ಒಟಿಟಿಗೆ ಇನ್ನೇನು ಬರಲಿರುವ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಆರು ಸಿನಿಮಾಗಳಿವು, ಈ ಆರರಲ್ಲಿ ಕನ್ನಡದ ಚಿತ್ರವೂ ಒಂದಿದೆ
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಗೆ ಇನ್ನೇನು ಬರಲಿರುವ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಆರು ಸಿನಿಮಾಗಳಿವು, ಈ ಆರರಲ್ಲಿ ಕನ್ನಡದ ಚಿತ್ರವೂ ಒಂದಿದೆ

ಒಟಿಟಿಗೆ ಇನ್ನೇನು ಬರಲಿರುವ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಆರು ಸಿನಿಮಾಗಳಿವು, ಈ ಆರರಲ್ಲಿ ಕನ್ನಡದ ಚಿತ್ರವೂ ಒಂದಿದೆ

ಒಟಿಟಿಯಲ್ಲಿ ಮುಂದಿನ 10 ದಿನಗಳ ಅಂತರದಲ್ಲಿ ಹಲವು ಹೊಸ ಹೊಸ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಕನ್ನಡ, ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿ ಸದ್ದು ಮಾಡಿದ ಆರು ಸಿನಿಮಾಗಳು ಆಗಮಿಸಲಿವೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಒಟಿಟಿಗೆ ಇನ್ನೇನು ಬರಲಿರುವ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಆರು ಸಿನಿಮಾಗಳಿವು, ಈ ಆರರಲ್ಲಿ ಕನ್ನಡದ ಚಿತ್ರವೂ ಒಂದಿದೆ
ಒಟಿಟಿಗೆ ಇನ್ನೇನು ಬರಲಿರುವ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಆರು ಸಿನಿಮಾಗಳಿವು, ಈ ಆರರಲ್ಲಿ ಕನ್ನಡದ ಚಿತ್ರವೂ ಒಂದಿದೆ

ಒಟಿಟಿಯಲ್ಲಿ ಮುಂದಿನ 10 ದಿನಗಳ ಅಂತರದಲ್ಲಿ ಹಲವು ಹೊಸ ಹೊಸ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಕನ್ನಡ, ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿ ಸದ್ದು ಮಾಡಿದ ಆರು ಸಿನಿಮಾಗಳು ಆಗಮಿಸಲಿವೆ. ಕಾಮಿಡಿ, ಕ್ರೈಂ ಥ್ರಿಲ್ಲರ್‌, ಸಸ್ಪೆನ್ಸ್‌ ಸೇರಿ ಹಲವು ಪ್ರಕಾರಗಳ ಸಿನಿಮಾಗಳು ಮೇ 8ರಿಂದ ಮೇ 16ರ ಅವಧಿಯಲ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿವೆ. ಹೀಗಿದೆ ಆ ಸಿನಿಮಾಗಳ ವಿವರ.

ಗುಡ್‌ ಬ್ಯಾಡ್‌ ಅಗ್ಲಿ

  • ತಮಿಳು ನಟ ಅಜಿತ್ ಕುಮಾರ್‌ ನಟಿಸಿರುವ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ ಕಳೆದ ತಿಂಗಳ ಏಪ್ರಿಲ್‌ 10ರಂದು ಚಿತ್ರಮಂದಿರಗಳಿಗೆ ಬಂದಿತ್ತು. ಈಗ ಇದೇ ಚಿತ್ರ ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ. ಈ ಆಕ್ಷನ್‌ ಥ್ರಿಲ್ಲರ್‌ ಸಿನಿಮಾವನ್ನು ಅಧಿಕ್‌ ರವಿಚಂದ್ರನ್‌ ನಿರ್ದೇಶನ ಮಾಡಿದ್ದರು. ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದರೆ, ಪ್ರಭು, ಅರ್ಜುನ್ ದಾಸ್, ಪ್ರಸನ್ನ, ಸುನಿಲ್, ರಾಹುಲ್ ದೇವ್, ಯೋಗಿ ಬಾಬು, ಪ್ರಿಯಾ ಪ್ರಕಾಶ್ ವಾರಿಯರ್, ಟಾಮ್ ಚಾಕೊ ಸೇರಿ ಇನ್ನೂ ಹಲವರು ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿದ್ದರು. ಈಗ ಇದೇ ಸಿನಿಮಾ ಮೇ 8ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಒಟಿಟಿಗೆ ಆಗಮಿಸಲಿವೆ ಮಲಯಾಳಂನ ಎರಡು ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳು; ಒಂದು ಹಾಸ್ಯ ಪ್ರಧಾನ, ಇನ್ನೊಂದು ಥ್ರಿಲ್ಲರ್

ಜಾಕ್‌

  • ಡಿಜೆ ಟಿಲ್ಲು ಮತ್ತು ಟಿಲ್ಲು ಸ್ಕ್ವೇರ್ ಚಿತ್ರಗಳ ಸತತ ಯಶಸ್ಸಿನ ನಂತರ ತೆಲುಗು ನಟ ಸಿದ್ದು ಜೊನ್ನಲಗಡ್ಡ ನಟನೆಯ ಜಾಕ್‌ ಸಿನಿಮಾ ಇತ್ತೀಚೆಗಷ್ಟೇ ಥಿಯೇಟರ್‌ಗಳಲ್ಲಿ ತೆರೆಕಂಡಿತ್ತು. ಬಾಕ್ಸ್‌ಆಫೀಸ್‌ನಲ್ಲಿ ಸೋಲು ಕಂಡ ಈ ಸಿನಿಮಾ, ಇದೀಗ ಒಟಿಟಿಗೆ ಆಗಮಿಸಲು ಸಿದ್ಧವಾಗಿದೆ. ಮೇ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ. ಬೊಮ್ಮರಿಲ್ಲು ಭಾಸ್ಕರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸೋಲು ಕಂಡಿತು. ಈ ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

ದಿ ಡಿಪ್ಲೊಮ್ಯಾಟ್

  • ಜಾನ್ ಅಬ್ರಹಾಂ ಅಭಿನಯದ ದಿ ಡಿಪ್ಲೊಮ್ಯಾಟ್ ಸಿನಿಮಾ ಶೀಘ್ರದಲ್ಲೇ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮೇ 9 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರೀಮಿಯರ್ ಆಗಲಿದೆ. ವಿಮರ್ಶೆ ದೃಷ್ಟಿಯಿಂದ ಸಿನಿಮಾಕ್ಕೆ ಮೆಚ್ಚುಗೆ ಸಿಕ್ಕರೂ, ಕಲೆಕ್ಷನ್‌ ವಿಚಾರದಲ್ಲಿ ಚಿತ್ರ ಸದ್ದು ಮಾಡಲಿಲ್ಲ. ಇದೀಗ ಇದೇ ಚಿತ್ರ ಒಟಿಟಿಗೆ ಆಗಮಿಸುತ್ತಿದೆ. ಶಿವಮ್‌ ನಾಯರ್‌ ನಿರ್ದೇಶನದ ಈ ಸಿನಿಮಾ, ಮಾರ್ಚ್‌ 14ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿತ್ತು.

ಇದನ್ನೂ ಓದಿ: ಮೇ 10ರಂದು ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾದ ರಾಬಿನ್‍ಹುಡ್; ಸಿನಿಮಾ ವೀಕ್ಷಿಸಲು ತಯಾರಾಗಿ

ರಾಬಿನ್‌ಹುಡ್‌

  • ಲುಗಿನ ʻರಾಬಿನ್ ಹುಡ್ʼ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳು ಮತ್ತು ಸ್ಯಾಟಲೈಟ್‌ ಹಕ್ಕುಗಳನ್ನು ಜೀ5 ಮತ್ತು ಜೀ ತೆಲುಗು ಪಡೆದುಕೊಂಡಿವೆ. ಈ ಚಿತ್ರವು ಮೇ 10ರಂದು ಸಂಜೆ 6 ಗಂಟೆಗೆ 'ಜೀ ತೆಲುಗು' ಚಾನೆಲ್‌ನಲ್ಲಿ ಪ್ರಸಾರವಾಗಲಿದೆ . ಅದಾದ ಬಳಿಕ ಜೀ5 ಒಟಿಟಿಯಲ್ಲಿ ರಿಲೀಸ್‌ ಆಗಲಿದೆ. ವೆಂಕಿ ಕುಡುಮುಲ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ನಿರ್ಮಾಣ ಮಾಡಿದೆ.

ಮರಣಮಾಸ್‌

  • ಮಲಯಾಳಂ ನಟ ಬಾಸಿಲ್ ಜೋಸೆಫ್ ನಾಯಕನಾಗಿ ನಟಿಸಿರುವ ‌ʻಮರಣಮಾಸ್ʼ ಸಿನಿಮಾ ಇದೀಗ ಒಟಿಟಿಗೆ ಆಗಮಿಸುತ್ತಿದೆ. ಡಾರ್ಕ್ ಕಾಮಿಡಿ ಜಾನರ್‌ನ 'ಮರಣಮಾಸ್' ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಇದೀಗ ಮೇ 15ರಂದು ಸೋನಿಲೀವ್‌ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರವನ್ನು ಶಿವಪ್ರಸಾದ್ ನಿರ್ದೇಶನ ಮಾಡಿದ್ದಾರೆ. 8 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ18 ಕೋಟಿ ಗಳಿಸಿದೆ.

ಅಜ್ಞಾತವಾಸಿ

  • ಗುಲ್ಟು ಸಿನಿಮಾ ಖ್ಯಾತಿಯ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ, ಕಳೆದ ತಿಂಗಳಷ್ಟೇ ಅಜ್ಞಾತವಾಸಿ ಸಿನಿಮಾ ಮೂಲಕ ಚಿತ್ರಮಂದಿರಗಳತ್ತ ಆಗಮಿಸಿದ್ದರು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾದಲ್ಲಿ ರಂಗಾಯಣ ರಘು, ಪಾವನಾ ಗೌಡ, ಸಿದ್ದು ಮೂಲಿಮನಿ ಮುಖ್ಯಭೂಮಿಕೆಯಲ್ಲಿದ್ದಾರೆ. ಹೇಮಂತ್‌ ರಾಮ್‌ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದೀಗ ಇದೇ ಸಿನಿಮಾ ಮೇ 16ರಂದು ಜೀ5 ಒಟಿಟಿಗೆ ಆಗಮಿಸಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಬೇಕಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.