ಉಡುಪಿ ಅಷ್ಟಮಿಗೆ ರಂಗು ತಂದ ಆವೇಶಂ ರಂಗ: ಫಹಾದ್ ಫಾಸಿಲ್ ಅಭಿಮಾನಿಗಳಿಗೆ ಖುಷಿಯೋ ಖುಷಿ, ಉಂದು ಕರಾವಳಿ ಬ್ರೋ
Aavesham Ranga: ಉಡುಪಿ ಅಷ್ಟಮಿ ಸಂಭ್ರಮದಲ್ಲಿ ಆವೇಶಂನ ರಂಗ ನೆನಪು ತರಿಸುವಂತಹ ಕಾರ್ಯಕ್ರಮವೊಂದು ನಡೆದಿದೆ. ಫಹಾದ್ ಫಾಸಿಲ್ ವೇಷಧಾರಿಯೊಬ್ಬರು ಎಲ್ಲರನ್ನೂ ರಂಜಿಸಿದ್ದಾರೆ. . ವಿಸ್ಮಯ ಬನ್ನಂಜೆ ಟೀಂನವರು ಫಹಾದ್ ಫಾಸಿಲ್‌ನಂತೆ ತದ್ರೂಪಿ ವ್ಯಕ್ತಿಯೊಬ್ಬರ ಮೂಲಕ ಕೃಷ್ಣ ಅಷ್ಟಮಿಗೆ ಮೆರಗು ತಂದಿದ್ದಾರೆ.
ಉಡುಪಿಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಕೃಷ್ಣಮಠದಲ್ಲಿ ವಿಟ್ಲಪಿಂಡಿಯ ಸಂಭ್ರಮ. ಉಡುಪಿ ಜಿಲ್ಲೆಯ ವಿವಿಧೆಡೆ ಕೃಷ್ಣಾಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿತ್ತು. ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಅಷ್ಟಮಿ ಸಂಭ್ರಮದ ಕೆಲವು ವಿಡಿಯೋಗಳು ವೈರಲ್ ಆಗುತ್ತಿವೆ. ಅಂದಹಾಗೆ, ಆವೇಶಂ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದಿರುವ ಜನಪ್ರಿಯ ಮಲಯಾಳಂ ನಟ ಫಹಾದ್ ಫಾಸಿಲ್ ಅವರು ಉಡುಪಿಗೆ ಬಂದಿದ್ರ ಎಂಬ ಪ್ರಶ್ನೆಯೂ ಉಂಟಾಗಿದೆ. ಅಷ್ಟಮಿಯ ಸಂಭ್ರಮದಲ್ಲಿ ಆವೇಶಂನ ರಂಗನಾಗಿ ಫಹಾದ್ ಫಾಸಿಲ್ ಸಖತ್ ಡ್ಯಾನ್ಸ್ ಮಾಡಿದ್ದಾರೆ.
ಉಂದು ಕರಾವಳಿ ಬ್ರೋ
ನಿಜ ಏನೆಂದರೆ, ಫಹಾದ್ ಫಾಸಿಲ್ ಉಡುಪಿ ಅಷ್ಟಮಿ ಸಂಭ್ರಮದಲ್ಲಿ ಭಾಗಿಯಾಗಿಲ್ಲ. ವಿಸ್ಮಯ ಬನ್ನಂಜೆ ಟೀಂನವರು ಫಹಾದ್ ಫಾಸಿಲ್‌ನಂತೆ ತದ್ರೂಪಿ ವ್ಯಕ್ತಿಯೊಬ್ಬರ ಮೂಲಕ ಕೃಷ್ಣ ಅಷ್ಟಮಿಗೆ ಮೆರಗು ತಂದಿದ್ದಾರೆ. ಆವೇಶಂನ ರಂಗನಂತೆ ಬಿಳಿ ಉಡುಪು, ಕೊರಳಿಗೆ ಆಭರಣ, ಕಪ್ಪು ಕನ್ನಡಕ ಧರಿಸಿರುವ ನಕಲಿ ಫಹಾದ್ ಫಾಸಿಲ್ ಮಿಂಚಿದ್ದಾರೆ. ಥೇಟ್ ರಂಗನಂತೆ ಪೋಸ್ ನೀಡಿದ್ದಾರೆ. ಸಖತ್ ಡ್ಯಾನ್ಸ್ ಮಾಡಿದ್ದಾರೆ. ಇವರೊಂದಿಗೆ ಗೊಂಬೆ ವೇಷಗಳು ಕುಣಿದು ನೋಡುಗರನ್ನು ರಂಜಿಸಿವೆ.
ಈ ವಿಡಿಯೋಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. "ನಾನು ನಿಜವಾದ ರಂಗ, ಫಹಾದ್ ಬಂದಿದ್ದಾನೆ ಎಂದುಕೊಂಡಿದ್ದೆ" "ಉಂದು ಕರಾವಳಿ ಬ್ರೋ, ಇಲ್ಲಿ ಎಲ್ಲವೂ ಸಾಧ್ಯ" "ಮಂಗಳೂರು ಬಿಗಿನರ್‌ಗಳಿಗಲ್ಲ" "ಇವನು ಕಡಿಮೆಯ ರಂಗ" "ಸಚಿನ್ ಬಾಯ್ ಸೂಪರ್, ಚೆನ್ನಾಗಿ ಮಾಡಿದ್ದೀರಿ" "ಮೀಸೆ ಇರುವ ರಂಗಾ" ಎಂದೆಲ್ಲ ನೂರಾರು ಕಾಮೆಂಟ್‌ಗಳು ಈ ವಿಡಿಯೋಗೆ ಬಂದಿವೆ. ಕೆಲವರು ಅಸಲಿ ಫಹಾದ್‌ಗೆ ಟ್ಯಾಗ್ ಮಾಡಿದ್ದಾರೆ. ಫಹಾದ್ ಫಾಸಿಲ್ ಕಡೆಯಿಂದ ಯಾವುದೇ ರಿಪ್ಲೈ ಬಂದಿಲ್ಲ.
ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಸಂಭ್ರಮದಿಂದ ನಡೆದಿದೆ. ವಿವಿಧ ಸಂಘಸಂಸ್ಥೆಗಳು, ಯುವಕ ಮಂಡಲಗಳು ಮೊಸರು ಕುಡಿಕೆ ಉತ್ಸವ, ಮುದ್ದುಕೃಷ್ಣ ಸ್ಪರ್ಧೆಗಳನ್ನು ಆಯೋಜಿಸಿತ್ತು. ಅಲ್ಲಲ್ಲಿ ವಿವಿಧ ತಂಡಗಳು ಕಾರ್ಯಕ್ರಮಗಳನ್ನು ನೀಡಿವೆ. ತಾಸೆ, ಡೋಲುಗಳ ಸದ್ದಿಗೆ ಎಲ್ಲರು ಪುಳಕಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ರಸ್ತೆ ಗುಂಡಿ ಕುರಿತು ಸಂಬಂಧಪಟ್ಟವರನ್ನು ಸೆಳೆಯುವಂತಹ ಕೆಲಸವೂ ಆಗಿದೆ.
ಫಹಾದ್ ಫಾಸಿಲ್ ಕುರಿತು
ಮಲಯಾಳಂ ಚಿತ್ರರಂಗದ ಪ್ರತಿಭಾನ್ವಿತ ನಟ ಫಹಾದ್ ಫಾಸಿಲ್ ಸಿನಿಮಾಗಳಿಗೆ ದೊಡ್ಡಮಟ್ಟದ ಪ್ರೇಕ್ಷಕ ವರ್ಗವಿದೆ. ಯಾವುದೇ ರೀತಿಯ ಪಾತ್ರಗಳಿಗೂ ಸೈ ಎಣಿಸುವಂತೆ ನಟಿಸುತ್ತಾರೆ.
ಇವರ ಪೂರ್ಣ ಹೆಸರು ಅಬ್ದುಲ್ ಹಮೀದ್ ಮೊಹಮ್ಮದ್ ಫಹಾದ್ ಫಾಜಿಲ್. ಇವರು ನಟ ಮಾತ್ರವಲ್ಲದೆ ಚಿತ್ರ ನಿರ್ಮಾಪಕರಾಗಿಯೂ ಫೇಮಸ್. ಮಲಯಾಳಂ ಮಾತ್ರವಲ್ಲದೆ ತಮಿಳು ಚಿತ್ರಗಳನ್ನೂ ಮಾಡಿದ್ದಾರೆ. ಇವರಿಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ರಾಜ್ಯ ಪ್ರಶಸ್ತಿಗಳು, ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿಗಳು ದೊರಕಿವೆ.
ಫಹಾದ್ ಫಾಸಿಲ್ ಸಿನಿಮಾಗಳು
ಕೈಯೆತ್ತುಂ ದೂರತ್ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಚಪ್ಪಾ ಕುರಿಶು, ಅಕಮ್, ಡೈಮಾಂಡ್ ನೆಕ್ಲೇಸ್, ಅನ್ನಯಮ್ ರಸೂಲುಮ್ ,ಅಮೆನ್, ನಾಥೋಲಿ ಓರು ಚೆರಿಯಾ ಮೀನಲ್ಲಾ, ರೆಡ್ ವೈನ್, ಉತ್ತರ 24, ಒರು ಭಾರತೀಯ ಪ್ರಣಯಕಥಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾನ್ಸೂನ್ ಮ್ಯಾಂಗೋಸ್, ಅಯಲ್ ನಜನಲ್ಲ, ಹರಾಮ್, ಮರಿಯಮ್ ಮುಕ್ಕು, ಮಹೇಶಿಂಟೆ ಪ್ರತಿಕಾರಮ್, ಟೇಕ್ ಆಫ್, ತೊಂಡಿಮುತಲಂ ದೃಕ್ಷಾಕ್ಷಿಯಮ್, ವೆಲೈಕರಣ್ (ತಮಿಳು ಚಿತ್ರ) ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ವರತನ್, ನ್ಯಾನ್ ಪ್ರಕಾಶನ್, ಕುಂಬಳಂಗಿ ನೈಟ್ಸ್, ಅತಿರನ್, ಸೂಪರ್ ಡಿಲಕ್ಸ್ ಸಿನಿಮಾಗಳು ಗಮನ ಸೆಳೆದವು. ಟ್ರಾನ್ಸ್, ಇ ಧೂಮಮ್, ಆವೇಶಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.