ಕನ್ನಡ ಸುದ್ದಿ  /  Entertainment  /  Vasistha Simha And Haripriya Released A Book Titled Prema Patrada Officu Mattu Avalu

Vasistha Simha Haripriya News: ಪ್ರೇಮಿಗಳ ದಿನದಂದೇ ಪ್ರೇಮ ಪತ್ರದ ಆಫೀಸು ತೆರೆದ ವಸಿಷ್ಠ- ಹರಿಪ್ರಿಯಾ ಜೋಡಿ!

ಈಗಷ್ಟೇ ಮದುವೆಯಾದ ವಸಿಷ್ಠ- ಹರಿಪ್ರಿಯಾ ಜೋಡಿ ಇದೀಗ ಪ್ರೇಮಿಗಳ ದಿನದಂದೇ ಪ್ರೇಮಪತ್ರದ ಆಫೀಸ್‌ಅನ್ನೇ ತೆರೆದಿದೆ. ಏನಿದು ಕಚೇರಿ? ಇಲ್ಲಿದೆ ನೋಡಿ ಮಾಹಿತಿ.

ಪ್ರೇಮಿಗಳ ದಿನದಂದೇ ಪ್ರೇಮ ಪತ್ರದ ಆಫೀಸು ತೆರೆದ ವಸಿಷ್ಠ- ಹರಿಪ್ರಿಯಾ ಜೋಡಿ!
ಪ್ರೇಮಿಗಳ ದಿನದಂದೇ ಪ್ರೇಮ ಪತ್ರದ ಆಫೀಸು ತೆರೆದ ವಸಿಷ್ಠ- ಹರಿಪ್ರಿಯಾ ಜೋಡಿ!

Vasistha Simha and Haripriya: ಇತ್ತೀಚೆಗಷ್ಟೇ ಬಾಳ ಬಂಧನಕ್ಕೆ ಒಳಗಾಗಿದ್ದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ, ಈ ಸಲದ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದೆ. ಪ್ರೇಮಿಗಳ ದಿನಾಚರಣೆಯಂದು ಪ್ರೇಮಕತೆಗಳ ಪುಸ್ತಕವನ್ನು ಲೋಕಾರ್ಪಣೆ ಮಾಡುವುದರ ಮೂಲಕ ತಮ್ಮ ಪ್ರೇಮದ ದಿನಗಳನ್ನು ಮೆಲುಕು ಹಾಕಿದ್ದಾರೆ. ಮಾವಲಿ ಪಬ್ಲಿಕೇಶನ್ ನ ಮೊದಲ ಪುಸ್ತಕವಾದ ಶಿವಕುಮಾರ ಮಾವಲಿಯವರ ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಎಂಬ ಶೀರ್ಷಿಕೆಯ ಕಥಾ ಸಂಕಲನವನ್ನು ಈ ಜೋಡಿ ಬಿಡುಗಡೆ ಮಾಡಿದೆ. ಲೇಖಕ ಶಿವಕುಮಾರ ಮಾವಲಿ, ಪ್ರಕಾಶಕಿ ಪ್ರೇಮ ಶಿವಕುಮಾರ ಸಹ ಈ ವೇಳೆ ಜೊತೆಗಿದ್ದರು

ಪ್ರೇಮಪತ್ರದ ಆಫೀಸು ಎಂಬ ಶೀರ್ಷಿಕೆಯೇ ಆಸಕ್ತಿ ಹುಟ್ಟಿಸುವಂತಿದೆ, ನಾವೂ ಪ್ರೇಮಪತ್ರಗಳನ್ನು ಬರೆದುಕೊಳ್ತಿದ್ವಿ ಎಂದು ನೆನಪು ಮಾಡಿಕೊಂಡು, ಪುಸ್ತಕದಲ್ಲಿದ್ದ ಎರಡು ಪತ್ರಗಳ ಸಾಲುಗಳನ್ನು ಪರಸ್ಪರರು ಪತ್ರದ ರೀತಿಯಲ್ಲಿ ಓದಿಕೊಂಡರು.

ಹರಿಪ್ರಿಯಾ ''ಸಾವಿರ ಜನರ ಮಧ್ಯೆ ಇದ್ದರೂ ನಾನು ಏಕಾಂಗಿಯೇ, ನಿನ್ನ ನೆನಪಿನ ಭಾವವಿರದಿದ್ದರೆ'' ಎಂದು ಹೇಳಿದರೆ, ವಸಿಷ್ಠ ಸಿಂಹ, "ತನಗಾಗಿ ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ " ಎಂದು ಹರಿಪ್ರಿಯಾರ ಮುಖದಲ್ಲಿ ನಗು ಮೂಡಿಸಿದರು.

ಮಾವಲಿ ಪಬ್ಲಿಕೇಶನ್‌ನಿಂದ ಪ್ರಕಟವಾಗುತ್ತಿರುವ ಈ ಕಥಾ ಸಂಕಲನವನ್ನು ಹೆಚ್ಚು ಜನ ಓದಲಿ ಮತ್ತು ಇಂಥ ಅನೇಕ ಪುಸ್ತಕಗಳು ಅವರಿಂದ ಮೂಡಿ ಬರಲಿ ಎಂದು ಆಶಿಸಿದರು. 'ಇಷ್ಟು ವರ್ಷಗಳಿಗಿಂತ ಈ ಬಾರಿ ನಮ್ಮ ವ್ಯಾಲಂಟೈನ್ ಡೇ ವಿಶೇಷವಾಗಿ ಆಯಿತು. ಪ್ರೇಮಪುಸ್ತಕವೊಂದು ನಮ್ಮಿಂದ ಬಿಡುಗಡೆ ಆಗುವಂತಾಯಿತು' ಎಂದು ಹರಿಪ್ರಿಯ ಹೇಳಿದರು.

'ದೇವರು ಅರೆಸ್ಟ್ ಆದ' ಮತ್ತು 'ಟೈಪಿಸ್ಟ್ ತಿರಸ್ಕರಿಸಿದ ಕತೆ' ಎಂಬ ಕಥಾ ಸಂಕಲನಗಳ ಮೂಲಕ ಹೊಸ ರೀತಿಯ ಕತೆಗಳನ್ನು ಪರಿಚಯಿಸಿದ ಶಿವಕುಮಾರ ಮಾವಲಿಯವರ 'ಸುಪಾರಿ ಕೊಲೆ' ನಾಟಕ ಒಂದು ಪತ್ತೇದಾರಿ ಮಾದರಿಯ ನಾಟಕವಾಗಿದ್ದರೆ, ಇತ್ತೀಚಿಗೆ ಪ್ರದರ್ಶನಗೊಂಡ ಅವರ 'ಒಂದು ಕಾನೂನಾತ್ಮಕ ಕೊಲೆ' ನಾಟಕವು, ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಬಳಸಿಕೊಂಡು ಸಶಕ್ತವಾಗಿ ರಾಜಕೀಯ ವಿಡಂಬನೆ ಮಾಡುವ ನಾಟಕವಾಗಿದೆ.

ರಾಜೀವ್ ಗಾಂಧಿ ಹತ್ಯೆಯ ಸಮಯದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರ ಬದುಕಲ್ಲಿ ನಡದ ಘಟನೆಯಾಧಾರಿತ ಕಾದಂಬರಿ 'LTTE Murthy Calling' ಇತ್ತೀಚೆಗಷ್ಟೆ ತಮಿಳಿಗೆ ಅನುವಾದಗೊಂಡಿದೆ. ಈಗ ಅವರ ಹೊಸ ಕಥಾ ಸಂಕಲನ "ಪ್ರೇಮಪತ್ರದ ಆಫೀಸು ಮತ್ತು ಅವಳು" ಮಾವಲಿ ಪಬ್ಲಿಕೇಶನ್ ನಿಂದ ಪ್ರಕಟವಾಗುತ್ತಿರುವ ಮೊದಲ ಪುಸ್ತಕವಾಗಿದೆ. ಪುಸ್ತಕವು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಈ ಸಿನಿಮಾ ಸುದ್ದಿಗಳನ್ನೂ ಓದಿ

Hondisi Bareyiri Update: ಮೊದಲ ಪ್ರಯತ್ನದಲ್ಲೇ ಗೆದ್ದ ರಾಮೇನಹಳ್ಳಿ ಜಗನ್ನಾಥ್‌..'ಹೊಂದಿಸಿ ಬರೆಯಿರಿ' ಚಿತ್ರವನ್ನು ಅಪ್ಪಿದ ಸಿನಿಪ್ರಿಯರು

ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ 'ಹೊಂದಿಸಿ ಬರೆಯಿರಿ' ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ಜಗನ್ನಾಥ್, ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಹಾಡುಗಳು, ಟ್ರೇಲರ್‌ ಮೂಲಕವೇ ಸಿನಿಪ್ರಿಯರ ಗಮನ ಸೆಳೆದಿದ್ದ ಸಿನಿಮಾ ಈಗ ಚಿತ್ರಮಂದಿರದಲ್ಲೂ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ