ಕ್ಲಾಂತ ನೋಡ್ತಿರಾ, ರಂಗಸಮುದ್ರ ಕಡಲ್‌ಗೆ ಹೋಗ್ತಿರ, ಅಟಲ್ ಕಥೆ ನೋಡೋದ್ಯಾವಾಗ, ಬೆಂಬಿಡದೆ ಇರುತ್ತ ಬರ್ಬರಿಕ; ನಾಳೆ ಬಿಡುಗಡೆಯಾಗುವ ಸಿನಿಮಾಗಳು
January 19 movie releases 2024: ಜನವರಿ 19ರಂದು ಸ್ಯಾಂಡಲ್‌ವುಡ್‌ನಲ್ಲಿ ರಂಗಸಮುದ್ರ, ಬರ್ಬರಿಕ, ಮತ್ತೆಮತ್ತೆ, ಕ್ಲಾಂತ, ರವಿ ಬಸ್ರೂರ್ ನಿರ್ದೇಶನದ ಕಡಲ್ ಸಿನಿಮಾಗಳು ಬಿಡುಗಡೆಯಾಗಲಿವೆ. ಹಿಂದಿಯಲ್ಲಿ ಬಹುನಿರೀಕ್ಷಿತ ಮೇನ್ ಅಟಲ್ ಹೂನ್ ಸಿನಿಮಾ ರಿಲೀಸ್ ಆಗಲಿದೆ. ಮಲಯಾಳಂನಲ್ಲೂ ಹಲವು ಚಿತ್ರಗಳು ಬಿಡುಗಡೆಯಾಗ್ತ ಇವೆ.
ಸ್ಯಾಂಡಲ್‌ವುಡ್‌ನಲ್ಲಿ ಮುಂದಿನ ತಿಂಗಳು ಹತ್ತು ಹಲವು ಸಿನಿಮಾಗಳು ಬಿಡುಗಡೆಯಾಗಲು ಕಾಯುತ್ತಿವೆ. ಮುಂದಿನ ಶುಕ್ರವಾರವೂ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ. ಆದರೆ, ಈ ವಾರ ಕನ್ನಡದಲ್ಲಿ ಬೆರಳೆಣಿಕೆಯ ಸಿನಿಮಾಗಳು ಮಾತ್ರ ಬಿಡುಗಡೆಯಾಗಲಿವೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಕಡಲ್, ಮತ್ತೆ ಮತ್ತೆ ಎಂಬ ಕನ್ನಡ ಸಿನಿಮಾಗಳು ನಾಳೆ ಬಿಡುಗಡೆಯಾಗಲಿದೆ. ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಲವು ಸಿನಿಮಾಗಳು ನಾಳೆ ಬಿಡುಗಡೆಯಾಗಲಿವೆ.
ಶುಕ್ರವಾರ ಬಿಡುಗಡೆಯಾಗಲಿರುವ ಕನ್ನಡ ಸಿನಿಮಾಗಳು
ಕಡಲ್ (ರವಿ ಬಸ್ರೂರು ಸಿನಿಮಾ)
ಸ್ಯಾಂಡಲ್‌ವುಡ್‌ನ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಕಡಲ್ ಹೆಸರಿನ ಸಿನಿಮಾವೊಂದನ್ನು ನಿರ್ದೇಶಿಸಿದ್ದು, ಈ ಸಿನಿಮಾ ಜನವರಿ 19ರಂದು ಬಿಡುಗಡೆಯಾಗುತ್ತಿದೆ. ರವಿ ಬಸ್ರೂರು ಈಗಾಗಲೇ ಗರ್ ಗರ್ ಮಂಡಲ, ಬಿಲಿಂದರ್, ಕಟಕ, ಗಿರ್ಮಿಟ್‌ನಂತಹ ಸಿನಿಮಾಗಳನ್ನು ಮಾಡಿ ನಿರ್ದೇಶನದಲ್ಲಿ ಸೈ ಎನಿಸಿಕೊಂಡಿದ್ದಾರೆ.
ರಂಗ ಸಮುದ್ರ
ರಂಗಾಯಣ ರಘು ಮತ್ತು ಸಂಪತ್ ರಾಜ್ ಸೇರಿದಂತೆ ಪ್ರಮುಖ ನಟರು ನಟಿಸಿರುವ ರಂಗ ಸಮುದ್ರ ಜನವರಿ 19ರಂದು ಬಿಡುಗಡೆಯಾಗುತ್ತಿದೆ. ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೋಣನೂರು ಈ ಸಿನಿಮಾ ನಿರ್ಮಿಸಿದ್ದಾರೆ.
ಕ್ಲಾಂತ
ತುಳುನಾಡಿನವರೇ ಸೇರಿ ನಿರ್ಮಾಣ ಮಾಡಿರೋ ಕ್ಲಾಂತ ಸಿನಿಮಾ ಜನವರಿ 19ರಂದು ಬಿಡುಗಡೆಯಾಗಿದೆ. ಈ ಸಿನಿಮಾ ಟೀಸರ್, ಟ್ರೈಲರ್, ಹಾಡುಗಳ ಮೂಲಕ ಭಾರೀ ಸದ್ದು ಮಾಡಿತ್ತು. ವೈಭವ್ ಪ್ರಶಾಂತ್ “ಕ್ಲಾಂತ’ ಸಿನಿಮಾವನ್ನು ನಿರ್ದೇಶಿಸಿದ್ದು, ಸಿನಿಮಾಕ್ಕೆ ಮೋಹನ್ ಲೋಕನಾಥನ್ ಛಾಯಾಗ್ರಹಣ, ಪಿ. ಆರ್. ಸೌಂದರ ರಾಜ್ ಸಂಕಲನವಿದೆ.
ಬರ್ಬರಿಕ
ಬರ್ಬರಿಕ ಹೆಸರಿನ ಸಿನಿಮಾವೊಂದು ಬುಕ್ ಮೈ ಶೋದಲ್ಲಿ ಹಲವು ವಾರಗಳಿಂದ ಬಿಡುಗಡೆಯಾಗುವ ಲಿಸ್ಟ್‌ನಲ್ಲಿತ್ತು. ಇದೀಗ ಈ ಸಿನಿಮಾ ಜನವರಿ 19ರಂದು ಬಿಡುಗಡೆಯಾಗಲಿದೆ. ಶಿಕ್ಷಣ ಮತ್ತು ಆಸ್ಪತ್ರೆ ವ್ಯವಸ್ಥೆ ಕುರಿತು ಈ ಚಿತ್ರ ಬೆಳಕು ಚೆಲ್ಲಲಿದೆ. ಸ್ಕಂದ ಅಶೋಕ್ ಚಿತ್ರದ ಹೀರೋ. ಸಿರಿರಾಜು ನಾಯಕಿ. ಜೊತೆಜೊತೆಯಲಿ ಸೀರಯಲ್‌ನ ಬಿಎಂ ವೆಂಕಟೇಶ್, ಬಲರಾಜವಾಡಿ, ಯುಮುನಾ ಶ್ರೀನಿಧಿ, ಚಿರಾಗ್, ಮಡಿವಾಳಯ್ಯ, ಕಾವ್ಯ ಪ್ರಕಾಶ್, ಶೈಲೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಮತ್ತೆ ಮತ್ತೆ
ಪತ್ರಿಕೋದ್ಯಮ ಮುಗಿಸಿ, ಸಿನಿಮಾ ಮಾಡಲು ಹೊರಟ ಐವರು ವಿದ್ಯಾರ್ಥಿಗಳ ಸುತ್ತ ನಡೆಯುವ ಕಥೆ ಹೊಂದಿದ ಚಿತ್ರವೊಂದು ಜನವರಿ 19 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮತ್ತೆ ಮತ್ತೆ ಎಂಬ ಹೆಸರಿನ ಈ ಸಿನಿಮಾವನ್ನು ಲೆಕ್ಚರರ್ ಡಾ.ಅರುಣ್ ಹೊಸಕೊಪ್ಪ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಬಂಡವಾಳ ಎಲ್ಲವೂ ಇವರದ್ದೇ. ಅಂದಹಾಗೆ ಈ ಚಿತ್ರಕ್ಕೆ "ಪ್ರೊಡ್ಯೂಸರ್ ಬೇಕಾಗಿದ್ದಾರೆ" ಎಂಬ ಟ್ಯಾಗ್‌ಲೈನ್ ಅಥವಾ ಅಡಿಬರಹ ಇದೆ.
ನಾಳೆ ಬಿಡುಗಡೆಯಾಗುವ ಮಲಾಯಳಂ ಸಿನಿಮಾಗಳು
- ಮಾಯಾವನಂ
- ಡೆವಿಲ್ ಹಂಟರ್ಸ್
- ವಿವೇಕಾನಂದನ್ ವಿರಳನು
- ಪಿನ್ನಿಲ್ ಓರಲ್
- ಪೆಪಟ್ಟಿ
ಜನವರಿ 19ರಂದು ಬಿಡುಗಡೆಯಾಗುವ ತಮಿಳು ಸಿನಿಮಾಗಳು
- ಯಾವುದೂ ಇಲ್ಲ
ನಾಳೆ ಬಿಡುಗಡೆಯಾಗುವ ತೆಲುಗು ಸಿನಿಮಾಗಳು
- ಯಾವುದೂ ಇಲ್ಲ
ನಾಳೆ ಬಿಡುಗಡೆಯಾಗುವ ಹಿಂದಿ ಸಿನಿಮಾಗಳು
- ಮೇನ್ ಅಟಲ್ ಹೂನ್ (ಅಟಲ್ ಬಿಹಾರಿ ವಾಜಪೇಯಿ ಜೀವನಚರಿತ್ರೆ)
ಮೇನ್ ಅಟಲ್ ಹೂನ್ ಸಿನಿಮಾವನ್ನು ರವಿ ಜಾಧವ್ ನಿರ್ದೇಶನ ಮಾಡಿದ್ದಾರೆ. ಇದು ಅಟಲ್ ಬಿಹಾರಿ ವಾಜಪೇಯಿ ಜೀವನ ಕಥೆಗಳನ್ನು ಆಧರಿಸಿದ ಸಿನಿಮಾ.. ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಮತ್ತು ಲೆಜೆಂಡ್ ಸ್ಟುಡಿಯೋಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದ ಕಥೆಯನ್ನು ರಿಶಿ ವಿರ್ಮಾನಿ ಮತ್ತು ರವಿ ಜಾಧವ್ ಬರೆದಿದಾರೆ. ಸಲೀಮ್ ಸುಲೈಮಾನ್ ಸಂಗೀತ ನೀಡಿದ್ದಾರೆ. ಮನೋಜ್ ಮುತನಿಶರ್ ಅವರ ಹಾಡುಗಳ ಸಾಹಿತ್ಯ ರಚಿಸಿದ್ದಾರೆ. ಈ ಸಿನಿಮಾವು ಜನವರಿ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in