UI OTT Release Date: ಉಪೇಂದ್ರ ಯುಐ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ, ಯಾವ ಒಟಿಟಿಯಲ್ಲಿ? ನಿರೀಕ್ಷಿತ ದಿನಾಂಕ ಹೀಗಿದೆ
UI OTT Release Date: ಉಪೇಂದ್ರ ನಟಿಸಿ, ನಿರ್ದೇಶಿಸಿದ ಯುಐ ಸಿನಿಮಾ, ಚಿತ್ರಮಂದಿರದಲ್ಲಿ ಈಗಾಗಲೇ ಸದ್ದು ಮಾಡುತ್ತಿದೆ. ಡಿ. 20ರಂದು ತೆರೆಗೆ ಬಂದಿದ್ದ ಯುಐ, ಕಲೆಕ್ಷನ್ ವಿಚಾರದಲ್ಲಿಯೂ ಒಳ್ಳೆಯ ಕಮಾಯಿಯನ್ನೇ ಮುಂದುವರಿಸಿದೆ. ಹೀಗಿರುವಾಗಲೇ ಇದೇ ಚಿತ್ರದ ಒಟಿಟಿ ಬಿಡುಗಡೆಯ ನಿರೀಕ್ಷಿತ ದಿನಾಂಕ ಯಾವಾಗ ಮತ್ತು ಯಾವ ಒಟಿಟಿ? ಹೀಗಿದೆ ವರದಿ.
UI OTT Release Date: ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶಕರಾಗಿಯೂ ಕಂಬ್ಯಾಕ್ ಮಾಡಿದ ಸಿನಿಮಾ ಎಂದರೆ ಅದು UI. ಡಿಸೆಂಬರ್ 20ರಂದು ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬಂದಿತ್ತು. ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿದ್ದ ಈ ಚಿತ್ರ, ನೋಡುಗರಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ ಚಿತ್ರಮಂದಿರದಲ್ಲಿ ಯಶಸ್ವಿಯಾಗಿಯೇ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಒಟಿಟಿ ಬಿಡುಗಡೆ ಯಾವಾಗ? ಹೀಗಿದೆ ಮಾಹಿತಿ.
ಡಿಸೆಂಬರ್ 20ರಂದು ಬಿಡುಗಡೆ ಆಗಿದ್ದ ಉಪೇಂದ್ರ ಯುಐ ಸಿನಿಮಾ, ಕೆಲಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿಯನ್ನೇ ಈ ಸಿನಿಮಾ ಮಾಡುತ್ತಿದೆ. ಈ ವರೆಗೂ ಬರೋಬ್ಬರಿ 30 ಪ್ಲಸ್ ಕೋಟಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಹಿತಿ ನೀಡುವ ಸ್ಯಾಕ್ನಿಲ್ ವೆಬ್‌ತಾಣ ತಿಳಿಸಿದೆ. ಆದರೆ, ವಿತರಕರ ವಲಯದ ಅಂದಾಜಿನ ಪ್ರಕಾರ ಸಿನಿಮಾ ಬಿಡುಗಡೆಯಾದ 12 ದಿನಗಳಲ್ಲಿ 50 ಪ್ಲಸ್ ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.
ಯುಐ ಸಿನಿಮಾದ ಈ ವರೆಗಿನ ಕಲೆಕ್ಷನ್ ಎಷ್ಟು?
ಸ್ಯಾಕ್ನಿಲ್ ಮಾಹಿತಿ ಪ್ರಕಾರ, ಕನ್ನಡದಲ್ಲಿಯೇ ಈ ಸಿನಿಮಾ 26 ಕೋಟಿ ಗಳಿಕೆ ಮಾಡಿದೆ. ತೆಲುಗು ವರ್ಷನ್‌ನಲ್ಲಿ 4.17 ಕೋಟಿ ರೂ. ಕಲೆಕ್ಷನ್ ಬಂದಿದೆ. ತಮಿಳಿನಲ್ಲಿ ಈ ಸಿನಿಮಾ ಕೇವಲ 14 ಲಕ್ಷ ಕಲೆಕ್ಷನ್ ಮಾಡಿದ್ರೆ, ಹಿಂದಿಯಲ್ಲಿಯೂ ಹೇಳಿಕೊಳ್ಳುವ ಮೊತ್ತವನ್ನು ಬಾಚಿಕೊಂಡಿಲ್ಲ. ಆದರೆ ಕರ್ನಾಟಕದಲ್ಲಿ ದೊಡ್ಡ ರೆಸ್ಪಾನ್ಸ್ ಸಿಕ್ಕರೆ ವಿದೇಶದಲ್ಲಿಯೂ ಈ ಸಿನಿಮಾ ಕಮಾಲ್ ಮಾಡಿದೆ. ಹೀಗಿರುವಾಗಲೇ ಇದೀಗ ಈ ಚಿತ್ರದ ಒಟಿಟಿ ಬಿಡುಗಡೆಯ ವಿಚಾರ ಮುನ್ನೆಲೆಗೆ ಬಂದಿದೆ. ಹಾಗಾದರೆ, ಯಾವ ವೇದಿಕೆ ಮತ್ತು ಯಾವಾಗ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ?
ಯಾವ ಒಟಿಟಿಯಲ್ಲಿ UI?
ಸದ್ಯದ ಮಾಹಿತಿ ಪ್ರಕಾರ ಸನ್ ನೆಕ್ಸ್ಟ್ (Sun Nxt OTT) ಒಟಿಟಿ ಯುಐ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಎಂಬ ಟಾಕ್ ಜೋರಾಗಿದೆ. ಅದರಂತೆ ನಿರೀಕ್ಷಿತ ದಿನಾಂಕ ಹೊರಬಿದ್ದಿದ್ದು, ಇದೇ ತಿಂಗಳ 30ರಂದು ಸನ್ ನೆಕ್ಸ್ಟ್ ಒಟಿಟಿಯಲ್ಲಿ ಈ ಸಿನಿಮಾ ಪ್ರಸಾರವಾಗಲಿದೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಸನ್ ನೆಕ್ಸ್ಟ್ ಒಟಿಟಿ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ಹಿಂದೆ ಕನ್ನಡದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸಹ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡ ಬಳಿಕವಷ್ಟೇ ಸನ್ ನೆಕ್ಸ್ಟ್ ಒಟಿಟಿಗೆ ಆಗಮಿಸಿತ್ತು.
ಅಂದಹಾಗೆ, UI ಸಿನಿಮಾವನ್ನು ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಜಿ. ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು (ಲಹರಿ ವೇಲು), ಜಿ. ರಮೇಶ್, ಜಿ. ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದರೆ, ಸಾಧುಕೋಕಿಲ, ಮುರಳಿ ಶರ್ಮಾ, ಇಂದ್ರಜಿತ್ ಲಂಕೇಶ್, ನಿಧಿ ಸುಬ್ಬಯ್ಯ, ಓಂ ಸಾಯಿ ಪ್ರಕಾಶ್, ಗುರುಪ್ರಸಾದ್, ರವಿ ಶಂಕರ್ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
----
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope