2026ರಲ್ಲಿ ಬಿಡುಗಡೆಯಾಗಲಿದೆ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾ; ಪ್ರಮುಖ ರಜಾ ದಿನಗಳಲ್ಲೇ ರಿಲೀಸ್ ಸಾಧ್ಯತೆ
2026ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಎರಡು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗಲಿದೆ. ಟಾಕ್ಸಿಕ್ ಮತ್ತು ರಾಮಾಯಾಣ ಸಿನಿಮಾ ಬಿಡುಗಡೆಗಾಗಿ ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

2026ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಎರಡು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗಲಿದೆ. ಟಾಕ್ಸಿಕ್ ಮತ್ತು ರಾಮಾಯಾಣ ಸಿನಿಮಾ ಬಿಡುಗಡೆಗಾಗಿ ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಆ ಸಿನಿಮಾಗಳು ಯಾವಾಗ ಬಿಡುಗಡೆಯಾಗುತ್ತವೆ? ಯಾವ ದಿನಾಂಕದಂದು ತೆರೆ ಮೇಲೆ ಬರಬಹುದು ಎಂಬ ಪ್ರಶ್ನೆಗಳು ಹಲವರಲ್ಲಿದೆ. ಸಾಮಾನ್ಯವಾಗಿ ವಾರಾಂತ್ಯಕ್ಕೆ ಶುಕ್ರವಾರದಂದು ಸಿನಿಮಾಗಳು ಬಿಡುಗಡೆಯಾಗುತ್ತವೆ. ಅದೇ ರೀತಿ ಯಶ್ ಅಭಿನಯದ ಈ ಎರಡೂ ಸಿನಿಮಾಗಳು ಸಹ ರಜಾ ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ರಜಾ ದಿನಗಳಲ್ಲಿ ಬಿಡುಗಡೆಯಾದರೆ ಹೆಚ್ಚಿನ ಕಲೆಕ್ಷನ್ ಆಗುವ ನಿರೀಕ್ಷೆಯೂ ಸಹಜವಾಗಿ ಇರುತ್ತದೆ.
ಯಶ್ ಅಭಿನಯದ KGF ಸಿನಿಮಾ ಹಿಟ್ ಆದಾಗಿನಿಂದ ಯಶ್ ಅವರ ಸಿನಿಮಾ ಎಂದರೆ ಸಾಕು ಸಾಕಷ್ಟು ಜನರಲ್ಲಿ ನಿರೀಕ್ಷೆ ಹೆಚ್ಚುತ್ತದೆ. ಅದೇ ನಿರೀಕ್ಷೆಯನ್ನು ಈಗಾಗಲೆ ಬಿಡುಗಡೆಯಾದ ಟ್ರೇಲರ್ ಕೂಡ ಹೆಚ್ಚು ಮಾಡಿದೆ. ಹೀಗಿರುವಾಗ ಅಭಿಮಾನಿಗಳ ಕಾತರ ಹಾಗೂ ಕಾಯುವಿಕೆಗೆ ಇಂದಲ್ಲ ನಾಳೆ ಬ್ರೇಕ್ ಬೀಳಲೇಬೇಕಿದೆ.
ಪ್ರಮುಖ ರಜಾ ದಿನಗಳಲ್ಲೇ ರಿಲೀಸ್ ಸಾಧ್ಯತೆ
ಯಶ್ ಅಭಿನಯದ ಎರಡು ಬಿಗ್ ಬಜೆಟ್ ಸಿನಿಮಾಗಳು ಎರಡು ಪ್ರಮುಖ ರಜಾ ದಿನಗಳಲ್ಲಿ ಬಿಡುಗಡೆಯಾಗಲಿದೆ. ಮಾರ್ಚ್ 19 ರಂದು "ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಬಿಡುಗಡೆಯಾಗಲಿದೆ. ದೀಪಾವಳಿಗೆ ‘ರಾಮಾಯಣ’ ಸಿನಿಮಾ ಬಿಡುಗಡೆಯಾಗುತ್ತದೆ ಎನ್ನಲಾಗಿದೆ. ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಕೆಜಿಎಫ್ ಚಿತ್ರದ ಮೂಲಕ ಯಶ್ ಸೂಪರ್‌ಸ್ಟಾರ್ ಪದವಿಗೆ ಏರಿದ್ದು, ಪ್ಯಾನ್-ಇಂಡಿಯಾ ತಾರೆಯಾಗಿ ಎಲ್ಲರ ಗಮನಸೆಳೆಯುತ್ತಿದ್ದಾರೆ. ಆ ಕಾರಣಕ್ಕಾಗಿ ಯಶ್ ಅಭಿನಯದ ಸಿನಿಮಾ ಎಂದರೆ ಸಹಜವಾಗಿಯೇ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡುತ್ತದೆ. ಆದರೆ, ರಾಮಾಯಣ ಮತ್ತು ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಷಯ ಪೋಸ್ಟರ್ ಮೂಲಕ ತಿಳಿದಿದ್ದರೂ, ಅವರ ಅಭಿನಯ ಹಾಗೂ ಸಿನಿಮಾದ ಕಥೆ ಹೇಗಿರಬುಹುದು ಎಂದು ಎಲ್ಲರೂ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾಗಳಿಗೆ ಯಶ್ ಬೆಂಬಲ
ಮನದ ಕಡಲು ಸಿನಿಮಾದ ಟ್ರೇಲರ್ ಅನ್ನು ನಟ ಯಶ್ ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಬೆಂಗಳೂರಿನ ಲುಲು ಮಾಲ್ ಹೊರಾಂಗಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಯಶ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ಆಗಮಿಸಿದ್ದರು, ಹೀಗೆ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ ಸಹ ತಮ್ಮ ಮೂಲವನ್ನು ಮರೆತಿಲ್ಲ. ತನ್ನಂತದೇ ಇನ್ನೊಂದಷ್ಟು ಕಲಾವಿದರಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಕೆಜಿಎಫ್ ಚಾಪ್ಟರ್ 1 ಮತ್ತು 2ರ ಯಶಸ್ಸಿನ ಬಳಿಕ ಯಶ್ ಪುನರಾಗಮನವಾಗುತ್ತಿದೆ. ಈ ಕಾರಣಕ್ಕೂ ಟಾಕ್ಸಿಕ್ ಹವಾ ಜೋರಾಗಿದೆ. ಚಿತ್ರದ ಸಣ್ಣ ಸಣ್ಣ ಝಲಕ್ ಹೊರಬಿದ್ದಾಗಲೇ ಸಂಭ್ರಮಿಸಿದ್ದ ಫ್ಯಾನ್ಸ್ ಸದಾ ಹೊಸ ಅಪ್‌ಡೇಟ್ ಬಗ್ಗೆ ಕಾಯುತ್ತಿರುತ್ತಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಶೂಟಿಂಗ್ ಆಗುತ್ತಿರುವ ಟಾಕ್ಸಿಕ್ ಸಿನಿಮಾ, ಇನ್ನುಳಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ ರಿಲೀಸ್ ಆಗಲಿದೆ. ಇದರ ಜತೆಗೆ ಬೇರೆ ಬೇರೆ ವಿದೇಶಿ ಭಾಷೆಗೂ ಈ ಸಿನಿಮಾ ಡಬ್ ಆಗಿ ತೆರೆಕಾಣುವ ಸಾಧ್ಯತೆಗಳಿವೆ. ಈಗಾಗಲೇ ಬೆಂಗಳೂರು, ಗೋವಾ ಮತ್ತು ಮುಂಬೈನಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಭಾರತೀಯ ನಟರ ಜತೆಗೆ ಹಾಲಿವುಡ್ ಕಲಾವಿದರೂ ಈ ಚಿತ್ರದ ಭಾಗವಾಗಿದ್ದಾರೆ.
ವಿಭಾಗ