ಕನ್ನಡ ಸುದ್ದಿ  /  ಮನರಂಜನೆ  /  ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ವರುಣ್ ಧವನ್-ನತಾಶಾ ದಲಾಲ್ ದಂಪತಿ; ಮನೆಗೆ ಲಕ್ಷ್ಮಿ ಬಂದಳು ಎಂದ ಬಾಲಿವುಡ್ ಮಂದಿ

ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ವರುಣ್ ಧವನ್-ನತಾಶಾ ದಲಾಲ್ ದಂಪತಿ; ಮನೆಗೆ ಲಕ್ಷ್ಮಿ ಬಂದಳು ಎಂದ ಬಾಲಿವುಡ್ ಮಂದಿ

Varun Dhawan and Natasha Dalal: ಬಾಲಿವುಡ್ ನಟಿ ವರುಣ್ ಧವನ್ ಅವರ ಪತ್ನಿ ನತಾಶಾ ದಲಾಲ್ ಅವರು ಜೂನ್ 3ರ ಸೋಮವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ವರುಣ್ ಧವನ್-ನತಾಶಾ ದಲಾಲ್ ದಂಪತಿ; ಮನೆಗೆ ಲಕ್ಷ್ಮಿ ಬಂದಳು ಎಂದ ಬಾಲಿವುಡ್ ಮಂದಿ
ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ವರುಣ್ ಧವನ್-ನತಾಶಾ ದಲಾಲ್ ದಂಪತಿ; ಮನೆಗೆ ಲಕ್ಷ್ಮಿ ಬಂದಳು ಎಂದ ಬಾಲಿವುಡ್ ಮಂದಿ

ಬಾಲಿವುಡ್ ನಟ ವರುಣ್ ಧವನ್ ಅವರ ಪತ್ನಿ ನತಾಶಾ ದಲಾಲ್ ಅವರು (Varun Dhawan and Natasha Dalal) ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾಗಿ ಬಡ್ತಿ ಪಡೆದ ಕುರಿತು ವರುಣ್ ಧವನ್ ಇನ್​ಸ್ಟಾಗ್ರಾಂನಲ್ಲಿ ಸಂತಸವನ್ನು ಹಂಚಿಕೊಂಡು ಖಚಿತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೇಬಿ ಧವನ್​ಗೆ ಸ್ವಾಗತ

ವರುಣ್ ಹಾಗೂ ಪತ್ನಿ ನತಾಶಾ ದಂಪತಿಗೆ ಬಾಲಿವುಡ್ ನಟರು ಮತ್ತು ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಅವರು ಮಗುವಿನ ಹೆಸರನ್ನು ಉಲ್ಲೇಖಿಸದಿದ್ದರೂ ಪೋಸ್ಟ್​​ನಲ್ಲಿ ಮಗಳನ್ನು 'ಬೇಬಿ ಧವನ್' ಎಂದು ಕರೆದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್​ನಲ್ಲಿ ವರುಣ್ ಅವರ ಪ್ರೀತಿಯ ಸಾಕು ನಾಯಿ ಜೋಯಿ ಕೂಡ ಕಾಣಿಸಿಕೊಂಡಿದೆ.

ಸುಂದರವಾದ ಹಾಟ್ ಏರ್​ ಬಲೂನ್​ನೊಂದಿಗೆ ಬೇಬಿ ಧವನ್ ಮತ್ತು ಮಗುವಿಗೆ ಜೂನ್ 3ರಂದು ಜನ್ಮ ನೀಡಲಾಗಿದೆ ಎಂಬುದನ್ನು ಹೊತ್ತು ಜೋಯಿ ಬಂದಿದೆ. ವರುಣ್ ಮತ್ತು ನತಾಶಾ ಅವರ ಸಂದೇಶವು ಗೌಪ್ಯತೆ ಕಾಪಾಡಿಕೊಳ್ಳುವಂತೆ ಮಾಧ್ಯಮಗಳಿಗೆ ಕೇಳಿದ್ದಾರೆ. ವರುಣ್ ತಂದೆ ಚಲನಚಿತ್ರ ನಿರ್ಮಾಪಕ ಡೇವಿಡ್ ಧವನ್ ಖಚಿತಪಡಿಸಿದ್ದಾರೆ.

ಹೆಣ್ಣು ಮಗುವಿಗೆ ತಂದೆಯಾಗಿದ್ದೇನೆ. ಅಮ್ಮ ಮತ್ತು ಮಗುವಿಗೆ ಶುಭಹಾರೈಕೆ ಮತ್ತು ಧನ್ಯವಾದಗಳು. ಹರೇ ರಾಮ್, ಹರೇ ರಾಮ್, ರಾಮ್ ರಾಮ್ ಹರೇ ಹರೇ. ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​​​ ಬರೆದಿದ್ದಾರೆ. ಅಭಿಮಾನಿಗಳು ಸಹ ಸಂತಸ ವ್ಯಕ್ತಪಡಿಸಿದ್ದು, ಶುಭಕೋರಿದ್ದಾರೆ.

ದಂಪತಿಗೆ ಯಾರೆಲ್ಲಾ ಶುಭ ಹಾರೈಸಿದ್ದಾರೆ?

ವರುಣ್ ಧವನ್ ದಂಪತಿಗೆ ನಟಿ ಪ್ರಿಯಾಂಕಾ ಚೋಪ್ರಾ ಶುಭ ಹಾರೈಸಿದ್ದಾರೆ. ಅಭಿನಂದನೆಗಳು. ಓಹೋ ಎಂದಿದ್ದಾರೆ. ಅವರ ಸೋದರಸಂಬಂಧಿ, ನಟಿ ಪರಿಣಿತಿ ಚೋಪ್ರಾ ಕೂಡ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ. ವರುಣ್ ಅವರ ಸಿಟಾಡೆಲ್ ಸಹನಟಿ ಸಮಂತಾ ರುತ್ ಪ್ರಭು, ಆಲಿಯಾ ಭಟ್, ಇದು ಅತ್ಯುತ್ತಮ ಸುದ್ದಿ. ನಿಮ್ಮಿಬ್ಬರಿಗೂ ಅಭಿನಂದನೆಗಳು ಎಂದಿದ್ದಾರೆ.

ವರುಣ್ ಅವರ ಆಪ್ತ ಸ್ನೇಹಿತರಾದ ಕರಣ್ ಜೋಹರ್ ಮತ್ತು ಅರ್ಜುನ್ ಕಪೂರ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಹಾರೈಸಿದ್ದಾರೆ. ನನ್ನ ಮಗುವಿಗೆ ಹೆಣ್ಣು ಮಗು ಆಗಿದೆ. ಹೆಮ್ಮೆಯ ಮಾಮಾ ಮತ್ತು ಅಪ್ಪನಿಗೆ ಅಭಿನಂದನೆಗಳು! ಲವ್ ಯು ನತಾಶಾ ಮತ್ತು ವರುಣ್ ಎಂದು ಎಂದು ಕರಣ್ ಇನ್​ಸ್ಟಾಗ್ರಾಂನಲ್ಲಿ ಕೆಂಪು ಲವ್​​ ಎಮೋಜಿ ಹಾಕಿದ್ದಾರೆ.

ವರುಣ್ ಧವನ್ ಬಾಲಿವುಡ್ ನಟನಾಗಿದ್ದರೆ ಮತ್ತು ನತಾಶಾ ದಲಾಲ್ ಅವರು ಫ್ಯಾಷನ್ ಡಿಸೈನರ್ ಆಗಿದ್ದಾರೆ. ಈ ದಂಪತ ಕೊರೊನಾ ಸಮಯದಲ್ಲಿ ಮದುವೆಯಾಗಿದ್ದರು. 2021ರ ಜನವರಿ 24ರಂದು ವಿವಾಹವಾಗಿದರು. ಅಲಿಭಾಗ್​ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗಿಯಾಗಿದ್ದರು.

ಪ್ರಸ್ತುತ ವರಣ್ ಧವನ್ ಅವರು ಬೇಬಿ ಜಾನ್ ಚಿತ್ರದಲ್ಲಿ ನಟಿಸುತ್ತಿದ್ದು, ಎ ಕಲೀಶ್ವರನ್ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಮುರದ್ ಖೇತಾನಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರಿಯಾ ಅಟ್ಲೀ ಹಾಗೂ ಜ್ಯೋತಿ ದೇಶಪಾಂಡೆ ಅವರದ್ದು ಚಿತ್ರಕಥೆ ಇದೆ.

ಟಿ20 ವರ್ಲ್ಡ್‌ಕಪ್ 2024