Lakshmi Baramma Serial: ಒಂದೇ ಹೆಸರಲ್ಲಿ ಮೂಡಿಬಂದ ಎರಡು ಧಾರಾವಾಹಿಗಳು; ಹೆಸರಲ್ಲೇ ಇದೆ ಯಶಸ್ಸು
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಒಂದೇ ಹೆಸರಲ್ಲಿ ಮೂಡಿಬಂದ ಎರಡು ಧಾರಾವಾಹಿಗಳು; ಹೆಸರಲ್ಲೇ ಇದೆ ಯಶಸ್ಸು

Lakshmi Baramma Serial: ಒಂದೇ ಹೆಸರಲ್ಲಿ ಮೂಡಿಬಂದ ಎರಡು ಧಾರಾವಾಹಿಗಳು; ಹೆಸರಲ್ಲೇ ಇದೆ ಯಶಸ್ಸು

Lakshmi Baramma Serial: ‘ಲಕ್ಷ್ಮೀ ಬಾರಮ್ಮ’ ಹೆಸರಿನಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ಧಾರಾವಾಹಿಗಳು ಪ್ರಸಾರವಾದವು, ಈಗಲೂ ಲಕ್ಷ್ಮೀ ಬಾರಮ್ಮ ಟಿಆರ್‍‌ಪಿ ಓಟದಲ್ಲಿ ಮುಂದಿರುವ ಧಾರಾವಾಹಿಯೇ ಆಗಿದೆ. ಈ ಎರಡೂ ಧಾರಾವಾಹಿ ಕಥೆಯಲ್ಲಿನ ಸಾಮ್ಯತೆ ಇಲ್ಲಿದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ
ಲಕ್ಷ್ಮೀ ಬಾರಮ್ಮ ಧಾರಾವಾಹಿ (Colors Kannada)

Lakshmi Baramma Serial: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಹಲವು ವರ್ಷಗಳಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಒಂದೇ ಹೆಸರಿನಲ್ಲಿ ಎರಡು ಬೇರೆ ಬೇರೆ ಧಾರಾವಾಹಿಗಳು ತೆರೆ ಕಂಡಿವೆ. ಈ ಹಿಂದೆ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಸಾವಿರಕ್ಕೂ ಹೆಚ್ಚಿನ ಸಂಚಿಕೆಗಳನ್ನು ಪೂರ್ಣಗೊಳಿಸಿತ್ತು, ಇಂದಿಗೂ ಆ ಕಲಾವಿದರನ್ನು ಗುರುತು ಹಿಡಿದು ಮಾತನಾಡಿಸುವ ಜನರಿದ್ದಾರೆ. ಲಚ್ಚಿ, ಗೊಂಬೆ, ಚಂದು ಎಂದು ಮಾತನಾಡಿಸುತ್ತಾರೆ. ಆ ಮಟ್ಟಿಗಿನ ಜನಪ್ರಿಯತೆಯನ್ನು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಗಳಿಸಿತ್ತು. ಇಂದಿಗೂ ಅದೇ ಹೆಸರಿನಲ್ಲಿ ಇನ್ನೊಂದು ಧಾರಾವಾಹಿ ಪ್ರಸಾರವಾಗುತ್ತಿದೆ. ಟಿಆರ್‍‌ಪಿ ಓಟದಲ್ಲೂ ಈ ಧಾರಾವಾಹಿ ಮುಂದಿದೆ. ‘ಲಕ್ಷ್ಮೀ ಬಾರಮ್ಮ’ ಎಂಬ ಹೆಸರು ಹಾಗೂ ಕಥೆ ಎರಡೂ ಸೀರಿಯಲ್ ಗೆಲುವಿಗೆ ಕಾರಣವಾಗುತ್ತಿದೆ.

ಒಂದೇ ಹೆಸರಿನಲ್ಲಿ ಎರಡು ಧಾರಾವಾಹಿ

ಈಗ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್, ಲಕ್ಷ್ಮೀ , ಕೀರ್ತಿ ಎಂಬ ಮೂರು ಮುಖ್ಯ ಪಾತ್ರಗಳಿವೆ. ಈ ಹಿಂದೆ ಪ್ರಸಾರವಾಗುತ್ತಿದ್ದ ಧಾರಾವಾಹಿ ಹಾಗೂ ಈಗ ಪ್ರಸಾರವಾಗುಯತ್ತಿರುವ ಧಾರಾವಾಹಿ ಎರಡರ ಕಥೆಗೂ ಸಾಮ್ಯತೆ ಇದೆ. 4 ಮಾರ್ಚ್ 2013ರಲ್ಲಿ ಈ ಧಾರಾವಾಹಿ ಆರಂಭವಾಗುತ್ತದೆ. 25 ಜನವರಿ 2020ರಲ್ಲಿ ಈ ಧಾರಾವಾಹಿ ಮುಕ್ತಾಯವಾಗಿದೆ. ಈಗ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯು 560 ಎಪಿಸೋಡ್‌ಗಳನ್ನು ಪೂರೈಸಿದೆ.

ಕಥೆಯಲ್ಲಿದೆ ಸಾಮ್ಯತೆ

2013ರಲ್ಲಿ ಆರಂಭವಾಗಿದ್ದ ಧಾರಾವಾಹಿಯಲ್ಲಿ ಚಂದನ್ ಅನಿವಾರ್ಯವಾಗಿ ಲಚ್ಚಿಯನ್ನು ಮದುವೆ ಆಗುತ್ತಾನೆ. ಆದರೆ ಅವನು ಗೊಂಬೆಯನ್ನು ಪ್ರಿತಿಸುತ್ತಾ ಇರುತ್ತಾನೆ. ಲಚ್ಚಿ ಹಾಗೂ ಗೊಂಬೆ ಇಬ್ಬರಿಗೂ ಅನ್ಯಾಯ ಆಗದ ರೀತಿಯಲ್ಲಿ ಅವನು ಜೀವನ ಮಾಡಬೇಕು. ಎಲ್ಲ ವಿಚಾರವನ್ನೂ ಗೊಂಬೆಯಿಂದ ಮುಚ್ಚಿಡಬೇಕು ಎಂಬ ಸಂದರ್ಭ ಎದುರಾಗುತ್ತದೆ. ಯಾಕೆಂದರೆ ಅವನು ಗೊಂಬೆಯನ್ನೂ ಮದುವೆಯಾಗಿರುತ್ತಾನೆ.

ಈಗ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಂದನ್ ಬದಲಾಗಿ ವೈಷ್ಣವ್ ಇದೇ ಸಮಸ್ಯೆಯನ್ನು ಎದುರಿಸುತ್ತಾ ಇದ್ದಾನೆ. ಇಷ್ಟು ದಿನ ಲಕ್ಷ್ಮೀ ಮತ್ತು ಕೀರ್ತಿ ಎಂದು ಹೆರಸಿದ್ದರೂ, ಕೀರ್ತಿ ಹಳೆಯದನ್ನೆಲ್ಲ ಮರೆತ ನಂತರ ಗೊಂಬೆ ಮತ್ತು ಲಚ್ಚಿ ಎಂದು ಹಿಂದಿನ ಧಾರಾವಾಹಿ ಹೆಸರುಗಳನ್ನೇ ಮತ್ತೆ ಬಳಕೆ ಮಾಡಲಾಗುತ್ತಿದೆ. ಇಲ್ಲಿಯೂ ಹಾಗೇ ವೈಷ್ಣವ್ ಈ ಹಿಂದೆ ಕೀರ್ತಿಯನ್ನು (ಗೊಂಬೆ) ಪ್ರೀತಿಸುತ್ತಾ ಇರುತ್ತಾನೆ. ಆದರೆ ಅವನು ಲಕ್ಷ್ಮೀಯನ್ನು ಮದುವೆಯಾಗುವ ಸಂದರ್ಭದಲ್ಲಿ ಕೀರ್ತಿ ಮೇಲೆ ವೈಷ್ಣವ್‌ಗೆ ಪ್ರೀತಿ ಇರುವುದಿಲ್ಲ. ಈ ರೀತಿಯಾಗಿ ಈ ಎರಡೂ ಧಾರಾವಾಹಿಗಳಲ್ಲಿ ಸಾಮ್ಯತೆ ಇದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner