ಕನ್ನಡ ಸುದ್ದಿ  /  ಮನರಂಜನೆ  /  Actress Jamuna Passed Away: 'ಸಾಕ್ಷಾತ್ಕಾರ ' ಸಿನಿಮಾ ನಟಿ ಜಮುನಾ ವಿಧಿವಶ..ಶೋಕದಲ್ಲಿ ಮುಳುಗಿದ ಚಿತ್ರರಂಗ

Actress Jamuna Passed away: 'ಸಾಕ್ಷಾತ್ಕಾರ ' ಸಿನಿಮಾ ನಟಿ ಜಮುನಾ ವಿಧಿವಶ..ಶೋಕದಲ್ಲಿ ಮುಳುಗಿದ ಚಿತ್ರರಂಗ

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಯುವ ನಟ ಧನುಷ್‌, ಪೋಷಕ ನಟ ಲಕ್ಷ್ಮಣ್‌ ಅವರ ನಿಧನದ ಸುದ್ದಿ ಆಘಾತ ಉಂಟು ಮಾಡಿತ್ತು. ಇದೀಗ ಹಿರಿಯ ನಟಿ ಜಮುನಾ ಅವರ ನಿಧನದ ಸುದ್ದಿ ತೆಲುಗು, ಕನ್ನಡ ಚಿತ್ರರಂಗದ ಸಿನಿಪ್ರಿಯರಿಗೆ ಶಾಕ್‌ ನೀಡಿದೆ. ಜಮುನಾ ಅವರ ನಿಧನಕ್ಕೆ ಚಿತ್ರೋದ್ಯಮ ಕಂಬನಿ ಮಿಡಿದಿದೆ.

'ಸಾಕ್ಷಾತ್ಕಾರ ' ಸಿನಿಮಾ ನಟಿ ಜಮುನಾ ವಿಧಿವಶ
'ಸಾಕ್ಷಾತ್ಕಾರ ' ಸಿನಿಮಾ ನಟಿ ಜಮುನಾ ವಿಧಿವಶ (PC: Twitter)

ಡಾ. ರಾಜ್‌ಕುಮಾರ್‌ ಜೊತೆ 'ಸಾಕ್ಷಾತ್ಕಾರ' ಚಿತ್ರದಲ್ಲಿ ನಟಿಸಿದ್ದ ನಟಿ ಜಮುನಾ ವಿಧಿವಶರಾಗಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಜಮುನಾ ಅವರು ಹೈದರಾಬಾದ್‌ನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಮುನಾ ಅವರಿಗೆ 86 ವರ್ಷ ವಯಸಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಜಮುನಾ ಕನ್ನಡ, ತೆಲುಗು ಸೇರಿದಂತೆ ದಕ್ಷಿಣದ ಇತರ ಭಾಷೆಗಳಲ್ಲಿ ಸುಮಾರು 198 ಚಿತ್ರಗಳಲ್ಲಿ ನಟಿಸಿದ್ದಾರೆ. 'ಸಾಕ್ಷಾತ್ಕಾರ' ಚಿತ್ರದ ಅವರ ನಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಚಿತ್ರದ ಟೈಟಲ್‌ ಹಾಡು ಇಂದಿಗೂ ಸಿನಿಪ್ರಿಯರ ಮೋಸ್ಟ್‌ ಫೇವರೆಟ್‌. ಕಳೆದ ಕೆಲವು ದಿನಗಳಿಂದ ಟಾಲಿವುಡ್‌, ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ದುರಂತ ಸಂಭವಿಸುತ್ತಲೇ ಇದೆ. ಕೆಲವು ದಿನಗಳ ಹಿಂದಷ್ಟೇ ತೆಲುಗು ಚಿತ್ರರಂಗ ಹಿರಿಯ ನಟ ಕೃಷ್ಣ, ಕೈಕಲಾ ಸತ್ಯನಾರಾಯಣ್‌, ಚಲಪತಿ ರಾವ್‌ ನಿಧನರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಯುವ ನಟ ಧನುಷ್‌, ಪೋಷಕ ನಟ ಲಕ್ಷ್ಮಣ್‌ ಅವರ ನಿಧನದ ಸುದ್ದಿ ಆಘಾತ ಉಂಟು ಮಾಡಿತ್ತು. ಇದೀಗ ಹಿರಿಯ ನಟಿ ಜಮುನಾ ಅವರ ನಿಧನದ ಸುದ್ದಿ ತೆಲುಗು, ಕನ್ನಡ ಸಿನಿಪ್ರಿಯರಿಗೆ ಶಾಕ್‌ ನೀಡಿದೆ. ಜಮುನಾ ಅವರ ನಿಧನಕ್ಕೆ ಚಿತ್ರೋದ್ಯಮ ಕಂಬನಿ ಮಿಡಿದಿದೆ.

ಜಮುನಾ 30, ಆಗಸ್ಟ್ 1936 ರಂದು ಕರ್ನಾಟಕದ ಹಂಪಿಯಲ್ಲಿ ಜನಿಸಿದರು. ಜಮುನಾ ತಂದೆ ನಿಪ್ಪಾಣಿ ಶ್ರೀನಿವಾಸ್‌ ರಾವ್ ಮಾಧವ್‌ ಮತ್ತು ತಾಯಿ ಕೌಸಲ್ಯ ದೇವಿ. ಜಮುನಾ ಏಳು ವರ್ಷದವರಿದ್ದಾಗ ಕುಟುಂಬವು ಹಂಪಿಯಿಂದ ಗುಂಟೂರಿಗೆ ಸ್ಥಳಾಂತರಗೊಂಡಿತು. ಖ್ಯಾತ ನಟಿ ಸಾವಿತ್ರಿ ಅವರ ಆಹ್ವಾನದ ಮೇರೆಗೆ ಜಮುನಾ ಚಿತ್ರರಂಗಕ್ಕೆ ಕಾಲಿಟ್ಟರು. 'ಪುಟ್ಟಿಲು' ಎಂಬ ಚಿತ್ರದ ಮೂಲಕ ಜಮುನಾ ಚಿತ್ರರಂಗಕ್ಕೆ ಪರಿಚಯವಾದರು. ಆದರೆ ಅವರಿಗೆ ಮೊದಲ ಬ್ರೇಕ್ ಸಿಕ್ಕಿದ್ದು ಎಲ್‌. ವಿ ಪ್ರಸಾದ್ ಅವರ 'ಮಿಸ್ಸಮ್ಮ' ಚಿತ್ರದ ಮೂಲಕ. ಚಿತ್ರರಂಗಕ್ಕೆ ಬಂದಾಗ ಜಮುನಾ ಅವರಿಗೆ 15 ವರ್ಷ ವಯಸ್ಸು.

ಜಮುನಾ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಸುಮಾರು 10 ಸಿನಿಮಾಗಳನ್ನು ಮಾಡಿದ್ದಾರೆ. ಕನ್ನಡದಲ್ಲಿ 8 ಮತ್ತು ತಮಿಳಿನಲ್ಲಿ 30 ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ಜಮುನಾ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಆದರ್ಶ ಸತಿ, ತೆನಾಲಿ ರಾಮಕೃಷ್ಣ, ಭೂಕೈಲಾಸ, ರತ್ನಗಿರಿ ರಹಸ್ಯ, ಸಾಕ್ಷಾತ್ಕಾರ, ಮಾಯೆಯ ಮುಸುಕು, ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ, ಪೊಲೀಸ್‌ ಮತ್ತು ದಾದಾ ಸಿನಿಮಾಗಳಲ್ಲಿ ಜಮುನಾ ನಟಿಸಿದ್ದಾರೆ. ತಮ್ಮ ವಿಶಿಷ್ಟ ಅಭಿನಯದ ಮೂಲಕವೇ ಸಿನಿಪ್ರಿಯರನ್ನು ರಂಜಿಸಿದ್ದ ಜಮುನಾ ಇನ್ನಿಲ್ಲ ಎಂಬ ಸುದ್ದಿ ಸಿನಿಪ್ರಿಯರಿಗೆ ನೋವುಂಟುಮಾಡಿದೆ. ನಾಳೆ ( ಶನಿವಾರ) ಹೈದರಾಬಾದ್‌ನಲ್ಲಿ ಜಮುನಾ ಅಂತ್ಯಕ್ರಿಯೆ ನೆರವೇರಲಿದೆ.

ಟಿ20 ವರ್ಲ್ಡ್‌ಕಪ್ 2024