Udit Narayan: ಲೈವ್ ಶೋನಲ್ಲಿ ಮಹಿಳಾ ಅಭಿಮಾನಿ ತುಟಿಗೆ ಮುತ್ತಿಟ್ಟ ಉದಿತ್ ನಾರಾಯಣ್; ಟ್ರೋಲ್ ಆಯ್ತು ವಿಡಿಯೋ
Udit Narayan: ಅತ್ಯಂತ ಜನಪ್ರಿಯ ಹಿಂದಿ ಗಾಯಕರಲ್ಲಿ ಒಬ್ಬರಾದ ಉದಿತ್ ನಾರಾಯಣ್ ತಮ್ಮ ಲೈವ್ ಶೋ ವೇಳೆ ಮಹಿಳಾ ಅಭಿಮಾನಿ ತುಟಿಗೆ ಮುತ್ತಿಟ್ಟ ವಿಡಿಯೋ ಟ್ರೋಲ್ ಆಗುತ್ತಿದೆ.

ಅತ್ಯಂತ ಜನಪ್ರಿಯ ಹಿಂದಿ ಗಾಯಕರಲ್ಲಿ ಒಬ್ಬರಾದ ಉದಿತ್ ನಾರಾಯಣ್ ಮಾಡಿದ ಈ ಒಂದು ಕಾರಣಕ್ಕಾಗಿ ತುಂಬಾ ಟ್ರೋಲ್ ಆಗುತ್ತಿದ್ದಾರೆ. ಸಾಕಷ್ಟು ಉತ್ತಮ ಹಾಡುಗಳನ್ನು ಹಾಡಿ ಜನಮನ ಗೆದ್ದ ಅವರು ವಿದೇಶಗಳಲ್ಲಿಯೂ ತಮ್ಮ ಲೈವ್ ಶೋ ನಡೆಸುತ್ತಾರೆ. ಇದೇ ರೀತಿ ಲೈವ್ ಶೋ ನೀಡುತ್ತಿರುವ ಸಂದರ್ಭದಲ್ಲಿ ಅಭಿಮಾನಿಯೊಬ್ಬಳು ಅವರ ಹತ್ತಿರ ಬಂದು ಫೋಟೋ ತೆಗೆಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಉದಿತ್ ನಾರಾಯಾರಣ್ ಆಕೆಯ ತುಟಿಗೆ ಮುತ್ತಿಟ್ಟಿದ್ದಾರೆ. ಇದೇ ಕಾರಣಕ್ಕೆ ಇವರು ಟ್ರೋಲ್ ಆಗುತ್ತಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಉದಿತ್ ನಾರಾಯಣ್ ವೇದಿಕೆಯಲ್ಲಿ ಪ್ರದರ್ಶನ ನೀಡುವ ಹಲವಾರು ವೀಡಿಯೊಗಳು ಕಳೆದೆರಡು ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿತ್ತು, ಅದರಲ್ಲಿ ವಿಶೇಷವಾಗಿ ಅವರು ತಮ್ಮ ಅಭಿಮಾನಿ ತುಟಿಗೆ ಮುತ್ತಿಟ್ಟ ವಿಡಿಯೋ ಸಾಕಷ್ಟು ಟ್ರೋಲ್ ಆಗುತ್ತಿದೆ. ಈ ವಯಸ್ಸಿಗೆ ಇದೆಲ್ಲ ಬೇಕಿತ್ತಾ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಎಕ್ಸ್‌ನಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡ ಕ್ಲಿಪ್‌ನಲ್ಲಿ, ಉದಿತ್ ಅವರು ‘ಟಿಪ್ ಟಿಪ್ ಬರ್ಸಾ ಪಾನಿ’ ಎಂಬ ಹಾಡನ್ನು ಹಾಡುತ್ತಾ ಇರುತ್ತಾರೆ. ಅದೇ ಸಂದರ್ಭದಲ್ಲಿ ಹಲವಾರು ಮಹಿಳಾ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬೀಳುತ್ತಾರೆ. .ಜನರು ವೇದಿಕೆಯ ಬಳಿ ನಿಂತಾಗ, ಗಾಯಕ ಉದಿತ್ ಮಂಡಿಯೂರಿ ಕುಳಿತುಕೊಂಡು ಸೆಲ್ಫಿ ನೀಡುತ್ತಾರೆ. ಫೋಟೋಗಳನ್ನು ಕ್ಲಿಕ್ ಮಾಡಿದ ನಂತರ ಅಭಿಮಾನಿಯೇ ಉದಿತ್ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಆ ನಂತರ ಉದಿತ್ ಕೂಡ ಮಹಿಳಾ ಅಭಿಮಾನಿಗಳ ಕೆನ್ನೆಗೆ ಮುತ್ತಿಡುತ್ತಾರೆ.
ಹೀಗೆ ಇನ್ನೂ ಒಂದಷ್ಟು ಅಭಿಮಾನಿಗಳು ಅವರ ಮುಂಭಾಗದಲ್ಲಿ ಬಂದು ನಿಲ್ಲುತ್ತಾರೆ. ಆಗ ಇನ್ನೊಬ್ಬ ಅಭಿಮಾನಿ ಬಂದು ಫೋಟೋ ಕ್ಲಿಕ್ಕಿಸಿಕೊಳ್ಳುವ ಸಂದರ್ಭದಲ್ಲಿ ಉದಿತ್ ನಾರಾಯಣ್ ಅವರ ತುಟಿಗೆ ಮುತ್ತಿಟ್ಟಂತೆ ವಿಡಿಯೋದಲ್ಲಿ ಕಾಣಿಸುತ್ತದೆ. ಇನ್ನು ಅಲ್ಲಿನ ಸೆಕ್ಯೂರಿಟಿ ಅವರೆಲ್ಲರನ್ನೂ ಅಲ್ಲಿಂದ ಕಳಿಸುವ ಪ್ರಯತ್ನ ಮಾಡಿದರೂ ಹಾಡು ಹೇಳುತ್ತಲೇ ಅವರನ್ನು ಅಲ್ಲೇ ನಿಲ್ಲುವಂತೆ ಮತ್ತು ತಮ್ಮೆಡೆಗೆ ಬರುವಂತೆ ಕೈ ಸನ್ನೆ ಮಾಡಿದ ದೃಶ್ಯವೂ ಸೆರೆಯಾಗಿದೆ. ಆದರೆ ವಿಡಿಯೋ ಅಷ್ಟು ಸ್ಪಷ್ಟವಾಗಿಲ್ಲ. ಅಲ್ಲಿ ಏನಾಗಿದೆ ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ. ಹೀಗೆ ವೈರಲ್ ಆದ ವಿಡಿಯೋ ಇಲ್ಲಿದೆ ಗಮನಿಸಿ.
ಇನ್ನು ಸಾಕಷ್ಟು ಜನ ಈ ವಿಡಿಯೋಗೆ ಕಾಮೆಂಟ್ ಮಾಡಿದ್ಧಾರೆ. ಉದಿತ್ ಜೀ.. ನನ್ನ ಕಣ್ಣಿನಿಂದ ಇದನ್ನು ನೋಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಇದು ಅಸಹ್ಯಕರವಾಗಿದೆ ಎಂದು ಕಾಮೆಂಟ್ ಮಾಡಿದ್ಧಾರೆ. ನಿಮ್ಮ ಮೇಲೆ ಗೌರವ ಇತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ಧಾರೆ. ಹೀಗೆ ಸಾಕಷ್ಟು ನಕಾರಾತ್ಮಕ ಕಾಮೆಂಟ್‌ಗಳು ಈ ವಿಡಿಯೋಗೆ ಬಂದಿದೆ. ಇನ್ನು ಕೆಲವರು ಇದನ್ನು ಏಐ ಕ್ರಿಯೇಟ್ ಮಾಡಿದ ವಿಡಿಯೋ ಎಂದೂ ಹೇಳಬಹುದು ಎನ್ನುತ್ತಾ ಹಾಸ್ಯ ಮಾಡಿದ್ದಾರೆ. ಬಹಳ ವೈರಲ್ ಮತ್ತು ಟ್ರೋಲ್ ಆಗಿರುವ ಸಂಗತಿ ಇದಾಗಿದೆ.

ವಿಭಾಗ