ನೀವು ಅಮೆಜಾನ್‌ ಪ್ರೈಂ, ನೆಟ್‌ಫ್ಲಿಕ್ಸ್‌ ಚಂದಾದಾರರೇ? ಇಂದು ಈ ಒಟಿಟಿಗಳಲ್ಲಿ ಬಿಡುಗಡೆ ಆದ ಸಿನಿಮಾಗಳ ಲಿಸ್ಟ್‌ ಇಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  ನೀವು ಅಮೆಜಾನ್‌ ಪ್ರೈಂ, ನೆಟ್‌ಫ್ಲಿಕ್ಸ್‌ ಚಂದಾದಾರರೇ? ಇಂದು ಈ ಒಟಿಟಿಗಳಲ್ಲಿ ಬಿಡುಗಡೆ ಆದ ಸಿನಿಮಾಗಳ ಲಿಸ್ಟ್‌ ಇಲ್ಲಿದೆ

ನೀವು ಅಮೆಜಾನ್‌ ಪ್ರೈಂ, ನೆಟ್‌ಫ್ಲಿಕ್ಸ್‌ ಚಂದಾದಾರರೇ? ಇಂದು ಈ ಒಟಿಟಿಗಳಲ್ಲಿ ಬಿಡುಗಡೆ ಆದ ಸಿನಿಮಾಗಳ ಲಿಸ್ಟ್‌ ಇಲ್ಲಿದೆ

ಒಟಿಟಿಯಲ್ಲಿ ಇಂದು ಬೇರೆ ಬೇರೆ ಭಾಷೆಗಳ ಒಟ್ಟು 14 ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್, ಸೋನಿ ಲಿವ್, ಆಹಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸಿನಿಮಾಗಳು ವೀಕ್ಷಣೆಗೆ ಲಭ್ಯವಿವೆ. ಆ ಎಲ್ಲ ಸಿನಿಮಾಗಳ ಲಿಸ್ಟ್‌ ಇಲ್ಲಿದೆ.

ಒಟಿಟಿಯಲ್ಲಿ ಈ ವಾರ ಬಿಡುಗಡೆ ಆಗಲಿರುವ ಸಿನಿಮಾಗಳ ಪಟ್ಟಿ
ಒಟಿಟಿಯಲ್ಲಿ ಈ ವಾರ ಬಿಡುಗಡೆ ಆಗಲಿರುವ ಸಿನಿಮಾಗಳ ಪಟ್ಟಿ

ಒಟಿಟಿಯಲ್ಲಿ ಒಂದೇ ದಿನ 14 ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್‌ ಆರಂಭಿಸಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್, ಸೋನಿ ಲಿವ್, ಆಹಾ ಮುಂತಾದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸಿನಿಮಾಗಳು ವೀಕ್ಷಣೆಗೆ ಲಭ್ಯವಿವೆ. ಹಾರರ್, ಕ್ರೈಮ್, ಆಕ್ಷನ್, ಕಾಮಿಡಿ, ಕೌಟುಂಬಿಕ ಪ್ರಧಾನ ಚಿತ್ರಗಳು ಸೇರಿದಂತೆ ವಿವಿಧ ಪ್ರಕಾರಗಳ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಿವೆ. ಹಾಗಾದರೆ, ಒಟಿಟಿಯಲ್ಲಿ ಯಾವ ಸಿನಿಮಾಗಳಿವೆ ಎಂದು ನೋಡೋಣ.

ನೆಟ್‌ಫ್ಲಿಕ್ಸ್ ಒಟಿಟಿ

  • ದಿ ರಾಯಲ್ಸ್ (ಹಿಂದಿ ರೊಮ್ಯಾಂಟಿಕ್ ಫ್ಯಾಮಿಲಿ ಕಾಮಿಡಿ ಡ್ರಾಮಾ ವೆಬ್ ಸೀರಿಸ್)- ಮೇ 1
  • ದಿ ಬಿಗ್ಗೆಸ್ಟ್ ಫ್ಯಾನ್ (ಇಂಗ್ಲೀಷ್ ರೊಮ್ಯಾಂಟಿಕ್ ಡ್ರಾಮಾ ಚಿತ್ರ)- ಮೇ 1
  • ಯಾಂಗಿ: ಫೇಕ್ ಲೈಫ್, ಟ್ರೂ ಕ್ರೈಮ್ (ಸ್ಪ್ಯಾನಿಷ್ ಡಾಕ್ಯುಮೆಂಟರಿ ಸೀರಿಸ್)- ಮೇ 1
  • ದಿ ಫೋರ್ ಸೀಜನ್ಸ್ (ಇಂಗ್ಲೀಷ್ ಕಾಮಿಡಿ ವೆಬ್ ಸೀರಿಸ್) - ಮೇ 1

ಅಮೆಜಾನ್ ಪ್ರೈಮ್ ಒಟಿಟಿ

  • ಅನೆದರ್ ಸಿಂಪಲ್ ಫೇವರ್ (ಇಂಗ್ಲೀಷ್ ಮಿಸ್ಟರಿ ಥ್ರಿಲ್ಲರ್ ಕಾಮಿಡಿ ಚಿತ್ರ)- ಮೇ 1

ಇದನ್ನೂ ಓದಿ: ಕಡಿಮೆ ಬಜೆಟ್‌ನ ಈ ಮಲಯಾಳಿ ಸಿನಿಮಾ, ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ ಹಿಟ್‌; ಈಗ ಒಟಿಟಿಗೂ ಎಂಟ್ರಿ

ಸೋನಿ ಲಿವ್ ಒಟಿಟಿ

  • ಬ್ರೊಮ್ಯಾನ್ಸ್ (ಮಲಯಾಳಂ ಅಡ್ವೆಂಚರ್ ಕಾಮಿಡಿ ಸಿನಿಮಾ)- ಮೇ 1
  • ಬ್ಲ್ಯಾಕ್, ವೈಟ್ ಅಂಡ್ ಗ್ರೇ: ಲವ್ ಕಿಲ್ಸ್ (ಹಿಂದಿ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್)- ಮೇ 1

ಜೀ5 ಒಟಿಟಿ- ಕೊಸ್ಟಾವೋ (ಹಿಂದಿ ಜೀವನಚರಿತ್ರೆ ಕ್ರೈಮ್ ಡ್ರಾಮಾ ಚಿತ್ರ)- ಮೇ 1

ಆಹಾ ಒಟಿಟಿ- ವೇರೆ ಲೆವೆಲ್ ಆಫೀಸ್ ರಿಲೋಡೆಡ್ (ತೆಲುಗು ಕಾಮಿಡಿ ಡ್ರಾಮಾ ವೆಬ್ ಸೀರಿಸ್)- ಮೇ 1

ಎಮ್ಎಕ್ಸ್ ಪ್ಲೇಯರ್ ಒಟಿಟಿ- ಈಎಮ್‌ಐ (ತಮಿಳು ಕುಟುಂಬ ಡ್ರಾಮಾ ಸಿನಿಮಾ)- ಮೇ 1

ಹೋಯ್‌ಚೋಯ್ ಒಟಿಟಿ- ಭೋಗ್ (ಬಂಗಾಳಿ ಹಾರರ್ ಥ್ರಿಲ್ಲರ್ ವೆಬ್ ಸೀರಿಸ್)- ಮೇ 1

ಜಿಯೋ ಹಾಟ್‌ಸ್ಟಾರ್ ಒಟಿಟಿ- ಹಾರ್ಟ್ ಬೀಟ್ (ಹಿಂದಿ ಡಬ್ಬಿಂಗ್ ತಮಿಳು, ತೆಲುಗು ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ವೆಬ್ ಸೀರಿಸ್)- ಮೇ 1

ಆಹಾ ತಮಿಳು ಒಟಿಟಿ- ವರುಣನ್ (ತಮಿಳು ಆಕ್ಷನ್ ಥ್ರಿಲ್ಲರ್ ಸಿನಿಮಾ)- ಮೇ 1

ಸನ್ NXT ಒಟಿಟಿ- ಪರಮಾನ್ (ತಮಿಳು ಸಾಮಾಜಿಕ ಡ್ರಾಮಾ ಚಿತ್ರ)- ಮೇ 1

14 ಒಟಿಟಿ ಸ್ಟ್ರೀಮಿಂಗ್

ಇಂದು (ಮೇ 1) ಒಂದೇ ದಿನ 14 ಸಿನಿಮಾಗಳು ಮತ್ತು ವೆಬ್ ಸೀರಿಸ್‌ಗಳು ಒಟಿಟಿ ಸ್ಟ್ರೀಮಿಂಗ್‌ಗೆ ಬಿಡುಗಡೆಯಾಗಿವೆ. ಬ್ರೊಮ್ಯಾನ್ಸ್, ವೇರೆ ಲೆವೆಲ್ ಆಫೀಸ್ ರಿಲೋಡೆಡ್, ಹಾರರ್ ಥ್ರಿಲ್ಲರ್ ಭೋಗ್, ದಿ ರಾಯಲ್ಸ್, ಬ್ಲ್ಯಾಕ್, ವೈಟ್ ಅಂಡ್ ಗ್ರೇ: ಲವ್ ಕಿಲ್ಸ್, ಪರಮಾನ್ ಚಿತ್ರಗಳು ವಿಶೇಷವಾಗಿವೆ. ಈ 14 ಸಿನಿಮಾಗಳ ಪೈಕಿ ಒಂದೇ ಒಂದು ಕನ್ನಡದ ಸಿನಿಮಾ ಇಲ್ಲದೆ ಇರುವುದು ವಿಪರ್ಯಾಸ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.