Vettaiyan OTT Release: ರಜನಿಕಾಂತ್‌ ವೆಟ್ಟೈಯಾನ್‌ ಚಿತ್ರದ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ ವೀಕ್ಷಣೆಗೆ ಲಭ್ಯ?
ಕನ್ನಡ ಸುದ್ದಿ  /  ಮನರಂಜನೆ  /  Vettaiyan Ott Release: ರಜನಿಕಾಂತ್‌ ವೆಟ್ಟೈಯಾನ್‌ ಚಿತ್ರದ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ ವೀಕ್ಷಣೆಗೆ ಲಭ್ಯ?

Vettaiyan OTT Release: ರಜನಿಕಾಂತ್‌ ವೆಟ್ಟೈಯಾನ್‌ ಚಿತ್ರದ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ ವೀಕ್ಷಣೆಗೆ ಲಭ್ಯ?

Vettaiyan OTT Release Date: ರಜನಿಕಾಂತ್‌, ಅಮಿತಾಬ್‌ ಬಚ್ಚನ್‌ ಮುಖ್ಯಭೂಮಿಕೆಯಲ್ಲಿರುವ ವೆಟ್ಟೈಯಾನ್‌ ಸಿನಿಮಾ ಈಗಾಗಲೇ ಚಿತ್ರಮಂದಿರದಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ನೂರಾರು ಕೋಟಿ ಕಮಾಯಿಯನ್ನೂ ಮಾಡಿದೆ. ಹೀಗಿರುವಾಗಲೇ ಇದೇ ಚಿತ್ರದ ಒಟಿಟಿ ಬಿಡುಗಡೆ ಯಾವಾಗ? ಈ ಕೌತುಕಕ್ಕೂ ಇದೀಗ ಉತ್ತರ ಸಿಕ್ಕಿದೆ.

 ರಜನಿಕಾಂತ್‌ ವೆಟ್ಟೈಯಾನ್‌ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಯಾವಾಗ?
ರಜನಿಕಾಂತ್‌ ವೆಟ್ಟೈಯಾನ್‌ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಯಾವಾಗ?

Vettaiyan OTT Release: ಕಾಲಿವುಡ್‌ನಲ್ಲಿ ಅಕ್ಟೋಬರ್‌ 10ರಂದು ತೆರೆಕಂಡಿದ್ದ ಸೂಪರ್‌ಸ್ಟಾರ್‌ ರಜನಿಕಾಂತ್‌ ನಟನೆಯ ವೆಟ್ಟೈಯನ್‌ ಸಿನಿಮಾ, ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಬಹುತಾರಾಗಣದ ಈ ಸಿನಿಮಾ ಭಾರತದಲ್ಲಿ ನೂರು ಕೋಟಿ ಪ್ಲಸ್‌ ಗಳಿಕೆ ಕಂಡು ಮುಂದಡಿ ಇರಿಸಿದೆ. ಅದೇ ರೀತಿ ವಿಶ್ವದಾದ್ಯಂತ ಈ ಸಿನಿಮಾ ಈಗಾಗಲೇ 300 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಹೀಗಿರುವಾಗಲೇ ಇನ್ನೂ ಗಳಿಕೆಯ ಓಟ ಮುಂದುವರಿಸಿರುವ ಈ ಸಿನಿಮಾ, ಒಟಿಟಿಗೆ ಯಾವಾಗ ಆಗಮಿಸಬಹುದೆಂದು ವೀಕ್ಷಕ ಕಾದು ಕುಳಿತಿದ್ದಾನೆ.

ಥಿಯೇಟರ್‌ಗಳ ನಂತರ, ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ರವೃತ್ತಿ ವೇಗವಾಗಿ ಮುಂದುವರಿಯುತ್ತಿದೆ. ಪ್ರೇಕ್ಷಕರು ಥಿಯೇಟರ್‌ಗಳಿಗಿಂತ ಒಟಿಟಿ ಬಿಡುಗಡೆಯ ಬಗ್ಗೆ ಅವರಲ್ಲಿ ಪ್ರಚಂಡ ಕ್ರೇಜ್ ಇದೆ. ಅದೇ ರೀತಿ ಬೆಳ್ಳಿತೆರೆ ಮೇಲೆ ಸದ್ದು ಮಾಡಿರುವ ವೆಟ್ಟೈಯನ್‌ ಸಿನಿಮಾ, ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿಗೆ ಆಗಮಿಸಲಿದೆ ಎಂದೇ ಹೇಳಲಾಗುತ್ತಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ 30ರಿಂದ 40 ದಿನಗಳ ಒಳಗಾಗಿ ಬಹುತೇಕ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸುತ್ತಿವೆ. ಅದೇ ರೀತಿ ವೆಟ್ಟೈಯನ್‌ ಸಿನಿಮಾ ಸಹ ರಿಲೀಸ್‌ ಆಗಲಿದೆ.

ಈ ಒಟಿಟಿಗೆ ಆಗಮಿಸಲಿದೆ ವೆಟ್ಟೈಯನ್

ಸಿನಿಮಾ ಬಿಡುಗಡೆಗೂ ಮೊದಲೇ ಚಿತ್ರಗಳ ಡಿಜಿಟಲ್‌ ಹಕ್ಕುಗಳನ್ನು ಚಿತ್ರತಂಡ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿರುತ್ತವೆ. ಅದೇ ರೀತಿ ವೆಟ್ಟೈಯನ್‌ ಸಿನಿಮಾದ ಪೋಸ್ಟರ್‌ನಲ್ಲಿಯೂ ಅಮೆಜಾನ್‌ ಪ್ರೈಂ ಹೆಸರು ಮುದ್ರಿಸಲಾಗಿದೆ. ಹಾಗಾಗಿ ಈ ಸಿನಿಮಾ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ. ಅಷ್ಟೇ ಅಲ್ಲ ಈ ಸಿನಿಮಾದ ಡಿಜಿಟಲ್‌ ಹಕ್ಕುಗಳನ್ನು ಪ್ರೈಂಗೆ ಬರೋಬ್ಬರಿ 90 ಕೋಟಿಗೂ ಮಾರಾಟ ಮಾಡಲಾಗಿದೆ ಎಂಬ ವರದಿಗಳೂ ಸಂಚಲನ ಸೃಷ್ಟಿಸಿವೆ.

ಯಾವಾಗ ಬಿಡುಗಡೆ?

ವೆಟ್ಟೈಯಾನ್‌ ಸಿನಿಮಾ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಏನಿಲ್ಲ ಅಂದರೂ 40 ದಿನಗಳಲ್ಲಿ ದೊಡ್ಡ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸುತ್ತವೆ. ಅದರಂತೆ ಈ ಸಿನಿಮಾ ಸಹ ನವೆಂಬರ್‌ ತಿಂಗಳಲ್ಲಿ ಒಟಿಟಿಗೆ ಬರುವುದು ಅಧಿಕೃತವಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಅದಕ್ಕೂ ಮೊದಲೇ ಆಗಮಿಸಬಹುದು. ಏಕೆಂದರೆ, ದಳಪತಿ ವಿಜಯ್‌ ನಟನೆಯ ಗೋಟ್‌ ಸಿನಿಮಾ ಒಂದು ತಿಂಗಳ ಮುಂಚೆಯೇ ನೆಟ್‌ಫ್ಲಿಕ್ಸ್‌ ಒಟಿಟಿ ಪ್ರವೇಶಿಸಿತ್ತು.

ಬಹುತಾರಾಗಣದ ಸಿನಿಮಾ

ಜೈ ಭೀಮ್ ಸಿನಿಮಾ ನಿರ್ದೇಶಿಸಿದ್ದ ಟಿ ಜಿ ಜ್ಞಾನವೇಲ್‌ ವೆಟ್ಟೈಯಾನ್‌ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಲೈಕಾ ಸಂಸ್ಥೆ ಈ ಬಿಗ್‌ ಬಜೆಟ್‌ ಚಿತ್ರವನ್ನು ನಿರ್ಮಿಸಿದೆ. ವೆಟ್ಟೈಯಾನ್‌ ಚಿತ್ರದಲ್ಲಿ ರಜನಿಕಾಂತ್‌ ಪೊಲೀಸ್‌ ಅಧಿಕಾರಿಯಾದರೆ, ಬಿಗ್ ಬಿ ಅಮಿತಾಬ್‌ ಬಚ್ಚನ್‌ ನ್ಯಾಯಾಧೀಶರಾಗಿ ಕಾಣಿಸಿಕೊಂಡಿದ್ದಾರೆ. ಮಲಯಾಳಿ ಸ್ಟಾರ್‌ ನಟ ಫಹಾದ್ ಫಾಸಿಲ್ ಮತ್ತು ಟಾಲಿವುಡ್‌ ನಟ ರಾಣಾ ದಗ್ಗುಬಾಟಿ ಅವರೂ ಈ ಚಿತ್ರದಲ್ಲಿದ್ದಾರೆ. ರಿತಿಕಾ ಸಿಂಗ್, ದುಶಾರಾ ವಿಜಯನ್, ಮಂಜು ವಾರಿಯರ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ.