ಒಟಿಟಿಗೆ ಬರಲು ದಿನ ಘೋಷಣೆ ಮಾಡಿದ ಚಿಯಾನ್ ವಿಕ್ರಂ ನಟನೆಯ ʻವೀರ ಧೀರ ಸೂರನ್ʼ ಸಿನಿಮಾ; ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯ
ತಮಿಳು ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ನಟನೆಯ 'ವೀರ ಧೀರ ಸೂರನ್: ಪಾರ್ಟ್ 2' ಚಿತ್ರ ಇನ್ನೇನು ಮುಂದಿನ ವಾರ ಒಟಿಟಿಗೆ ಆಗಮಿಸಲಿದೆ. ಈ ವಿಷಯವನ್ನು ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದ ಸಂಸ್ಥೆ ಶುಕ್ರವಾರ (ಏಪ್ರಿಲ್ 18) ಅಧಿಕೃತವಾಗಿ ಘೋಷಣೆ ಮಾಡಿದೆ.

ಚಿಯಾನ್ ವಿಕ್ರಮ್ ಅಭಿನಯದ ತಮಿಳು ಆಕ್ಷನ್ ಥ್ರಿಲ್ಲರ್ ‘ವೀರ ಧೀರ ಸೂರನ್: ಪಾರ್ಟ್ 2’ ಸಿನಿಮಾ ಡಿಜಿಟಲ್ ಡೆಬ್ಯೂ ಮಾಡಲು ಸಿದ್ಧವಾಗಿದೆ. ಥಿಯೇಟರ್‌ನಲ್ಲಿ ಅಭಿಮಾನಿಗಳನ್ನು ಮನರಂಜಿಸಿದ ವಿಕ್ರಮ್, ಈಗ ಒಟಿಟಿಯಲ್ಲಿಯೂ ರಂಜಿಸಲು ಬರುತ್ತಿದ್ದಾರೆ. ಥಿಯೇಟರ್‌ಗಳಲ್ಲಿ ನಿರೀಕ್ಷಿತ ಕಲೆಕ್ಷನ್ ಮಾಡದ ಈ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಇದೀಗ ಒಟಿಟಿಗೆ ಬರಲು ಅಣಿಯಾಗಿದ್ದು, ಇಲ್ಲಿ ಅದ್ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕು. ಹೀಗಿದೆ ಈ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಕುರಿತ ವಿವರ.
ಬಹುತೇಕ ಸಿನಿಮಾಗಳು ಮೊದಲ ಭಾಗದ ಬಳಿಕ ಎರಡನೇ ಭಾಗವನ್ನು ಸೀಕ್ವೆಲ್ ರೂಪದಲ್ಲಿ ತೆರೆಗೆ ತರುತ್ತವೆ. ಆದರೆ, ʻವೀರ ಧೀರ ಸೂರನ್ʼ ವಿಚಾರದಲ್ಲಿ ಮಾತ್ರ ಹಾಗಿಲ್ಲ. ಎರಡನೇ ಭಾಗ ಈಗಾಗಲೇ ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಪಾರ್ಟ್ 1 ಸಿನಿಮಾ ಸೆಟ್ಟೇರಲಿದೆ. ಇದೀಗ ಇದೇ ವೀರ ಧೀರ ಸೂರನ್ ಪಾರ್ಟ್ 2 ಸಿನಿಮಾ ಒಟಿಟಿ ಆಗಮಿಸುತ್ತಿದೆ. ಇನ್ನೇನು ಮುಂದಿನ ವಾರ ಈ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಲಿದೆ. ಮಾರ್ಚ್ 27ರಂದು ಥಿಯೇಟರ್‌ಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ ಮೂಲ ತಮಿಳಿನ ಜತೆಗೆ ಕನ್ನಡ, ಮಲಯಾಳಂ ಮತ್ತು ತೆಲುಗಿನಲ್ಲಿ ರಿಲೀಸ್ ಆಗಿತ್ತು.
ಯಾವ ಒಟಿಟಿಯಲ್ಲಿ, ಯಾವಾಗಿನಿಂದ?
ತಮಿಳಿನ ಈ ಆಕ್ಷನ್ ಥ್ರಿಲ್ಲರ್ ‘ವೀರ ಧೀರ ಸೂರನ್: ಪಾರ್ಟ್ 2’ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆ ಆಗಿದೆ. ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಈ ವಿಚಾರವನ್ನು ಪ್ರೈಮ್ ವೀಡಿಯೋ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದೆ. ‘ವೀರ ಧೀರ ಸೂರನ್: ಪಾರ್ಟ್ 2’ ಚಿತ್ರ ಏಪ್ರಿಲ್ 24 ರಿಂದ ವಿಶ್ವದಾದ್ಯಂತ 240ಕ್ಕೂ ಹೆಚ್ಚು ದೇಶಗಳಲ್ಲಿ ಸ್ಟ್ರೀಮ್ ಆಗಲಿದೆ ಎಂದು ತಿಳಿಸಿದೆ. ತಮಿಳಿನಲ್ಲಿ ಬಂದಿರುವ ಈ ಚಿತ್ರವು ಕನ್ನಡ, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ಸ್ಟ್ರೀಮ್ ಆಗಲಿದೆ.
ಎಸ್.ಯು. ಅರುಣ್ ಕುಮಾರ್ ಬರೆದು ನಿರ್ದೇಶಿಸಿರುವ ಸರ್ವೈವಲ್ ಥ್ರಿಲ್ಲರ್ ಜಾನರ್‌ನ ‘ವೀರ ಧೀರ ಸೂರನ್: ಪಾರ್ಟ್ 2’ ಸಿನಿಮಾ ಬಿಡುಗಡೆಗೆ ಮುನ್ನ ಒಂದಷ್ಟು ಕಾರಣಕ್ಕೆ ವಿವಾದ ಸೃಷ್ಟಿಸಿತ್ತು. ಬಿಡುಗಡೆಯಾದ ಒಂದು ತಿಂಗಳೊಳಗೆ ʻವೀರ ಧೀರ ಸೂರನ್ʼ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ. ಈ ಚಿತ್ರದಲ್ಲಿ ಚಿಯಾನ್ ವಿಕ್ರಮ್ ನಾಯಕನಾಗಿ ನಟಿಸಿದರೆ, ಎಸ್‌ಜೆ ಸೂರ್ಯ, ಮಲಯಾಳಂ ನಟ ಸೂರಜ್ ವೆಂಜಾರಮೂಡು, ದುಷಾರ ವಿಜಯನ್, ಪೃಥ್ವಿರಾಜ್ ಮುಂತಾದ ಕಲಾವಿದರು ನಟಿಸಿದ್ದಾರೆ.
ಕಥೆ ಏನು?
ಅರುಣ್ ಕುಮಾರ್ ನಿರ್ದೇಶನದ ವೀರ ಧೀರ ಸೂರನ್ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಪರಾಧ ಜಾಲದಲ್ಲಿ ಸಿಲುಕಿ, ಒಂದು ರಹಸ್ಯ ಕಾರ್ಯಾಚರಣೆಗಾಗಿ ಕೆಲಸ ಮಾಡುವ ದಿನಸಿ ಅಂಗಡಿ ಮಾಲೀಕ ಕಾಳಿ ಕಥೆಯೇ ಈ ಸಿನಿಮಾ. ಚಿತ್ರದಲ್ಲಿ ವಿಕ್ರಮ್ ಅವರ ಆಕ್ಷನ್ ಅದ್ಭುತವಾಗಿದೆ. ಥ್ರಿಲ್ಲಿಂಗ್ ಅಂಶಗಳೂ ಕಡಿಮೆಯಿಲ್ಲ. ಆದರೆ ನಿರೀಕ್ಷಿತ ಮಟ್ಟದಲ್ಲಿ ಚಿತ್ರ ಯಶಸ್ವಿಯಾಗಲಿಲ್ಲ.