Bigg Boss Kannada 11: ಬಿಗ್ ಬಾಸ್ ಟ್ರೋಫಿ ಮುಂದೆ ಕಣ್ಣೀರಿಟ್ಟ ಸ್ಪರ್ಧಿಗಳು; ಹೇಳದೇ ಉಳಿದ ಮನದಾಳವೀಗ ಅನಾವರಣ
Bigg Boss Kannada 11: ನಿಮ್ಮ ಕೈ ಸೇರಬಹುದಾದ ಈ ಟ್ರೋಫಿಯನ್ನು ನೋಡಿ ನಿಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅದರಂತೆ, ಟ್ರೋಫಿ ನೋಡಿದ ಮನೆ ಮಂದಿ, ಕಣ್ಣೀರಿಟ್ಟಿದ್ದಾರೆ. ಭಾವುಕವಾಗಿದ್ದಾರೆ. ಯಾರ ಮನದಾಳ ಏನಿತ್ತು? ಇಲ್ಲಿದೆ.

Bigg Boss Kannada : ಬಿಗ್ ಬಾಸ್ ಕನ್ನಡ 11ರ ಫಿನಾಲೆಗೆ ಇನ್ನೇನು ಹೆಚ್ಚು ದಿನ ಉಳಿದಿಲ್ಲ. ಬರುವ ಭಾನುವಾರಕ್ಕೆ (ಜ. 26) ವಿಜೇತರ ಘೋಷಣೆ ಆಗಲಿದೆ. ಅಲ್ಲಿಗೆ, 120 ದಿನಗಳ ಕೌತುಕಕ್ಕೆ ಬ್ರೇಕ್ ಬೀಳಲಿದೆ. ಈಗಾಗಲೇ ಫಿನಾಲೆ ವಾರದ ಸಲುವಾಗಿ ಬಿಗ್ ಬಾಸ್ ಮನೆಯಲ್ಲಿ ಸರಿ ಸಮಾನರು. ಯಾರೂ ಕ್ಯಾಪ್ಟನ್ ಅಲ್ಲ ಎಂದು ಬಿಗ್ ಬಾಸ್ ಹೇಳಿದ್ದಾರೆ. ಜತೆಗೆ ಸೋಮವಾರದ ಸಂಚಿಕೆಯಲ್ಲಿ ಮನೆಮಂದಿಗೆ ಸಿಟ್ಟು ತೀರಿಸಿಕೊಳ್ಳುವ ಅವಕಾಶ ನೀಡಿದ್ದರು. ಇದೀಗ ಇಂದಿನ ಏಪಿಸೋಡ್‌ನಲ್ಲಿ ಏನಿರಲಿದೆ ಎಂಬ ಕುತೂಹಲಕ್ಕೆ ಹೊಸ ಪ್ರೋಮೋದಲ್ಲಿ ಉತ್ತರ ಸಿಕ್ಕಿದೆ.
ಶನಿವಾರದ ಸಂಚಿಕೆಯಲ್ಲಿ ಈ ಸಲದ ಬಿಗ್ ಬಾಸ್ ಟ್ರೋಫಿ ಹೇಗಿರಲಿದೆ ಎಂಬ ಕೌತುಕವನ್ನು ಕಿಚ್ಚ ಸುದೀಪ್ ತಣಿಸಿದ್ದರು. ವೇದಿಕೆ ಮೇಲೆ ಟ್ರೋಫಿ ಅನಾವರಣ ಮಾಡಿ, ಸ್ಪರ್ಧಿಗಳ ಕಣ್ಣರಳಿಸಿದ್ದರು. ಇದೀಗ ಇದೇ ಟ್ರೋಫಿ ಬಿಗ್ ಬಾಸ್ ಮನೆ ಪ್ರವೇಶಿಸಿದೆ. ಎಲ್ಲರಿಗೂ ಆ ಟ್ರೋಫಿ ಜತೆಗೆ ಮಾತನಾಡುವ ಅವಕಾಶವನ್ನು ನೀಡಿದ್ದಾರೆ ಬಿಗ್ ಬಾಸ್. ಮನೆಯ ಆರು ಸ್ಪರ್ಧಿಗಳಾದ ಹನುಮಂತ, ರಜತ್, ಭವ್ಯಾ ಗೌಡ, ಮೋಕ್ಷಿತಾ ಪೈ, ಉಗ್ರಂ ಮಂಜು, ತ್ರಿವಿಕ್ರಮ್ ಟ್ರೋಫಿ ಕಂಡು ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಯಾರ ಮನದಾಳದ ಆಸೆಗಳನ್ನು ಈಡೇರಿಸುತ್ತೆ ಬಿಗ್ ಬಾಸ್ ಟ್ರೋಫಿ?
“ನಿಮ್ಮ ಕೈ ಸೇರಬಹುದಾದ ಈ ಟ್ರೋಫಿಯನ್ನು ನೋಡಿ ನಿಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಿ” ಎಂದು ಬಿಗ್ ಬಾಸ್ ಹೇಳಿದ್ದಾರೆ. ಮೊದಲಿಗೆ ಹನುಮಂತು, “ಯವ್ವಾ ತಾಯಿ ಗರುಡವ್ವ..” ಎಂದು ಮಾತು ಆರಂಭಿಸಿದರೆ, “ನಿನ್ನ ಹತ್ರ ಇರೋ ಎರಡು ರೆಕ್ಕೆಗಳನ್ನು ನನಗೆ ಕೊಡು, ದೊಡ್ಡ ಸ್ಟಾರ್ ಆಗಿ ಬೆಳೆಯಬೇಕು ಅನ್ನೋ ಆಸೆ ಇದೆ” ಎಂದು ತ್ರಿವಿಕ್ರಮ್ ಟ್ರೋಫಿ ಜತೆ ಮಾತನಾಡಿದ್ದಾರೆ. ಅದೇ ರೀತಿ ಭವ್ಯಾ ಗೌಡ, ಈ ಶೋನಲ್ಲಿ ಗೆದ್ದರೆ, ಅಪ್ಪನ ಆರೋಗ್ಯ ಸಮಸ್ಯೆಯೂ ದೂರವಾಗಲಿದೆ ಎಂದಿದ್ದಾರೆ.
ಭವ್ಯಾ ಗೌಡ ಕಣ್ಣೀರು..
“ಟ್ರೋಫಿ ಜತೆಗೆ ನನಗೆ ಬರೋ ದುಡ್ಡಿಂದಲೂ ಉಪಯೋಗ ಇದೆ. ವಾಷ್‌ರೂಮ್‌ನಲ್ಲಿ ಬಿದ್ದು ಕುತ್ತಿಗೆ ಭಾಗದ ಧ್ವನಿ ಪೆಟ್ಟಿಗೆಗೆ ಹಾನಿ ಆಗಿದೆ. ನನ್ನ ಕೈಲಿ ಅವರ ಧ್ವನಿಯನ್ನ ಸರಿ ಮಾಡಿಸೋಕೆ ಆಗಿಲ್ವಲ್ಲ ಅನ್ನೋ ಕೊರಗಿದೆ. ಆವತ್ತು ನನ್ನ ಹತ್ತಿರ ದುಡ್ಡು ಇದ್ದಿದ್ದರೆ, ಅಪ್ಪ ಮತ್ತೆ ನೀಟಾಗಿ ಚೆನ್ನಾಗಿರೋರು. ಮೊದಲಿನಂತೆ ಮಾತನಾಡಬಹುದಿತ್ತೇನೋ?” ಎಂದು ಟ್ರೋಫಿ ಮುಂದೆ ಕಣ್ಣೀರಿಟ್ಟಿದ್ದಾರೆ ಭವ್ಯಾ. ಅದೇ ರೀತಿ ರಜತ್, ಉಗ್ರಂ ಮಂಜು, ಮೋಕ್ಷಿತಾ ಸಹ ಟ್ರೋಫಿ ನೋಡಿ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ. ಇಂದಿನ (ಜ. 21) ಸಂಚಿಕೆಯಲ್ಲಿ ಈ ಮಾತುಗಳು ಪ್ರಸಾರವಾಗಲಿವೆ.
ವೋಟಿಂಗ್ ಲೈನ್ ಓಪನ್..
ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಟ್ಟು ಆರು ಜನ ಮಾತ್ರ ಉಳಿದುಕೊಂಡಿದ್ದಾರೆ. ಆ ಆರರಲ್ಲಿ ಹನುಮಂತು, ತ್ರಿವಿಕ್ರಮ್ ಮತ್ತು ಮೋಕ್ಷಿತಾ ಕಳೆದ ವಾರವೇ ಫಿನಾಲೆ ರೇಸ್‌ಗೆ ಬಂದರೆ, ಇನ್ನುಳಿದ ಭವ್ಯಾ ಗೌಡ, ಉಗ್ರಂ ಮಂಜು ಮತ್ತು ರಜತ್ ಈ ವಾರ ಫಿನಾಲೆ ಪ್ರವೇಶಿಸಿ ರೇಸ್‌ನಲ್ಲಿದ್ದಾರೆ. ಈ ಆರು ಜನರ ಪೈಕಿ ವಿನ್ನರ್ ಯಾರು ಎಂಬುದು ಭಾನುವಾರ ಗೊತ್ತಾಗಲಿದೆ. ಅದರಂತೆ, ವೋಟಿಂಗ್ ಲೈನ್ ಸಹ ಓಪನ್ ಆಗಿದೆ. ಅತಿ ಹೆಚ್ಚು ಮತ ಪಡೆದವರು ಈ ಸೀಸನ್‌ನ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ.
