ಅಮ್ಮನನ್ನೂ ಮೀರಿಸ್ತಾರೆ ‘ರಾಮ ಶಾಮ ಭಾಮ’ ಖ್ಯಾತಿಯ ನಟಿ ಊರ್ವಶಿಯ ಸುಪುತ್ರಿ; ಶೀಘ್ರದಲ್ಲಿ ಬಣ್ಣದ ಲೋಕಕ್ಕೆ ತೇಜಲಕ್ಷ್ಮೀ
Urvashi Daughter Tejalakshmi: ಸೌತ್ ಸಿನಿ ದುನಿಯಾದಲ್ಲಿ ತಮ್ಮ ಸಿನಿಮಾಗಳ ಮೂಲಕವೇ ಸ್ಟಾರ್ ನಾಯಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಹಿರಿಯ ನಟಿ ಊರ್ವಶಿ. ಇದೀಗ ಇದೇ ಊರ್ವಶಿ ಮಗಳು ತೇಜಲಕ್ಷ್ಮೀ ಸಹ ಬಣ್ಣದ ಲೋಕಕ್ಕೆ ಆಗಮಿಸುವ ಸನಿಹದಲ್ಲಿದ್ದಾರೆ. ಸೌಂದರ್ಯದ ವಿಚಾರದಲ್ಲಿ ಇವ್ರು ಅಮ್ಮನನ್ನೂ ಮೀರಿಸ್ತಾರೆ.

Urvashi Daughter Tejalakshmi Jayan Photos: ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತಮ್ಮದೇ ಆದ ಖ್ಯಾತಿ ಗಿಟ್ಟಿಸಿಕೊಂಡು, ನೂರಾರು ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ, ಇಂದಿಗೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ ನಟಿ ಊರ್ವಶಿ. ಸದ್ಯ ಪೋಷಕ ಪಾತ್ರಗಳಲ್ಲಿ ನಟಿ ಊರ್ವಶಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಮಲಯಾಳಂ ಸಿನಿಮಾ ಉಲುಜುಕ್ಕು ಮೂಲಕ ಮತ್ತೆ ಮನ್ನಣೆಯ ಮುನ್ನೆಲೆಗೆ ಬಂದಿದ್ದರು. ಆದರೆ, ನಿಮಗೆ ಗೊತ್ತಿದೆಯೇ, ಇದೇ ಊರ್ವಶಿ ಮಗಳೂ ಇದೀಗ ಸಿನಿಮಾರಂಗಕ್ಕೆ ಆಗಮಿಸುವ ತವಕದಲ್ಲಿದ್ದಾರೆಂದು.
ಮೂಲ ಮಲಯಾಳಿಯಾದರೂ, ಸೌತ್‌ನ ಇತರ ಭಾಷೆಗಳಾದ ಕನ್ನಡ, ತೆಲುಗು ಮತ್ತು ತಮಿಳು ಮಾತ್ರವಲ್ಲದೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಆಗಮಿಸಿದ್ದ ಊರ್ವಶಿ, ಅದಾದ ಬಳಿಕ ನಾಯಕಿಯಾಗಿಯೂ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡರು. ಕನ್ನಡದಲ್ಲಿ ನ್ಯಾಯ ನೀತಿ ಧರ್ಮ ಚಿತ್ರದ ಮೂಲಕ ಪದಾರ್ಪಣೆ ಮಾಡಿದರೂ, ಯಶಸ್ಸು ತಂದುಕೊಟ್ಟಿದ್ದು ಡಾ. ರಾಜ್‌ಕುಮಾರ್ ಮತ್ತು ಶ್ರೀನಾಥ್ ಜತೆಗಿನ ಶ್ರಾವಣ ಬಂತು ಸಿನಿಮಾ. ಅಲ್ಲಿಂದ ಮತ್ತೆ ಹಿಂತಿರುಗಿ ನೋಡದ ಊರ್ವಶಿ ಸಾಲು ಸಾಲು ಸಿನಿಮಾ ಮಾಡಿದರು.
ಕನ್ನಡದ ಹತ್ತಾರು ಸಿನಿಮಾಗಳಲ್ಲಿ ಊರ್ವಶಿ ನಟನೆ
ಪ್ರೇಮಲೋಕ, ನ್ಯೂ ಡೆಲ್ಲಿ, ಹಬ್ಬ, ಜೀವನದಿ, ಯಾರಿಗೆ ಸಾಲುತ್ತೆ ಸಂಬಳ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು, ರಾಮ ಶಾಮ ಭಾಮ ಸೇರಿ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 2016ರಲ್ಲಿ ಜಗ್ಗುದಾದ, ಅದಾದ ಬಳಿಕ 2018ರಲ್ಲಿನ ಸುರ್ ಸುರ್ ಬತ್ತಿ ಚಿತ್ರವೇ ಕೊನೇ, ಅಲ್ಲಿಂದ ಈ ವರೆಗೂ ಅವರು ಕನ್ನಡ ಸಿನಿಮಾಗಳತ್ತ ಮುಖ ಮಾಡಿಲ್ಲ. ತಮಿಳು, ತೆಲುಗು, ಮಲಯಾಳಂನಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ. ಈ ನಡುವೆ ಮಗಳು ತೇಜ ಲಕ್ಷ್ಮೀಯನ್ನೂ ಚಿತ್ರರಂಗಕ್ಕೆ ಕರೆತರಲು ಪ್ಲಾನ್ ಮಾಡಿದ್ದಾರೆ.
ಮೊದಲ ಪತಿಗೆ ವಿಚ್ಛೇದನ
ನಟಿ ಊರ್ವಶಿ 2000ರಲ್ಲಿ ಮಲಯಾಳಂ ನಟ ಮನೋಜ್ ಜೈನ್ ಅವರೊಂದಿಗೆ ಬಾಳ ಬಂಧನಕ್ಕೆ ಕಾಲಿಡುತ್ತಾರೆ. ಈ ದಂಪತಿಗೆ ಇಬ್ಬರು ಮಕ್ಕಳು. ಆ ಇಬ್ಬರಲ್ಲಿ ಮಗಳು ತೇಜ ಲಕ್ಷ್ಮೀ ಹಿರಿಯವಳು. ಆದರೆ, ಊರ್ವಶಿ ಮತ್ತು ಪತಿ ಮನೋಜ್ ನಡುವೆ ಕೌಟುಂಬಿಕ ಸಮಸ್ಯೆ ಉದ್ಭವಿಸಿ, 2008ರಲ್ಲಿ ವಿಚ್ಛೇದನ ಪಡೆಯುತ್ತಾರೆ. ಅದಾದ ಬಳಿಕ 2013ರಲ್ಲಿ ಶಿವಪ್ರಸಾದ್ ಜತೆಗೆ ಎರಡನೇ ಮದುವೆ ಆಗುತ್ತಾರೆ. ಈಗಲೂ ಶಿವಪ್ರಸಾದ್ ಜತೆಗೆ ಖುಷಿಯಿಂದ ಸಂಸಾರ ನೌಕೆ ಸಾಗಿಸುತ್ತಿದ್ದಾರೆ ಊರ್ವಶಿ.
ಅಮ್ಮನನ್ನೂ ಮೀರಿಸುವ ಮಗಳು ತೇಜಲಕ್ಷ್ಮೀ
ಮಗಳು ತೇಜಾ ಲಕ್ಷ್ಮಿ ವಿಚಾರಕ್ಕೆ ಬಂದರೆ, ಸೋಷಿಯಲ್ ಮೀಡಿಯಾದಲ್ಲಿ ಮಗಳ ಜತೆಗಿನ ಒಂದಷ್ಟು ಪೋಟೋಗಳನ್ನು ಈ ಹಿಂದೆಯೇ ಊರ್ವಶಿ ಹಂಚಿಕೊಂಡಿದ್ದರು. ಅದೇ ರೀತಿ ತೇಜಾ ಸಹ ಇನ್‌ಸ್ಟಾಗ್ರಾಂನಲ್ಲಿ ಸಖತ್ ಆಕ್ಟಿವ್. ಸದಾ ಒಂದಲ್ಲ ಒಂದು ಫೋಟೋ ಹಂಚಿಕೊಳ್ಳುತ್ತಲೇ ಇರುತ್ತಾರೆ. ಬೋಲ್ಡ್ ಎನಿಸುವ ಲುಕ್‌ನಲ್ಲಿಯೂ ಕಣ್ಮನ ಸೆಳೆಯುತ್ತಿರುತ್ತಾರೆ ಊರ್ವಶಿ ಮಗಳು. ಮಾಡರ್ನ್ ಅವತಾರದಲ್ಲಿ ನೆಟ್ಟಿಗರ ಹೃದಯಕ್ಕೂ ಲಗ್ಗೆ ಇಡುತ್ತಿರುತ್ತಾರೆ ತೇಜಾ.
ಅಪ್ಪ ಅಮ್ಮನಂತೆ ಸಿನಿಮಾ ಲೋಕದಲ್ಲಿ ಮೀಚಬೇಕೆಂದು ಪಣ ತೊಟ್ಟಿರುವ ತೇಜಾ, ಈಗಾಗಲೇ ನಟನೆ, ಡಾನ್ಸ್ ಜತೆಗೆ ಕಿಕ್ ಬಾಕ್ಸಿಂಗ್‌ನಲ್ಲಿಯೂ ಪಳಗಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಯಾವ ಸಿನಿಮಾ ಮೂಲಕ ಅವರ ಆಗಮನ ಆಗಬಹುದು ಎಂಬುದಕ್ಕೆ ಇನ್ನಷ್ಡು ದಿನ ಕಾಯಲೇಬೇಕು.

ವಿಭಾಗ