Baby John Trailer: ಬೇಬಿ ಜಾನ್ ಟ್ರೇಲರ್‌ನಲ್ಲಿ ಅಬ್ಬರಿಸಿದ ವರುಣ್ ಧವನ್; ಖಡಕ್ ಲುಕ್‌ನಲ್ಲಿ ಜಾಕಿ ಶ್ರಾಫ್
ವರುಣ್ ಧವನ್ ಅಭಿನಯದ ಹೊಸ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಖಡಕ್ ಲುಕ್‌ನಲ್ಲಿ ಜಾಕಿ ಶ್ರಾಫ್ ಕಾಣಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವರುಣ್ ಧವನ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ವರುಣ್ ಧವನ್ ಅಭಿನಯದ ಹೊಸ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಎಲ್ಲ ಸಿನಿಮಾಗಳಲ್ಲಿ ಕಾಣಿಸುವುದಕ್ಕಿಂತ ಭಿನ್ನವಾಗಿ ಈ ಸಿನಿಮಾದಲ್ಲಿ ವರುಣ್ ಧವನ್ ಕಾಣಿಸಿಕೊಂಡಿದ್ದಾರೆ. ಎನರ್ಜಿಟಿಕ್ ಮತ್ತು ಫುಲ್ ಆಕ್ಷನ್ ಹಿರೋವಾಗಿ ವರುಣ್ ಕಾಣಿಸಿಕೊಂಡಿದ್ದಾರೆ. ಇಡೀ ಟ್ರೇಲರ್‌ನುದ್ದಕ್ಕೂ ಅವರ ಫವರ್‌ಫುಲ್ ಆಕ್ಷನ್ ಎದ್ದು ಕಾಣುತ್ತದೆ. ಬಿಯರ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತಮಿಳಿನ ತೇರಿ ಸಿನಿಮಾ ರಿಮೇಕ್ ಆಗಿದೆ. ವರುಣ್ ಧವನ್ ಅಭಿನಯದ ಬೇಬಿ ಜಾನ್ ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಅಭಿಮಾನಿಗಳು ಹುಚ್ಚೆದ್ದು ನೋಡುತ್ತಿದ್ದಾರೆ.
ಮೆಚ್ಚುಗೆ ಪಡೆದ ಟ್ರೇಲರ್
ಟ್ರೇಲರ್ ಬಿಡುಗಡೆಯಾದ ದಿನವೇ ಯೂಟ್ಯೂಬ್‌ನಲ್ಲಿ ಟ್ರೆಂಡ್ ಆಗಿದೆ. ಬೇಬಿ ಜಾನ್ ಚಿತ್ರದಲ್ಲಿ ವರುಣ್ ಧವನ್, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ , ವಮಿಕಾ , ಜಾಕಿ ಶ್ರಾಫ್ ಮತ್ತು ರಾಜ್ಪಾಲ್ ಯಾದವ್ ನಟಿಸಿದ್ದಾರೆ . ವರುಣ್ ಧವನ್, “ನಾನು ಬೇಬಿ ಜಾನ್‌ನ ಭಾಗವಾಗಲು ಥ್ರಿಲ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಕೂಡ ಹಂಚಿಕೊಂಡಿದ್ದಾರೆ.
ಟ್ರೇಲರ್ ಈ ಕಥೆಯನ್ನು ನಿರೂಪಣೆ ಮಾಡುವ ರೀತಿ ಎಲ್ಲರಿಗೂ ಇಷ್ಟವಾಗಿದೆ. ಮೂರು ನಿಮಿಷ 6 ಸೆಂಕೆಂಡುಗಳ ಕಾಲದಷ್ಟು ದೀಘ್ರವಾದ ಟ್ರೇಲರ್ ಬಿಡುಗಡೆಯಾಗಿದೆ. ಪ್ರೇಕ್ಷಕರು ಸಿನಿಮಾವನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ತುಂಬಾ ಕಾತರದಿಂದ ಕಾದಿದ್ದಾರೆ. ಕಲೀಸ್ ನಿರ್ದೇಶಿಸಿದ ಈ ಸಿನಿಮಾ ಸಾಕಷ್ಟು ಜನರಲ್ಲಿ ನಿರೀಕ್ಷೆ ಮೂಡಿಸಿದೆ. ವರುಣ್‌ನ ಪಾತ್ರ, ಡಿಸಿಪಿ ಸತ್ಯ ವರ್ಮಾ ಐಪಿಎಸ್. ಬೇಬಿ ಜಾನ್ ಎಂದೂ ಕರೆಯಲ್ಪಡುವ ತನ್ನ ಮಗಳು ಖುಷಿಯೊಂದಿಗೆ ಒಂಟಿ ತಂದೆಯಾಗಿ ಶಾಂತಿಯುತ ಜೀವನವನ್ನು ಆನಂದಿಸುತ್ತಿರುವದಿಂದ ಟ್ರೇಲರ್ ಆರಂಭವಾಗುತ್ತದೆ.
ಸಿನಿಮಾಗಾಗಿ ಕಾದ ಪ್ರೇಕ್ಷಕರು
ಮೊದಲು ಟ್ರೇಲರ್‌ನಲ್ಲಿ ಎಷ್ಟು ಶಾಂತತೆ ಕಾಣುತ್ತದೆಯೋ ನಂತರ ಅಷ್ಟೇ ಕ್ರೂರತೆಯ ಮುಖ ಬಿಚ್ಚಿಕೊಳ್ಳುತ್ತದೆ. ಟ್ರೇಲರ್ ಗ್ಲಿಂಪ್ಸ್‌ಗಳು ಎಲ್ಲ ಕಥೆಯನ್ನು ನಿರೂಪಿಸುವುದಿಲ್ಲ. ಕೀರ್ತಿ ಸುರೇಶ್ ಕೂಡ ಟ್ರೇಲರ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಾರೆ. ಖುಷಿಯ ಟೀಚರ್ ಪಾತ್ರದಲ್ಲಿರುವ ವಮಿಕಾ ಕೂಡ ಟ್ರೇಲರ್‌ನಲ್ಲಿದ್ದಾರೆ. ಮಹಿಳಾ ಸುರಕ್ಷತೆಯನ್ನು ಆ ಬಗ್ಗೆ ಜಾಗ್ರತಿ ತರುವ ಕಥೆ ಇದರಲ್ಲಿರುವಂತೆ ತೋರುತ್ತದೆ. ಜಾಖಿ ಶ್ರಫ್ ಲುಕ್ ಮಾತ್ರ ಖಡಕ್ ಆಗಿದೆ. ಟ್ರೇಲರ್ ನೋಡಿ ಸಿನಿಮಾಗಾಗಿ ನಾವು ಕಾಯುತ್ತಿದ್ದೇವೆ ಎಂದು ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ. ಶಾರುಕ್ ಖಾನ್ ಟ್ರೇಲರ್ ಅದ್ಭುತವಾಗಿದೆ ಎಂದಿದ್ದಾರೆ.