ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳಿವು; ಆ ಹತ್ತರಲ್ಲಿ ನೋಡಲೇಬೇಕಾದ 5 ಚಿತ್ರಗಳ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳಿವು; ಆ ಹತ್ತರಲ್ಲಿ ನೋಡಲೇಬೇಕಾದ 5 ಚಿತ್ರಗಳ ವಿವರ ಇಲ್ಲಿದೆ

ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳಿವು; ಆ ಹತ್ತರಲ್ಲಿ ನೋಡಲೇಬೇಕಾದ 5 ಚಿತ್ರಗಳ ವಿವರ ಇಲ್ಲಿದೆ

ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಕಳೆದ ಎರಡು ವಾರಗಳಲ್ಲಿ ಸಾಕಷ್ಟು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗಿವೆ. ಆ ಪೈಕಿ ಒಂದಷ್ಟು ಸಿನಿಮಾಗಳು ಇಂದಿಗೂ ಟಾಪ್‌ ಟ್ರೆಂಡಿಂಗ್‌ನಲ್ಲಿವೆ. ಹೆಚ್ಚೆಚ್ಚು ವೀಕ್ಷಣೆ ಪಡೆಯುತ್ತಿವೆ. ಆ ಪೈಕಿ ಕೆಲವು ಸಿನಿಮಾಗಳ ಮಾಹಿತಿ ಇಲ್ಲಿದೆ.

ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳಿವು; ಆ ಹತ್ತರಲ್ಲಿ ನೋಡಲೇಬೇಕಾದ 5 ಚಿತ್ರಗಳ ವಿವರ ಇಲ್ಲಿದೆ
ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಟಾಪ್‌ 10 ಟ್ರೆಂಡಿಂಗ್‌ ಸಿನಿಮಾಗಳಿವು; ಆ ಹತ್ತರಲ್ಲಿ ನೋಡಲೇಬೇಕಾದ 5 ಚಿತ್ರಗಳ ವಿವರ ಇಲ್ಲಿದೆ

ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ ಒಂದಲ್ಲ ಎರಡಲ್ಲ ಸಾಲು ಸಾಲು ಹೊಸ ಸಿನಿಮಾಗಳು ವೀಕ್ಷಣೆಗೆ ಲಭ್ಯ ಇವೆ. ಅದರಲ್ಲೂ ಕಳೆದ ಎರಡು ವಾರಗಳಲ್ಲಿ ಸಾಕಷ್ಟು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗಿವೆ. ಆ ಪೈಕಿ ಒಂದಷ್ಟು ಸಿನಿಮಾಗಳು ಟಾಪ್‌ ಟ್ರೆಂಡಿಂಗ್‌ನಲ್ಲಿವೆ. ಹೆಚ್ಚೆಚ್ಚು ವೀಕ್ಷಣೆ ಪಡೆಯುತ್ತಿವೆ. ಆ ಪೈಕಿ 10 ಅತ್ಯುತ್ತಮ ಸಿನಿಮಾಗಳ ಮಾಹಿತಿ ಇಲ್ಲಿದೆ.

ಗುಡ್‌ ಬ್ಯಾಡ್‌ ಅಗ್ಲಿ

ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ನಟಿಸಿರುವ ಲೇಟೆಸ್ಟ್ ಆಕ್ಷನ್ ಥ್ರಿಲ್ಲರ್ ಸಿನಿಮಾ ʻಗುಡ್‌ ಬ್ಯಾಡ್‌ ಅಗ್ಲಿʼ. ಬಹು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ 246 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ʻಗುಡ್‌ ಬ್ಯಾಡ್‌ ಅಗ್ಲಿʼ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮೇ 8ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಟ್ರೆಂಡಿಂಗ್ ಸಿನಿಮಾಗಳಲ್ಲಿ ನಂಬರ್‌ 1 ಸ್ಥಾನದಲ್ಲಿ ಈ ಸಿನಿಮಾ ಮುಂದುವರಿದಿದೆ. ಈ ಸಿನಿಮಾವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವೀಕ್ಷಿಸಬಹುದು.

ಜಾಕ್‌

ಸಿದ್ದು ಜೊನ್ನಲಗಡ್ಡ ಮತ್ತು ವೈಷ್ಣವಿ ಚೈತನ್ಯ ಜೋಡಿಯಾಗಿ ನಟಿಸಿರುವ ಸಿನಿಮಾ ʻಜಾಕ್‌ʼ. ಬೊಮ್ಮರಿಲು ಭಾಸ್ಕರ್ ನಿರ್ದೇಶನದ ʻಜಾಕ್‌ʼ ಸಿನಿಮಾ ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಸ್ಪೈ ಆಕ್ಷನ್ ಕಾಮಿಡಿ ಥ್ರಿಲ್ಲರ್ ಆಗಿ ಮೂಡಿಬಂದ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮೇ 8 ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಟ್ರೆಂಡಿಂಗ್ ಸಿನಿಮಾಗಳಲ್ಲಿ ಟಾಪ್ 3 ಸ್ಥಾನದಲ್ಲಿ ಮುಂದುವರಿದಿದೆ.

ಜ್ಯುವೆಲ್‌ ಥೀಫ್‌

ನೇರವಾಗಿ ಒಟಿಟಿಯಲ್ಲಿ ಪ್ರಸಾರವಾದ ಆಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ʻಜ್ಯುವೆಲ್‌ ಥೀಫ್‌ʼ. ಸೈಫ್ ಅಲಿ ಖಾನ್ ನಟಿಸಿರುವ ಈ ಸಿನಿಮಾ ಹಲವು ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಇದೀಗ ನೆಟ್‌ಫ್ಲಿಕ್ಸ್‌ ಟ್ರೆಂಡಿಂಗ್ ಸಿನಿಮಾಗಳಲ್ಲಿ ಟಾಪ್ 4 ಸ್ಥಾನದಲ್ಲಿದೆ ಈ ಸಿನಿಮಾ.

ಕೋರ್ಟ್‌

ತೆಲುಗಿನಲ್ಲಿ ನಿರ್ಮಾಣವಾಗಿರುವ ʻಕೋರ್ಟ್‌ʼ ಸಿನಿಮಾ ಇಂದಿಗೂ ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚೆಚ್ಚು ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಪೋಕ್ಸೋ ಕಾಯ್ದೆಯ ಹಿನ್ನೆಲೆಯಲ್ಲಿ ಬಂದಿರುವ ʻಕೋರ್ಟ್‌ʼ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಟ್ರೆಂಡಿಂಗ್‌ ವಿಚಾರದಲ್ಲಿ ಟಾಪ್ 5ರಲ್ಲಿದೆ.

ಮ್ಯಾಡ್‌ ಸ್ಕ್ವೇರ್‌

ಹಾಸ್ಯಪ್ರಿಯರಿಗೆ ಇಷ್ಟವಾಗುವ ಸಿನಿಮಾ ʻಮ್ಯಾಡ್‌ ಸ್ಕ್ವೇರ್ʼ. ʻಮ್ಯಾಡ್‌ʼ ಚಿತ್ರದ ಮುಂದುವರಿದ ಭಾಗವಾಗಿ ಬಂದಿರುವ ʻಮ್ಯಾಡ್‌ ಸ್ಕ್ವೇರ್‌ʼ ಸಿನಿಮಾದಲ್ಲಿ ಕಾಮಿಡಿ ಈ ಚಿತ್ರದ ಜೀವಾಳ. ವೀಕ್ಷಕರನ್ನು ರಂಜಿಸಿರುವ ಈ ಸಿನಿಮಾ, ಒಟಿಟಿಯಲ್ಲಿ ಟಾಪ್ 8 ಸ್ಥಾನದಲ್ಲಿದೆ.

ಈ ಸಿನಿಮಾಗಳೂ ಟ್ರೆಂಡಿಂಗ್‌ನಲ್ಲಿವೆ..

ಇವುಗಳ ಜೊತೆಗೆ ನೆಟ್‌ಫ್ಲಿಕ್ಸ್‌ ಒಟಿಟಿ ಟ್ರೆಂಡಿಂಗ್ ಸಿನಿಮಾಗಳಲ್ಲಿ ಟಾಪ್ 2 ಸ್ಥಾನದಲ್ಲಿ ʻದಿ ಡಿಪ್ಲೊಮ್ಯಾಟ್‌ʼ, ಟಾಪ್ 6 ರಲ್ಲಿ ʻಲಾಸ್ಟ್‌ ಬುಲೆಟ್‌ʼ, ಟಾಪ್ 7 ರಲ್ಲಿ ʻಎಕ್ಸ್ಟಾಟೆರಿಸ್ಟ್ರಿಯಲ್‌ʼ ಸಿನಿಮಾ, 9 ನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ ಅಭಿನಯದ ʻಚಲೋʼ, 10ನೇ ಸ್ಥಾನದಲ್ಲಿ ʻಇನ್‌ಸೈಡ್‌ ಮ್ಯಾನ್‌ ಮೋಸ್ಟ್‌ ವಾಂಟೆಂಡ್‌ʼ ಚಿತ್ರಗಳಿವೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.