Upcoming Movie: ಮ್ಯಾಕ್ಸ್ ಬಿಡುಗಡೆಯ ಪರಿಣಾಮ, ರಿಷಿ ಅಭಿನಯದ ರುದ್ರ ಗರುಡಾ ಪುರಾಣ ಸಿನಿಮಾ ರಿಲೀಸ್ ಮುಂದೂಡಿಕೆ
Upcoming Kannada Movie: ರುದ್ರ ಗರುಡಾ ಪುರಾಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳು ಈ ತಿಂಗಳ ಅಂತ್ಯದೊಳಗೆ ಬಿಡುಗಡೆಯಾಗುವ ಕನಸು ಕಾಣುತ್ತಿದ್ದವು. ಆದರೆ, ಉಪೇಂದ್ರ ನಟನೆಯ ಯುಐ, ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಎಂಬ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾಗಲಿದೆ. ಹೀಗಾಗಿ, ರುದ್ರ ಗರುಡಾ ಪುರಾಣ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.
Upcoming Kannada Movie: ಕೆಲವು ವಾರಗಳ ಹಿಂದೆ ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗಲು ಹಲವು ಸಿನಿಮಾಗಳನ್ನು ಲಿಸ್ಟ್ ಮಾಡಲಾಗಿತ್ತು. ಮ್ಯಾಕ್ಸ್ ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟವಾಗುವ ಮುನ್ನವೇ ಈ ಸಿನಿಮಾಗಳನ್ನು ಬಿಡುಗಡೆ ಮಾಡಲು ಲಿಸ್ಟ್ ಮಾಡಲಾಗಿತ್ತು. ಉಪೇಂದ್ರ ನಟನೆಯ ಯುಐ ಸಿನಿಮಾ ಡಿಸೆಂಬರ್ 20ರಂದು ರಿಲೀಸ್ ಆಗಲಿದೆ. ಹೀಗಾಗಿ, ಡಿಸೆಂಬರ್ 27ರಂದು ರುದ್ರ ಗರುಡಾ ಪುರಾಣ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಇದೇ ಸಮಯದಲ್ಲಿ ಪ್ರಜ್ವಲ್ ದೇವರಾಜ್ ನಟನೆಯ ರಾಕ್ಷಸ ಸಿನಿಮಾ ಕೂಡ ಅಂದೇ ಬಿಡುಗಡೆಯಾಗಲು ಲಿಸ್ಟ್ ಆಗಿತ್ತು. ಆದರೆ, ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾದ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗುವ ಕಾರಣ ರುದ್ರ ಗರುಡಾ ಪುರಾಣಕ್ಕೆ ಹೊಸ ದಿನಾಂಕ ಫಿಕ್ಸ್ ಮಾಡಲಾಗಿದೆ.
ಗಣರಾಜ್ಯದಂದು ರುದ್ರ ಗರುಡಾ ಪುರಾಣ ಬಿಡುಗಡೆ
ಎರಡು ಬಿಗ್ ಬಜೆಟ್ ಕನ್ನಡ ಸಿನಿಮಾಗಳು ಬಿಡುಗಡೆಯಾಗುವ ಕಾರಣ ಈ ವರ್ಷದ ಕೊನೆಗೆ ಬಿಡುಗಡೆಯಾಗಬೇಕಿದ್ದ ಹಲವು ಸಿನಿಮಾಗಳು ಮುಂದಿನ ವರ್ಷ ಬಿಡುಗಡೆಯಾಗಲಿವೆ. ರುದ್ರ ಗರುಡಾ ಪುರಾಣ ಸಿನಿಮಾವು ಜನವರಿ 24, 2025ರಂದು ಬಿಡುಗಡೆಯಾಗಲಿದೆ. ಸಂಕ್ರಾಂತಿ/ಪೊಂಗಲ್ ಬಳಿಕ ಎರಡು ವಾರ ಕಳೆದು ಈ ಸಿನಿಮಾ ರಿಲೀಸ್ ಆಗಿಲಿದೆ.
ರುದ್ರ ಗರುಡಾ ಪುರಾಣ ಎನ್ನುವುದು ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ರಿಷಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಕೆಎಸ್ ನಂದೀಶ್ ನಿರ್ದೇಶನದ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ನಿರ್ದೇಶಕರು ಡಿಯರ್ ವಿಕ್ರಮ್ ಎಂಬ ಸಿನಿಮಾ ಮಾಡಿದ್ದರು. ಅದು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಪಾನ್ ಆಮ್ ಫ್ಲೈಟ್ 914 ಸಿನಿಮಾದಿಂದ ಸ್ಫೂರ್ತಿ ಪಡೆದು ರುದ್ರ ಗರುಡಾ ಪುರಾಣ ನಿರ್ಮಿಸಿದ್ದಾರೆ. 1955ರಲ್ಲಿ ಟೇಕಾಪ್ ಆದ ವಿಮಾನವು ಯಾವುದೇ ಸುಳಿವು ಸಿಗದಂತೆ ಕಾಣೆಯಾಗಿತ್ತು. ಮೂರು ದಶಕಗಳ ಬಳಿಕ ಈ ವಿಮಾನ ಪತ್ತೆಯಾಗಿತ್ತು. ಇದೇ ರೀತಿಯ ಕಥೆ ರುದ್ರ ಗರುಡಾ ಪುರಾಣದಲ್ಲಿಯೂ ಇರುವ ಸೂಚನೆಯಿದೆ.
ಈ ಸಿನಿಮಾದಲ್ಲಿ ರಿಷಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಮಂತ್ರಿಯೊಬ್ಬರ ಕಾಣೆಯಾದ ಮಗನನ್ನು ಹುಡುಕುವ ಟಾಸ್ಕ್ ಕೈಗೆತ್ತಿಕೊಳ್ಳತ್ತಾರೆ. ಮಂತ್ರಿಯ ಮಗ ತನ್ನ ಗೆಳತಿಯ ಜತೆಗೆ ಬಸ್‌ನಲ್ಲಿ ರಹಸ್ಯ ಪ್ರವಾಸ ಕೈಗೊಂಡಿಡುತ್ತಾನೆ. ಈ ಬಸ್ ಕಾಲು ಶತಮಾನಗಳಿಂದ ಈ ದಾರಿಯಲ್ಲಿ ಕಾರ್ಯ ನಿರ್ವಹಿಸುತ್ತ ಇರಲಿಲ್ಲ. ಇಲ್ಲಿ ಒಂದು ಟ್ರಾಜಿಕ್ ಘಟನೆ ನಡೆಯುತ್ತದೆ. ಎಲ್ಲರ ದೃಷ್ಟಿಯಲ್ಲಿ ಅಸ್ತಿತ್ವದಲ್ಲಿ "ಇಲ್ಲದ" ಬಸ್‌ನಲ್ಲಿ ಕಾಣೆಯಾದ ಮಂತ್ರಿಯ ಮಗ ಮತ್ತು ಆತನ ಗರ್ಲ್‌ಫ್ರೆಂಡ್‌ನನ್ನು ಹುಡುಕುವ ಹೊಣೆ ರಿಷಿ ಪಾಲಾಗುತ್ತದೆ.
ಈ ಸಿನಿಮಾದಲ್ಲಿ ಪ್ರಿಯಾಂಕಾ ಕುಮಾರ್, ವಿನೋದ್ ಆಳ್ವ, ಅವಿನಾಶ್, ಕೆ ಎಸ್ ಶ್ರೀಧರ್, ಗಿರಿ ಶಿವಣ್ಣ, ಶಿವರಾಜ್ ಕೆ ಆರ್ ಪೇಟೆ, ಅಶ್ವಿನಿ ಗೌಡ, ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು ಸೇರಿದಂತೆ ಮುಂತಾದವರು ನಟಿಸಿದ್ದಾರೆ.