ ಹಲವು ಒಟಿಟಿ ವೇದಿಕೆಗಳು ಹೊಸ ಹೊಸ ಸಿನಿಮಾಗಳನ್ನು ನೀಡುತ್ತಿವೆ. ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜೀ5, ಜಿಯೋಹಾಟ್‌ಸ್ಟಾರ್ ಮುಂತಾದ ಒಟಿಟಿಗಳಲ್ಲಿ ಹಲವು ಸಿನಿಮಾಗಳು ಪ್ರತಿವಾರ ಬಿಡುಗಡೆಯಾಗುತ್ತಿವೆ. ಇವುಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗೇಮ್ ಚೇಂಜರ್, ದಿ ಮೆಹ್ತಾ ಬಾಯ್ಸ್ , ಮೈ ಫಾಲ್ಟ್: ಲಂಡನ್ ಸೇರಿದಂತೆ ಈ ವಾರ ಟ್ರೆಂಡಿಂಗ್‌ನಲ್ಲಿರುವ ಸಿನಿಮಾಗಳು ಯಾವುದು ಎಂದು ತಿಳಿಯೋಣ ಬನ್ನಿ. ಇವುಗಳಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾಗಳು ಮಾತ್ರವಲ್ಲದೆ ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಸಿನಿಮಾಗಳೂ ಇವೆ.
1. ಗೇಮ್ ಚೇಂಜರ್ (Game Changer)
ಈ ತಿಂಗಳು ಅಮೆಜಾನ್ ಪ್ರೈಮ್‌ನಲ್ಲಿ ಗೇಮ್ ಚೇಂಜರ್ ಸ್ಟ್ರೀಮಿಂಗ್ ಆರಂಭಿಸಿತ್ತು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಗೇಮ್ ಚೇಂಜರ್ ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ನಿರ್ಮಿಸಿದ್ದಾರೆ. ರಾಮ್ ಚರಣ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ ಮತ್ತು ಅಂಜಲಿ ನಾಯಕಿಯರಾಗಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಗಳಿಕೆ ಮಾಡಿಲ್ಲ. ಆದರೆ, ಇದೀಗ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ.
2. ದಿ ಮೆಹ್ತಾ ಬಾಯ್ಸ್ (The Mehta Boys)
ಈ ಬಾಲಿವುಡ್ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಈ ವಾರ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ತಂದೆ ಮತ್ತು ಮಗನ ನಡುವಿನ ಸಮಸ್ಯೆಯ ಬಗ್ಗೆ ಈ ಸಿನಿಮಾದ ಕಥೆಯಿದೆ. ಬೋಮನ್ ಇರಾನಿ ನಿರ್ದೇಶನದ ಈ ಚಿತ್ರಕ್ಕೆ ಇರಾನಿ ಮತ್ತು ಅಲೆಕ್ಸಾಂಡರ್ ಡೈನೆಲಾರಿಸ್ ಕಥೆ ಬರೆದಿದ್ದಾರೆ. ಇರಾನಿ, ಅವಿನಾಶ್ ತಿವಾರಿ ಮತ್ತು ಶ್ರೇಯಾ ಚೌಧರಿ ನಟಿಸಿದ್ದಾರೆ. ಈ ಸಿನಿಮಾ ಫೆಬ್ರವರಿ 7ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು.
3. ಮೈ ಫಾಲ್ಟ್: ಲಂಡನ್ (My Fault: London)
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮೈ ಫಾಲ್ಟ್ ಲಂಡನ್ ಎಂಬ ಬ್ರಿಟಿಷ್ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಇದು ಡ್ಯಾನಿ ಗಿರ್ಡ್‌ವುಡ್ ಮತ್ತು ಷಾರ್ಲೆಟ್ ಫಾಸ್ಲರ್ ನಿರ್ದೇಶನದ ರೋಮ್ಯಾಟಿಂಕ್ ಸಿನಿಮಾ. ಆಶಾ ಬ್ಯಾಂಕ್ಸ್, ಮ್ಯಾಥ್ಯೂ ಬ್ರೂಮ್, ಈವ್ ಮ್ಯಾಕ್ಲಿನ್, ರೇ ಫಿಯರಾನ್, ಸ್ಯಾಮ್ ಬುಕಾನನ್ ಮತ್ತು ಜೇಸನ್ ಫ್ಲೆಮಿಂಗ್ ನಟಿಸಿದ್ದಾರೆ. ಇದು ಈ ವಾರ ಅಂದರೆ ಫೆಬ್ರವರಿ 13ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ಸಿನಿಮಾ.
4. ಡಾರ್ಕ್ (Dark)
ಇದು ತಮಿಳು ಸಿನಿಮಾ. ಬಾಲಸುಬ್ರಮಣಿ ಕೆಜಿ ನಿರ್ದೇಶನದ ಜೀವಾ ಅವರ ಈ ಚಿತ್ರವು ದಂಪತಿಗೆ ವಾರಾಂತ್ಯದ ವಿಹಾರದ ವೇಳೆ ಎದುರಾಗುವ ಹಿಂಸಾತ್ಮಕ ಘಟನೆಗಳ ಕಥೆಯನ್ನು ಒಳಗೊಂಡಿದೆ. ನಟರಾದ ಜೀವಾ ಮತ್ತು ಪ್ರಿಯಾ ಭವಾನಿ ಶಂಕರ್ 2024 ರ ನಿಗೂಢ ಥ್ರಿಲ್ಲರ್ ಡ್ರಾಮಾ ಬ್ಲ್ಯಾಕ್ ನಲ್ಲಿ ನಟಿಸಿದ್ದಾರೆ. ವಿವಿಧ ಭಾಷೆಗಳಲ್ಲಿ ಈ ಬ್ಲ್ಯಾಕ್ ಸಿನಿಮಾವು ಡಾರ್ಕ್ ಎಂಬ ಹೆಸರಿನಲ್ಲಿ ಲಭ್ಯವಿದೆ. ಇದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಟಾಪ್ 4 ಟ್ರೆಂಡಿಂಗ್‌ನಲ್ಲಿದೆ.
5. ಗಾಮಿ (Gaami)
2024ರ ಈ ತೆಲುಗು ಸಿನಿಮಾವು ಸಾಹಸಮಯ ಥ್ರಿಲ್ಲರ್ ಕಥಾನಕ ಹೊಂದಿದೆ. ವಿದ್ಯಾಧರ್ ಕಗಿತಾ ಬರೆದು ನಿರ್ದೇಶಿಸಿದ ಚಿತ್ರವಾಗಿದೆ. ವಿಶ್ವಕ್ ಸೇನ್, ಚಾಂದಿನಿ ಚೌಧರಿ, ಅಭಿನಯ, ಹರಿಕಾ ಪೆಡಾಡಾ ಮತ್ತು ಮೊಹಮ್ಮದ್ ಸಮದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಟಾಪ್ 5ನಲ್ಲಿದೆ.
ಟ್ರೆಂಡಿಂಗ್‌ನಲ್ಲಿರುವ ಇನ್ನುಳಿದ ಐದು ಸಿನಿಮಾಗಳು
6. ದಿ ಆರ್ಡರ್ (The Order)
7. ಹ್ಯಾಷ್‌ಟ್ಯಾಗ್ ತದೆವ್ ಲಗ್ನಂ (Hashtag Tadev Lagnam)
8. ಧೂಂ ಧಾಮ್ (Dhoom Dhaam)
9. ಇಂಟರ್‌ಸ್ಟೆಲ್ಲರ್ (Interstellar)
10. ಬಾಗ್‌ಮೆನ್ (Bagman)
ಈ ವಾರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗೇಮ್ ಚೇಂಜರ್, ದಿ ಮೆಹ್ತಾ ಬಾಯ್ಸ್ , ಮೈ ಫಾಲ್ಟ್: ಲಂಡನ್, ಡಾರ್ಕ್, ಗಾಮಿ, ದಿ ಆರ್ಡರ್, ಹ್ಯಾಷ್‌ಟ್ಯಾಗ್ ತದೆವ್ ಲಗ್ನಂ, ಧೂಂ ಧಾಮ್, ಇಂಟರ್‌ಸ್ಟೆಲ್ಲರ್ ಮತ್ತು ಬಾಗ್‌ಮೆನ್ ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಜನರು ನಿರ್ದಿಷ್ಟ ಸಿನಿಮಾಗಳನ್ನು ಹೆಚ್ಚು ಹೆಚ್ಚು ನೋಡುತ್ತಿದ್ದಂತೆ ಈ ಒಟಿಟಿ ಸಿನಿಮಾಗಳ ಟ್ರೆಂಡಿಂಗ್ ಪಟ್ಟಿ ಏರುಪೇರಾಗಲಿದೆ.
