Baby John OTT: ಒಟಿಟಿಗೆ ಬಂತು ವರುಣ್ ಧವನ್ ಅಭಿನಯದ ಸಿನಿಮಾ ‘ಬೇಬಿ ಜಾನ್’; ಈ ಆನ್‌ಲೈನ್ ಫ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಿ
Baby John OTT: ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಅಭಿನಯದ ಬೇಬಿ ಜಾನ್ ಸಿನಿಮಾ ಒಟಿಟಿಗೆ ಪಾದಾರ್ಪಣೆ ಮಾಡಿದೆ. ಯಾವ ಆನ್‌ಲೈನ್ ಫ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ ಗಮನಿಸಿ.

ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಅಭಿನಯದ ಬೇಬಿ ಜಾನ್ ಸಿನಿಮಾ ಡಿಸೆಂಬರ್ 25, 2024ರಂದು ತೆರೆಕಂಡಿದೆ. ಕಲೀಸ್ ನಿರ್ದೇಶನದ ಈ ಚಿತ್ರವು ವರುಣ್ ಅಭಿನಯದ ಇನ್ನೊಂದು ಮಗ್ಗುಲನ್ನು ನೋಡುವಂತೆ ಮಾಡಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು ಸಾಕಷ್ಟು ಜನರಿಗೆ ಈ ಸಿನಿಮಾ ಇಷ್ಟವಾಗಿದೆ. ಆದರೂ, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೊಂದು ಸದ್ದು ಮಾಡಿಲ್ಲ. ಸಿನಿಮಾ ತೆರೆಕಂಡ ಕೆಲವೇ ದಿನ ಥಿಯೇಟರ್‍ಗಳಲ್ಲಿ ಪ್ರದರ್ಶನ ಕಂಡಿದೆ. ಇದೀಗ ‘ಬೇಬಿ ಜಾನ್’ ಸಿನಿಮಾ ಒಟಿಟಿಗೆ ಯಾವಾಗ ಪ್ರವೇಶಿಸಲಿದೆ ಎಂಬ ಪ್ರಶ್ನೆ ಮೂಡಿದೆ.
ಯಾವ ಒಟಿಟಿಯಲ್ಲಿ ಲಭ್ಯ?
ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ 42 ದಿನಗಳ ನಂತರ (ಫೆ 5) ಬೇಬಿ ಜಾನ್ ಅಮೆಜಾನ್ ಪ್ರೈಂ ವೀಡಿಯೊಗೆ ಪ್ರವೇಶಿಸಿದೆ. ಆದರೆ, ಇದು ಇನ್ನೂ ಉಚಿತ ಸ್ಟ್ರೀಮಿಂಗ್‌ಗೆ ಲಭ್ಯವಿಲ್ಲ. ವೀಕ್ಷಕರು ಚಿತ್ರವನ್ನು ವೀಕ್ಷಿಸಲು 249 ರೂ ಪಾವತಿಸಬೇಕಾಗುತ್ತದೆ. ಆಗ ಮಾತ್ರ ಸಿನಿಮಾ ನೋಡಲು ಸಾಧ್ಯ. ಕೀರ್ತಿ ಸುರೇಶ್ ಹಾಗೂ ವರುಣ್ ಧವನ್ ಈ ಸಿನಿಮಾ ಕುರಿತು ಸಾಕಷ್ಟು ಪ್ರಚಾರ ಮಾಡಿದ್ದರು, ವಮಿಕಾ ಗುಬ್ಬಿ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹೀಗೆ ಸಾಕಷ್ಟು ಪ್ರಚಾರ ಹಾಗೂ ಉತ್ತಮ ತಾರಾಗಣ ಹೊಂದಿದ್ದರೂ ಸಹ ಈ ಸಿನಿಮಾ ಅಷ್ಟೊಂದು ಯಶಸ್ವಿಯಾಗಿಲ್ಲ. ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಚಿತ್ರವಾಯ್ತು.
ನಷ್ಟ ಅನುಭವಿಸಿದ ಬೇಬಿ ಜಾನ್ ಸಿನಿಮಾ
ಅಟ್ಲೀ ಪ್ರಸ್ತುತಪಡಿಸಿದ ಮತ್ತು ಎ ಫಾರ್ ಆಪಲ್ ಸ್ಟುಡಿಯೋಸ್ ಮತ್ತು ಸಿನೆ1 ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಾಪಕರಾದ ಪ್ರಿಯಾ ಅಟ್ಲೀ, ಮುರಾದ್ ಖೇತಾನಿ ಮತ್ತು ಜ್ಯೋತಿ ದೇಶಪಾಂಡೆ ಅವರ ಬೆಂಬಲದೊಂದಿಗೆ ನಿರ್ಮಿಸಲಾದ ಈ ಚಿತ್ರವು ಮಾಸ್ ಎಂಟರ್‌ಟೈನರ್ ಹಾಗೂ ಆಕ್ಷನ್ ಥ್ರಿಲರ್ ಸಿನಿಮಾವಾಗಿದೆ. ಈ ಸಿನಿಮಾ ಬ್ಲಾಕ್‌ಬಸ್ಟರ್‌ನ ಎಲ್ಲಾ ಅಂಶಗಳನ್ನು ಹೊಂದಿತ್ತು. ಆದರೂ, ಆ ಮಟ್ಟಿಗಿನ ಯಶಸ್ಸನ್ನು ಕಾಣುವಲ್ಲಿ ವಿಫಲವಾಯಿತು. ತಲಪತಿ ವಿಜಯ್ ಅವರ ತಮಿಳು ಬ್ಲಾಕ್‌ಬಸ್ಟರ್ ' ಥೇರಿ' ಚಿತ್ರದ ಅಧಿಕೃತ ರಿಮೇಕ್ ಆಗಿರುವ ಈ ಚಿತ್ರವನ್ನು 180 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿತ್ತು ಎಂದು ಹೇಳಲಾಗಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ 50 ಕೋಟಿ ರೂಪಾಯಿಗಳನ್ನು ಮಾತ್ರ ಸಂಗ್ರಹಿಸಿದೆ.
ತಾರಾಗಣ
ವರುಣ್ ಧವನ್ ಮತ್ತು ಕೀರ್ತಿ ಸುರೇಶ್, ವಮಿಕಾ, ರಾಜ್‌ಪಾಲ್ ಯಾದವ್, ಶೀಬಾ ಚಡ್ಡಾ, ಜಾಕಿರ್ ಹುಸೇನ್, ಪ್ರಕಾಶ್ ಬೆಳವಾಡಿ, ಅರ್ಮಾನ್ ಖೇರಾ, ಶ್ರೀಕಾಂತ್ ಯಾದವ್, ಬೆಸೆಂಟ್ ರವಿ, ಬಿಎಸ್ ಅವಿನಾಶ್, ರೇಶ್ ಲಂಬಾ, ಸದಾನಂದ್ ಪಾಟೀಲ್ ಮತ್ತು ಜೈದೀಪ್ ಅಹ್ಲಾವತ್ ಇತರರು ನಟಿಸಿದ್ದಾರೆ
